Wednesday, November 26, 2008

ಫಾರಿನ್ ಟೂರು

ಓರ್ವ ಮಂತ್ರಿ, ಬಹಳ ಶೋಕೀಲಾಲ, ಓದು ಬರಹ ಅಷ್ಟೊಂದಿಲ್ಲಾ.
ಮಂತ್ರಿಮಂಡಲದಲ್ಲಿ ಇದ್ದಾಗ, ಮಾತು ಮಾತಿಗೂ ಫಾರಿನ್ ಟ್ರಿಪ್ಪು, ಫಾರಿನ್ ಟೂರು ಅಂತ ಎಸ್ಕೇಪು.
ಅದನ್ನ ಕಲಿಯೋಕ್ಕೆ, ಇದರ ಬಗ್ಗೆ ಮಾಹಿತಿ ಪಡೆಯೋಕ್ಕೆ ಅಂತಾ ಸಬೂಬು.
ಹೀಗೆ ಒಮ್ಮೆ ಒಂದು ದೊಡ್ಡ ಫಾರಿನ್ ಟೂರು ಮುಗುಸ್ಕೊಂಡು ವಾಪಸ್ ಬಂದ್ರು, ಮಾರನೇ ದಿನ ಪ್ರೆಸ್ ನವರು ಅಟಕಾಯ್ಸಿಕೊಂಡ್ರು.

ಪತ್ರಕರ್ತ : ಈ ಸಲ ಯಾತಕ್ಕೆ ಹೋಗಿದ್ರಿ ಫಾರಿನ್ ಟೂರ್ ಗೆ ?

ಮಂತ್ರಿ : ಆ ದೇಶದ ಒಳಚರಂಡಿ ವ್ಯವಸ್ಥೆ ಹೆಂಗಿದೆ ಅಂತಾ ಅಧ್ಯಯನ ಮಾಡಕ್ಕೆ ಹೋಗಿದ್ವಿ.

ಪತ್ರಕರ್ತ : ಅಲ್ಲಾ ಸಾರ್, ನೀವೇ ಪದೇ ಪದೇ ಬ್ರಿಟನ್, ಅಮೇರಿಕಾ, ಜರ್ಮನಿ, ಸಿಂಗಾಪುರ್ ಅಂತಾ ದೇಶಗಳಿಗೆ ಅಧ್ಯಯನ ಅದೂ ಇದೂ ಎಂದು ಫಾರಿನ್ ಟೂರಿಗೆ ಹೋಗ್ತಾ ಇರ್ತೀರ, ಆ ದೇಶದ ಮಂತ್ರಿಗಳು ಈ ಥರ ಫಾರಿನ್ ಟೂರು ಅಂತಾ ಬರ್ತಾರಾ ?

ಮಂತ್ರಿ : ಏನೂ ?? ಆ ದೇಶಗಳ ಮಂತ್ರಿಗಳು ಫಾರಿನ್ ಟ್ರಿಪ್ಪಿಗೆ ಹೋಗೋದಾ ? ಅದ್ಯಾಕ್ರೀ ಹೋಗ್ಬೇಕು ? ಅವ್ರುಗಳು ಇರೋದೇ ಫಾರಿನ್ ದೇಶದಲ್ಲಿ ತಾನೆ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

8 comments:

Anonymous said...

ನಮ್ಮ ಕಡೆ ಫಾರಿನ್ ಅಂದ್ರೆ , ಸಂಡಾಸು ಶ೦ಕ್ರಣ್ಣಾ, ಮಂತ್ರಿಗಳು ಕನಫೂಸ ಆಗಿರಬೆಕು.

Ittigecement said...

sankrannaa...
ಹಹ್ಹಾ,,,ಹಹಾ...!!
ನಾನು ಕನ್ನಡ ಶಾಲೆಯಲ್ಲಿ ಓದಿದ್ದು..
ನಮ್ಮ ಕ್ಲಾಸಿಗೆ ಒಂದುಸಾರಿ ಇಂಗ್ಲೀಷ್ ಮಾಧ್ಯಮದ ಹುಡುಗೊನೊಬ್ಬ ಬಂದ.
ನಾವೆಲ್ಲ ಅವನ ಬಳಿ
" ಕನ್ನಡ ಭಾಷೆ ಯಾವ ಮಿಡಿಯಮ್ ನಲ್ಲಿ ಓದುತಿದ್ಯೊ?" ಅಂತ ಕೇಳಿದ್ವಿ...!!

Unknown said...

ಚೆನ್ನಾಗಿದೆ ಶಂಕರಣ್ನ, ಅದೇ ತರಹ್ ಇನ್ನೊಂದಿದೆ
ಪುಢಾರಿ: ಅಯ್ಯೋ ನಾನು ಇಂಗ್ಲೇಂಡಿಗೆ ಹೋಗಿದ್ದೆ. ಅಲ್ಲೀ ಜನ ಏನು ಬುದ್ದಿವಂತರಪ್ಪಾ...! ಸಣ್ಣ ಪುಟ್ಟ ಚಿಳ್ಳೆ ಪಿಳ್ಳೆಗಳೆಲ್ಲಾ ಇಂಗ್ಲೀಸ್ ನಾಗೆ ಚಟ ಪಟ ಅಂತ ಅರಳು ಹುರಿದಂಗೆ ಮಾತಾಡ್ತಾವೆ...! ನಮ್ಮೂರ್ನಾಗೂ ಹೈಕಳು ಅವೆ ಇಂಗ್ಲೀಸು ಕಸ್ಟ ಕಸ್ಟ ಅಂತ ಬಡ್ಕೋಳ್ತಾವೆ ಬಡ್ಡೈತವು.

Lakshmi Shashidhar Chaitanya said...

wah wah wah !!!!! sakhatt kathe :) :) :)

Shankar Prasad ಶಂಕರ ಪ್ರಸಾದ said...

ಇದೊಂದೇ ಅಲ್ಕಣಣ್ಣ, ಇಂಗ್ಲೆಂಡ್ ನಲ್ಲಿ ಬಿಕ್ಷುಕ ಕೂಡ ಇಂಗ್ಲೀಷಲ್ಲಿ ಭಿಕ್ಷೆ ಬೇಡ್ತಾನಂತೆ ?
ಹೌದಾ ?

ಅಂತರ್ವಾಣಿ said...

aaha entha manthri...

Abhijith said...

bahala chennagide :)

Harisha - ಹರೀಶ said...

ಏನು ಮಂತ್ರಿ ಏನು ಮಂತ್ರ್ಯಣ್ಣ... ನಮ್ಮ ದೇಶದಾಗ ಏನು ಮಂತ್ರಿ ಆಗಿ ಹೋದ್ರಣ್ಣ...