Tuesday, August 26, 2008

ಕನ್ನಡ ಮಾತಾಡಿ, ಮಜಾ ಮಾಡಿ

ಬಿಲ್ ಗೇಟ್ಸ್ ತನ್ನ ಕಂಪೆನಿ ಮೈಕ್ರೋಸಾಫ್ಟ್ ಯೂರೋಪಿಗೆ ಚೇರ್ಮನ್ನನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ ಮಾಡಲು ಒಂದು ಸಖತ್ ದೊಡ್ಡ ಸೆಶನ್ ಅರೆಂಜ್ ಮಾಡಿದ. ಆ ಚೇರ್ಮನ್ ಪೋಸ್ಟಿಗೆ 5000 ಜನ ಅಪ್ಲಿಕೇಶನ್ ಹಾಕಿ ಅಲ್ಲಿ ನೆರೆದಿದ್ದರು.
ಅದ್ರಲ್ಲಿ ನಮ್ಮ ಬೆಂಗಳೂರಿನ ರಘು ಕೂಡಾ ಒಬ್ಬ. ಅಪ್ಪಟ ಬೆಂಗಳೂರಿನ ಕನ್ನಡಿಗ.

ಬಿಲ್ ಗೇಟ್ಸ್ ಅಲ್ಲಿ ಬಂದಿರೋರಿಗೆಲ್ಲ ಥ್ಯಾಂಕ್ಸ್ ಹೇಳಿ, "JAVA ಪ್ರೊಗ್ರಾಮಿಂಗ್ ಬರದೆ ಇದ್ದವರನ್ನು ಈ ಪೋಸ್ಟಿಗೆ ಸೆಲೆಕ್ಟ್ ಮಾಡಲಾಗುವುದಿಲ್ಲಾ, ದಯವಿಟ್ಟು ಹೊರಡಿ" ಎಂದು ಹೇಳಿದ. ಹೀಗೆ ಹೇಳಿದ್ದರಿಂದ 2000 ಜನ ಜಾಗ ಖಾಲಿ ಮಾಡುದ್ರು.

ನಮ್ಮ ರಘು ಇದ್ದವನು "ನಂಗೆ JAVA ಬರೋದಿಲ್ಲಾ, ಬರುತ್ತೆ ಅಂತಾ ಹೇಳ್ಕೊಂಡು ಇದ್ರೂ ಕೂಡಾ ಕಳ್ಕೊಳೋದು ಏನೂ ಇಲ್ಲಾ. ಟ್ರೈ ಮಾಡಿ ನೋಡುವಾ" ಅಂತ ಯೋಚಿಸಿ ಅಲ್ಲೇ ಉಳಿದ.

ಬಿಲ್ ಗೇಟ್ಸ್ ಮತ್ತೆ "ಯಾರಿಗೆ ಮಿನಿಮಮ್ 100 ಜನರನ್ನು ಮ್ಯಾನೆಜ್ ಮಾಡಿ ಅನುಭವ ಇಲ್ಲವೊ, ಅವರೂ ಕೂಡಾ ಹೊರಡಬಹುದು" ಅಂದ.

ಇದನ್ನು ಕೇಳಿ ಮತ್ತೆ 2000 ಜನ ಜಾಗ ಖಾಲಿ ಮಾಡುದ್ರು.

ನಮ್ಮ ರಘು ಪುನಃ ಯೋಚಿಸಿದ "ನನ್ನ ಬಿಟ್ಟು ಯಾರನ್ನು ನಾನು ಮ್ಯಾನೆಜ್ ಮಾಡಿ ಮಾಡಿಲ್ಲಾ, ಮಾಡಿದೀನಿ ಅಂತಾ ಹೇಳ್ಕೊಂಡು ಇದ್ರೂ ಕೂಡಾ ಕಳ್ಕೊಳೋದು ಏನೂ ಇಲ್ಲಾ. ಟ್ರೈ ಮಾಡಿ ನೋಡುವಾ". ಹಂಗೆ ಅನ್ಕೊಂಡು ಅಲ್ಲೇ ಉಳಿದ.

ಬಿಲ್ ಗೇಟ್ಸ್ ಮತ್ತೆ " ಮ್ಯಾನೇಜ್ಮೆಂಟ್ ಡಿಪ್ಲೋಮಾ / ಎಂ.ಬಿ.ಎ ಇಲ್ಲದವರೂ ದಯವಿಟ್ಟು ಹೊರಡಿ" ಅಂತ ಹೇಳಿದ.

ಇದನ್ನ ಕೇಳಿ 500 ಜನ ಕಳಚಿಕೊಂಡರು.

ರಘು ಪುನಃ ಯೋಚನೆ ಮಾಡಿದ "ನಾನು ಬಿ.ಇ. ಮುಗ್ಸೋಕ್ಕೆ 7 ವರ್ಷ ತಗೊಂಡಿದೀನಿ, ಎಂ.ಬಿ.ಎ ಇದೆ ಅಂತಾ ಹೇಳ್ಕೊಂಡು ಇದ್ರೆ ಯಾರಪ್ಪನ್ ಮನೆ ಗಂಟೂ ಹೋಗಲ್ಲಾ, ನೋಡಿಯೇ ಬಿಡೋಣಾ" ಅನ್ಕೊಂಡು ಅಲ್ಲೇ ಉಳಿದ.

ಕೊನೆಗೆ ಬಿಲ್ ಗೇಟ್ಸ್ ಹೇಳಿದ "ಸರ್ಬಿಯನ್ ಹಾಗು ಕ್ರೊಯೇಶಿಯನ್ ಭಾಷೆ ಬರದವರು ಹೊರಡಬಹುದು" ಎಂದ.
ಇದನ್ನ ಕೇಳಿ ಮತ್ತೆ 498 ಜನ ಜಾಗ ಖಾಲಿ ಮಾಡುದ್ರು.

ರಘು ಮತ್ತೆ "ಕನ್ನಡ ಮತ್ತೆ ಹರಕು ಮುರಕು ಇಂಗ್ಲಿಷ್ ಬುಟ್ರೆ ನಂಗೆ ಬೇರೆ ಯಾವ ಭಾಷೆನೂ ಬರಲ್ಲ, ಇಲ್ಲಿ ತನಕ ಆಗಿದ್ ಆಗ್ಲಿ ಅನ್ಕೊಂಡು ಇದ್ದೀನಿ, ಈಗ್ಲೂ ಕೂಡ ನೋಡಿಯೇ ಬಿಡೋಣಾ" ಅನ್ಕೊಂಡು ಅಲ್ಲೇ ಉಳಿದ.
ಅವನ ಜೊತೆ ಇನ್ನೊಬ್ಬ ಕಟ್ಟ ಕಡೆಯ ಸ್ಪರ್ಧಿ ಜೊತೆ ಉಳಿದ.

ಇವರಿಬ್ಬರ ಹತ್ರ ಬಿಲ್ ಗೇಟ್ಸ್ ಬಂದು, "ಇಲ್ಲಿ ಬಂದಿದ್ದ 5000 ಜನರಲ್ಲಿ ನೀವಿಬ್ಬರೇ ಎಲ್ಲಾ ಕ್ವಾಲಿಫಿಕೇಶನ್ ಇರೋರು. ನೀವಿಬ್ರೂ ಸರ್ಬ್ - ಕ್ರೊಯೇಶಿಯನ್ ಭಾಷೆಯಲ್ಲಿ ಮಾತಾಡೋದನ್ನ ನಾನು ಕೇಳೋದಕ್ಕೆ ಇಷ್ಟ ಪಡ್ತೀನಿ" ಅಂದಾ.

ಕೂಲಾಗಿ ರಘು ಆ ಇನ್ನೊಬ್ಬನ ಕಡೆ ತಿರುಗಿ "ಏನ್ ಗುರೂ... ಆರಾಮಾ ?" ಅಂತ ಕೇಳಿದ.

ಅದಕ್ಕೆ ಇನ್ನೊಬ್ಬ ರಘುನಾ ನೋಡ್ತಾ "ನನ್ ಮಗನೆ, ಸೂರ್ಯಂಗೇ ಟಾರ್ಚಾ???"

ಕನ್ನಡ ಮಾತಾಡಿ, ಮಜಾ ಮಾಡಿ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

3 comments:

Immortal said...

hehe super maga.. hehe anyway nice to know that you have used my name :D

Cheenu said...

too much maga........ hucha aade

ಹಷ೯ (Harsha) said...

he he .. mastagide .......