Monday, February 16, 2009

ಡಾಕ್ಟರ್ ಇಕ್ಕಿಂಗ್ ಪೇಷಂಟ್

ರೋಡಿನಲ್ಲಿ ಡಾಕ್ಟರ್ ಒಬ್ಬಾತನನ್ನು ಅಟ್ಟಾಡಿಸಿ ತಾರಾ ಮಾರಾ ಬಡಿಯುತ್ತಿದ್ದ.

ಜನರಿಗೆಲ್ಲಾ ಆಶ್ಚರ್ಯ...ಕೊನೆಗೆ ಅವರ ಹತ್ರ ಹೋಗಿ, ಡಾಕ್ಟರ್ ನನ್ನು ತಡೆದು,"ಏನ್ ಸಾಹೇಬ್ರೆ, ಡಾಕ್ಟರ್ ಆಗಿ ನೀವೇ ಇವನನ್ನ ದನ ಬಡಿಯೋ ಥರಾ ಬಡೀತಾ ಇದೀರಲ್ಲಾ, ನಿಮ್ಮ ಪ್ರೊಫೆಶನ್ ಗೆ ಮರ್ಯಾದೆ ನಾ ?" ಅಂತ ಕೇಳುದ್ರು.

ಅದಕ್ಕೆ ಡಾಕ್ಟರು "ಇಲ್ಲಾ ಸ್ವಾಮಿ, ಈ ಬೋ.ಮಗ ಮಾಡೋ ಕೆಲ್ಸ ಕೇಳುದ್ರೆ ನೀವ್ ಕೂಡಾ ಇಕ್ತೀರಾ" ಅಂದ್ರು. ಜನ ಅದಕ್ಕೆ,"ಏನ್ ಸಾರ್ ಅಂಥಾ ಕೆಲ್ಸ ?" ಅಂದದ್ದಕ್ಕೆ...

ಡಾಕ್ಟರ್ ಹೇಳ್ದಾ "ನೋಡಿ ಸ್ವಾಮಿ, ಈ ಬೋ.ಮಗ 3 ಬಾರಿ ನಮ್ಮ ಕ್ಲಿನಿಕ್ ಗೆ ಸಂತಾನಹರಣ ಶಸ್ತ್ರಚಿಕಿತ್ಸೆ (VASECTOMY) ಮಾಡಿಸ್ಕೊಳ್ಳೋಕೆ ಅಂತ ಬಂದ. ಪ್ರತೀ ಸಾರಿ ಆಪರೇಷನ್ ಥಿಯೇಟರ್ (O.T) ನಲ್ಲಿ ಮಲಗ್ಸಿ, ಆಪರೇಶನ್ ಗೆ ಕೂದಲನ್ನ ಶೇವ್ ಮಾಡಿದ ತಕ್ಷಣ ಓಡಿ ಹೋಗ್ತಾನೆ.... "
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

10 comments:

Unknown said...

ha ha ha ha ha!!!!!

shivu.k said...

ಅಹಾ....ಹ..ಹ.....ಹ.......ನಗು ತಡೆಯಲಗಲಿಲ್ಲ......

ಮಲ್ಲಿಕಾರ್ಜುನ.ಡಿ.ಜಿ. said...

ಏನ್ ಸ್ವಾಮಿ ಹಿಂಗ ಜೋಕ್ ಮಾಡೋದು....
ತುಂಬಾ ಜನಕ್ಕೆ ಹೇಳಬೇಕಿದೆ....

Santhosh Rao said...

ಸಂಕ್ರಣ್ಣ ಹಳೆ ಸ್ಟಾಕ್ .. :)

Sushrutha Dodderi said...

ಅಣ್ಣಾ, ನಿಂಗೆ ಮೋಟುಗೋಡೆಗೆ ಕಾಂಟ್ರಿಬ್ಯೂಟರ್ ಆಗಿ ಪ್ರಮೋಶನ್ ಕೊಟ್ರೆ ಹೇಗೆ ಅಂತ ಯೋಚ್ನೆ ಮಾಡ್ತಿದೀನಿ.. :P

Harisha - ಹರೀಶ said...

ಯಾಕೋ ಬ್ಲಾಗು ಹಳಿ ತಪ್ತಾ ಇದೆ.. ಸುಶ್ ಹೇಳಿದ ಪ್ರಮೋಶನ್ ತೊಗೊಳ್ಳೋದು ಒಳ್ಳೇದು...

Shankar Prasad ಶಂಕರ ಪ್ರಸಾದ said...

ನಾನು ಬರೆಯೋ ನಗೆಹನಿಗಳನ್ನು ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದಗಳು.
ಹಳಿ ತಪ್ಪುತ್ತಾ ಇದೆ ಅಂತ ಹೇಳಿ ಎಚ್ಚರಿಸಿದವರಿಗೂ ಥ್ಯಾಂಕ್ಸ್.
ಬರೀ ಕಮೆಂಟಲ್ಲಿ ಒಬ್ಬರು ಹೇಳಿದಾರೆ ಅಷ್ಟೆ. ಆದ್ರೆ ಚಾಟಿನಲ್ಲಿ ಸಿಕ್ಕ ಸುಮ್ಮರು ಜನ, ಹೀಗೆ ಹೇಳಿದಾರೆ.
ಇನ್ಮುಂದೆ ಹೀಗೆ ಆಗೋದಿಲ್ಲ. ಸೋಮಾರಿ ಕಟ್ಟೆ ಪುನಃ ಟ್ರಾಕ್ ಗೆ ಬರುತ್ತೆ.
ಕಟ್ಟೆ ಶಂಕ್ರ

Harsha said...

gr8.. somarikatte.. shud come back to track :-)

Unknown said...

Barahagalannella odide... Sakkatthagive... Thanks..

http://ravikanth-gore.blogspot.com

Unknown said...

hhhhha ha ha ha.... sakkaatagide kanree...... munduvaresi....ca