Tuesday, November 18, 2008

ಗೌಡರ ಗದ್ದಲ

ನೆನ್ನೆ ತಾನೆ ಗಡ್ಡದ ಜ್ಞಾನಪೀಠ ಅನಂತಮೂರ್ತಿ ಜೊತೆ ಸೇರ್ಕೊಂಡು ಪುಸ್ಕ ಬರೀತೀನಿ, ಪ್ರಧಾನಿ ಆಗಿದ್ದಿದ್ರೆ ಆರೆಸ್ಸೆಸ್ ನಾ ನಿಷೇಧ ಮಾಡ್ತಿದ್ದೆ ಅಂತೆಲ್ಲಾ ಹೇಳ್ತಾ ಇದ್ದ ಮಾಜಿ ಪ್ರಧಾನಿ ದ್ಯಾವೇಗೌಡ್ರು, ನಿನ್ನೆ (ಸೋಮವಾರ) ಮಾಡಿದ ಗದ್ದಲಕ್ಕೆ ಇಡೀ ಬೆಂಗಳೂರೇ ಬೆಚ್ಚಿ ಬಿದ್ದಿದೆ.
ಜೆಡಿಎಸ್ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಲಿದೆ ಅಂತೆಲ್ಲಾ ಹೇಳಿ, ಇಷ್ಟು ಜನರಿಗೆ ಅನಾನುಕೂಲ ಉಂಟು ಮಾಡಿದಾರಲ್ಲ ? ಜೊತೆಗೆ ಚೆನ್ನಿಗಪ್ಪನವರಿಗೆ ಜೆಡಿಎಸ್ ಕಾರ್ಯಕರ್ತರು ಕೊಟ್ಟ ಧರ್ಮದೇಟು, ಟ್ರಾಫಿಕ್ ಜಾಮು..
ಜನರ ಹಿತವೇ ನಮ್ಮ ಪಕ್ಷದ ಗುರಿ, ಹಂಗೆ ಹಿಂಗೆ ಅಂತ ಹೇಳಿ, ಸೋಮವಾರದಂದೇ ಈ ಸಮಾರಂಭ ಇಟ್ಟಿದ್ರಲ್ಲ, ಇದ್ರಲ್ಲಿ ಏನೋ ಕಿರಿಕ್ಕು ಇದೆ ಅಂತ ಅನ್ಸಲ್ವಾ ? ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ನ ಬಲ ಎಷ್ಟು ಅಂತ ತೋರಿಸೋಕ್ಕೆ, ಈ ರೀತ್ಯಾಗಿ ಸೋಮವಾರದಂದೇ ನಡೆಸಿದ್ದಾರೆ ಅನ್ನುಸ್ತಾ ಇದೆ. ಇಲ್ದಿದ್ರೆ, ಜಸ್ಟ್ ಒಂದು ದಿನ ಮುಂಚೆ, ಭಾನುವಾರವೇ ಮಾಡಬೋದಿತ್ತು ತಾನೆ ? ಭಾನುವಾರ ನಡೆದಿದ್ದರೆ, ಯಾರಿಗೂ ತೊಂದ್ರೆ ಆಗ್ತಾನೆ ಇರ್ಲಿಲ್ಲ ಅಲ್ವೇ ?
ಬಿಡಿ ಸಾರ್, ಅವ್ರು ಮಾಜಿ ಪ್ರಧಾನಿ, ಏನ್ ಮಾಡುದ್ರೂ ಯೋಚನೆ ಮಾಡ್ಕೊಂಡೆ ಮಾಡೋದು. ಅಲ್ವೇ ?

ರಾಮ ರಾಮಾ..ಮಾತು ಸಾಕು, ಫೋಟೋ ನೋಡಿ.

ಫೋಟೋಗಳನ್ನು ಎತ್ತಿರೋದು ಕನ್ನಡಪ್ರಭ ಪತ್ರಿಕೆಯಿಂದ.

ಕುಮಾರನ ಕಹಳೆ


ಗೌಡರ ಗದ್ದಲ
ಅಲ್ಲಾ ಕಣ್ರೀ, ಇವ್ರು ಮಾತಾಡೋದೇ ಗುಸು ಗುಸು ಪಿಸು ಪಿಸು ಅಂತ. ಅದೂ ಮೈಕಲ್ಲಿ ಮಾತಾಡಿದಾಗ ಕೇಳೋದು, ಇವ್ರು ಕಹಳೆ ಹೆಂಗೆ ಊದುದ್ರೋ ?? ಬೇರೆಯವರು ಓದಿದ್ದನ್ನ ರೆಕಾರ್ಡ್ ಮಾಡಿ ಪ್ಲೇ ಮಾಡುದ್ರಾ ?


ಈ ಕಡೆಯಿಂದ ಆ ಕಡೆ ಓಡಾಡುತ್ತಿದ್ದ ಜೆಡಿಎಸ್ ನ ಹೊರೆ ಹೊತ್ತ ಮಹಿಳೆ. ಈ ಅಪ್ಪ ಮಕ್ಕಳು ಕೊಟ್ಟ ಕಾಟವನ್ನು ಸಹಿಸುತ್ತಿರುವ ಕನ್ನಡಿಗರ ಸಂಕೇತ.


ಜನರು ಪಟ್ಟ ಪಾಡು ನೋಡಿ
ಮೇಖ್ರಿ ಅಂಡರ್ ಪಾಸ್ ನಲ್ಲಿ



ಬೈಕಿನ ಮೇಲೆ ಲ್ಯಾಪ್ ಟಾಪ್ ಓಪನ್ ಮಾಡಿ ಕೆಲಸ ಮಾಡ್ತಾ ಇದಾರೆ ಅಂದ್ರೆ, ಜ್ಯಾಮ್ ಇನ್ಯಾವ್ ಮಟ್ಟಿಗೆ ಇತ್ತು ಅಂತ ನೀವೇ ಊಹಿಸಿ


ಊಟದ ಜೊತೆ ಉಪ್ಪಿನಕಾಯಿ ಅನ್ನೋ ರೀತಿ, ಚೆನ್ನಿಗಪ್ಪನಿಗೆ ಧರ್ಮದೇಟು ಬಿದ್ದಿದೆ.

ಚೆನ್ನಿಗಪ್ಪನವರ ವರ್ಣನೆ ನೋಡಿದರೆ, ಧರ್ಮದೇಟು ಬಿದ್ದಿಲ್ಲ, ರೇಪ್ ಆದ ಹಾಗೆ ಅನ್ಸುತ್ತೆ. ನೋಡಿ..

"ಮೂಗು, ತುಟಿಗೆ ಗಾಯ, ತೊಟ್ಟಿದ ಬಟ್ಟೆ ಚಿಂದಿ.."


ಕೊನೆಯ ಚುಟುಕು : ರಗ್ಬಿ ಆಟದಲ್ಲಿ ನಡೆದಿರುವ ಘಟನೆ. ನೀವೇ ನೋಡಿ. ಪಾಪ, ಅಭಿಷೇಕ ಮಾಡಿಸಿಕೊಂಡ ಮಹಾನುಭಾವನ ಪಾಡು ಹೇಗಿರಬೇಡ ? ಯಪ್ಪಾ...
ನಗು ಬಂದಿದ್ದು ಅಂದ್ರೆ, ಕೊನೆಯಲ್ಲಿ ಕೊಟ್ಟಿದಾರಲ್ಲ ಆ ವಾಕ್ಯ.
"ಅಬ್ಬಬ್ಬಾ, ಇಷ್ಟೊಂದು ರಭಸ .....!!"


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

13 comments:

Unknown said...

ha ha ha lost photo nimage sikkiddadaru yellinda? super

Shankar Prasad ಶಂಕರ ಪ್ರಸಾದ said...

ಎಲ್ಲೂ ದೂರ ಹೋಗಲಿಲ್ಲ ಸಾ..
ಇಲ್ಲೇ ಕನ್ನಡಪ್ರಭ ದ ಇಂದಿನ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
ದಿನಾಂಕ 18 ನವೆಂಬರ್, 2008, ಪುಟ 10 ರ
"ಸುದ್ಧಿ ಸ್ವಾರಸ್ಯ" ಅಂಕಣ ನೋಡಿ.

ಕಟ್ಟೆ ಶಂಕ್ರ

Anonymous said...

ದ್ಯಾವೇಗೌಡ್ರುಗೆ ಸೊಮಾಯಾಜ ಹೆಳಿರಬೆಕು, ನೀವು ಸೋಮವಾರವೆ ಮಾಡಿ ಚೆನ್ನಾಗಿದೆ ಅಂತ.ನಿವು ಮಾಡಿದ್ರೆ ಸುಕುಮಾರ ಸಿ.ಎಮ್, ಆತನೆ, ಇನ್ನೊಬ್ಬ ಕುಮಾರ ಡಿ.ಸಿಎಮ್ ಆತನೆ ಅಂತ. ಎಲ್ಲಾ ಶಿವ ಲೀಲೆ ಶಂಬುಲಿಂಗ.

Anonymous said...

ಚಡ್ಡಿ ಎಳೆದವನಿಗೆ, ಮಿಟಾಯಿ.

Lakshmi Shashidhar Chaitanya said...

ಈ ಗಲಾಟೇಗಾಗೇ ನಾನು ನೆನ್ನ ಪ್ರಾಣ ಸ್ನೇಹಿತೆಯ ಮದುವೆಗೂ ಹೋಗಲಾಗಲಿಲ್ಲ ! :(

Shankar Prasad ಶಂಕರ ಪ್ರಸಾದ said...

ಲಕ್ಷ್ಮಮ್ಮ, ಮದ್ವೆಗೆ ಹೋಗಕ್ಕಗ್ಲಿಲ್ಲ ಅಂತ ಬೇಜಾರ್ ಮಾಡ್ಕೋಬೇಡಿ.
ನೆನ್ನೆ ಹಂಗೆ ಅಲ್ಲೇ ಪ್ಯಾಲೇಸ್ ಗ್ರೌಂಡ್ ಗೆ ಹೋಗಿದ್ರೆ, ಜೆಡಿಎಸ್ ದು ಊಟ ಸಿಗ್ತಾ ಇತ್ತು.

Lakshmi Shashidhar Chaitanya said...

ಆಹಾ...ಹೌದಲ್ವ...ಫ್ಲಾಶೇ ಆಗ್ಲಿಲ್ಲ ನನಗೆ :(

Harsha said...

Devegowda.. yeediya (yeddiyurappa) chaddi (CM khurchi) eledaaga.. heege aaga baraditte anta annistaa ide...

ಅಂತರ್ವಾಣಿ said...

ದೇವರು ದೊಡ್ಡವನು ನನ್ನ ಬಸ್ ರೂಟಿನಲ್ಲಿ ಇವರ ಗದ್ದಲ ಇರಲಿಲ್ಲ. ಬೇಗ ಮನೆ ಸೇರಿದೆ :)

Ittigecement said...

ನಾನು ದಿನಾಲು ಕೋಣನಕುಂಟೆಯಿಂದ ಹೆಬ್ಬಾಳಕ್ಕೆ ಹೋಗುತ್ತೇನೆ.. ಸಾಮಾನ್ಯವಾಗಿ ಒಂದುವರೆ ತಾಸು ಬೇಕಾಗುತ್ತದೆ. ಅಂದು ಬೆಳಿಗ್ಗೆ ೮ ಗಂಟೆಗೆ ಹೋದವನು.. ರಾತ್ರಿ ೮.೩೦ ಕ್ಕೆ ಮನೆಗೆ ಬಂದೆ... ಹುಚ್ಚು ಹಿಡಿಯುವದೊಂದು ಬಾಕಿ. ಛೆ..
ನಿಮ್ಮ ಲೇಖನ ಚೆನ್ನಾಗಿದೆ, ಸಮಯೋಚಿತವಾಗಿದೆ..

Anonymous said...

ಸಿಮೆಂಟು ಮರಳಿನ ಮಧ್ಯೆ ಇಲ್ಲಾ ಪ್ರಾಕಾಸಾನ್ನಾ ನೊಡಿಸ್ವಾಮಿ ನಾವಿರುವಿದೆ ಕಟ್ಟೆಲಿ

ಲೋಕೇಶ್ ಗೌಡ said...

doorada jermanyalliddaru bengalurin agu hOgugalige spandisidiralla shanker. realy great. nimmantavaru aparoopa. bereyavaragiddare bega project mugudre sakalappa. rest tegobahududu antha yochane madoru. elle iru hege iru endendu nee kannadavagiru annuva hage nivu obbaru.

Harisha - ಹರೀಶ said...

"ನೆನ್ನೆ"ಗೂ "ನಿನ್ನೆ"ಗೂ ಎಷ್ಟು ದಿನ ವ್ಯತ್ಯಾಸ?