ಅವಾಗ, ದೇವರ ಕ್ಷಮಿಸಿ...ದೇವತೆ ಥರ ಬಂದಿದ್ದು ಲಕ್ಷ್ಮಕ್ಕ.
"ಶಂಕ್ರ, ಸುಮ್ನೆ ಕಂಗಾಲು ಆಗಬೇಡಾ, ನಿನಗೆ ಇನ್ಮೇಲೆ ನಾನೇ ಆಟೋ ಫೋಟೋ ಕಳುಸ್ತೀನಿ" ಅಂದ್ರು.
ಹೋದ ಪ್ರಾಣ ವಾಪಾಸ್ ಬಂದಂಗಾಯ್ತು.ಅಂದ್ಹಾಗೆ, ಇದನ್ನೂ ಇವರೇ ಕಳ್ಸಿದ್ದು. ಇದರ ಜೊತೆ ಇನ್ನೂ ೨ ಫೋಟೋ ಕಳ್ಸಿದಾರೆ. ಅದನ್ನು ಇನ್ನೊ ಕೆಲವು ದಿನ ಬಿಟ್ಟು ಹಾಕ್ತೀನಿ.ಈ ಅಣ್ಣಾ ಯಾಕೋ ತನ್ನ ಬಗ್ಗೆಯೇ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದಾನೆ ಅನ್ಸುತ್ತೆ, ಅಥವ ಮುಂಚೆ ಈತನನ್ನು "ಅವನು" ಎಂದು ಭಾವಿಸಿ ಇಕ್ಕಿದಾರೆ ಅನ್ಸುತ್ತೆ. ಅದಕ್ಕೆ "ನಾನವನಲ್ಲ" ಅಂತ ಬರ್ಕೊಂಡಿದಾನೆ ಆಟೋ ಮೇಲೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
3 comments:
"ನಾನವನಲ್ಲ" ಅ೦ತ ಬರ್ಕೊ೦ಡಿರೋದ್ ನೋಡ್ರಿದ್ರೆ ಏನ್ ಹೆದ್ರಿಕೆನೋ ಇಲ್ಲಾ ಕನ್ಪ್ಫಯೂಸ್ ಆಗೌವನೋ ನಾ ಕಾಣೇ.... ಅಲ್ವಾ ಸ೦ಕ್ರಣ್ಣಾ, ಇಲ್ಲಾ ಯಾರ ಹತ್ತಿರಾನ ಎಡ್ವಟ್ಮಾಡ್ಕೊ೦ಡೌವ್ನೆ ಅನ್ಸುತ್ತೆ.
nimma
krisna
ಅದು ’ಬುದ್ಧಿವಂತ’ ಫಿಲ್ಮಲ್ಲಿ ಬರೋ ’ವೇದವಾಕ್ಯ’ದಂತಹ ಲೈನು ಗುರೂ.. ಬಹುಶಃ ಇವನ್ಯಾರೋ ಉಪ್ಪಿ ಫ್ಯಾನ್ ಇರ್ಬೇಕು.. :)
@ ಶಂಕ್ರಣ್ಣ,
ನಾನು ಈ ಮೊದಲೇ ನಿಮ್ಮ ಆಟೋ ಕಟ್ಟೆಗೆ ಬಂದು ಹೋಗಿದ್ದೇನೆ.
ತುಂಬಾ ಒಳ್ಳೆಯ ಕಲೆಕ್ಷನ್ನು ನಿಮ್ದು.
ಹುಡ್ಗೀರ್ ಹಿಂದೆ ಹೋಗೋದ್ ನಿಲ್ಲಿಸಿದ್ ಮೇಲೆ ಆಟೋಗಳ ಹಿಂದೆ ತಿರುಗೋ ಚಟ ಹತ್ತಿಸಿಕೊಂಡಿದ್ದೆ ನಾನೂ ನಿಮ್ಮ ತರಹ.
ಕೆಲವೊಂದು ಫೋಟೋ ನನ್ನಲ್ಲೂ ಇವೆ.
ಒಮ್ಮೆ ಅನುಭವವಾಯ್ತಲ್ಲ ಹುಡ್ಗೀ ಹಿಂದೆ ಮತ್ತು ಆಟೋ ಹಿಂದೆ ಹೋದರೆ ಅಪಘಾತ ನಿಶ್ಚಿತ ಅಂತ :-) ಅದಕ್ಕೆ ಈಗ ನಿಲ್ಲಿಸಿದ್ದೇನೆ
Post a Comment