Thursday, November 26, 2009

ಆಟೋ ಅಣಿಮುತ್ತುಗಳು - ೭೯ - ನನ್ನ ದೇವರು

ಕೆಲವು ದಿನಗಳ ಹಿಂದೆ ಬ್ರಿಗೇಡ್ ಹಾಗು ರಿಚ್ಮಂಡ್ ರಸ್ತೆಯ ಜಂಕ್ಷನ್ ನಲ್ಲಿ ತೆಗೆದ ಫೋಟೋ.
ಈ ಅಣ್ಣನೇನೋ ಪ್ರಯಾಣಿಕರನ್ನು ದೇವ್ರು ಅಂತಾ ಹೇಳ್ತಾ ಇದಾನೆ. ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.

ಪ್ರಯಾಣಿಕರೇ ನನ್ನ ದೇವರು

ಇನ್ನೊಂದು ಸುದ್ಧಿ, 24 ನವೆಂಬರಿನ ಉದಯವಾಣಿಯ "ನಮ್ಮ ಬೆಂಗಳೂರು" ಪುರವಣಿಯಲ್ಲಿ ಸೋಮಾರಿ ಕಟ್ಟೆ ಬಗ್ಗೆ ಬರಹ ಬಂದಿದೆ. ನೋಡದವರಿಗಾಗಿ ಅದನ್ನು ಸ್ಕ್ಯಾನ್ ಮಾಡಿ ಹಾಕುತಿದ್ದೇನೆ.
ಸುಮ್ನೆ ಹಂಚಿಕೊಳ್ಳಬೇಕು ಎನ್ನಿಸಿತು, ಅದಕ್ಕೆ ಹಾಕ್ತಾ ಇದ್ದೀನಿ. ಪರಾಂಬರಿಸಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, November 9, 2009

ಆಟೋ ಅಣಿಮುತ್ತುಗಳು - ೭೮ - ಅಲಂಕಾರ, ಅಹಂಕಾರ

ಈ ಫೋಟೋ ತೆಗೆದದ್ದು ಸುಮಾರು ೪ ತಿಂಗಳ ಹಿಂದೆ, ಎಂ.ಜಿ. ರೋಡಿನಲ್ಲಿ.
ಹಾರೋ ಹಕ್ಕಿಗೆ ಅದೇನು ಅಲಂಕಾರವೋ ಗೊತ್ತಿಲ್ಲ.. ಆದ್ರೆ ಈ ಅಣ್ಣ ಪ್ರೀತಿಸಿದ ಹುಡುಗಿಗೆ ದುರಹಂಕಾರ ಅನ್ಸುತ್ತೆ.
ಈ ಅಣಿಮುತ್ತನ್ನು ಬರೆಸಿದ ಮೊದಲ ಆಟೋ ಇದು ಇರಬೇಕು. ಏಕೆಂದರೆ ಇದಾದ ಸುಮಾರು ಒಂದು ತಿಂಗಳ ನಂತರ ಸುಮಾರು ಆಟೋಗಳ, ಟಾಟಾ ಇಂಡಿಕಾ ಕ್ಯಾಬುಗಳ, ಟೆಂಪೋ ಟ್ರಾವೆಲರುಗಳ ಹಿಂದೆ ಇದೆ ಹಾಗು ಇದೆ ರೀತಿಯ ಸ್ಲೋಗನ್ನುಗಳು ಕಾಣಿಸತೊಡಗಿದವು. ಬರೀ ಸಾಹಿತ್ಯದಲ್ಲಿ ಕೃತಿಚೌರ್ಯ ನಡೀತಾ ಇತ್ತು, ಇಲ್ಲಿ ಕೂಡಾ ಶುರುವಾಗಿದೆ.

ದುರಹಂಕಾರ ಅನ್ನೋದನ್ನ ಬರೆದಿರುವ ಪರಿ.. ಛೆ..ಮುದ್ರಾ ರಾಕ್ಷಸನ ಹಾವಳಿಯೋ, ಅಥವಾ ಬರೆದಿರೋ ರಾಕ್ಷಸನ ಹಾವಳಿಯೋ ?

ಹಾರುವ ಹಕ್ಕಿಗೆ ಅಲಂಕಾರ
ಪ್ರೀತಿಸೋ ಹುಡುಗಿಗೆ ದುರಂಕಾರ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 5, 2009

ಆಟೋ ಅಣಿಮುತ್ತುಗಳು - ೭೭ - ಪ್ರೀತ್ಸೋದು ಇಷ್ಟ ಹೇಳೋದು ಕಷ್ಟ

ಇತ್ತೀಚೆಗೆ ನಾನು ತೆಗೆದ ಚಿತ್ರ ಇದು.
ಬಹುಶಃ ಬಸವನಗುಡಿ ಬಳಿ ಕಂಡದ್ದು ಅನ್ನಿಸುತ್ತೆ.
ಬಹಳ ಸಂಕೋಚ ಅನ್ಸುತ್ತೆ ಈ ಅಣ್ಣನಿಗೆ. ಅದಕ್ಕೆ ಚಂದ್ರಣ್ಣ ಹೀಗೆ ಹೇಳಿರೋದು.

ಪ್ರೀತ್ಸೋದು ಇಷ್ಟ ಕಣೇ
ಹೇಳೋದು ಕಷ್ಟ ಕಣೇ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, November 1, 2009

ಆಟೋ ಅಣಿಮುತ್ತುಗಳು - ೭೬ - ಗುದ್ದಬೇಡವೋ ಗುಲಾಮ

ಮಿತ್ರ ಗುರುದಾಸ ಭಟ್ರು ಕಳಿಸಿದ ಫೋಟೋ ಇದು.
ಮೂಡಲಪಾಳ್ಯ ರಸ್ತೆಯಲ್ಲಿ ನಮ್ಮ ಭಟ್ರು ಗಾಡಿ ಮೇಲೆ ಫುಲ್ ಸರ್ಕಸ್ ಮಾಡಿ ಐದನೇ ಯತ್ನದಲ್ಲಿ ಸಫಲರಾಗಿ ಈ ಚಿತ್ರ ತೆಗೆದಿದ್ದಾರೆ. ಇದನ್ನು ನನ್ನ ಮೊಬೈಲಿನಲ್ಲಿ ಸೇವ್ ಮಾಡಿದ್ದೆ. ಈಮೆಲಿಂದ ಡಿಲೀಟ್ ಮಾಡಿದ್ದೆ. ಹಾಗಾಗಿ ಭಟ್ರು ಕಳಿಸಿದ್ದು ಅನ್ನೋದು ನೆನಪಿನಿಂದ ಹೊರಟು ಹೋಗಿತ್ತು. ಆಟೋ ಹಿಂದೆ ಬರೆದಿರೋದನ್ನ ತೆಗೆಯೋದು ಸುಲಭ, ಆದ್ರೆ ಈ ಥರ ಕೆಳಾಗಡೆ ಬರೆದಿರೋದನ್ನು ಕ್ಲಿಕ್ಕಿಸುವುದು ಬಹಳ ಕಷ್ಟ. ತುಂಬಾ ಥ್ಯಾಂಕ್ಸ್ ಕಣ್ರೀ.

ಆದರೂ ಸರಿಯಾದ ಜಾಗದಲ್ಲಿ ಸರಿಯಾಗಿ ಬರೆದಿದ್ದಾನೆ ಈ ಅಣ್ಣ.
ಆದರೂ ಗುದ್ದೊಹಾಗೆ ಬರೋದು ಇವರೇ ಅಲ್ವೇ?



ಗುದ್ದಬೇಡವೋ ಗುಲಾಮ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ