Wednesday, February 25, 2009

ಸಾಫ್ಟ್ ವೇರ್ ಮನೆಗೆ ನುಗ್ಗಿ ದರೋಡೆ !!!

ಇವತ್ತಿನ (25th Feb 2009) ಸಂಜೆವಾಣಿಯ ಮುಖಪುಟದಲ್ಲಿ ಬಂದಿರುವ ಸುದ್ದಿ.

ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ ಮನೆಗೆ ನುಗ್ಗಿ ಅನ್ನುವ ಬದಲು,
ಸಾಫ್ಟ್ ವೇರಿನ ಮನೆಗೆ ನುಗ್ಗಿ ದರೋಡೆಯಂತೆ !!
ಸಖತ್ ಅಶ್ಕರ್ಯ ಅಲ್ವಾ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, February 24, 2009

ಸ್ಲಂ ಡಾಗು, ಆಸ್ಕರ್ರು ಹಾಗು ಇಲ್ಲಿ ಅದರ ಸಂಭ್ರಮ

ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಬಂದಿದ್ದೆ ತಡ, ಸಂಭ್ರಮ ಶುರು ಆಗಿದೆ.
ಭಾರತದ ಸ್ಲಮ್ಮು, ಮತೀಯ ಗಲಭೆಗಳು, ಮಕ್ಕಳ ಶೋಷಣೆ, ಭಿಕ್ಷಾಟನೆ, ವೈಶ್ಯಾವಾಟಿಕೆ, ಕ್ವಿಜ್ ನಲ್ಲಿ ನಡೆಯಬಹುದಾದ ಮೋಸ ಇವಲ್ಲವನ್ನು ತೋರಿಸಿ, ಇದೆಲ್ಲ ಬರೀ ಭಾರತದಲ್ಲೇ ನಡೆಯಲು ಸಾಧ್ಯ ಅಂತ ಬಿಂಬಿಸಿ, ಪ್ರಶಸ್ತಿ ದೋಚಿದ್ದಾರೆ.

ಇದೆ ಚಿತ್ರ ಮಾಡಿದ್ದು ಏನಾದರೂ ಒಬ್ಬ ಭಾರತೀಯ ನಿರ್ದೇಶಕ, ನಿರ್ಮಾಪಕ ಆಗಿದ್ದಲ್ಲಿ, ಒಂದಾದರೂ ಆಸ್ಕರ್ ಬಾರೋ ಛಾನ್ಸ್ ಇತ್ತೇ ? ಹಾಳಾಗ ಹೋಗ್ಲಿ, ಯಾವ ಭಾಷೆಯ ಡೈರೆಕ್ಟರ್ ಆದ್ರೇನು, ನಮ್ಮ ರೆಹಮಾನ್ ಹಾಗು ಪೂಕುಟ್ಟಿ ಗೆ ಆಸ್ಕರ್ ಬಂದಿದ್ಯಲ್ಲ ಅಂತ ಖುಷಿ ಪಡಬೇಕು.

ಆದ್ರೆ, ಈಗ ನಮ್ಮಲ್ಲಿ ಖುಷಿ ಪಡೋ ರೀತಿ ಸಖತ್ತಾಗಿ ಚೇಂಜ್ ಆಗಿದೆ. ಮುಂಚೆ, ಪಟಾಕಿ ಸಿಡಿಸಿ, ಮೆರವಣಿಗೆ ಹೊರತು ಆಚರಿಸ್ತಾ ಇದ್ರೂ, ಈಗ ನೋಡ್ತಾ ಇರೀ..
ಗಲ್ಲಿ ಪಲ್ಲಿ, ಹಾದಿ ಬೀದಿ, ಸಂದಿ ಗೊಂದಿ, ರಸ್ತೆ ಪಸ್ತೆ ಎಲ್ಲಾ ಕಡೆ, ಮಿನಿಮಮ್ ಹತ್ತು ಮುಖಗಳು ಇದ್ದು, ಅದ್ರಲ್ಲಿ ಮಧ್ಯದಲ್ಲಿ ದೊಡ್ಡದಾಗಿ ಆ ಜಾಗದ ಒಬ್ಬ ಸೊ ಕಾಲ್ಡ್ ಸಮಾಜ ಸೇವಕ, ಯುವಕರ ಆಶಾಕಿರಣ, ಬಡವರ ಬಂಧು ಆಗಿರುವ ಒಬ್ಬ ಮಹಾನುಭಾವ, ಸ್ಲಮ್ ಡಾಗ್ ಮಿಲಿಯನೇರ್ ಚಿತ್ರ ಎಂಟು ಆಸ್ಕರ್ ಬಾಚಿರೋದಕ್ಕೆ ಅಭಿನಂದಿಸುತ್ತಾರೆ ಎಂಬ ವಿನೈಲ್ ಪೋಸ್ಟರುಗಳು.

ಇಂಥ ಜನಗಳಿಗೆ ಸುಮ್ನೆ ಒಂದು ಕಾರಣ ಬೇಕು ತಮ್ಮ ಮುಖಗಳನ್ನು ಹೀಗೆ ಹಾಕಿ ಕೊಳ್ಳೋದಕ್ಕೆ. ಪ್ರಚಾರದ ಹಪಾಹಪಿತನ.
ಈ ಮುಂಡೇವು ಅಭಿನಂದನೆ ಮಾಡದೆ ಇದ್ರೆ, ರೆಹಮಾನ್, ಪೂಕುಟ್ಟಿ, ಡ್ಯಾನಿ ಬಾಯ್ಲ್ ಏನಾದರೂ ಆತ್ಮಹತ್ಯೆ ಮಾಡ್ಕೋತಾರ?

ಆಗ್ಲೇ ಇದು ಶುರು ಆಗಿದೆ. ಕನ್ನಡಪ್ರಭ ಪತ್ರಿಕೆಯ ಈ ದಿನದ ಪೇಪರ್ ನಲ್ಲಿ ಬಂದಿರುವ ಚಿತ್ರ, ನೋಡಿ. ಆದ್ರೆ ಈ ಚಿತ್ರದಲ್ಲಿ ಯಾವ ಬಡವರ ಬಂಧುವಿನ ಫೋಟೋ ಇಲ್ಲ, ಇನ್ನು ೨-೩ ದಿನ ತಡೆಯಿರಿ ಶುರು ಆಗುತ್ತೆ. ಪೋಸ್ಟರುಗಳು ಪ್ರಿಂಟ್ ಆಗ್ತಾ ಇವೆ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, February 20, 2009

ಆಟೋ ಅಣಿಮುತ್ತುಗಳು - ೫೬ - ಫುಲ್ ಹೊಗೆ

ಇದಕ್ಕೆ ಮುಂಚೆ ಅಕ್ಟೋಬರ್ 1, 2007 ನಲ್ಲಿ ನಲ್ಲ ನಲ್ಲೆ ಆಟೋ ಫೋಟೋ ಹಾಕಿದ್ದೆ.
ಆಡು ನೋಡಿದ ಮೇಲೆ "ನಲ್ಲ ನಲ್ಲೆಯ" ಸರದಿ
ಈ ಸಲ ಮತ್ತೊಂದು, ಆದ್ರೆ ಸ್ವಲ್ಪ ಚೇಂಜ್ ಆಗಿರೋ ಲಿರಿಕ್ಸ್ ಇರೋದನ್ನ ಪತ್ತೆ ಮಾಡಿ,
ಫೋಟೋ ತೆಗೆದು ಮಿತ್ರ ಅರುಣ್ ಕಳ್ಸಿದಾನೆ. ನೋಡಿ....

"ನಲ್ಲೆಯ ನಲ್ಮೆಯ ನಗೆ, ನಲ್ಲನಿಗೆ ಪುಲ್ ಹೊಗೆ"


------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, February 16, 2009

ಡಾಕ್ಟರ್ ಇಕ್ಕಿಂಗ್ ಪೇಷಂಟ್

ರೋಡಿನಲ್ಲಿ ಡಾಕ್ಟರ್ ಒಬ್ಬಾತನನ್ನು ಅಟ್ಟಾಡಿಸಿ ತಾರಾ ಮಾರಾ ಬಡಿಯುತ್ತಿದ್ದ.

ಜನರಿಗೆಲ್ಲಾ ಆಶ್ಚರ್ಯ...ಕೊನೆಗೆ ಅವರ ಹತ್ರ ಹೋಗಿ, ಡಾಕ್ಟರ್ ನನ್ನು ತಡೆದು,"ಏನ್ ಸಾಹೇಬ್ರೆ, ಡಾಕ್ಟರ್ ಆಗಿ ನೀವೇ ಇವನನ್ನ ದನ ಬಡಿಯೋ ಥರಾ ಬಡೀತಾ ಇದೀರಲ್ಲಾ, ನಿಮ್ಮ ಪ್ರೊಫೆಶನ್ ಗೆ ಮರ್ಯಾದೆ ನಾ ?" ಅಂತ ಕೇಳುದ್ರು.

ಅದಕ್ಕೆ ಡಾಕ್ಟರು "ಇಲ್ಲಾ ಸ್ವಾಮಿ, ಈ ಬೋ.ಮಗ ಮಾಡೋ ಕೆಲ್ಸ ಕೇಳುದ್ರೆ ನೀವ್ ಕೂಡಾ ಇಕ್ತೀರಾ" ಅಂದ್ರು. ಜನ ಅದಕ್ಕೆ,"ಏನ್ ಸಾರ್ ಅಂಥಾ ಕೆಲ್ಸ ?" ಅಂದದ್ದಕ್ಕೆ...

ಡಾಕ್ಟರ್ ಹೇಳ್ದಾ "ನೋಡಿ ಸ್ವಾಮಿ, ಈ ಬೋ.ಮಗ 3 ಬಾರಿ ನಮ್ಮ ಕ್ಲಿನಿಕ್ ಗೆ ಸಂತಾನಹರಣ ಶಸ್ತ್ರಚಿಕಿತ್ಸೆ (VASECTOMY) ಮಾಡಿಸ್ಕೊಳ್ಳೋಕೆ ಅಂತ ಬಂದ. ಪ್ರತೀ ಸಾರಿ ಆಪರೇಷನ್ ಥಿಯೇಟರ್ (O.T) ನಲ್ಲಿ ಮಲಗ್ಸಿ, ಆಪರೇಶನ್ ಗೆ ಕೂದಲನ್ನ ಶೇವ್ ಮಾಡಿದ ತಕ್ಷಣ ಓಡಿ ಹೋಗ್ತಾನೆ.... "
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, February 13, 2009

ಟಾಯ್ಲೆಟ್ಟಲ್ಲಿ ಜಾಲರಿ !

ಟಾಯ್ಲೆಟ್ಟಲ್ಲಿ ನೊಣ ನೋಡಿದಿರಿ..
ಕರೆಕ್ಟಾಗಿ ಗುರಿ ಇಟ್ಟು ಹಾರಿಸಿದರೆ, ಹೊರಗೆ ಸಿಡಿಯೋದಿಲ್ಲಾ, ಆದ್ರೆ ಈ ಟೆಕ್ನಾಲಜಿ ನೋಡಿ.
ಸುಮ್ನೆ ಒಂದು ಜಾಲರಿ ಹಾಕಿದಾರೆ. ಇದರ ಮೇಲೆ ಎಲ್ಲಾದ್ರೂ ಹಾರಿಸಿ, ಹೊರಗೆ ಸುರಿಯೋದಿಲ್ಲ.
ಬೈ ದಿ ವೇ, ಇದು ನಮ್ಮ ಆಫೀಸಿನ ಟಾಯ್ಲೆಟ್ಟು :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, February 11, 2009

ಜರ್ಮನಿಯಲ್ಲಿ ಮತ್ಸ್ಯಾವತಾರ

ನಾನು ಹ್ಯಾಂಬರ್ಗ್ ನಲ್ಲಿ ಕೆಲಸ ಮಾಡೋದು, ಸ್ಪೋರ್ಟಾಲೇ ಅನ್ನೋ ಜಾಗದಲ್ಲಿ.
ನಮ್ಮ ಮನೆಯಿಂದ ಇಲ್ಲಿಗೆ ಬರಬೇಕಾದರೆ, ಒಲ್ಸ್ಡಾರ್ಫ್ (OHLSDORF) ಅನ್ನೋ ಸ್ಟೇಷನ್ನಿಗೆ ಬಂದು ಅಲ್ಲಿಂದ ಇನ್ನೊಂದು ಟ್ರೈನ್ ಹಿಡಿಯಬೇಕು. ಅವತ್ತು ಟ್ರೈನ್ ಬರೋದಕ್ಕೆ ಇನ್ನೂ 5 ನಿಮಿಷ ಟೈಮ್ ಇತ್ತು ಅಂತಾ ಪ್ಲಾಟ್ ಫಾರಂನಲ್ಲಿ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಅಡ್ದಾಡುತ್ತಿದ್ದೆ.
ಅಲ್ಲಿ ಒಂದು Advertisment ಬಾಕ್ಸ್ ಇದೆ. ಗಾಜಿನಿಂದ ಮಾಡಿ, ಅದನ್ನು ಗೋಡೆಗೆ ನೇತುಹಾಕಿದ್ದರೆ.
ಅದ್ರಲ್ಲಿ ವಿಷ್ಣುವಿನ ಮತ್ಸ್ಯಾವತಾರದ ಮೂರ್ತಿ ಇದೆ. ನೋಡಿದ ಕೂಡಲೇ ಫೋಟೋ ತೆಕ್ಕೊಂಡೆ.
ಇದನ್ನು ಅಲ್ಲಿ ಯಾರು, ಯಾಕೆ, ಯಾವಾಗ ಇಟ್ಟರು ಅನ್ನೋದು ಗೊತ್ತಿಲ್ಲ.
ಯಾಕೆ ಇಟ್ಟಿದ್ದಾರೆ ಅಂತಾ ಯೋಚನೆ ಮಾಡೋ ಅಷ್ಟರಲ್ಲಿ ಟ್ರೈನ್ ಬಂತು.
ಇವತ್ತಿಗೂ ಈ ಮೂರ್ತಿ ಇಲ್ಲಿಗೆ ಹೆಂಗೆ ಬಂತು ಅಂತ ಅರ್ಥ ಆಗ್ತಾ ಇಲ್ಲ ನಂಗೆ.
ಯೋಚನೆ ಮಾಡಿ ಮಾಡಿ ಬಿಟ್ಟಿದೀನಿ. ಗೊತ್ತಿದ್ರೆ ಹೇಳಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, February 10, 2009

ಸಂಜೆವಾಣಿ ಸಮಯ !!

ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟ ಆಗೋ ಆಭಾಸಗಳನ್ನು, ಅಪಭ್ರಂಶಗಳನ್ನು ತೋರಿಸೋಕ್ಕೆ ಇನ್ನೊಂದು ಹೊಸಾ ಬ್ಲಾಗನ್ನು ಶುರು ಮಾಡಬೇಕು ಅನ್ಸುತ್ತೆ.
ಈ ಚಿತ್ರಗಳು ಇವತ್ತಿನ (ಫೆಬ್ರವರಿ 10, 2009) ರಂದು ಪ್ರಕಟವಾಗಿರುವ ಸುದ್ಧಿಗಳಲ್ಲಿ ನಾನು ಕಂಡಿದ್ದು.
ಈ ಪದದ ಅರ್ಥ ಗೊತ್ತಾ ನಿಮಗೆ ?



ಪಾಸ್ಟಾಗಿ ಓದಿ, ನಮಗೆ ಸೈರಾನೆ (ಸೈರಣೆ) ಇರಲ್ಲ.


ಇವ್ರ ಮುಂಡಾ ಮೋಚ್ತು. ಅದೇನು ಕನ್ನಡ ಮಾತಾಡ್ತಾರೋ, ಅದೇನು ಕನ್ನಡ ಬರೀತಾರೋ.
ಯಪ್ಪಾ, ಹಾಡು ಹಗಲಲ್ಲೇ ಕನ್ನಡದ ಕಗ್ಗೊಲೆ. ಹೇಗಿದ್ದ ಕನ್ನಡ ಪತ್ರಿಕೋದ್ಯಮ ಹೇಗಾಯ್ತು?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, February 9, 2009

ಟಾಯ್ಲೆಟ್ಟಲ್ಲಿ ನೊಣ !

ಕಳೆದ ಶುಕ್ರವಾರ ಸ್ವಲ್ಪ ಕೆಲಸ ಇತ್ತು ಅಂತಾ ಹ್ಯಾಂಬರ್ಗ್ ಏರ್ಪೋರ್ಟಿಗೆ ಹೋಗಿದ್ದೆ.
ಕೆಲಸ ಮುಗುಸ್ಕೊಂಡು ಹಾಗೆ ಸ್ವಲ್ಪ ಜಲಭಾದೆ ತೀರಿಸೋಕ್ಕೆ ಅಂತಾ ಅಲ್ಲಿನ ಟಾಯ್ಲೆಟ್ಟಿಗೆ ಹೋದೆ.
ಅಲ್ಲಿನ ಕಮೋಡ್ ನಲ್ಲಿ ನೊಣದ ಚಿತ್ರ ಪ್ರಿಂಟ್ ಮಾಡಿದ್ರು.
ನೋಡಿ....

ಯಾಕಪ್ಪಾ ಕಮೊಡಿನಲ್ಲಿ ನೊಣದ ಚಿತ್ರ ಪ್ರಿಂಟ್ ಮಾಡಿದಾರೆ ಅಂತಾ ಯೋಚನೆ ಮಾಡುತ್ತಾ ಕೆಲಸ ಮುಗಿಸಿದೆ.
ಆಮೇಲೆ ಹೊಳೆಯಿತು. ಜಲಭಾದೆ ತೀರಿಸುವಾಗ, ಕಮೊಡಿನಲ್ಲಿ ಏನಾದರೂ ಇದ್ರೆ, ಅದಕ್ಕೆ ಗುರಿ ಇಡುತ್ತಾರೆ.
ಈ ನೊಣದ ಚಿತ್ರ ಕಂಡಾಗ ಕೂಡಾ ಅದಕ್ಕೆ ಗುರಿ ಇಡುತ್ತಾರೆ. ಈ ಚಿತ್ರ ಇರುವ ಜಾಗದ ಮೇಲೆ ಮೂತ್ರ ವಿಸರ್ಜಿಸಿದಾಗ, ಹನಿಗಳು ಕಮೊಡಿನ ಹೊರಗೆ ಸಿಡಿಯೋದಿಲ್ಲ. ಟಾಯ್ಲೆಟ್ಟಿನ ನೆಲ ಗಲೀಜು ಆಗೋದಿಲ್ಲ ಹಾಗು ಕ್ಲೀನಿಂಗ್ ಬಹಳ ಸಲೀಸು.
ಎಂಥಾ ಸಿಂಪಲ್ ಹಾಗು ಮಸ್ತ್ ವಿಜ್ಞಾನ ಅಲ್ವಾ?

ಇದನ್ನು ಹ್ಯಾಂಬರ್ಗ್ ನಲ್ಲಿ ಇರೋರು ಓದಿದರೆ, ಮುಂದಿನ ಬಾರಿ ಏರ್ಪೋರ್ಟಿಗೆ ಹೋದಾಗ ಒಮ್ಮೆ ನೋಡಿ ಬನ್ನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Saturday, February 7, 2009

ಸೋಮಾರಿ ಕಟ್ಟೆ ಅಂದ್ಮೇಲೆ ಸ್ವಲ್ಪ ಪೋಲಿತನ ಇರ್ಲೇಬೇಕು ಅಲ್ವಾ ??

ವಯಸ್ಸಾದ ಗಂಡ, ಹೆಂಡತಿಯ ಬಳಿ ಬಂದು.."ಚಿನ್ನಾ, 30 ವರ್ಷದ ಹಿಂದೆ, ತೋಟದ ಬೇಲಿಗೆ ಒರಗಿ ನಾವು ಪ್ರೀತಿ ಮಾಡಿದ್ದು (Love Making) ನೆನಪಿದ್ಯಾ?"
ಹೆಂಡತಿ : "ಹ್ಯಾಗೆ ಮರೆಯಕ್ಕೆ ಆಗತ್ತೆ ಡಿಯರ್"
ಗಂಡ : " ಹಾಗದ್ರೆ, ಪುನಃ ಹಾಗೆ ಮಾಡಿ ಹಳೆಯದನ್ನ ಮತ್ತೊಮ್ಮೆ ಜ್ನಾಪಿಸಿಕೊಳ್ಳೋಣಾ ?"
ಹೆಂಡತಿ : "ಅಯ್ಯೋ ದೇವ್ರೆ, ಈ ವಯಸ್ಸಲ್ಲಿ ನಿಂಗೆ ಏನು ಇಂಥಾ ಆಸೆ ... ಆದ್ರೂ ಕೇಳಿದ್ರೆ ಒಂಥರಾ ಥ್ರಿಲ್ಲ್ ಆಗತ್ತೆ... ಟ್ರೈ ಮಾಡೋಣಾ.."
ಕಳ್ಳ ಬಡ್ಡಿಮಗ ಪಕ್ಕದ ಮನೆಯವನು ಇದನ್ನು ಕೇಳಿಸಿಕೊಳ್ತಾ ಇದ್ದ.. ಈ ಮುದಿ ಜೋಡಿ ಅದ್ಯಾವ್ ಥರ ಪ್ರೀತಿ ಮಾಡ್ತಾರೋ ಅನ್ನೋ ಕುತೂಹಲದಿಂದಫಾಲೋ ಮಾಡ್ಕೊಂಡು ತೋಟದ ಬೇಲಿ ಹತ್ರ ಅವಿತು ಕೂತ.
ಮುದಿ ದಂಪತಿಗಳು ನಿಧಾನವಾಗಿ ನಡ್ಕೊಂಡು, ತೋಟದ ಬೇಲಿ ಹತ್ರ ಬಂದು, ತಯಾರಾದ್ರು.
ಹೆಂಡತಿ ಬೇಲಿಗೆ ಒರಗಿ ನಿಂತಳು, ಗಂಡ ಅವಳನ್ನು ತಬ್ಬಿ ಹಿಡಿದು ಪ್ರೀತಿ ಮಾಡೋಕ್ಕೆ (Love Making) ಶುರು ಮಾಡಿದ...ಇದ್ದಕ್ಕಿದ್ದ ಹಾಗೆ ಇಬ್ರಿಗೂ ಅದೇನು ಆಯ್ತೋ, ಯುವ ಜೋಡಿಯನ್ನೂ ನಾಚಿಸೋ ಹಾಗೆ ಸಿಕ್ಕಪಟ್ಟೆ ರೋಚಕವಾಗಿ, ಉದ್ರೇಕದಿಂದ, ಪ್ರೀತಿ ಮಾಡತೊಡಗಿದರು..ಹೀಗೆ ಸುಮಾರು ಹೊತ್ತು ಕೂಗಾಡಿ, ಕಿರುಚಾಡಿ ಕೊನೆಯಲ್ಲಿ ಸುಸ್ತಾಗಿ ಕುಸಿದು ಬಿದ್ದರು..ಹಂಗೂ ಹಿಂಗೂ ಕಷ್ಟ ಪಟ್ಟು ಮೇಲೆ ಎದ್ದು, ಬಟ್ಟೆ ಬರೆ ಸರಿ ಮಾಡ್ಕೊಂಡು ಹೊರಡಲು ರೆಡಿ ಆದ್ರು...
ಕೊನೆಗೆ ಆ ಪಕ್ಕದ ಮನೆಯವನಿಗೆ ಆಶ್ಚರ್ಯ ತಡೆಯಲಾಗ್ಲಿಲ್ಲ...
ಓಡಿ ಬಂದು, "ಅಂಕಲ್, ಈ ವಯಸ್ಸಲ್ಲೂ ನೀವು ದಂಪತಿಗಳು ಇಷ್ಟು ಚೆನ್ನಾಗಿ ಪ್ರೀತಿ ಮಾಡ್ತೀರಲ್ಲಾ..ಹೆಂಗೆ ?
ಇದರ ರಹಸ್ಯ ಏನು ? ನಾನ್ ಕೂಡಾ ನಿಮ್ಮ ಹಾಗೆ ಆಗ್ಬೇಕು ಅಂದ್ರೆ ಏನು ಮಾಡೋದು " ಅಂತ ಕೇಳಿದ.
ಸುಸ್ತಿನಿಂದ ಇನ್ನೂ ಚೇತರಿಸಿಕೊಳ್ತಾ ಇದ್ದ ಗಂಡ ಕಷ್ಟಪಟ್ಟು ಅವನ ಕಪಾಳಕ್ಕೆ ಜೋರಾಗಿ ಬಿಗಿದು ಹೇಳಿದ,

"ಮಂಕ್ ಮುಂಡೆ ಮಗ್ನೆ, 30 ವರ್ಷದ ಹಿಂದೆ ಈ ಬೇಲಿಗೆ ಕರೆಂಟ್ ಹಾಯಿಸಿರಲಿಲ್ಲ"
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, February 6, 2009

ನಂಗೊಂದು ದೊಡ್ಡ ಸೀಕ್ರೆಟ್ ಗೊತ್ತು !!

ಜೋಕು ಬರೆದು ಬಹಳ ದಿನ ಆಗಿತ್ತು. ಅದಕ್ಕೆ ಸುಮ್ನೆ, ಊಟದ ಜೊತೆ ಉಪ್ಪಿನಕಾಯಿ ಅನ್ನೋ ರೀತಿ, ಒಂದು ಸಣ್ಣ ಜೋಕು.
ನಗು ಬಂದ್ರೆ, ನಕ್ಕಿಬಿಡಿ , ಬರ್ಲಿಲ್ಲ ಅಂದ್ರೂ ಕೂಡ ನಗು ಬರಮಾಡಿಕೊಳ್ಳಿ.

ಒಬ್ಬ ಹುಡುಗ, ರಾಜು ಅಂತ ಇಟ್ಕೋಳಿ ಅವ್ನ ಹೆಸರು. ಅಪ್ಪ ಅಮ್ಮ ಯಾವಾಗ್ಲೂ ಬೈತಾ ಇರ್ತಿದ್ರು.
ಇವ್ನಿಗೆ ಫುಲ್ ತಲೆ ಕೆಟ್ಟೊಗಿತ್ತು. ಸ್ಕೂಲಲ್ಲಿ ತನ್ನ ಫ್ರೆಂಡ್ ಹತ್ರ ಈ ವಿಚಾರ ಹೇಳ್ಕೊಂಡ.

ಅದಕ್ಕೆ ಅವನ ಫ್ರೆಂಡ್ ಭೂಪ ಹೇಳಿದ "ಟೆನ್ಶನ್ ಮಾಡ್ಕೊಬೇಡಮ್ಮ, ನಂಗೂ ಬೈತಾ ಇದ್ರು ಮನೇಲಿ, ಒಂದು ಐಡಿಯ ಮಾಡಿದೆ ನೋಡು. ನೀನ್ ಕೂಡಾ ನಾನು ಹೇಳಿದಂತೆ ಮಾಡು. ಬೈಯ್ಯೋಕ್ಕೆ ಬಂದಾಗ "ನಂಗೊಂದು ದೊಡ್ಡ ಸೀಕ್ರೆಟ್ ಗೊತ್ತು" ಅಂತ ಹೇಳು. ಸುಮ್ನೆ ಹೋಗ್ತಾರೆ ಅವಾಗ"

ಇನ್ನು ೩ ದಿನ ಆದಮೇಲೆ ಇಬ್ರು ಪುನಃ ಭೇಟಿ ಆದರು.

ಐಡಿಯ ಕೊಟ್ಟ ಭೂಪ ಕೇಳಿದ "ಏನಪ್ಪಾ? ನಾನು ಹೇಳಿದಂತೆ ಮಾಡುದ್ಯಾ? ಏನು ರಿಸಲ್ಟು?"
ರಾಜು ಹೇಳಿದ "ಸಖತ್ತಾಗಿ ವರ್ಕ್ ಆಯ್ತು ಕಣೋ..ಅಮ್ಮ ಬೈಯ್ಯೋಕ್ಕೆ ಬಂದಾಗ ನಂಗೊಂದು ದೊಡ್ಡ ಸೀಕ್ರೆಟ್ ಗೊತ್ತು ಅಂದ್ರೆ, ಹತ್ರ ಬಂದು, ಮುತ್ತು ಕೊಟ್ಟಿ, ಪರ್ಸಿಂದ 100 ರೂ ಕೊಟ್ಟಿ, ಯಾರ್ಗೂ ಹೇಳಬೇಡ ಅಂದ್ರು"
"ಅಪ್ಪ ಬೈಯ್ಯೋಕ್ಕೆ ಬಂದಾಗ ನಂಗೊಂದು ದೊಡ್ಡ ಸೀಕ್ರೆಟ್ ಗೊತ್ತು ಅಂದಿದ್ದಕ್ಕೆ ತಲೆ ಸವರಿ, ಜೇಬಿಂದ 500 ರೂ ಕೊಟ್ಟು, ಯಾರ್ಗೂ ಹೇಳಬೇಡ ಅಂದ್ರು. ಸಖತ್ ಮಜಾ ಇದೆ ಕಣೋ"
ಭೂಪ "ಸಖತ್ ಅಲ್ವ ಹಂಗಾದ್ರೆ ?"
ರಾಜು "ಬೇರೆಯವರಿಗೆ ಆಟಾಡಿಸೋಣ ಅಂತಾ ನಮ್ಮ ಮನೆಗೆ ಹಾಲು ಕೊಡೋನು ಬಂದಾಗ ನಂಗೊಂದು ದೊಡ್ಡ ಸೀಕ್ರೆಟ್ ಗೊತ್ತು ಅಂದಿದ್ದಕ್ಕೆ, ಬಾ ಮರಿ, ನಿಮ್ಮಪ್ಪನ್ನ ತಬ್ಬಿಕೋ ಒಂದ್ಸಲ ಅನ್ನೋದಾ?"
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, February 5, 2009

ರಾಜೀವ್ ಗಾಂಧಿಗೆ ಸ್ವಾಗತ

ಈ ಚಿತ್ರದ ಲಿಂಕನ್ನು ಒಬ್ಬ ಅನಾಮಧೇಯ ಮಿತ್ರ ಕೊಟ್ಟಿದ್ದು.
ಈ ಚಿತ್ರದಲ್ಲಿ ಹೇಳೋ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ದಿ. ರಾಜೀವ್ ಗಾಂಧಿ ಆಗಮಿಸುತ್ತ ಇದಾರಂತೆ,
ಇವರನ್ನು ಎಂ.ಬಿ.ಉಮ್ಮರ್ ಸ್ವಾಗತಿಸುತ್ತಾ ಇದಾರೆ.
ಇದು ದೆರ್ಲಕಟ್ಟೆಯಲ್ಲಿ ಫೆಬ್ರವರಿ 4 ರಂದು ನಡೆದ ಕಾಂಗ್ರೆಸ್ಸ್ ಸಭೆಯಲ್ಲಿ ಕಂಡಿದ್ದು.
ಈ ಚಿತ್ರವನ್ನು
http://www.daijiworld.com/chan/view_img1.asp?cid=2453
ವೆಬ್ ಸೈಟಿಂದ ಪಡೆದಿರುವೆ.
ಈ ಕಾಂಗ್ರೆಸ್ ಜನಕ್ಕೆ ಬರೀ ನೈತಿಕತೆ ಇಲ್ಲ ಅನ್ಕೊಂಡಿದ್ದೆ, ಬುದ್ಧಿ ಕೂಡ ಇಲ್ಲ ಅಂತ ಇವತ್ತು ಗೊತ್ತಾಯ್ತ.
ಇಂಥವರು ಜನಪ್ರತಿನಿಧಿಗಳು, ಜನರನ್ನು ಆಳುವ ದೊರೆಗಳು.
ನೆನೆಸ್ಕೊಂಡ್ರೆ ಈ ದೇಶ ಹೆಂಗೆ ಅಂತ ಭಯ ಆಗುತ್ತೆ.


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ