Showing posts with label ಪತ್ರಕರ್ತ. Show all posts
Showing posts with label ಪತ್ರಕರ್ತ. Show all posts

Wednesday, November 26, 2008

ಫಾರಿನ್ ಟೂರು

ಓರ್ವ ಮಂತ್ರಿ, ಬಹಳ ಶೋಕೀಲಾಲ, ಓದು ಬರಹ ಅಷ್ಟೊಂದಿಲ್ಲಾ.
ಮಂತ್ರಿಮಂಡಲದಲ್ಲಿ ಇದ್ದಾಗ, ಮಾತು ಮಾತಿಗೂ ಫಾರಿನ್ ಟ್ರಿಪ್ಪು, ಫಾರಿನ್ ಟೂರು ಅಂತ ಎಸ್ಕೇಪು.
ಅದನ್ನ ಕಲಿಯೋಕ್ಕೆ, ಇದರ ಬಗ್ಗೆ ಮಾಹಿತಿ ಪಡೆಯೋಕ್ಕೆ ಅಂತಾ ಸಬೂಬು.
ಹೀಗೆ ಒಮ್ಮೆ ಒಂದು ದೊಡ್ಡ ಫಾರಿನ್ ಟೂರು ಮುಗುಸ್ಕೊಂಡು ವಾಪಸ್ ಬಂದ್ರು, ಮಾರನೇ ದಿನ ಪ್ರೆಸ್ ನವರು ಅಟಕಾಯ್ಸಿಕೊಂಡ್ರು.

ಪತ್ರಕರ್ತ : ಈ ಸಲ ಯಾತಕ್ಕೆ ಹೋಗಿದ್ರಿ ಫಾರಿನ್ ಟೂರ್ ಗೆ ?

ಮಂತ್ರಿ : ಆ ದೇಶದ ಒಳಚರಂಡಿ ವ್ಯವಸ್ಥೆ ಹೆಂಗಿದೆ ಅಂತಾ ಅಧ್ಯಯನ ಮಾಡಕ್ಕೆ ಹೋಗಿದ್ವಿ.

ಪತ್ರಕರ್ತ : ಅಲ್ಲಾ ಸಾರ್, ನೀವೇ ಪದೇ ಪದೇ ಬ್ರಿಟನ್, ಅಮೇರಿಕಾ, ಜರ್ಮನಿ, ಸಿಂಗಾಪುರ್ ಅಂತಾ ದೇಶಗಳಿಗೆ ಅಧ್ಯಯನ ಅದೂ ಇದೂ ಎಂದು ಫಾರಿನ್ ಟೂರಿಗೆ ಹೋಗ್ತಾ ಇರ್ತೀರ, ಆ ದೇಶದ ಮಂತ್ರಿಗಳು ಈ ಥರ ಫಾರಿನ್ ಟೂರು ಅಂತಾ ಬರ್ತಾರಾ ?

ಮಂತ್ರಿ : ಏನೂ ?? ಆ ದೇಶಗಳ ಮಂತ್ರಿಗಳು ಫಾರಿನ್ ಟ್ರಿಪ್ಪಿಗೆ ಹೋಗೋದಾ ? ಅದ್ಯಾಕ್ರೀ ಹೋಗ್ಬೇಕು ? ಅವ್ರುಗಳು ಇರೋದೇ ಫಾರಿನ್ ದೇಶದಲ್ಲಿ ತಾನೆ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ