Monday, November 9, 2009

ಆಟೋ ಅಣಿಮುತ್ತುಗಳು - ೭೮ - ಅಲಂಕಾರ, ಅಹಂಕಾರ

ಈ ಫೋಟೋ ತೆಗೆದದ್ದು ಸುಮಾರು ೪ ತಿಂಗಳ ಹಿಂದೆ, ಎಂ.ಜಿ. ರೋಡಿನಲ್ಲಿ.
ಹಾರೋ ಹಕ್ಕಿಗೆ ಅದೇನು ಅಲಂಕಾರವೋ ಗೊತ್ತಿಲ್ಲ.. ಆದ್ರೆ ಈ ಅಣ್ಣ ಪ್ರೀತಿಸಿದ ಹುಡುಗಿಗೆ ದುರಹಂಕಾರ ಅನ್ಸುತ್ತೆ.
ಈ ಅಣಿಮುತ್ತನ್ನು ಬರೆಸಿದ ಮೊದಲ ಆಟೋ ಇದು ಇರಬೇಕು. ಏಕೆಂದರೆ ಇದಾದ ಸುಮಾರು ಒಂದು ತಿಂಗಳ ನಂತರ ಸುಮಾರು ಆಟೋಗಳ, ಟಾಟಾ ಇಂಡಿಕಾ ಕ್ಯಾಬುಗಳ, ಟೆಂಪೋ ಟ್ರಾವೆಲರುಗಳ ಹಿಂದೆ ಇದೆ ಹಾಗು ಇದೆ ರೀತಿಯ ಸ್ಲೋಗನ್ನುಗಳು ಕಾಣಿಸತೊಡಗಿದವು. ಬರೀ ಸಾಹಿತ್ಯದಲ್ಲಿ ಕೃತಿಚೌರ್ಯ ನಡೀತಾ ಇತ್ತು, ಇಲ್ಲಿ ಕೂಡಾ ಶುರುವಾಗಿದೆ.

ದುರಹಂಕಾರ ಅನ್ನೋದನ್ನ ಬರೆದಿರುವ ಪರಿ.. ಛೆ..ಮುದ್ರಾ ರಾಕ್ಷಸನ ಹಾವಳಿಯೋ, ಅಥವಾ ಬರೆದಿರೋ ರಾಕ್ಷಸನ ಹಾವಳಿಯೋ ?

ಹಾರುವ ಹಕ್ಕಿಗೆ ಅಲಂಕಾರ
ಪ್ರೀತಿಸೋ ಹುಡುಗಿಗೆ ದುರಂಕಾರ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 5, 2009

ಆಟೋ ಅಣಿಮುತ್ತುಗಳು - ೭೭ - ಪ್ರೀತ್ಸೋದು ಇಷ್ಟ ಹೇಳೋದು ಕಷ್ಟ

ಇತ್ತೀಚೆಗೆ ನಾನು ತೆಗೆದ ಚಿತ್ರ ಇದು.
ಬಹುಶಃ ಬಸವನಗುಡಿ ಬಳಿ ಕಂಡದ್ದು ಅನ್ನಿಸುತ್ತೆ.
ಬಹಳ ಸಂಕೋಚ ಅನ್ಸುತ್ತೆ ಈ ಅಣ್ಣನಿಗೆ. ಅದಕ್ಕೆ ಚಂದ್ರಣ್ಣ ಹೀಗೆ ಹೇಳಿರೋದು.

ಪ್ರೀತ್ಸೋದು ಇಷ್ಟ ಕಣೇ
ಹೇಳೋದು ಕಷ್ಟ ಕಣೇ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, November 1, 2009

ಆಟೋ ಅಣಿಮುತ್ತುಗಳು - ೭೬ - ಗುದ್ದಬೇಡವೋ ಗುಲಾಮ

ಮಿತ್ರ ಗುರುದಾಸ ಭಟ್ರು ಕಳಿಸಿದ ಫೋಟೋ ಇದು.
ಮೂಡಲಪಾಳ್ಯ ರಸ್ತೆಯಲ್ಲಿ ನಮ್ಮ ಭಟ್ರು ಗಾಡಿ ಮೇಲೆ ಫುಲ್ ಸರ್ಕಸ್ ಮಾಡಿ ಐದನೇ ಯತ್ನದಲ್ಲಿ ಸಫಲರಾಗಿ ಈ ಚಿತ್ರ ತೆಗೆದಿದ್ದಾರೆ. ಇದನ್ನು ನನ್ನ ಮೊಬೈಲಿನಲ್ಲಿ ಸೇವ್ ಮಾಡಿದ್ದೆ. ಈಮೆಲಿಂದ ಡಿಲೀಟ್ ಮಾಡಿದ್ದೆ. ಹಾಗಾಗಿ ಭಟ್ರು ಕಳಿಸಿದ್ದು ಅನ್ನೋದು ನೆನಪಿನಿಂದ ಹೊರಟು ಹೋಗಿತ್ತು. ಆಟೋ ಹಿಂದೆ ಬರೆದಿರೋದನ್ನ ತೆಗೆಯೋದು ಸುಲಭ, ಆದ್ರೆ ಈ ಥರ ಕೆಳಾಗಡೆ ಬರೆದಿರೋದನ್ನು ಕ್ಲಿಕ್ಕಿಸುವುದು ಬಹಳ ಕಷ್ಟ. ತುಂಬಾ ಥ್ಯಾಂಕ್ಸ್ ಕಣ್ರೀ.

ಆದರೂ ಸರಿಯಾದ ಜಾಗದಲ್ಲಿ ಸರಿಯಾಗಿ ಬರೆದಿದ್ದಾನೆ ಈ ಅಣ್ಣ.
ಆದರೂ ಗುದ್ದೊಹಾಗೆ ಬರೋದು ಇವರೇ ಅಲ್ವೇ?



ಗುದ್ದಬೇಡವೋ ಗುಲಾಮ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, October 30, 2009

ಆಟೋ ಅಣಿಮುತ್ತುಗಳು - ೭೫ - ನೊಂದಿರೋ ಹೃದಯ ನೋಯಿಸಬೇಡ

ಇದನ್ನೂ ಕೂಡಾ ನಮ್ಮ ಗುರುದಾಸ ಭಟ್ರು ಕಳಿಸಿದ್ದು.
ಈ ಅಣ್ಣನ ಹೃದಯ ಬಹಳ ನೊಂದಿದೆ ಎಂದು ಕಾಣುತ್ತೆ. ಅದರ ಮೇಲೆ ಯಾರೋ ತುಂಬಾ ನೋವನ್ನು ಕೊಡ್ತಾ ಇದಾರೆ ಅನ್ಸುತ್ತೆ. ಅದಕ್ಕೆ ಹೀಗೆ ಹೇಳ್ತಾ ಇರೋದು. ಜೊತೆಗೆ ತನ್ನನ್ನು ತಾನೇ ಪಾಪಿ ಎಂದು ಕರೆದುಕೊಳ್ತಾ ಇದಾನೆ ಈ ಅಣ್ಣ.


ನೊಂದಿರೋ ಹೃದಯ
ನೋಯಿಸಬೇಡಾ ಗೆಳೆಯಾ
...ಪಾಪಿ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, October 29, 2009

ಡೇವಿಡ್ ಶೆಪರ್ಡ್ ಇನ್ನಿಲ್ಲ

ಕ್ರಿಕೆಟ್ ಎಂಬ ಸಭ್ಯರ ಕ್ರೀಡೆಯಲ್ಲಿ ಆಟಗಾರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಂಪೈರುಗಳು.
ಈಗಿನ ಥರ್ಡ್ ಅಂಪೈರುಗಳು, ರೀಪ್ಲೇ, ಕಂಪ್ಯೂಟರ್ ವಿಶ್ಲೇಷಣೆಗಳ ಮುಂಚೆಯೇ ಸಮರ್ಪಕವಾಗಿ ನಿರ್ವಹಿಸಿ, ಆಟಗಾರರ, ಪ್ರೇಕ್ಷಕರ, ಕ್ರೀಡಾ ಪ್ರೇಮಿಗಳ ಹತ್ತಿರ ಬಂದವರು "ಡೇವಿಡ್ ರಾಬರ್ಟ್ ಶೆಪರ್ಡ್"
(ಜನನ : 27-12-1940, ಮರಣ : 27-10-2009)

ಇವರು ತಮ್ಮ ಅಂಪೈರಿಂಗ್ ಬದುಕಿನಲ್ಲಿ ಒಟ್ಟು 92 ಟೆಸ್ಟ್ ಹಾಗು 172 ಒನ್ ಡೇ ಗಳಲ್ಲಿ ನಿಂತಿದ್ದಾರೆ.
ಪ್ರಾಯಶಃ ಪ್ರಪಂಚದ ಎಲ್ಲಾ ಕ್ರಿಕೆಟ್ ತಂಡಗಳಿಂದ ಪ್ರಶಂಸೆಗೆ ಒಳಗಾದ ಅಂಪೈರು ಇವರು.
ಇಂಗ್ಲೆಂಡಿನ ಡೆವನ್ (DEVON) ನ ಬೈಡ್ಫೋರ್ಡ (Bideford) ಎನ್ನುವಲ್ಲಿ ಜನ್ಮ ತಾಳಿದ ಇವರು, ತಮ್ಮ ಜೀವನವನ್ನು ಕ್ರಿಕೆಟ್ಟಿನ ಮೈದಾನದಲ್ಲೇ ಕಳೆದವರು. ಮೊದಲು Gloucestershire ತಂಡದ ಪರವಾಗಿ ಮೊದಲ ದರ್ಜೆ ಕ್ರಿಕೆಟ್ ಆಡುತ್ತಿದ್ದ ಇವರು, ತರುವಾಯ ಟೆಸ್ಟ್ ಕ್ರಿಕೆಟ್ಟಿನ ಅಂಪೈರಾಗಿ ಬಂದರು. ನಂತರ ಒನ್ ಡೇ ಮ್ಯಾಚುಗಳಿಗೆ ಕೂಡ 1983 ರಿಂದ 2005 ವರೆಗೆ ಅಂಪೈರಿಂಗ್ ಮಾಡಿದರು. ಇವರನ್ನು SHEP ಎಂದು ಕರೆಯಲಾಗುತ್ತಿತ್ತು.
ಕ್ರಿಕೆಟ್ ಜಗತ್ತಿನ ಕೊಡುಗೆಗಾಗಿ ಇವರನ್ನು Order of the British Empire ಆಗಿ ಮಾಡಲಾಯಿತು.
27 ಅಕ್ಟೋಬರ್ 2009 ರಂದು ಕ್ಯಾನ್ಸರ್ ಜೊತೆಯ ಬಹುಕಾಲದ ಹೋರಾಟದಲ್ಲಿ ಸೋತಿ, ವಿಧಿವಶರಾದರು.
ಇದನ್ನೇ ವಿಪರ್ಯಾಸ ಎನ್ನೋದು, ಒಬ್ಬ ಹೊಸ ಆಟಗಾರ ಕೈ ಗಾಯ ಮಾಡಿಕೊಂಡರೆ ಸುದ್ಧಿ ಆಗುವಷ್ಟು ಇಂಥ ಜನರು ಆಗೋದಿಲ್ಲ.
ಕ್ರಿಕೆಟ್ ಲೋಕದ ಜೆಂಟಲ್ ಮನ್ ಅಂಪೈರ್ "ಡೇವಿಡ್ ಶೆಪರ್ಡ್"ಗೆ ನಮ್ಮ ಶ್ರದ್ಧಾಂಜಲಿ. We Miss You SHEP
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, October 27, 2009

ಆಟೋ ಅಣಿಮುತ್ತುಗಳು - ೭೪ - ಬಣ್ಣದ ಚಿಟ್ಟೆ, ನೀ ಕೆಟ್ಟೆ

ನನ್ನ ಆಟೋ ಅಣಿಮುತ್ತುಗಳ ಹೊಸಾ ಇನಿಂಗ್ಸ್ ಶುರು ಆಗಿದೆ. ಪರಾಂಬರಿಸಿ.
ಈ ಫೋಟೋ ಎಲ್ಲಿ ತೆಗೆದಿದ್ದು ಸರಿಯಾಗಿ ಜ್ಞಾಪಕ ಇಲ್ಲ. ಆದರೂ ಮೊದಲ ಬಾರಿಗೆ ಈ ಅಣಿಮುತ್ತು ಕಂಡಿದ್ದು.
ಪಕ್ಕಾ ಆಡುಭಾಷೆಯಲ್ಲಿ ಬರೆದಿದ್ದಾನೆ ಈ ಅಣ್ಣ.


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, October 26, 2009

ಶಂಕ್ರ ಸೋಮಾರಿ ಅಲ್ಲಾ !!!

ಕಳೆದ ಬಾರಿ ಬ್ಲಾಗಿನಲ್ಲಿ ಆಟೋ ಚಿತ್ರ ಹಾಕಿದ್ದು, ಆಗಸ್ಟ್ 13 ರಂದು. ಇವತ್ತಿಗೆ ಬರೋಬ್ಬರಿ ಎರಡು ತಿಂಗಳ ಮೇಲೆ ಹದಿಮೂರು ದಿನ.
ಸುಮಾರು ಜನ ಬ್ಲಾಗರ್ ಮಿತ್ರರು ಫೋನ್ ಮಾಡಿ, ಈ-ಮೇಲ್ ಕಳ್ಸಿ "ಯಾಕೋ ಶಂಕರ, ಬ್ಲಾಗ್ ಹೆಸರಿಗೆ ತಕ್ಕನಾಗಿ ಸೋಮಾರಿ ಆಗಿದ್ಯಲ್ಲೋ" ಅಂತಾ ಬೈದ್ರು (ಉಗುದ್ರು)


ಏನ್ ಮಾಡ್ಲಿ ಹೇಳಿ ಸಾರ್. ಏನೇನೋ ತಲ್ನೋವು, ಕೆಲಸ, ಅದ್ರ ಮೇಲೆ ಇನ್ನೇನೋ ಹೇಳ್ಕೊಳಕ್ಕಾಗ್ದೆ ಇರೋಂಥಾ ತೊಂದರೆಗಳು. ನನ್ ಹತ್ರ ಇನ್ನೂ ೨ ತಿಂಗಳಿಗೆ ಆಗೋ ಅಷ್ಟು ಆಟೋ ಫೋಟೋಗಳಿವೆ.
ಈ ವಾರದಿಂದ ಮತ್ತೆ ಪೋಸ್ಟಿಂಗ್ ಶುರು ಹಚ್ಕೊತೀನಿ. ೨ ತಿಂಗಳಿಂದ ಸೋಮಾರಿ ಆಗಿದ್ದ ಅಂತಾ ನನ್ನನ್ನು ಮರೀಬೇಡಿ ಅಂತಾ ಹೇಳೋಕ್ಕೆ ಈ ಸಣ್ಣ ಅಪಾಲಜಿ ಪೋಸ್ಟಿಂಗು. ಇದಕ್ಕೆ ಮುಂಚೆ ತೋರಿದ ಪ್ರೀತಿ, ಪ್ರೋತ್ಸಾಹ ಈಗ್ಲೂ ಕಂಟಿನ್ಯೂ ಆಗ್ಲಿ :)

ಕ್ಷಮೆ ಇರ್ಲಿ ಮಿತ್ರರೇ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, August 13, 2009

ಆಟೋ ಅಣಿಮುತ್ತುಗಳು - ೭೩ - ಅವಳು ನಕ್ಕಳು

ಕೆಲವು ದಿನಗಳ ಮುಂಚೆ ಆಫೀಸಿನ ಮುಂದೆ ಕಂಡ ಆಟೋ ಇದು.
ಯಾಕೋ ಟ್ರ್ಯಾಕು ಎಲ್ಲಿಗೋ ಹೋಗಿದೆ ಈ ಅಣ್ಣನದು.



ಅವಳು ನಕ್ಕಳು
ನಾ ಸೋತೆ..
ಅವಳು ಸಿಕ್ಕಳು
ನಾ ಸತ್ತೆ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, August 11, 2009

ಆಟೋ ಅಣಿಮುತ್ತುಗಳು - ೭೨ - ಕಾಣದ ಲೋಕದಲ್ಲಿ ಮೋಸದ ಪ್ರೀತಿ

ಮಿತ್ರ ಗುರುದಾಸ ಭಟ್ಟರು ಕಳಿಸಿದ ಫೋಟೋ ಇದು.
ಈ ಅಣ್ಣ ಭಗ್ನಪ್ರೇಮಿ ಇರಬಹುದು ಅಥವಾ ಕುರುಡು ಪ್ರೀತಿಯನ್ನು ಬೆನ್ನು ಹತ್ತುವ ಎಲ್ಲರನ್ನೂ ಉದ್ದೇಶಿಸಿ ಹೇಳಿರುವ ಅಣಿಮುತ್ತು ಇದು ಅನ್ಸುತ್ತೆ. ಅಲ್ವೇ ?

ಕಾಣದ ಲೋಕದಲ್ಲಿ ಮೋಸದ ಪ್ರೀತಿಯನು
ಹುಡುಕುತ ಹೋರಾಡುತ್ತಿರುವ
ಕುರುಡು ಪ್ರೇಮಿಗಳು ನಾವೆಲ್ಲ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, August 7, 2009

ಆಟೋ ಅಣಿಮುತ್ತುಗಳು - ೭೧ - ಪ್ರಯಾಣಿಕರೇ ದೇವರೆಂದರು

ಈ ಆಟೋವನ್ನು ನಾನು ಜರ್ಮನಿಗೆ ಹೋಗೋಕ್ಕೆ ಮುಂಚೆ ವಿಲ್ಸನ್ ಗಾರ್ಡನ್ ಸ್ಮಶಾನದ ಮುಂದೆ ನೋಡಿದ್ದೆ. ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು ಅವತ್ತು. ಆದರೂ ಕಷ್ಟ ಪಟ್ಟು ಛೇಸ್ ಮಾಡಕ್ಕೆ ಪ್ರಯತ್ನಪಟ್ಟು ಸೋತು ಸುಮ್ಮನಾಗಿದ್ದೆ. ಮತ್ತೆ ಇದು ಎಲ್ಲಿ ಕಾಣುತ್ತೋ ಅಂತಾ ಕಾಯ್ತಾ ಇದ್ದೆ.

ಹೀಗೆ ೧ ವಾರದ ಮುಂಚೆ ಆಫೀಸಿಗೆ ಹೋಗೋವಾಗ, ಇನ್ಫೆಂಟ್ರಿ ರಸ್ತೆಯಲ್ಲಿ ಕಂಡಿತು. ಬೆಳಗಿನ ಸಮಯ, ಕಮ್ಮಿ ಟ್ರಾಫಿಕ್ಕು, ಜೊತೆಗೆ ಶಿವಾಜಿನಗರ ಜಂಕ್ಷನ್ ನಲ್ಲಿ ಕಾಯ್ತಾ ಇತ್ತು ಈ ಆಟೋ. ಲಬಕ್ ಅಂತ ಮೊಬೈಲ್ ಹೊರಗೆ ತೆಗೆದು, ಗಬಕ್ ಅಂತಾ ಫೋಟೋ ಹೊಡೆದೆ.


ಇದಕ್ಕೆ ಮುಂಚೆ ನೋಡಿದಾಗ ಬರಹ ಹೀಗೆ ಇತ್ತು -
ಅಭಿಮಾನಿಗಳೇ ದೇವರೆಂದರು ....ಡಾ ರಾಜಣ್ಣ
ಪ್ರಯಾಣಿಕರೇ ದೇವರೆಂದರು ..... ಮಿ ಕೆಂಪಣ್ಣ

ಆದ್ರೆ ಈಗ ಪಾಪ ಕೆಂಪಣ್ಣನವರ ಹೆಸರು, ಉಜ್ಜಿ ಉಜ್ಜಿ ಮಾಯವಾಗಿದೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ