Monday, November 17, 2008

ಹೊಸಾ ಬೆಸ್ಟ್ ಸೆಲ್ಲರ್ ಪುಸ್ತಕ ಬರೆಯಲು ತಯಾರಿ ನಡೆದಿದೆ !!!

ಸಖತ್ ಸುದ್ಧಿ ಅಂದ್ರೆ, ಮುಂದಿನ ಪೀಳಿಗೆಗಾಗಿ ದ್ಯಾವೇಗೌಡ್ರು ಅವರ ಅನುಭವಗಳ ಪುಸ್ತಕ ಬರೀತಾರಂತೆ.
ಈ ವಿಚಾರವನ್ನು ಸನ್ಮಾನ್ಯ ದ್ಯಾವೇಗೌಡ್ರೇ ಹೇಳ್ಕೊಂಡಿದಾರೆ. ಇವತ್ತಿನ (17 ನವೆಂಬರ್ 2008 ರ ಕನ್ನಡಪ್ರಭ ಪತ್ರಿಕೆಯಲ್ಲಿ) ನೋಡಿ...

ಏನಂತಾ ಬರೀತಾರೋ? ಯಾವ ಯಾವ ದೋಷಕ್ಕೆ ಯಾವ್ ಯಾವ ಜ್ಯೋತಿಷಿಗಳ ಹತ್ರ ಹೋಗಬೇಕು, ಯಾವ ಯಾವ್ ಕಷ್ಟಕ್ಕೆ ಯಾವ ಯಾವ ಹೋಮ, ಯಾವ್ ಯಾವ್ ಪ್ರಾಣಿನ ಬಲಿ ಕೊಡಬೇಕು ಅನ್ನೋ ಚಾರ್ಟ್ ಇರತ್ತೆ ಅನ್ಸುತ್ತೆ.
ಜೊತೆಗೆ ಈ ಪುಸ್ತಕದ ಒಂದು ಸೆಕ್ಷನ್ ನಲ್ಲಿ ಅದೇ, ರಾಜಪುರೋಹಿತರ contact details ಕೊಡ್ತಾರೆ ಅನ್ಸುತ್ತೆ.
ಪುಸ್ತಕದ ಹೆಸರು ಎನಿಡ್ತಾರೋ?

ಕಾದು ನೋಡಿ, ಮತ್ತೊಬ್ಬ ಕನ್ನಡಿಗನಿಗೆ ಬೂಕರ್ ಪ್ರಶಸ್ತಿ ಬರಬಹುದೋ ಏನೋ ?

ಇವರೆಲ್ಲರಿಗೂ ಅದ್ಯಾಕೆ ಸೆಕ್ಯುಲರಿಸಂ ಅಂದ್ರೆ ಬರೀ ಹಿಂದುಗಳನ್ನು ಟಾರ್ಗೆಟ್ ಮಾಡಿ ಬಯ್ಯೋದು ಅಂತ ತೀರ್ಮಾನಿಸಿದಾರ ? ಆರ್ಎಸ್ಸ್ಎಸ್ಸ್ ಅನ್ನು ನಿಷೇಧ ಮಾಡಿ ಅಂತ ಕೂಗಾಡೋ ಜನ, ಸಿಮಿ ಬಗ್ಗೆ ಸೋಲ್ಲೆತ್ತೋದಿಲ್ಲ, ಯಾಕೆ ? ಸನ್ಮಾನ್ಯ ದ್ಯಾವೇಗೌಡ್ರು ಪ್ರಧಾನಿ ಆಗಿದ್ದಿದ್ರೆ ಆರೆಸ್ಸೆಸ್ಸ್ ನಾ ನಿಷೆಧಿಸ್ತಾ ಇದರಂತೆ. ಇವ್ರು ಪ್ರಧಾನಿ ಆಗಿದ್ದಾಗ ಏನು ಮಾಡಿದ್ರು ? ಬಿಟ್ಟಾಕಿ ಸ್ವಾಮಿ.

ಇನ್ನು ನಮ್ಮ ಗಡ್ಡದ ಜ್ಞಾನಪೀಠ ಅನಂತಮೂರ್ತಿ ಬಗ್ಗೆ ಹೇಳೋದು ಏನೂ ಇಲ್ಲ ಅನ್ಸುತ್ತೆ. ಈ ಪ್ರಶಸ್ತಿ ಪಡೆದು ಇನ್ನೂ ಜೀವಂತವಿರುವ ಕನ್ನಡದ ಬುದ್ಧಿಜೀವಿಗಳೆಲ್ರೂ ಸಿಕ್ಕಾಪಟ್ಟೆ ಸೆಕ್ಯುಲರ್ ಆಗಿದಾರೆ. ಒಬ್ರು ಆರೆಸ್ಸೆಸ್ಸ್ ಬಗ್ಗೆ ಗುಟುರು ಹಾಕ್ತಾರೆ, ಇನ್ನೊಬ್ರು ರಾತ್ರಿ ಹೊತ್ತು ಪಬ್ಬು ಬಾರನ್ನು ೧೧ಕ್ಕೆ ಕ್ಲೋಸ್ ಮಾಡೋದು ಬೇಡಾ ಅಂತಾ ಬೀದಿಗಿಳೀತಾರೆ.

ಅಯ್ಯಯ್ಯೋ, ಮ್ಯಾಟರ್ ಎಲ್ಲೆಲ್ಲೊ ಒಯ್ತಾ ಐತೆ. ಕ್ಸಮೆ ಇರ್ಲಿ.ಕೊನೆ ಚುಟುಕು : ಎಂ.ಪಿ. ಪ್ರಕಾಶ್, ಸಿದ್ದರಾಮಯ್ಯ ಹಾಗು ಸಿಂಧ್ಯಾರನ್ನು ಮತ್ತೆ ಜೆ.ಡಿ.ಎಸ್ಸ್ ಗೆ ಕರೆತರಬೇಕು ಅಂತಾ ಗಡ್ಡದ ಅನಂತಣ್ಣ ಹೇಳಿದಾರೆ. ಇದರ ಬಗ್ಗೆ ನಿಮ್ಮ ಅಂಬೋಣ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

11 comments:

shreeshum said...

ಪಾಪ ವಯೋವೃದ್ಧರೂ ಗ್ನಾನ...! ಸೂನ್ಯರು..! ಎನೋ ಒಂದಿಷ್ಟು ತಮ್ಮ ಕೊನೆ ಕಾಲದಲ್ಲಿ ಹಲುಬುತ್ತಾ ಇವೆ ಕಣಣ್ನಾ...ಅವುನ್ನಾ ಯಾಕೆ ಆಡ್ಕಂತೀರಿ. ಎಮ್ಮೆ ಹತ್ರ ಇರೋ ಕೋಣ ನಕ್ಕಂಗೆ ನಗೋ ಸಿದ್ದು ಎಲ್ಲಿದ್ರೂ ಅಸ್ಟೆಯಾ..ಇನ್ನು ಸಿಂದ್ಯಾ ಬೋ ಕಾಸು ಆನೆ ಪಕ್ಸಾದಾಗೆ ಗುಳುಂ ಮಾಡ್ದಾ ಅಂತ ಮಾಯಮ್ಮ ಹೊರಗೆ ಹಾಕವ್ಳೆ ಅವ್ನು ಇಲ್ಲ್ಬಂದು ಕಿತ್ತಾಕೋದು ಅಸ್ಟೆ ಐತಿ. ಆಮ್ಯಾಕೆ ಇಬ್ರಾಹಿಂ ಮೀರಾಜುದ್ದೀನ್ ತರ ಮ್ಯಾಕೆ ಹೋಗೊ ದಿವ್ಸ ಬಂತಂತೆ ಹಂಗಂತ ಮೊನ್ನೆ ಯಾರೋ ಆಡ್ಕಂತಿದ್ರು. ನಂ ಗಡ್ಡದಾರಿ ಅನಂತು ಒಂಥರಾ ಕುಂಟು ಹೋರಿ ತರ ತಾನು ಹಾರಕಾಗ್ದು ಹಾರೋ ಹೋರಿಗೂ ಬಿಡ ಅನ್ನೋ ಕುಲದವ್ನು. ಒಟ್ನಲ್ಲಿ ನಮ್ಮ ಯಡ್ಯ್ತೂರಿ ಓಂದೇ ಒಂದು ಮಾತು ಅನ್ನಂತೆ, ಎಲ್ಲಾ ಗಂಡುಗಳ ಶಕ್ಸಸ್ ಹಿಂದೆ ಒಂದು ಹೆಣ್ಣು ಇರ್ಬೇಕು, ನನ್ನಿಂದೆ ಶೋಭಕ್ಕ ಅವ್ಳೆ ಅಂತ . ದ್ಯಾವೇಗೌಡ್ರು ಸಕ್ಸಸ್ ಆಗ್ಬೇಕು ಅಂದ್ರೆ ಮನೆ ಇಲ್ದಿರೋ ಮ್ಯಾಗಿನಾ ಇಟ್ಕಂಡೆ ಏನಾರೂ ಆಗ್ಬೈದು ಕಣನ್ನೋ... ಇರ್ಲಿ ಬಿಡು ನಮಗ್ಯಾಕೆ ಬೇರೆಯವರ ಸುದ್ದಿ ಹೋಗಾಮಿ.

Lakshmi S said...

ಅಯ್ಯಪ್ಪ...ಅವ್ರು ಕೆಟ್ಟು ಹಾಳಾಗಿದ್ದು ಸಾಲ್ದು ಅಂತ ಲೋಕಾನೇ ಕೆಡ್ಸಕ್ಕೆ ಹೋಗಿದಾರಲ್ಲ...ಏನ್ ಹೇಳೋದು ಇದಕ್ಕೆ ? ದೇವ್ರೆ ಕಾಪಡ್ಬೇಕು !

ಸಿಮೆಂಟು ಮರಳಿನ ಮಧ್ಯೆ said...

ಈ ರಾಜಕೀಯ ನಮಗೆಲ್ಲ ಗೊತ್ತಗದಿಲ್ಲಾ ಸ್ವಾಮಿ, ನಾವು ಹೊಟ್ಟೆ ಪಕ್ಷದವರು. ಒಂದು ಮಾತು ತಿಳಿಕ್ಕಳಿ.. ಯಾರೂ ನಮ್ಮ ಉದ್ಧಾರ ಮಾಡ್ಲಿಕ್ಕೆ ಬರಾಂಗಿಲ್ಲ. ಇನ್ನು ಸಾಯಿತಿಗಳ ಸಮಾಚಾರ...ಅವ್ರಿಗು, ರಾಜಕೀಯದವ್ರಿಗೂ ಎಂತದೂ ವ್ಯತ್ಯಾಸ ಇಲ್ಲ ಬಿಡ್ರಿ..
ನೀನು ಬೋ ಪಸಂದಾಗಿ ಬರಿತಿ ಕಣಣ್ಣ...

Mohan said...

ಇ ಅನಂತ ಮೂತ್ರಿ ಯಾಕೆ ಕ್ರೀಸ್ನುನ ಕ್ಯೆಬಿಟ್ಟ? ಎನೊ ಇಸಯ ಇದೆ ಕಣಣ್ಣ.ರಾತ್ರೆದು ಇಳುದಿಲ್ಲಾ ಅನ್ಸುತ್ತೆ.

ಅಂತರ್ವಾಣಿ said...

ಶಂಕ್ರಣ್ಣ,
ಅವರಿಗೆ ಬುಕರ್ ಪ್ರಶಸ್ತಿ ಬಂದೇ ಬರುತ್ತೇ ಅಂತೀರಾ?

ಕಟ್ಟೆ ಶಂಕ್ರ said...

ಇನ್ನೇನ್ರೀ ಅಂತರ್ವಾಣಿ ??
ಬೂಕರ್ ಯಾವ ಮೂಲೆಗೆ ? ಡೀಲ್ ನಡೆಯೋ ರೀತಿ ಇದ್ದಿದ್ರೆ, ಸಾಹಿತ್ಯಕ್ಕೆ ಸಿಗೋ ನೊಬೆಲ್ ಪ್ರಶಸ್ತಿ ಕೂಡಾ ತಗೋತಾ ಇದ್ರು.
ಏನಂತೀರಾ ?

ಕಟ್ಟೆ ಶಂಕ್ರ

chetana said...

ಹ್ಮ್... ನೆನ್ನೆ ಪೇಪರು ನೋಡಿದಾಗ್ಲೇ ಉರ್ಕೊಂಡು ಬರೆಯೋಣ ಅಂತಿದ್ದೆ... ಸುಮ್ನೆ, ಕೊಚ್ಚೆಗೆ ಕಲ್ಲೆಸೆದ ಹಾಗೆ ಅಂತ ಸುಮ್ನಾದೆ. ನೀವು ಬರೆದಿದ್ದು ಖುಷಿಯಾಯ್ತು.
ಮೂರ್ತಿಗೆ ಅದೊಂಥರಾ ಚಟ. ಹೋಗ್ಲಿ ಬಿಡಿ. ವಯ್ಸ್ಸಾಯ್ತು. ಈಗ ಸರಿ ಹೋಗೋ ಅಂಥದ್ದಲ್ಲ ಅದು.

Mohan said...

ಶಂಕ್ರಣ್ಣ,
ಸೋಮಾರಿ ಕಟ್ಟೆ ವತಿಯಿಂದ, L-ಬಾಲ್ ಪ್ರಶಸ್ತಿ ಕೂಡಬಹುದೆ ?

Harsha said...

konegaaladalli ella book (bhagawadgeete) oduttare.. illi nodidre.. hosa ramayana baryakke horatiddane...

hale ramayana agiddu.. appa maganige patta kattadale iddiddakke.... ee hosa ramayana.. appa maganige paata kattiddakee...

sukha sarkaarakke noorentu vighnagalu anta hesaridabahudu...

ಅಂತರ್ವಾಣಿ said...

ಶಂಕ್ರಣ್ಣ,
ಪುಸ್ತಕ ಬಿಡುಗಡೆ ಮಾಡಲಿ ನೋಡೋಣ..

Anonymous said...

neevu chennagi bareyuttiri.
AAdare obba hiriya sahitigala bagge nimmanthaha educated intaha hagura matugalannu balasabaradu. secular sahitigala bagge itteechege yuva janaralli asahane agourava beleyutta ide annisuttade. idu olleya lakshana alla. adarallu yuvakaru secularism viruddha matanaduttiruvudakke, RSS para iruvudakke karanagalu gottaguttilla. nimmanthaha vidyavantharu yee bagge innu hechchu vichara madi manayeeya neleyalli tamma manassannu parivarthisikolluvudu agathya endu nanage annisuttade

chaitra