ಮೊದಲ ಬಾರಿಗೆ http://www.sanjevani.com/ ಗೆ ಭೇಟಿ ಕೊಟ್ಟಾಗ, "first Indian newspaper to Podcast" ಅಂತ ಹಾಕಿರೋದನ್ನ ನೋಡಿ ಖುಷಿ ಪಟ್ಟೆ. ಆಮೇಲೆ ಈ ಪತ್ರಿಕೆಯನ್ನು ಓದುತ್ತಿದಂತೆ, ಟುಸ್ಸ್ ಅಂದಿತು.
ಇದ್ರಲ್ಲಿ ವರ್ಗೀಕೃತ ಜಾಹಿರಾತುಗಳದ್ದೆ ಕಾರುಬಾರು.
ಜೊತೆಗೆ "XYZ ಪಾರ್ಟಿಯ ABC ಯಾ ಜನ್ಮದಿನಕ್ಕೆ 123 ಯಾ ಶುಭಾಶಯಗಳು" ಅಂತ ಹಾಕಿಸೋ ಪುಡಾರಿ ಹಾಗು ಮರಿ ಪುಡಾರಿಗಳ ಮುಖಾರವಿಂದಗಳು.
ಇವತ್ತಂತೂ ಸಂಜೆವಾಣಿ ಓದುತ್ತಿದಂತೆ ಫುಲ್ ಉರಿದೊಯ್ತು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥೆ, ಅನುಕೂಲ, ಅನಾನುಕೂಲಗಳ ಬಗ್ಗೆ ಚರ್ಚಿಸಲು ಹಾಗು ವರದಿ ಸಲ್ಲಿಸಲು ಸರ್ಕಾರ ನೇಮಿಸಿರುವ ಡಾಹೇಮಚಂದ್ರ ಸಾಗರ್ ನೇತೃತ್ವದ ಕಮಿಟಿಯ ಜೊತೆ ಸಾರ್ವಜನಿಕರ ಚರ್ಚೆ ಇತ್ತಂತೆ. ಇದರ ಬಗ್ಗೆ ಸಂಜೆವಾಣಿಯ ರಿಪೋರ್ಟು, ಆಹ್ಹಹ್ಹ... ಸೂಪರ್ರು. ಪುಟ ತುಂಬಿಸಲು ಸರಿಯಾದ ಸುಧ್ಧಿಯೂ ಇಲ್ಲದೆ, ಹಾಕಲು ಜಾಹಿರಾತುಗಳೂ ಇಲ್ಲದೆ, ಬರೆದಿದ್ದನ್ನೇ 2-3 ಸಲ ಪ್ರಿಂಟ್ ಮಾಡಿದ್ದಾರೆ. ನೋಡಿ.
ಇಡೀ ಪತ್ರಿಕೆಯಲ್ಲಿ ಓದುವಂಥಾ ಒಂದೂ ಸುದ್ಧಿ ಇಲ್ಲ. ಬೆಳಗಿನ ಎಲ್ಲಾ ನ್ಯೂಸ್ ಪೇಪರಿನಿಂದ ಆಯ್ದ ಸುದ್ಧಿಗಳನ್ನು ಇಲ್ಲಿ ಹಾಕ್ತಾರೆ.
ನಾನು ಹೇಳಿದ ಸುದ್ಧಿಯನ್ನು ಹಾಕಿದ್ದೀನಿ. ನೋಡಿ. ಎಲ್ಲಿ ಪೇಪರಿನ ಹೆಸರು ಹಾಕದೆ ಇದ್ರೆ ಇದರ Authenticity ಬಗ್ಗೆ ನಮ್ಮ ಜಾಣ ಬ್ಲಾಗೊದುಗರು ಶಂಕೆ ಇಟ್ಕೋತಾರೆ ಅಂತಾ ಪೇಪರಿನ ಹೆಸರು ಹಾಗು ಇವತ್ತಿನ ದಿನಾಂಕ ಕಾಣೋ ರೀತಿ ಚಿತ್ರ ಹಾಕಿದೀನಿ.
ಇದ್ಯಾವ್ ಸೀಮೆ ಪತ್ರಿಕೋದ್ಯಮ ಅಂತೀರಾ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ