ಅವಾಗ, ದೇವರ ಕ್ಷಮಿಸಿ...ದೇವತೆ ಥರ ಬಂದಿದ್ದು ಲಕ್ಷ್ಮಕ್ಕ.
"ಶಂಕ್ರ, ಸುಮ್ನೆ ಕಂಗಾಲು ಆಗಬೇಡಾ, ನಿನಗೆ ಇನ್ಮೇಲೆ ನಾನೇ ಆಟೋ ಫೋಟೋ ಕಳುಸ್ತೀನಿ" ಅಂದ್ರು.
ಹೋದ ಪ್ರಾಣ ವಾಪಾಸ್ ಬಂದಂಗಾಯ್ತು.ಅಂದ್ಹಾಗೆ, ಇದನ್ನೂ ಇವರೇ ಕಳ್ಸಿದ್ದು. ಇದರ ಜೊತೆ ಇನ್ನೂ ೨ ಫೋಟೋ ಕಳ್ಸಿದಾರೆ. ಅದನ್ನು ಇನ್ನೊ ಕೆಲವು ದಿನ ಬಿಟ್ಟು ಹಾಕ್ತೀನಿ.ಈ ಅಣ್ಣಾ ಯಾಕೋ ತನ್ನ ಬಗ್ಗೆಯೇ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದಾನೆ ಅನ್ಸುತ್ತೆ, ಅಥವ ಮುಂಚೆ ಈತನನ್ನು "ಅವನು" ಎಂದು ಭಾವಿಸಿ ಇಕ್ಕಿದಾರೆ ಅನ್ಸುತ್ತೆ. ಅದಕ್ಕೆ "ನಾನವನಲ್ಲ" ಅಂತ ಬರ್ಕೊಂಡಿದಾನೆ ಆಟೋ ಮೇಲೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ