ಮಂಗಳೂರಲ್ಲಿ ನಡೆದ ಪಬ್ ಮೇಲಿನ ದಾಳಿಯನ್ನು ಖಂಡಿಸಿ ಬೆಂಗಳೂರಲ್ಲಿ ಇಂದು ನಡೆದ ಪ್ರತಿಭಟನೆಯ ಚಿತ್ರ ಇದು. ಇದು ಪ್ರಕತವಾಗಿರೋದು ಇಂದಿನ ಸಂಜೆವಾಣಿ ಪತ್ರಿಕೆಯಲ್ಲಿ.
ಈ ಪ್ರತಿಭಟನೆಯನ್ನು ನಡೆಸಿದವರು ಬೆಂಗಳೂರು ಯುವ ಕಾಂಗ್ರೆಸ್ ಸದಸ್ಯರು.
ಈ ಚಿತ್ರದಲ್ಲಿ ಪೋಸ್ಟರ್ ಮೇಲೆ ಏನು ಬರೆದಿದೆ ಅಂತಾ ಒಮ್ಮೆ ಓದಿ.
"ಶಾಂತಿಗೆ ಹೆಸರಾದ ಕರ್ನಾಟಕ ರಾಜ್ಯದಲ್ಲಿ
ಅಶಾಂತಿಯ ಕಿಚ್ಚನ್ನು ಬಿ.ಜೆ.ಪಿ ನಾಯಕರು ಅಚ್ಚುತ್ತಿದ್ದಾರೆ"
ಹಚ್ಚುತ್ತಿದ್ದಾರೆ ಅನ್ನೋದನ್ನ ಅಚ್ಚುತ್ತಿದ್ದಾರೆ ಅಂತಾ ಬರೆಸಿದ್ದಾರಲ್ಲ,
ಇವರು ನಮ್ಮ ಕನ್ನಡ ತಾಯಿಯ ಎಮ್ಮೆಯ ಮಕ್ಕಳು ಮತ್ತು ಉಟ್ಟು ಓರಾಟಗಾರರು.
ಜೊತೆಗೆ ಗೃಹಮಂತ್ರಿ ವಿ.ಎಸ್. ಆಚಾರ್ಯ ಅವರ ಖಾತೆಯನ್ನು ಏನಂತಾ ಬರೆದಿದ್ದರೆ ನೋಡಿ
"HOUSE MINISTER" ಅಂತೆ.
HOME MINISTER ಖಾತೆಗೆ ಇವರು ಕೊಟ್ಟಿರುವ ಹೆಸರು ಅನ್ಸುತ್ತೆ.
HOME ಮತ್ತು HOUSE ಅನ್ನೋದಕ್ಕೆ ಒಂದೇ ಅರ್ಥ ಆಲ್ವಾ ಇಂಗ್ಲಿಷ್ ನಲ್ಲಿ,
ಅದಕ್ಕೆ ಈ ಭೂಪರು ಈ ರೀತಿ ಕೂಡ ಬರೆಯಬಹುದು ಅಂತಾ ಅನ್ಕೊಂಡಿದಾರೆ.
ಕನ್ನಡಮ್ಮ ನೀನೆ ಧನ್ಯೆ.
ಇವರಿಗೆ ಬಿ.ಜೆ.ಪಿ ಯ ಮೇಲೆ ಪ್ರತಿಭಟನೆ ನಡೆಸಲು ಒಂದು ನೆಪ ಸಾಕು ಅಷ್ಟೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ