Monday, August 25, 2008

ಈ ಹೆಸರಿನ ಅರ್ಥ ಸ್ವಲ್ಪ ತಿಳಿಸುವಿರಾ ?

ಕಳೆದ ವಾರ ವೀಸಾ ಇಂಟರ್ವ್ಯೂ ಇತ್ತು ಅಂತಾ ಮದ್ರಾಸಿಗೆ ಹೋಗಿದ್ದೆ. ಬೆಳಿಗ್ಗೆ 11 ಕ್ಕೆಲ್ಲಾ ಕೆಲಸ ಮುಗೀತು.
ಕೆಲಸ ಮುಗಿದ ಮೇಲೆ ಏನು ಮಾಡಕ್ಕೆ ತೋಚಲಿಲ್ಲ. ಬೆಂಗಳೂರಿಗೆ ವಾಪಸ್ ಫ್ಲೈಟ್ ಇದ್ದದ್ದು ಸಂಜೆ 5:30 ಗೆ. ಸರಿ ಅಂತಾ ಅಲ್ಲೇ ಸಿಟಿ ನೋಡಕ್ಕೆ ಹೊಂಟ್ವಿ. ಪಾಂಡಿ ಬಜಾರ್ ರಸ್ತೆ ಇದೆ ಟಿ ನಗರದಲ್ಲಿ. ಅಲ್ಲಿ ನಡೆದಾದಬೇಕಾದ್ರೆ ಕಣ್ಣಿಗೆ ಕಂಡಿದ್ದು ಇದು.
ಮಕೇಶ್ ಜೆಂಟ್ಸ್ ಹೇರ್ ಸ್ಟೈಲಿಸ್ಟ ಅಂತೆ.
ಮಹೇಶ್ ಗೊತ್ತು, ಮುಕೇಶ್ ಗೊತ್ತು. ಆದ್ರೆ ಈ ಮಕೇಶ ಅಂದ್ರೆ ಏನಪ್ಪಾ ? ನನಗೆ ತಿಳಿದ ಮಟ್ಟಿಗೆ ತಮಿಳಿನಲ್ಲಿ "ಹ" ಪದಪ್ರಯೋಗ ಹಾಗು ಉಚ್ಛಾರ ಇಲ್ಲಾ. ಅದಕ್ಕೆ ಅವರು "ಹ" ಬದಲಾಗಿ "ಗ" ಉಪಯೋಗಿಸುತ್ತಾರೆ. ಮಹೇಶನನ್ನು "ಮಗೇಶ"ನೆಂದು ಕರೆಯುತ್ತಾರೆ. ಆದರೂ ಇಲ್ಲಿ ಈ ಹೆಸರಿನಲ್ಲಿ ಸ್ವಲ್ಪ ಮಿಸ್ ಹೊಡೀತ ಇದೆ. ಗೊತ್ತಿರೋರು ಬಿಡಿಸಿ ಹೇಳಬಲ್ಲಿರಾ ?


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

8 comments:

ಹೇಮಂತ Hemanth said...

In tamil, Mahesh can also be written as Magesh/Makesh, due to absence of many letters in the script. SO we have to read this as Mahesh.

Jai Kannada
Hemanth

ಸಂದೀಪ್ ಕಾಮತ್ said...

ಬರೆಯೊದು ಮಕೇಶ್ ! ಅದನ್ನು ಮಹೇಶ್ ಅಂತ ಓದ್ಬೇಕಾ??!!

ಒಳ್ಳೆ ಭಾಷೆ!

Cheenu said...

What hemant has told is absolutely right.....adre nandellidli anno kereta nanage......nanage en ansutte andre this shop is a joint venture...Involved parties names are Mahesh and Keshav.... ivaribbara hesaroo serisodakke makesh anta hesarittirabahuda antha... lol......

ವಿ.ರಾ.ಹೆ. said...

makhesh magesh mahesh ಮೂರೂ ಒಂದೇ ಅವ್ರಿಗೆ. ಆದ್ರೂ ಅವರದ್ದು ಸಾಸ್ತ್ರೀಯ ಬಾಸೆ!

Anonymous said...

ನಾನು ನೋಡಿದ ಹಾಗೆ ತಮಿಳಿನಲ್ಲಿ ಹ ಅಕ್ಷರವಿದೆ. ನನ್ನ ಸ್ನೇಹಿತರ ಪ್ರಕಾರ ಹ ಮತ್ತು ಷ ಇತ್ತೀಚಿನ ಅವಿಷ್ಕಾರ. ಇವುಗಳನ್ನು ಕ್ರಮವಾಗಿ ஹ ಮತ್ತು ஷ ಎಂದು ಬರೆಯುತ್ತಾರೆ.

Harsha Bhat said...

mukhada + kesha = makesha

adu yavado ndu sandi aagutte sariyagi nenapilla.

ravi said...

idu... mahesh hOgi magesh aagide allinda matte ga ka aagi makesh aagide.

mugunthan anthe yen haaLmaaDiTidarO bhaashenaa!

ಸವಿಗನಸು said...

ಸ್ವಾಮಿ,
ನನ್ನ ಎಷ್ಟೊಂದು ತಮಿಳ್ನವ್ರು ಕರೆಯೋದು ಮಗೇಶ್ ಅಂತಾನೆ...ಕೆಲವರನ್ನ ತಿದ್ದಿದ್ದೀನಿ...ನಮ್ಮ ಆಫೀಸಿನಲ್ಲಿ ಒಬ್ಬ ತಮಿಳ್ ನವನ ಬಾಯಲ್ಲಿ ಮಹೇಶ್ ಅಂತ ಕರೆಸಿಕೊಳ್ತಾ ಇದ್ದೀನಿ ಕಷ್ಟ ಪಟ್ಟು ಕರೆಯುತ್ತಾನೆ...