ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಬಂದಿದ್ದೆ ತಡ, ಸಂಭ್ರಮ ಶುರು ಆಗಿದೆ.
ಭಾರತದ ಸ್ಲಮ್ಮು, ಮತೀಯ ಗಲಭೆಗಳು, ಮಕ್ಕಳ ಶೋಷಣೆ, ಭಿಕ್ಷಾಟನೆ, ವೈಶ್ಯಾವಾಟಿಕೆ, ಕ್ವಿಜ್ ನಲ್ಲಿ ನಡೆಯಬಹುದಾದ ಮೋಸ ಇವಲ್ಲವನ್ನು ತೋರಿಸಿ, ಇದೆಲ್ಲ ಬರೀ ಭಾರತದಲ್ಲೇ ನಡೆಯಲು ಸಾಧ್ಯ ಅಂತ ಬಿಂಬಿಸಿ, ಪ್ರಶಸ್ತಿ ದೋಚಿದ್ದಾರೆ.
ಇದೆ ಚಿತ್ರ ಮಾಡಿದ್ದು ಏನಾದರೂ ಒಬ್ಬ ಭಾರತೀಯ ನಿರ್ದೇಶಕ, ನಿರ್ಮಾಪಕ ಆಗಿದ್ದಲ್ಲಿ, ಒಂದಾದರೂ ಆಸ್ಕರ್ ಬಾರೋ ಛಾನ್ಸ್ ಇತ್ತೇ ? ಹಾಳಾಗ ಹೋಗ್ಲಿ, ಯಾವ ಭಾಷೆಯ ಡೈರೆಕ್ಟರ್ ಆದ್ರೇನು, ನಮ್ಮ ರೆಹಮಾನ್ ಹಾಗು ಪೂಕುಟ್ಟಿ ಗೆ ಆಸ್ಕರ್ ಬಂದಿದ್ಯಲ್ಲ ಅಂತ ಖುಷಿ ಪಡಬೇಕು.
ಆದ್ರೆ, ಈಗ ನಮ್ಮಲ್ಲಿ ಖುಷಿ ಪಡೋ ರೀತಿ ಸಖತ್ತಾಗಿ ಚೇಂಜ್ ಆಗಿದೆ. ಮುಂಚೆ, ಪಟಾಕಿ ಸಿಡಿಸಿ, ಮೆರವಣಿಗೆ ಹೊರತು ಆಚರಿಸ್ತಾ ಇದ್ರೂ, ಈಗ ನೋಡ್ತಾ ಇರೀ..
ಗಲ್ಲಿ ಪಲ್ಲಿ, ಹಾದಿ ಬೀದಿ, ಸಂದಿ ಗೊಂದಿ, ರಸ್ತೆ ಪಸ್ತೆ ಎಲ್ಲಾ ಕಡೆ, ಮಿನಿಮಮ್ ಹತ್ತು ಮುಖಗಳು ಇದ್ದು, ಅದ್ರಲ್ಲಿ ಮಧ್ಯದಲ್ಲಿ ದೊಡ್ಡದಾಗಿ ಆ ಜಾಗದ ಒಬ್ಬ ಸೊ ಕಾಲ್ಡ್ ಸಮಾಜ ಸೇವಕ, ಯುವಕರ ಆಶಾಕಿರಣ, ಬಡವರ ಬಂಧು ಆಗಿರುವ ಒಬ್ಬ ಮಹಾನುಭಾವ, ಸ್ಲಮ್ ಡಾಗ್ ಮಿಲಿಯನೇರ್ ಚಿತ್ರ ಎಂಟು ಆಸ್ಕರ್ ಬಾಚಿರೋದಕ್ಕೆ ಅಭಿನಂದಿಸುತ್ತಾರೆ ಎಂಬ ವಿನೈಲ್ ಪೋಸ್ಟರುಗಳು.
ಇಂಥ ಜನಗಳಿಗೆ ಸುಮ್ನೆ ಒಂದು ಕಾರಣ ಬೇಕು ತಮ್ಮ ಮುಖಗಳನ್ನು ಹೀಗೆ ಹಾಕಿ ಕೊಳ್ಳೋದಕ್ಕೆ. ಪ್ರಚಾರದ ಹಪಾಹಪಿತನ.
ಈ ಮುಂಡೇವು ಅಭಿನಂದನೆ ಮಾಡದೆ ಇದ್ರೆ, ರೆಹಮಾನ್, ಪೂಕುಟ್ಟಿ, ಡ್ಯಾನಿ ಬಾಯ್ಲ್ ಏನಾದರೂ ಆತ್ಮಹತ್ಯೆ ಮಾಡ್ಕೋತಾರ?
ಆಗ್ಲೇ ಇದು ಶುರು ಆಗಿದೆ. ಕನ್ನಡಪ್ರಭ ಪತ್ರಿಕೆಯ ಈ ದಿನದ ಪೇಪರ್ ನಲ್ಲಿ ಬಂದಿರುವ ಚಿತ್ರ, ನೋಡಿ. ಆದ್ರೆ ಈ ಚಿತ್ರದಲ್ಲಿ ಯಾವ ಬಡವರ ಬಂಧುವಿನ ಫೋಟೋ ಇಲ್ಲ, ಇನ್ನು ೨-೩ ದಿನ ತಡೆಯಿರಿ ಶುರು ಆಗುತ್ತೆ. ಪೋಸ್ಟರುಗಳು ಪ್ರಿಂಟ್ ಆಗ್ತಾ ಇವೆ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
7 comments:
naanu andkotidde... adu hege ondu bollywood(hindi) movige.. ashtondu prachara siktu... adu oscar vishayavagi anta....
aadre amele gotaytu... Oscar kodtirodu... English movige anta... :( :( :(
ಅಂತಹ ವಿನೈಲ್ ಪೋಸ್ಟರುಗಳು ಕಂಡ ತಕ್ಷಣ ಫೋಟೋ ತೆಗೆದು ಮೇಲ್ ಮಾಡ್ತೀನಿ :) ಪೇಸ್ ಕಟ್ ಗಳು ನೋಡಿ ಮಜಾ ತಗೊಳನ :)
ಸರ್,
ನಾನು ನೋಡಿದೆ ಇದನ್ನು ಕನ್ನಡಪ್ರಭದಲ್ಲಿ...
ರೆಹಮಾನ್, ಪೂಕಟ್ಟಿ, ಆಸ್ಕರ್ ಬಂದಿದ್ದು ಖುಷಿ ವಿಚಾರವೇ...
:)
ಮೊನ್ನೆ ಹಿಂಗೆ ಸಾಂಗ್ಲಿಯಾನಾ ಒಬಾಮಾನ್ನ ಭೇಟಿ ಆಗಿ ಬಂದಿದ್ದಕ್ಕೆ ಅದೇ ದೊಡ್ಡ ಸಾಧನೆ ಅನ್ನೋ ತರಹ ಒಬಾಮಾ ಚಿತ್ರ ಹಾಕಿ ಪೋಸ್ಟರ್ ಹಾಕಿದ್ರು... ಈಗ ನೀವು ಹೇಳಿದಂಗೆ ಸ್ಲಂಡಾಗ್ ಪೋಸ್ಟರ್ ಗಳು ಶುರು..
Every country is unique in its own way... but the point here is why did Danny choose India when there are plenty of other countries in the world which are not even worth a visit... the point here is its not just an english movie with the all the masala... but at the end of the day.. the NGOs are raising substantial amount of funds to improve the living conditions in these slums... and also even out in the west... not all the people are talking about the slums they are actually amazed by Rehaman's work and the story line.. for all we know now we have the hollywood stepping in to our country which is a brilliant investment and talking about the people putting up the vinyl posters is just another way to get publicity ... its just another page 3 and I personally dont see any harm if someone being selfish here.. :)
ಸಂಕ್ರಣ್ಣಾ,
ವಿನೈಲ್ ಬೋರ್ಡುಗಳು ಸರಿ..ಆದ್ರೆ ಈ ಫೋಟೋ ಪೆಪ್ಸಿ ಜಾಹೀರಾತಿನದು ಕಣಣ್ಣಾ!
ಎಲ್ಲಾ ಲೆವಲ್ಲಿನಲ್ಲೂ ಎಲ್ಲರಿಗೂ 'ಸ್ಲಂಡಾಗ್' ಫಿನಾಮಿನಾ ಪ್ರಚಾರ ಗಿಟ್ಟಿಸಿಕೊಡೋದಾದ್ರೆ ಆಗ್ಲಿ ಬಿಡಿ. ನಮ್ಮ ಸ್ವಾಮೀಜಿಗಳ,ಮುಖ್ಯಮಂತ್ರಿ,ಸಾರಿಗೆ ಮಂತ್ರಿ,ಕಾರ್ಪೋರೇಟರುಗಳ ಹುಟ್ಟುಹಬ್ಬಕ್ಕೇ ಪ್ರಚಾರಗಿಟ್ಟಿಸಿಕೊಳ್ಳುವಾಗ ಇದೇನ್ ಮಹಾ!
Post a Comment