Thursday, November 13, 2008

ಇದ್ಯಾವ್ ಸೀಮೆ ಪತ್ರಿಕೋದ್ಯಮ ?

ಪ್ರತಿದಿನ ಆಫೀಸಿಗೆ ಬಂದ ಕೂಡಲೆ ಅರ್ಧ ಘಂಟೆ ನಮ್ಮ ಪ್ರಮುಖ ಕನ್ನಡದ ಪತ್ರಿಕೆಗಳಾದ "ಪ್ರಜಾವಾಣಿ", "ಕನ್ನಡಪ್ರಭ" ಇವುಗಳನ್ನು ಓದುವ ಅಭ್ಯಾಸ. ಹಾಗೆಯೆ ಮಧ್ಯಾಹ್ನದ ನಂತರ ಸ್ವಲ ಬಿಡುವಿದ್ದಾಗ ನಮ್ಮ ಮೈಸೂರಿನ "Star of Mysore" ಓದುತ್ತೀನಿ, ಇನ್ನೂ ಸ್ವಲ್ಪ ಜಾಸ್ತಿ ಟೈಮ್ ಇದ್ದಲ್ಲಿ, "ಸಂಜೆವಾಣಿ" ಓದುತ್ತೀನಿ.

ಮೊದಲ ಬಾರಿಗೆ http://www.sanjevani.com/ ಗೆ ಭೇಟಿ ಕೊಟ್ಟಾಗ, "first Indian newspaper to Podcast" ಅಂತ ಹಾಕಿರೋದನ್ನ ನೋಡಿ ಖುಷಿ ಪಟ್ಟೆ. ಆಮೇಲೆ ಈ ಪತ್ರಿಕೆಯನ್ನು ಓದುತ್ತಿದಂತೆ, ಟುಸ್ಸ್ ಅಂದಿತು.

ಇದ್ರಲ್ಲಿ ವರ್ಗೀಕೃತ ಜಾಹಿರಾತುಗಳದ್ದೆ ಕಾರುಬಾರು.

ಜೊತೆಗೆ "XYZ ಪಾರ್ಟಿಯ ABC ಯಾ ಜನ್ಮದಿನಕ್ಕೆ 123 ಯಾ ಶುಭಾಶಯಗಳು" ಅಂತ ಹಾಕಿಸೋ ಪುಡಾರಿ ಹಾಗು ಮರಿ ಪುಡಾರಿಗಳ ಮುಖಾರವಿಂದಗಳು.

ಇವತ್ತಂತೂ ಸಂಜೆವಾಣಿ ಓದುತ್ತಿದಂತೆ ಫುಲ್ ಉರಿದೊಯ್ತು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥೆ, ಅನುಕೂಲ, ಅನಾನುಕೂಲಗಳ ಬಗ್ಗೆ ಚರ್ಚಿಸಲು ಹಾಗು ವರದಿ ಸಲ್ಲಿಸಲು ಸರ್ಕಾರ ನೇಮಿಸಿರುವ ಡಾಹೇಮಚಂದ್ರ ಸಾಗರ್ ನೇತೃತ್ವದ ಕಮಿಟಿಯ ಜೊತೆ ಸಾರ್ವಜನಿಕರ ಚರ್ಚೆ ಇತ್ತಂತೆ. ಇದರ ಬಗ್ಗೆ ಸಂಜೆವಾಣಿಯ ರಿಪೋರ್ಟು, ಆಹ್ಹಹ್ಹ... ಸೂಪರ್ರು. ಪುಟ ತುಂಬಿಸಲು ಸರಿಯಾದ ಸುಧ್ಧಿಯೂ ಇಲ್ಲದೆ, ಹಾಕಲು ಜಾಹಿರಾತುಗಳೂ ಇಲ್ಲದೆ, ಬರೆದಿದ್ದನ್ನೇ 2-3 ಸಲ ಪ್ರಿಂಟ್ ಮಾಡಿದ್ದಾರೆ. ನೋಡಿ.
ಇಡೀ ಪತ್ರಿಕೆಯಲ್ಲಿ ಓದುವಂಥಾ ಒಂದೂ ಸುದ್ಧಿ ಇಲ್ಲ. ಬೆಳಗಿನ ಎಲ್ಲಾ ನ್ಯೂಸ್ ಪೇಪರಿನಿಂದ ಆಯ್ದ ಸುದ್ಧಿಗಳನ್ನು ಇಲ್ಲಿ ಹಾಕ್ತಾರೆ.

ನಾನು ಹೇಳಿದ ಸುದ್ಧಿಯನ್ನು ಹಾಕಿದ್ದೀನಿ. ನೋಡಿ. ಎಲ್ಲಿ ಪೇಪರಿನ ಹೆಸರು ಹಾಕದೆ ಇದ್ರೆ ಇದರ Authenticity ಬಗ್ಗೆ ನಮ್ಮ ಜಾಣ ಬ್ಲಾಗೊದುಗರು ಶಂಕೆ ಇಟ್ಕೋತಾರೆ ಅಂತಾ ಪೇಪರಿನ ಹೆಸರು ಹಾಗು ಇವತ್ತಿನ ದಿನಾಂಕ ಕಾಣೋ ರೀತಿ ಚಿತ್ರ ಹಾಕಿದೀನಿ.





ಇದ್ಯಾವ್ ಸೀಮೆ ಪತ್ರಿಕೋದ್ಯಮ ಅಂತೀರಾ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

10 comments:

ವಿ.ರಾ.ಹೆ. said...

!!!!
nonsense :-X

Harsha said...

heheh.. ayyooo... this brought back memories of school days.. social studies nalli.. hinge naanu answer baritaa iddiddu... hahahahaha

Anonymous said...

Yes harsha the same , even i use to do that , dont waste time for sanjevani, it is useful only for Bonda Angadi

ಸಂದೀಪ್ ಕಾಮತ್ said...

ಶಂಕ್ರು,

ಇಲ್ಲೇ ಬ್ಲಾಗ್ ಲೋಕದಲ್ಲಿ ಒಂದು ಪತ್ರಿಕೆ ಸೇರಿದ ವ್ಯಕ್ತಿ ಇನ್ನೊಂದು ಪತ್ರಿಕೆಯ ಬಗ್ಗೆ ,ಒಂದು ಚ್ಯಾನೆಲ್ ನ ವ್ಯಕ್ತಿ ಇನ್ನೊಂದು ಚ್ಯಾನೆಲ್ ನ ಬಗ್ಗೆ ಇರೋ ವೃತ್ತಿ ವೈಶಮ್ಯವನ್ನು ಬ್ಲಾಗ್ ಮೂಲಕ ತೀರಿಸಿಕೊಳ್ಳೊದು ನೋಡಿದ್ದೆ.

ನೀನು ನಿಷ್ಪಕ್ಷಪಾತಿಯಾಗಿ ಕೆಲಸ ನಿರ್ವಹಿಸಿದ್ದೀಯಾ ಅಭಿನಂದನೆಗಳು.

Unknown said...

ಹ ಹ ಹ ಜೀವನಕ್ಕಾಗಿ ಪತ್ರಿಕೋದ್ಯಮ ಅಂತಾದಮೇಲೆ ಹೀಗೆಯೇ ಎಲ್ಲ

Harisha - ಹರೀಶ said...

ಅದ್ಯಾವ ಸೀಮೆ ಪತ್ರಿಕೋದ್ಯಮವೋ ಗೊತ್ತಿಲ್ಲ.. ಆದ್ರೆ ನಿಮಗೆ ಇಲ್ಲೊಬ್ಬಳು ಫ್ಯಾನ್ ಇದ್ದಾಳೆ ನೋಡಿ ;-)

Ittigecement said...

realy nosense..!!

Lakshmi Shashidhar Chaitanya said...

ದೇವರೇ !! ಇದು ಸೀಮಾತೀತ ಪತ್ರಿಕೋದ್ಯಮ ಶಂಕ್ರಣ್ಣ...doubt-ಏ ಇಲ್ಲ !

ಸಂದೀಪ್ ಕಾಮತ್ said...

ಇದೂ ನೋಡ್ರಪ್ಪ

Anonymous said...

yee Sanjevani avrige...WIRPO mattu ISRO diffrence gottilwa??

Sanje agtidda hage 90 hakondu news edit madtare kanutte