Thursday, April 9, 2009

ದೇಶದ ಶಾಂತಿ ಹಾಗು ಭದ್ರತೆಗೆ ಇದಕ್ಕಿಂತಾ ಅಪಾಯ ಬೇಕೇ ?

ಇವತ್ತಿನ ಪೇಪರಿನಲ್ಲಿ ತಮಿಳುನಾಡಿನ ಎಂ.ಡಿ.ಎಂ.ಕೆ ನಾಯಕ ವೈಕೋ ಹೇಳಿರೋದನ್ನು ಓದಿದಾಗ ಮೈಮೇಲೆ ಚೇಳು ಹರಿದ ಹಾಗಾಯ್ತು. LTTE ಯನ್ನು ನಮ್ಮಲ್ಲಿ ಪ್ರತ್ಯೇಕತಾವಾದಿಗಳು ಹಾಗು Risk to the National Security ಅಂತಾ ಗುರುತಿಸಿದ್ದರೂ ಕೂಡಾ, ಈ ಥರದ ನಾಯಕರು, ಸೊ ಕಾಲ್ಡ್ ಭಾಷಾ ಹೋರಾಟಗಾರರು, ಇಂಥಾ ಸಂಘಟನೆಯನ್ನು ಬಹಿರಂಗವಾಗಿ ಬೆಂಬಲಿಸುವುದರ ಜೊತೆಗೆ ಆ ಗುಂಪಿನ ನಾಯಕ ವೆಲ್ಲುಪಿಳ್ಳೈ ಪ್ರಭಾಕರನ್ ಗೆ ಅಪಾಯವಾದಲ್ಲಿ, ತಮಿಳುನಾಡಿನಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದು, ನಮ್ಮ ಇಂದಿನ ಅದಃಪತನಕ್ಕೆ ಬಿದ್ದಿರುವ ಪ್ರಜಾಪ್ರಭುತ್ವ ಹಾಗು ಹೊಲಸು ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ.

ಇಂಥವರನ್ನು ಅನುಸರಿಸಿ, ನಮ್ಮ ಬೆಂಗಳೂರಿನಲ್ಲಿ ಕೂಡಾ "ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ" ಪ್ರತಿಭಟನೆ ಮಾಡ್ತಾರೆ. ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಅದನ್ನು ಖಂಡಿಸಿ ಪ್ರತಿಭಟನೆ ಮಾಡೋದು ತಪ್ಪಲ್ಲ, ಆದ್ರೆ ಇವರು ಮಾಡೋ ಪ್ರತಿಭಟನೆ Pro LTTE ಆಗಿರುತ್ತೆ.

ಈ ಯಪ್ಪ ವೈಕೋ ಏನ್ ಹೇಳಿದಾನೆ ನೋಡಿ. ಜೊತೆಗೆ ಕೇಂದ್ರ ಸರ್ಕಾರ ಹಾಗು ಭಾರತೀಯ ರಕ್ಷಣಾ ಇಲಾಖೆಯವರು ಸೋನಿಯಾ ಗಾಂಧೀ ಜೀವಕ್ಕೆ LTTE ಯಿಂದ ಅಪಾಯವಿದೆ, ಹಾಗಾಗಿ ಆಕೆಗೆ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಈ ವೈಕೋ ಓಪನ್ ಆಗಿ LTTE ಗೆ ಸಪೋರ್ಟು ಕೊಡ್ತಾ ಇದಾನಲ್ಲ. ಇಂಥವರನ್ನೇ ಅಲ್ವೇ "ಬಗಲ್ ಕಾ ದುಶ್ಮನ್" ಅನ್ನೋದು ?

ಇನ್ನೂ ಈ ದೇಶ ಏನ್ ಏನ್ ನೋಡಬೇಕೋ, ನೋಡುತ್ತೋ ಗೊತ್ತಿಲ್ಲ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

8 comments:

ಧರಿತ್ರಿ said...

ಶಂಕ್ರಣ್ಣ..ಬೆಳಿಗ್ಗೆ ಪೇಪರ್ ಓದುತ್ತಾ ನಾನೂ ಹಿಂಗೆ ಯೋಚನೆ ಮಾಡಿದ್ದೆ. ಏನು ಮಾಡೋದು? ನಮ್ ಭಾರತದಲ್ಲಿ ಮಾತ್ರ ಹೀಗಾಗಲು ಸಾಧ್ಯ ಅನಿಸುತ್ತೆ.
-ಧರಿತ್ರಿ

Lakshmi Shashidhar Chaitanya said...

Incredible India ಇದು ಶಂಕ್ರಣ್ಣ...

ಶಿವಪ್ರಕಾಶ್ said...

ಇಂತವರಿಗೆ ಏನ್ ಹೇಳಬೇಕೋ ಗೊತ್ತಾಗೊಲ್ಲ,
ಇವರ ಈ ಮಾತುಗಳು ಬರಿ ಓಟಿಗಾಗಿ..
ಓಟಿಗಾಗಿ ದೇಶದ ಮಾನವನ್ನೇ ಹಾಳುಮಾಡುವವರು.
ಅವರು ತಾವು ಏನು ಮಾತನಾಡುತ್ತಿದ್ದೇವೆ ಎಂದು ಅರಿವಿಲ್ಲದೆ ಮಾತನಾಡುತ್ತರೆನೋ ?

ಮೃತ್ಯುಂಜಯ ಹೊಸಮನೆ said...

ನಮ್ಮ ರಾಜಕಾರಣಿಗಳದ್ದು ತುಂಬ ಸೀಮಿತ ಐಡೆಂಟಿಟಿ. ಈ ಐಡೆಂಟಿಟಿಯಲ್ಲಿ ಒಂದು ಗುಂಪು, ಜಾತಿ, ಭಾಷೆ...ಇವೇ ಮುಖ್ಯ ಆಗಿವೆ. ಅದ್ನ ಬಿಟ್ರೆ ಅವರ ಅಸ್ತಿತ್ವ ಉಳಿಯಲ್ಲ. ಹಾಗಾಗಿ ಇವೆಲ್ಲ.

sunaath said...

ಮುಗ್ಧ ಜನರನ್ನು ಭಾಷೆ ಹಾಗೂ ಧರ್ಮದ ಮೂಲಕ ಹುಚ್ಚೆಬ್ಬಿಸುವ cheap politics ಇದು.

Guruprasad said...

ಅದಿಕಾರ ರಾಜಕೀಯ ಇವಕೊಸ್ಕರ ಏನ್ ಬೇಕಾದರು ಮಾಡೋಕೆ ಸಿದ್ದ ನಮ್ಮ ರಾಜಕಾರಣಿಗಳು..... ತುಂಬ ಚೀಪ್ ಅನ್ನಿಸುತ್ತೆ ಇದನೆಲ್ಲ ನೋಡಿ ಓದುತ್ತಿರಬೇಕಾದರೆ.....
೧) ಅಲ್ಲಿ ವರುಣ್ ಗಾಂಧಿ ಹಿಂದೂಗಳ ಬಗ್ಗೆ ಮಾತಾಡಿದರೆ ಲಲ್ಲೂ ಪ್ರಸಾದ್ ಯಾದವ್ " ಹೀಗೆ ಮಾತಾಡುವವರ ಮೇಲೆ ರೋಲರ್ ಹರಿಸಿ ಸಾಯಿಸಬೇಕು ಅಂತ ಹೇಳ್ತಾರೆ.. (ಒಟಿಗೊಸ್ಕರ) ಇನ್ನೊಂದ್ ಕಡೆ.. ಎಲ್ಲ ಪುರೋಹಿತರನ್ನ ಅವರ ಮುಖ್ಯಸ್ತರನ್ನ ಕರೆಯಿಸಿ ನಿಮ್ಮಿಂದಲೇ ನಾವು ಬದುಕೋದು ಅಂತ ಹೇಳಿಕೆ ಕೊಡ್ತಾರೆ...
೨) ನಮ್ಮ ಯಡ್ಡಿ ಸಹೆಭಾರು ತಮಿಳ್ ಜನ ಜಾಸ್ತಿ ಇರೋ ಕಡೆ... ಅವರಬಗ್ಗೆ ಅವರ ಅಬಿವ್ರುದ್ದಿ ಬಗ್ಗೆ ಹೇಳಿಕೆ ಕೊಡ್ತಾರೆ....
೩) ತಮಿಳುನಾಡು ಮುಖ್ಯಮಂತ್ರಿ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ ಹೇಳಿಕೆ ಕೊಡ್ತಾರೆ...ಅವನು ಯಾವ ಕಾಲೇಜ್ ನಲ್ಲಿ ಓದ್ದಿದ್ದು... ಅಂತ
೪) ಬರಿ ಓಟು ಬ್ಯಾಂಕ್ ನ ನೋಡಿಕೊಂಡು. ನಮ್ಮ ಮೇಲೆ , ನಮ್ಮ ಪಾರ್ಲಿಮೆಂಟ್ ಮೇಲೆ ಧಾಳಿ ಮಾಡಿದವರನ್ನು ಇನ್ನು ಏನ್ ಮಾಡಬೇಕು ಅಂತ ಮೀನಾ ಮೇಷ ಎಣಿಸುತ್ತ ಕೂತಿದ್ದಾರೆ....
ಹೇಗೆಲ್ಲಾ ಇದ್ದಾರೆ ಇನ್ನು ಭಯೋತ್ಪಾದನೆ ಎಲ್ಲಿ ಕಮ್ಮಿ ಆಗುತ್ತೆ,, ಇವರ ಹೇಳಿಕೆ ಇಂದ,, ಇವರ ತಾತ್ಸಾರ ಮನೋಬಾವದಿಂದ ಇನ್ನು ಜಾಸ್ತಿ ಆಗುತ್ತೆ ಹೊರತು ಕಮ್ಮಿ ಆಗೋಲ್ಲ...


ಗುರು....

ಬಾಲು said...

monne santhosha hedge heltha idru dushta raajakaaranigalu haagu brashta janaru antha.

e deshadalli innu praja prabhuthva prabudda vagilla.... adu yavaga aagutto....

lokeshgowda said...

Nodi Idella votina rajakarana annodhu bitre bere yenu illa ahh kade.. Bangladeshi galghe bhratha rastradha pauratava kodtaidare,illi LTTE avru terrorist alla antare amale.. jayalalitha heltare Tamilrghe ondu rastra beku antha alla avre taleyalli budhi idyo yeno.,,ighe munduvarde nam desha yaav stithighe tagondogtaro gothilla..