ಈ ವಿಚಾರವನ್ನು ಸನ್ಮಾನ್ಯ ದ್ಯಾವೇಗೌಡ್ರೇ ಹೇಳ್ಕೊಂಡಿದಾರೆ. ಇವತ್ತಿನ (17 ನವೆಂಬರ್ 2008 ರ ಕನ್ನಡಪ್ರಭ ಪತ್ರಿಕೆಯಲ್ಲಿ) ನೋಡಿ...

ಏನಂತಾ ಬರೀತಾರೋ? ಯಾವ ಯಾವ ದೋಷಕ್ಕೆ ಯಾವ್ ಯಾವ ಜ್ಯೋತಿಷಿಗಳ ಹತ್ರ ಹೋಗಬೇಕು, ಯಾವ ಯಾವ್ ಕಷ್ಟಕ್ಕೆ ಯಾವ ಯಾವ ಹೋಮ, ಯಾವ್ ಯಾವ್ ಪ್ರಾಣಿನ ಬಲಿ ಕೊಡಬೇಕು ಅನ್ನೋ ಚಾರ್ಟ್ ಇರತ್ತೆ ಅನ್ಸುತ್ತೆ.
ಜೊತೆಗೆ ಈ ಪುಸ್ತಕದ ಒಂದು ಸೆಕ್ಷನ್ ನಲ್ಲಿ ಅದೇ, ರಾಜಪುರೋಹಿತರ contact details ಕೊಡ್ತಾರೆ ಅನ್ಸುತ್ತೆ.
ಪುಸ್ತಕದ ಹೆಸರು ಎನಿಡ್ತಾರೋ?
ಕಾದು ನೋಡಿ, ಮತ್ತೊಬ್ಬ ಕನ್ನಡಿಗನಿಗೆ ಬೂಕರ್ ಪ್ರಶಸ್ತಿ ಬರಬಹುದೋ ಏನೋ ?
ಇವರೆಲ್ಲರಿಗೂ ಅದ್ಯಾಕೆ ಸೆಕ್ಯುಲರಿಸಂ ಅಂದ್ರೆ ಬರೀ ಹಿಂದುಗಳನ್ನು ಟಾರ್ಗೆಟ್ ಮಾಡಿ ಬಯ್ಯೋದು ಅಂತ ತೀರ್ಮಾನಿಸಿದಾರ ? ಆರ್ಎಸ್ಸ್ಎಸ್ಸ್ ಅನ್ನು ನಿಷೇಧ ಮಾಡಿ ಅಂತ ಕೂಗಾಡೋ ಜನ, ಸಿಮಿ ಬಗ್ಗೆ ಸೋಲ್ಲೆತ್ತೋದಿಲ್ಲ, ಯಾಕೆ ? ಸನ್ಮಾನ್ಯ ದ್ಯಾವೇಗೌಡ್ರು ಪ್ರಧಾನಿ ಆಗಿದ್ದಿದ್ರೆ ಆರೆಸ್ಸೆಸ್ಸ್ ನಾ ನಿಷೆಧಿಸ್ತಾ ಇದರಂತೆ. ಇವ್ರು ಪ್ರಧಾನಿ ಆಗಿದ್ದಾಗ ಏನು ಮಾಡಿದ್ರು ? ಬಿಟ್ಟಾಕಿ ಸ್ವಾಮಿ.
ಇನ್ನು ನಮ್ಮ ಗಡ್ಡದ ಜ್ಞಾನಪೀಠ ಅನಂತಮೂರ್ತಿ ಬಗ್ಗೆ ಹೇಳೋದು ಏನೂ ಇಲ್ಲ ಅನ್ಸುತ್ತೆ. ಈ ಪ್ರಶಸ್ತಿ ಪಡೆದು ಇನ್ನೂ ಜೀವಂತವಿರುವ ಕನ್ನಡದ ಬುದ್ಧಿಜೀವಿಗಳೆಲ್ರೂ ಸಿಕ್ಕಾಪಟ್ಟೆ ಸೆಕ್ಯುಲರ್ ಆಗಿದಾರೆ. ಒಬ್ರು ಆರೆಸ್ಸೆಸ್ಸ್ ಬಗ್ಗೆ ಗುಟುರು ಹಾಕ್ತಾರೆ, ಇನ್ನೊಬ್ರು ರಾತ್ರಿ ಹೊತ್ತು ಪಬ್ಬು ಬಾರನ್ನು ೧೧ಕ್ಕೆ ಕ್ಲೋಸ್ ಮಾಡೋದು ಬೇಡಾ ಅಂತಾ ಬೀದಿಗಿಳೀತಾರೆ.
ಅಯ್ಯಯ್ಯೋ, ಮ್ಯಾಟರ್ ಎಲ್ಲೆಲ್ಲೊ ಒಯ್ತಾ ಐತೆ. ಕ್ಸಮೆ ಇರ್ಲಿ.

ಕೊನೆ ಚುಟುಕು : ಎಂ.ಪಿ. ಪ್ರಕಾಶ್, ಸಿದ್ದರಾಮಯ್ಯ ಹಾಗು ಸಿಂಧ್ಯಾರನ್ನು ಮತ್ತೆ ಜೆ.ಡಿ.ಎಸ್ಸ್ ಗೆ ಕರೆತರಬೇಕು ಅಂತಾ ಗಡ್ಡದ ಅನಂತಣ್ಣ ಹೇಳಿದಾರೆ. ಇದರ ಬಗ್ಗೆ ನಿಮ್ಮ ಅಂಬೋಣ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ