Thursday, April 23, 2009

ಲಂಡನ್ ಪಬ್ಬಿನ ಜಗಳ ಹಾಗು ಸಹಾಯಕ್ಕೆ ಬಂದ PAN ಕಾರ್ಡು

ಇದು ಸುಮಾರು ಎರಡೂವರೆ ವರ್ಷದ ಹಿಂದೆ ನಡೆದ ಘಟನೆ, ಅಂದ್ರೆ November 2006. ಆ ವರ್ಷ ಸೆಪ್ಟೆಂಬರಿನಲ್ಲಿ ನಾನು ಮೊದಲ ಬಾರಿ ವಿದೇಶಕ್ಕೆ ಕಾಲಿಟ್ಟಿದ್ದು. ನಾನು ಭಾರತದಿಂದ ಹೊರಗೆ ಕಾಲಿಟ್ಟ ಮೊದಲ ದೇಶ England. ಲಂಡನ್ನಿನಿಂದ ಸುಮಾರು ೬೦ ಮೈಲಿ ದೂರ ಇದ್ದ BASILDON ಅನ್ನೋ ಊರಲ್ಲಿ ನನ್ನ ಕೆಲಸ ಇದ್ದದ್ದು. ಲಂಡನ್ನಲ್ಲಿ ಇಳಿದದ್ದು Heathrow ವಿಮಾನ ನಿಲ್ದಾಣದಲ್ಲಿ. ಅದು ಬಿಡಿ, ಮೊದಲ ಬಾರಿ ವಿದೇಶಿ ನಗರದಲ್ಲಿ ಇಳಿದದ್ದು, ಸುಮಾರು 5-10 ನಿಮಿಷ ಬೇಕಾಯ್ತು, ಲಂಡನ್ನಲ್ಲಿ ಇದ್ದೀನಿ ಅಂತಾ ಕನ್ಫರ್ಮ್ ಆಗಲು.

ನನ್ನ ಲಂಡನ್ನಿನ ಅನುಭವ ಕಥನ ಬಿಡಿ, ಇನ್ನು ಇದರ ಬಗ್ಗೆ ಬರೀತಾ ಕೂತರೆ ಮಹಾಕಾವ್ಯ ಆಗುತ್ತೆ..

ನನ್ನ ಇಬ್ರು ಮೈಸೂರಿನ ಸ್ನೇಹಿತರು ಅಭಿ ಮತ್ತು ಸಿಮ್ಮಿ (ವಿನಯ್), ಆ ವೇಳೆಯಲ್ಲಿ ಲಂಡನ್ನಿನ Middlesex University ಯಲ್ಲಿ MS in International Finance ಓದುತ್ತಾ ಇದ್ರು. ಹೊರದೇಶದ ಆ ನಗರದಲ್ಲಿ ನನ್ನವರು ಎನ್ನುವ ಜೀವ ಇವೆರಡೇ. ಹಾಗಾಗಿ ಪ್ರತಿ ವೀಕೆಂಡು ನನ್ನೂರಿನಿಂದ ಲಂಡನ್ನಿಗೆ ಪ್ರಯಾಣ. ಇವರಿಬ್ಬರು ಇದ್ದದ್ದು ಇವರ ಹಾಸ್ಟೆಲ್ಲಿನಲ್ಲಿ. ನಾನೂ ಇವರ ಹಾಸ್ಟೆಲಿನಲ್ಲೇ ತಂಗುತ್ತಿದ್ದೆ. ಶನಿವಾರ ಬೆಳಿಗ್ಗೆ ಅಲ್ಲಿ ತಲುಪಿ, ಭಾನುವಾರ ಸಂಜೆ ವಾಪಸ್ ನನ್ನೂರಿಗೆ.

ಶನಿವಾರದಂದು ಮೂವರೂ ಲಂಡನ್ನಿನ ಗಲ್ಲಿ ಗಲ್ಲಿ ಸುತ್ತಿ, ಸಂಜೆ ಅವರ ಹಾಸ್ಟೆಲಿನ ರೂಮಿಗೆ ಬಂದು, ನಾನ್ಸೆನ್ಸ್ ಮಾತಾಡ್ತಾ ರಾತ್ರಿ ಕಳೀತಾ ಇದ್ವಿ. ಹೀಗೆ ಒಮ್ಮೆ ನವೆಂಬರ್ 2006 ನ ಒಂದು ಶನಿವಾರ. ಅಭಿ ಮತ್ತು ಸಿಮ್ಮಿಯ ಹಾಸ್ಟೆಲ್ ಇದ್ದದ್ದು North London ನಲ್ಲಿ. ಶನಿವಾರ ನಮ್ಮ ಬೀದಿ ಸುತ್ತಾಟ ಮುಗಿಸಿ, ಅಲ್ಲೇ North London ನ Hendon Central ಅನ್ನೋ ಜಾಗಕ್ಕೆ ಹೋದ್ವಿ. ಅಲ್ಲಿ THE BODHRANS ಅನ್ನೋ ಪಬ್ ಇದೆ, ಹಾಗು ಅಲ್ಲಿ ಅಭಿಯ ಕ್ಲಾಸ್ಮೇಟ್ ಒಬ್ಬಾಕೆ ಕೆಲಸ ಮಾಡ್ತಾ ಇದ್ಳು. ಹಾಗಾಗಿ ಆ ಪಬ್ಬಿಗೆ ಕರ್ಕೊಂಡು ಹೋದ. ಮಾಮೂಲಾಗಿ ನಾನು ಅಭಿ ಹಾಗು ಸಿಮ್ಮಿ ಮಾತಾಡ್ತಾ, ಅಭಿ ತನ್ನ Guinness ಇಳುಸ್ತಾ ಇದ್ದ, ನಾನು Kronenbourg ಇಳುಸ್ತಾ ಇದ್ದೆ. ಪಕ್ಕದಲ್ಲಿ ಒಬ್ಬ ಫುಲ್ ಚಿತ್ತಾಗಿದ್ದ. ನೋಡಕ್ಕೆ ಬ್ರಿಟಿಷ್ ಥರ ಇರಲಿಲ್ಲ, ಆದ್ರೆ ಸ್ವಲ್ಪ ಫ್ರೆಂಚ್ ಥರ ಇದ್ದ. ನಮ್ಮನ್ನು ನೋಡಿ, ಸಡನ್ನಾಗಿ ನಮ್ಮನ್ನು ಟಾರ್ಗೆಟ್ ಮಾಡುತ್ತಾ ತನ್ನನ್ನು ತಾನೇ

"I am a terrorist.." ಅನ್ನೋಕ್ಕೆ ಶುರು ಮಾಡಿದ.

ನಾನು ಅದರ ಬಗ್ಗೆ ಗಮನ ಕೊಡದೆ ಸುಮ್ನೆ ಅಭಿ, ಸಿಮ್ಮಿ ಜೊತೆ ಮಾತಾಡ್ತಾ ಕೂತೆ. ಪದೇ ಪದೇ ಹೀಗೆ ಅನ್ನುತ್ತಾ ಇದ್ದ. ಸ್ವಲ್ಪ ಹೊತ್ತಾದ ಮೇಲೆ...

"You know, you people look like terrorists and are terrorists" ಅಂದ.

ನಮ್ಮ ಅಭಿ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಮೆಂಟ್ಲು ಹಾಗು ಧೈರ್ಯ ಜಾಸ್ತಿ. ಸಡನ್ನಾಗಿ ಅವನ ಕಡೆ ತಿರುಗಿ
"You know mate, you too look like a F***in Algerian Terrorist" ಅಂದ. ಅವ್ನು ಮೋಸ್ಟ್ಲಿಫ್ರೆಂಚ್ ಅನ್ಸುತ್ತೆ.ಈ ಫ್ರೆಂಚರಿಗೆ Algerians ಕಂಡ್ರೆ ಆಗಲ್ಲ. ಸಿಕ್ಕಾಪಟ್ಟೆ ಉರಿ ಶುರು ಆಯ್ತು ಅನ್ಸುತ್ತೆ. ಮೊದಲೇ ಕುಡಿದು ಚಿತ್ತಾಗಿದ್ದ, ಏನೇನೋ ಬಡಬಡಾಯಿಸೋಕ್ಕೆ ಶುರು ಮಾಡಿದ. ನಾನು ನೋಡೋಷ್ಟು ನೋಡಿದೆ.

ಅವ್ನು ಕೂಗಾಡೋದು ಜಾಸ್ತಿ ಆಯ್ತು. ಅಲ್ಲಿಯ ಪಬ್ಬು, ಬಾರ್, ಡಿಸ್ಕೋ ಗಳಲ್ಲಿ ಮಸ್ತ್ ಹೈಟ್, ಮಸ್ತ್ ತೂಕ ಇರೋ ಜನರನ್ನ Public Safety ಅಂತಾ ಇಟ್ಟಿರ್ತಾರೆ, ಅಂದ್ರೆ Nothing but Bouncers. ಪಬ್ಬು ಬಾರಿನಲ್ಲಿ ಕಿರಿಕ್ ಆದ್ರೆ ತಡೆಯೋಕ್ಕೆ ಅಷ್ಟೇ. ಅಲ್ಲಿನ Public Safety Man ಹತ್ರ ಹೋದೆ. ಆ ಕ್ಷಣದಲ್ಲಿ ಅದೇನ್ ಐಡಿಯಾ ಹೊಳೀತೋ ಏನೋ, ಪರ್ಸನ್ನು ತೆಗೆದು,
ಅದ್ರಲ್ಲಿ ಇದ್ದ ನನ್ನ PAN ಕಾರ್ಡನ್ನು ಅವನಿಗೆ ತೋರಿಸಿ...

"Look Mate, that drunkard is passing some real nonsense rasist abuses and comments.
I work for the Income Tax Department, Government of India. If that person doesn't stop his nonsense, I will be forced to call the police, lodge a complaint on the grounds of racial abuse and also I need to call my embassy" ಅಂದೆ.

ನನ್ನ PAN ಕಾರ್ಡನ್ನು ನೋಡಿದ. ಯಾವಾಗ ನಾನು Racial Abuse ಅಂತಾ ಕಂಪ್ಲೇಂಟ್ ಕೊಡ್ತೀನಿ ಅಂದೆನೋ, ಅವಾಗ ಆ ಕೂಗಾಡುತ್ತಿದ್ದವನ ಹತ್ರ ಹೋಗಿ, ಬಾಯಿ ಮುಚ್ಚಿಕೊಂಡು ಇರು ಅಂತ ಹೇಳಿ, ಅವನನ್ನು ಹೊರಗೆ ಹಾಕಿದ.

ಯಾಕೆ ಅಂದ್ರೆ ಇಂಗ್ಲೆಂಡಿನಲ್ಲಿ Racial Abuse, Racism ಅನ್ನೋದು ಒಂದು ತೀವ್ರ ಅಪರಾಧ. ಹಾಗಾಗಿ ಈ ಥರ ಘಟನೆ ನಡೆದರೆ, ಕಂಪ್ಲೇಂಟ್ ಕೊಡ್ತೀನಿ ಅಂದಾಗ ಅಲ್ಲಿನ ಬಿಳಿ ಜನ ಸಖತ್ ಹೆದ್ರುತಾರೆ. ಜೊತೆಗೆ ಪಬ್ಬಿನಲ್ಲಿ ಈ ಥರ ಘಟನೆ ನಡೆದು, ಆ ಪಬ್ಬಿನಲ್ಲಿ ಕೆಲಸ ಮಾಡೋರು ಏನೂ ಮಾಡಲಿಲ್ಲ ಅಂತ ಕಂಪ್ಲೇಂಟು ಹಾಕಿದರೆ, ಆ ಪಬ್ಬಿನ ಲೈಸೆನ್ಸ್ ಕ್ಯಾನ್ಸೆಲ್ ಆಗೋ ಸಾಧ್ಯತೆ ಇದೆ.


ಮೊನ್ನೆ ನನ್ನ ಕೊಲೀಗ್ ಹತ್ರ ಈ ಘಟನೆ ಹೇಳಿದೆ..
ಅವ್ರು, "ಸಖತ್ತಾಗಿದೆ ಶಂಕರ್ ಇದು, ಆದ್ರೆ ಬ್ಲಾಗಿನಲ್ಲಿ ಇನ್ನೂ ಯಾಕೆ ಇದನ್ನು ಹಾಕಿಲ್ಲಾ ?" ಅಂತ ಕೆಳುದ್ರು..
ಹಾಗಾಗಿ ಇವತ್ತು ಹಾಕಿದೆ.
ಅಂತೂ ಇಂತೂ ನನ್ನ PAN ಕಾರ್ಡು ಲಂಡನ್ನಲ್ಲಿ ಹೀಗೆ ಸಖತ್ತಾಗಿ ಉಪಯೋಗಕ್ಕೆ ಬಂತು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

26 comments:

ಶಿವಪ್ರಕಾಶ್ said...

ಕೆಲವರು ಕುಡಿದು ಟೈಟ್ ಆದಮೇಲೆ ಏನ್ ಮಾತಾಡ್ತಾರೆ ಅಂತ ಕೊತ್ತಿರಲ್ವೇನೋ ?
ಅಂತು PAN ಕಾರ್ಡು ಬಹಳ ಉಪಯೋಗ ಆಯ್ತು...

Abhi said...

hehe aa dina nange chennagi nenapide... naan aounige baidaaga.. aouna shock aada mukha nodi olle maja banthu... innond vishya enu andre.. aa bar nalli aouna kandre yaarigu aagtha irlilla :)

ವಿಕಾಸ್ ಹೆಗಡೆ said...

ನಮ್ಮಲ್ಲಿ ಸುಳ್ ಸುಳ್ಳೇ ಜಾತಿನಿಂದರೆ ಕೇಸ್ ಹಾಕ್ತೀನಿ ಅಂತ ಹೆದರಿಸ್ತಾರಲ್ಲ. ಹಾಗಾಯ್ತು ನಿಮ್ ಕತೆ :)

ಬರೀ ಪಬ್ ವಿಷ್ಯ ಮಾತ್ರ ಹೇಳಿದ್ದೀರ, ’ಬೇರೆ ಕಡೆ’ ಹೋಗಿದ್ ವಿಷ್ಯನೂ ಬ್ಲಾಗಲ್ಲಿ ಹಾಕ್ತೀರೋ? ಅಲ್ಲೂ ಏನಾದ್ರೂ ಕಿರಿಕ್ ನೆಡೆದಿದ್ಯಾ ಅಥವಾ ಈಸಿಯಾಗಿ ಆಗೋಯ್ತಾ? :-)

ಶಿವಶಂಕರ ವಿಷ್ಣು ಯಳವತ್ತಿ said...

naanu ondu PAN card mauskothini.........

from
http://shivagadag.blogspot.com

ಶಂಕರ ಪ್ರಸಾದ said...

@ ಶಿವಣ್ಣ,
ಕುಡಿದು ಏನೇನೊ ಮಾತಾಡೋದು ಬೇರೆ.. ಆದ್ರೆ ಇವನು ಪಕ್ಕ Racist comment ಹೊಡೀತಾ ಇದ್ದ.
@ ಅಭಿ,
ನಿಜಾ ಮಗ.. ಅವನ ಮುಖ ಫುಲ್ expression ಚೇಂಜ್ ಆಗಿತ್ತು ನೀನು ಈ ಡೈಲಾಗ್ ಹೊಡೆದಾಗ.
@ ವಿಕಾಸ,
ಯಾಕೋ ನಿನ್ನ ಈ ಥಿಂಕಿಂಗ್ ಮತ್ತು ಹೋಲಿಕೆ ಸರಿ ಕಾಣಲಿಲ್ಲ. ಸುಳ್ಳೇ ಸುಳ್ಳು ಜಾತಿ ನಿಂದನೆ ಕೇಸು ಹಾಕುವವರಿಗೂ ಹಾಗು ನನ್ನ ಈ ಘಟನೆಯ ನಡುವೆ ಯಾವುದೇ ಸ್ವಾಮ್ಯ ಕಾಣಬರಲಿಲ್ಲ. ನಮ್ಮ ಚಹರೆ, ಚರ್ಮದ ಬಣ್ಣ ನೋಡಿ ಈ ಥರ ಮಾತಾಡಿದ್ದು, ಹಾಗು, ಮನುಷ್ಯನ ಚರ್ಮದ ಬಣ್ಣದ ಮೇಲೆ ಕೀಳಾಗಿ ಮಾತಾಡೋದನ್ನೇ RACIST BEHAVIOUR ಅನ್ನೋದು. ನಮ್ಮ ಬಗ್ಗೆ ಹೀಗೆ ಅವಮಾನಕರವಾದ ರೀತಿಯಲ್ಲಿ ಮಾತಾಡಿದವನನ್ನ ಸುಮ್ನೆ ಬಿಡಬೇಕಿತ್ತಾ ? ಆ ಬೌನ್ಸರ್ ಗೆ ಹೇಳಿದ್ರೆ ಸಾಕು..ಅವ್ರು ಮಿಕ್ಕಿದ ಕೆಲಸ ಮಾಡ್ತಾರೆ...ಎಕ್ಸ್ಟ್ರಾ ಎಫೆಕ್ಟ್ ಗೆ ನನ್ನ PAN ಕಾರ್ಡನ್ನು ತೋರ್ಸಿದ್ದು ನಾನು.
And my dear friend Vikas, ಜಾತಿ ನಿಂದನೆಯ ಸುಳ್ಳು ಕೇಸು ಹಾಕೋದಕ್ಕೆ ನಾನು ಭಾರತದಲ್ಲಿ ಇರ್ಲಿಲ್ಲ.
ದಯವಿಟ್ಟು ನೀನು ಇದನ್ನ ಅರ್ಥ ಮಾಡಿಕೊಳ್ಳಬೇಕು.

ಕಟ್ಟೆ ಶಂಕ್ರ

Anonymous said...

You know, you people look like terrorists and are terrorists ಅಂತ ಅವನು ಹೇಳಿದ ಅಂತ ಬರೆದಿದ್ದೀರೆ ಹೊರತು ಚಹರೆ, ಚರ್ಮದ ಬಣ್ಣದ ಬಗ್ಗೆ ಮಾಡಿದ್ದಾನಾ?, ಏನು ಕಮೆಂಟ್ ಮಾಡಿದ ಅಂತ ಬರೆದಿಲ್ಲ.(ಅಂದ್ರೆ ನೀವು ಕರಿಯರು, ಕೋತಿ ತರ ಇದೀರ ಇತ್ಯಾದಿ)

ನ್ಯಾಯವಾಗಿ ಹೇಳಬೇಕುಂತ ಇದ್ದಿದ್ದರೆ ನಾನು ಒಬ್ಬ ಇಂಡಿಯನ್ ಸಿಟಿಜನ್, ಇಲ್ಲಿ ಕೆಲಸದ ಮೇಲೆ ಬಂದಿದ್ದೆ ,ಕುಡಿಯಕ್ಕೆ ಬಂದಿದ್ದೆ ಅಂತ ಹೇಳ್ಬೇಕಿತ್ತು. ನೀವು PAN card ಬಳಸಿಕೊಂಡು ಹೇಳಿದ್ದು ಸುಳ್ಳೇ ಅಲ್ಲವೇ? ಅವರಿಗೆ racial abuse case ಹಾಕ್ತೀನಿ, ಎಂಬಸಿಗೆ ದೂರು ಕೊಡ್ತೀನಿ ಅಂತ ನಿಮ್ಮ PAN ಕಾರ್ಡ್ ಎಂಬ ಸುಳ್ಳನ್ನು ಬಳಸಿಕೊಂಡು ಹೆದರಿಸಿದೆ ಅಂದಿದ್ದೀರ. ನೀವೂ ಕೂಡ ಅಲ್ಜೇರಿಯನ್ ಟೆರರಿಸ್ಟ್ ಅಂತ ಅವನಿಗೆ ಬೈದಿದ್ದೀರ.

so, ur case can b compared to false caste abuse case in India .

ಅದಿರ್ಲಿ, ಬೇರೆ ವಿಷಯ ಕೇಳಿದ್ದೇ ಅದರ ಬಗ್ಗೆ ಮಾತಾಡೇ ಇಲ್ಲ ನೀವು !

-Vik

ಶಂಕರ ಪ್ರಸಾದ said...

@ ವಿಕಾಸ,
ಅವನು ನಮ್ಮನ್ನ "You know, you people look like terrorists and are terrorists" ಅನ್ನೋದು Racial abuse ಅಲ್ಲದೆ ಇನ್ನೇನು ? ಅವನು ಹೇಳಿದ್ದು ಏನು ? You People.. ಅಂದ್ರೆ ಏನರ್ಥ.. ಅಲ್ಲಿದ್ದ ಬಿಳಿಯರಿಗೆ ಹೀಗೆ ಹೇಳಿದ್ನಾ ?
ನೀನು ಇದನ್ನ ಅನುಭವಿಸಿಲ್ಲ, ಅದಕ್ಕೆ ಗೊತ್ತಿಲ್ಲ.. ನಾನಿದ್ದ ಊರಿನ ಹೆಸರು BASILDON, ಅಲ್ಲಿ ಒಮ್ಮೆ ರಾತ್ರಿ 10:30 ಗೆ ನಾವು ಸಿಟಿ ಸೆಂಟರ್ ಮಧ್ಯ ಇರೋ 24 hrs ಸೂಪರ್ ಮಾರ್ಕೆಟ್ ಗೆ ಹೋಗ್ತಾ ಇದ್ದಾಗ, ಇದೆ ತೆರನಾದ ಬಿಳಿ ಹುಡುಗರು ಅಟ್ಯಾಕ್ ಮಾಡಿದ್ರು. ಬಾಟಲ್ ಎಸೆದರು ನಮ್ಮ ಮೇಲೆ..ಇದು Racial attack ಅಲ್ಲದೆ ಇನ್ನೇನು ?
ಆ ಕುಡುಕ ನನ್ ಮಗ ನಮ್ಮ ಬಣ್ಣ, ನಮ್ಮ ಬಗ್ಗೆ ಈ ಥರ ಮಾತಾಡಿದಾಗ ಕೂಡ ಸುಮ್ನೆ ಇದ್ದಿದ್ರೆ, ಅದು ನಿಜವಾಗ್ಯೂ ಶಂಢತನ ವೇ. ಅಲ್ಲಿಯ ಕಾನೂನಿನಲ್ಲಿ ಈ Racial Abuse ನ ವಿರುಧ್ಧ ತೀವ್ರ ಅಸಮ್ಮತಿ ಹಾಗು ಶಿಕ್ಷೆ ಇದೆ.. ಆದ್ದರಿಂದ ನಾನು ಅದನ್ನು ಉಪಯೋಗಿಸಿಕೊಂಡೆ. ನಮ್ಮ ರಕ್ಷಣೆಗೆ ಇರೋ ಕಾನೂನನ್ನು ಉಪಯೋಗಿಸಿಕೊಂಡಿಲ್ಲ ಅಂದ್ರೆ, ಅದು ಕೂಡ ಮುಟ್ಠಾಳತನ ಅಷ್ಟೇ. ನಾನು PAN ಕಾರ್ಡನ್ನು ತೋರಿಸಿದ್ದರ ಸಮಜಾಯಿಷಿ ಕೊದೊದೊಕ್ಕೆ ಆಗ್ತಾ ಇಲ್ಲ.. ಸಡನ್ನಾಗಿ ನಾನು ಹಾಗೆ ಮಾಡಿದ್ದು. ಅದ್ರಲ್ಲಿ ತಪ್ಪು ಇದ್ರೆ ಒಪ್ಕೋತೀನಿ. ಆದ್ರೆ ನೀನು ಹೇಳಿದ "Racial Abuse" ಅನ್ನೋದನ್ನ ಟ್ರಂಪ್ ಕಾರ್ಡಾಗಿ ಯೂಸ್ ಮಾಡಿದೆ ಅಂತಾ.. ಅದೂ ನಿಜ, ಯಾಕೆಂದ್ರೆ ಆ ದೇಶದ ಕಾನೂನು ಜನಾಂಗೀಯ ನಿಂದನೆ ಸಹಿಸೋಲ್ಲ.
ನೀನು ನಿನ್ನ ಅನುಕೂಲಕ್ಕೆ ತಕ್ಕುದಾಗಿ ಮಾತಾಡ್ತಾ ಇದ್ದೀಯ..You are showing a Hypocrite's thoughts.

ಕಟ್ಟೆ ಶಂಕ್ರ

ಮೂರ್ತಿ ಹೊಸಬಾಳೆ. said...

hahaha idanna oodidre nam jaggesana cinima kate nempaagoytu kanannooooo

Anonymous said...

ನನ್ನ ಅನುಕೂಲಕ್ಕೆ ತಕ್ಕನಾಗಿ ಮಾತಾಡ್ತಿದ್ದೀನಾ! very strange statement. ಇದ್ರಲ್ಲಿ ನಂದೇನು ಅನುಕೂಲ ಐತೆ ಅಂತ ಗೊತ್ತಾಗ್ಲಿಲ್ಲ! ನೀವು ಅಲ್ಲಿ ಸಡನ್ನಾಗಿ ಪ್ಯಾನ್ ಕಾರ್ಡ್ ತೆಗ್ದು ತೋರ್ಸಿದಂಗೆ ನಾನು ಸಡನ್ನಾಗಿ ನನ್ ಯೋಚನೆ ಹೇಳಿಲ್ದೆ. hypocrite ಅಂತೆಲ್ಲಾ ರಾಂಗ್ ಆಗ್ಬೇಡಿ. ಬೈಸ್ಕಂಡಿದ್ದು ನೀವು, ಹೇಳ್ಕಂಡಿದ್ದು ನೀವು, ಓದಿದ್ದು ನಾವು. ನೀವು ತಪ್ಪು ಮಾಡಿದಷ್ಟನ್ನ ಒಪ್ಪಿಕೊಂಡ್ರಲ್ಲ ಅದೇ ಖುಷಿ. ನೀವು hypocrite ಅಲ್ಲ ಬಿಡಿ. ಕಾನೂನು ವಿಷಯ ಗೊತ್ತಿದೆ ನಂಗೆ, ಜನಾಂಗ ನಿಂದನೆ ತಪ್ಪು ಅಂತಲೂ ಗೊತ್ತಿದೆ ನಂಗೆ. ನಾನು ಆ ಮನುಷ್ಯನನ್ನ ಸಮರ್ಥಿಸಿಕೊಳ್ತಾ ಇಲ್ಲ. ಆ ಕಾನೂನಿನ ಬಳಕೆ ಬಗ್ಗೆ, ನೀವು ಬಳಸಿಕೊಂಡ ರೀತಿ ಬಗ್ಗೆ ಏನೋ ಡೌಟ್ ಬಂತು ಕೇಳಿದೆ ಅಷ್ಟೆ. ಸುಮ್ನೆ ಬೈಬೇಡಿ. ಬೈ. :)

-viikas

ಶಂಕರ ಪ್ರಸಾದ said...

@ ವಿಕಾಸ,
ಅದ್ಯಾಕೆ ಅನಾನಿಮಸ್ ಆಗಿ ಕಮೆಂಟು ಮಾಡ್ತಾ ಇದ್ದೀಯ ಅರ್ಥ ಅಗ್ತಾ ಇಲ್ಲ.
ಹಿಪೋಕ್ರೈಟ ಅಂದಿದ್ದು ನಿನಗೆ ಏನು ಸರಿ ಅನ್ಸುತ್ತೋ, ನಿನಗೆ ಯಾವಾಗ ಏನು ಬೇಕೋ ಅದನ್ನೇ ಪ್ರತಿಪಾದಿಸೋ ಕಾರಣಕ್ಕೆ.
ಇನ್ನು ನೀನು ಲೇಖನವನ್ನು ಸರಿಯಾಗಿ ಓದಿದ್ದಲ್ಲಿ, ಜನಾಂಗೀಯ ನಿಂದನೆಯ ಆರೋಪ ಯಾಕೆ ಮಾಡ್ತಾ ಇದ್ದೆ ಅನ್ನೋದು ಗೊತ್ತಾಗ್ತಾ ಇತ್ತು ನಿಂಗೆ. ಇನ್ನು ಆ ಎಕ್ಸ್ಟ್ರಾ ಎಫೆಕ್ಟಿಗೆ ನಾನು PAN ಕಾರ್ಡು ತೋರಿಸಿದ್ದೂ ಏನೂ ತಪ್ಪಿಲ್ಲ ಅಂತ ನನ್ನ ಭಾವನೆ. ಇನ್ನೊದು ವಿಚಾರ.. ಭವ್ಯ ಭಾರತದ ಒಬ್ಬ ಪ್ರಜ್ಞಾವಂತ ನಾಗರೀಕ ಅನ್ಕೊಂಡಿದೀನಿ ನನ್ನನ್ನು ನಾನು. ಹಾಗಾಗಿ ಕಾನೂನಿನ ದುರ್ಲಾಭ ಪಡೆಯೋ ಸೀನ್ ಇಲ್ಲ ಅನ್ಕೋತೀನಿ. ಜೊತೆಗೆ ನಾನು ಇನ್ನೊಬ್ಬನ ಮೇಲೆ ಜಾತಿ ನಿಂದನೆ ಕೇಸು.. ಇಲ್ಲ.. ಆದ್ರೆ, ಬೇರೆ ದೇಶದಲ್ಲಿ, ಜನಾಂಗೀಯ ನಿಂದನೆ ಹಾಕಬಹುದು...ಆದ್ರೆ, ಇದರ ತಪ್ಪು ಉಪಯೋಗ, ಉಹೂಂ..ಆಗದು, ಮಾಡೆನು.

ಕಟ್ಟೆ ಶಂಕ್ರ

ವಿಕಾಸ್ ಹೆಗಡೆ said...

ಎಲ್ಲರೂ ಕೂಡ ಅವರಿಗೆ ಸರಿಯೆನ್ನಿಸಿದ್ದನ್ನೇ ಹೇಳೋದು ಮಿ.ಶಂಕರ್. ಅದಕ್ಕೆ ನಾನೂ ಹೊರತಲ್ಲ, ನೀವೂ ಹೊರತಲ್ಲ. ಅದಕ್ಕೆ hypocrite ಅನ್ನಲಾಗದು. ನೆನಪಿರಲಿ. ನಾನು hyp ಆದರೆ ನೀವು ಕೂಡ ಆದಂತೆ. ಮೇಲೆ ಪ್ಯಾನ್ ಕಾರ್ಡ್ ತೋರಿಸಿದ್ದು ತಪ್ಪು ಅಂದಿರಿ, ಈಗ ತಪ್ಪಲ್ಲ ಅನ್ನುತ್ತಿದ್ದೀರ. ಎರಡೆರಡು ಮಾತು, ನಿಮ್ಮ extra effect ವಾದ , PAN card ದುರ್ಬಳಕೆ ಸರಿ ಅನ್ನುವುದು ನನಗೆ ಒಪ್ಪಿಗೆ ಇಲ್ಲ.

ಚರ್ಚೆ ಬೇಡ. ಶುಭವಾಗಲಿ.

- viikas

ಶಂಕರ ಪ್ರಸಾದ said...

@ ವಿಕಾಸ,
ನಾನು ಹೇಳಿದ್ದು, PAN ಕಾರ್ಡು ತೋರಿಸಿದ್ದು ತಪ್ಪಾದಲ್ಲಿ ಒಪ್ಕೋತೀನಿ, ಆದ್ರೆ ನಂಗೆ ಆ Particular moment ಅದು ತಪ್ಪಾಗಿ ಕಾಣಲಿಲ್ಲ..ಇದನ್ನೇ ನಾನು ಹೇಳೋಕ್ಕೆ ಹೊರಟಿದ್ದು.PAN ಕಾರ್ಡು ತೋರಿದ್ದು ಈ ಘಟನೆಯ ಸಣ್ಣ ಅಂಶ..
ನಾನು ನಿಜಕ್ಕೂ ಹೇಳ ಹೊರಟಿದ್ದು, ಈ ಜನಾಂಗೀಯ ನಿಂದನೆಯ ಬಗ್ಗೆ.. ಅದು ಇಲ್ಲಿ ತನಕ ಎಳೆಯುತ್ತೆ ಅಂತಾ ಗೊತ್ತಿರ್ಲಿಲ್ಲ..ಆದರೂ ಈ ವಾದವನ್ನು ಎಂಜಾಯ್ ಮಾಡಿದೆ. ನಿಂಗೂ ಶುಭವಾಗಲಿ.. ಎಲ್ರಿಗೂ ಶುಭವಾಗಲಿ.

ಕಟ್ಟೆ ಶಂಕ್ರ

ವಿ.ಸೂ : ಬೆಂಗಳೂರಿನ ಯಾವ್ದಾದ್ರೂ ಪಬ್ಬಿನಲ್ಲಿ ಕೂತು ಇದರ ಬಗ್ಗೆ ಇನ್ನೂ ಕೂಲಂಕುಶವಾಗಿ ಮಾತಾಡೋಣ, ಅವಶ್ಯಕತೆ ಬಿದ್ದಲ್ಲಿ ವಾದ ಕೂಡ ಮುಂದುವರಿಸಬಹುದು. ಏನಂತೀಯ ?

Abhi said...

Alright ... @Vikas: Heyy Vikas, I dont mean to be derogative here but what happened was in the spur of a moment... see he acted smart and I gave him one back.. meanwhile Shankra was new to the place and obviously he did whatever he thought was right at the moment.. may be using the PAN card gave him more confidence and felt people wont ignore his words.. little did he know about the laws against the racism and how strict they are in the UK. What happened was just an incident... I never knew that he had presented the PAN card until he told me later that day after that geezer was thrown out. All I knew was that I was in rage and wanted to sort that out outside ... but in the meanwhile if you look at it.. the PAN card worked fine like a weapon... and I dont think it harmed anyone physically too... he used words and so did Shankra and I... and on top of it... we did not ask for this... see we are the people who paint the english boards black... and i dont think using PAN card is as violent as that or against the law!!

Anonymous said...

sorry, one last doubt.

ಭಾರತದಲ್ಲಿ ಮೇಲ್ಜಾತಿಯೆಂದು ಕರೆಸಿಕೊಳ್ಳುವವರು ಕೆಳಜಾತಿಯೆನಿಸಿಕೊಳ್ಳುವವರಿಗೆ ಏನೇ ಬೈದರೂ ಕೇಸ್ ಹಾಕಬಹುದು, ಆದರೆ ಕೆಳಜಾತಿಯಲ್ಲೇ ಎರಡು ಸಮಾನ ಪಂಗಡಗಳು ಬೈದುಕೊಂಡಾಗ ಅಥವಾ ಕೆಳಜಾತಿಯವ ಮೇಲ್ಜಾತಿಯವನನ್ನು ಬೈದಾಗ ಕೇಸ್ ಹಾಕಲು ಸಾಧ್ಯವಿಲ್ಲ.

ಇದೇ ರೀತಿ ನಿಮಗೆ ಅಲ್ಲಿ ಯಾರೋ ಒಬ್ಬ ನೀಗ್ರೋವೋ, ಚೀನಿಯೋ, ಅಥವಾ ಪಾಕಿಸ್ತಾನಿಯೋ ನಿಮ್ಮನ್ನು ಬೈದಿದ್ದರೆ ಏನು ಮಾಡುತ್ತಿದ್ದಿರಿ? ಅವರ ಮೇಲೂ ಕೇಸ್ ಹಾಕಬಹುದಾ?
ಅವನು ಬಿಳಿಯ ಆದ ಮಾತ್ರಕ್ಕೆ ಅದು ಜನಾಂಗ ನಿಂದನೆ ಸ್ವರೂಪ ಪಡೆದುಕೊಂಡಿತು. ಆಗ ನೀವು ಕಾನೂನು ದುರ್ಬಳಕೆ ಮಾಡಿಕೊಂಡಂತಾಗಲಿಲ್ಲವೇ? ಜೊತೆಗೆ ಪ್ಯಾನ್ ಕಾರ್ಡ್ ಬಳಸಿ income tax employee ಅಂತ ಹೇಳಿದ ಸುಳ್ಳು ಇದ್ದೇ ಇದೆ. ಅದು ಬಿಡಿ.

ಇದೂ ಕೂಡ pure doubt ಅಷ್ಟೆ. ಅನ್ಯಥಾ ಭಾವಿಸಬೇಡಿ.

-viikas.

abhi said...

@ Vikas: Naan enu anyatha bhavisilla Vikas.. as a matter of fact Im enjoying the arguments...:)

The answer to your question is 'Yes. It depends on how broadly you see and think.. there is not much of a difference between Casteism and Racism...one talks about the work you do and the latter about you origin. It doesnt matter where the person is from if he's black and passed a racist comment then I can sue him, if he is a Pakistani and passed any offensive comment still I can sue him... Once you feel that it is offensive you can call the law.. the degree of it would be measured by the court...

At the end of the day we too are racists... but we dont go over the top.. in India we are still called Madrasis, and we to take the piss out the North Indians in various ways.. we genaralise all Rajastanis as 'Setus'.. Punjabi Jokes, Mallu jokes etc etc... and it depends on how you look at it... its like you dont gets pissed off when your own family takes the piss out of you but..having said that...you cant handle if a Pakistani cracks a joke about Punjabis or Mallus or Gujjus.. or vice versa can you?... and that is exactly what happened to us there that night!

ಶಂಕರ ಪ್ರಸಾದ said...

@ ವಿಕಾಸ,
ನಿನ್ನ ಕೊನೆಯ ಡೌಟಿಗೆ ನನ್ನ ಉತ್ತರ.
ಹೌದು, ಇಲ್ಲಿ ನಮ್ಮ ದೇಶದಲ್ಲಿ, ಆದರೆ ಕೆಳಜಾತಿಯಲ್ಲೇ ಎರಡು ಸಮಾನ ಪಂಗಡಗಳು ಬೈದುಕೊಂಡಾಗ ಅಥವಾ ಕೆಳಜಾತಿಯವ ಮೇಲ್ಜಾತಿಯವನನ್ನು ಬೈದಾಗ ಕೇಸ್ ಹಾಕಲು ಸಾಧ್ಯವಿಲ್ಲ.
ಆದ್ರೆ, ಇಂಗ್ಲೆಂಡಿನಲ್ಲಿ, ಅನ್ಯ ದೆಶಿಕರನ್ನು ಸ್ಲಾಂಗಿನಲ್ಲಿ (Slang) ಕರೆಯುವುದು ಕೂಡಾ ಕಾನೂನು ರೀತ್ಯಾ ತಪ್ಪು.
ಭಾರತೀಯರನ್ನು ಕೆಲವರು Curry Munchers ಅಂತಾ ಕರೆಯುವುದು, ಚೀನಿ, ಜಪಾನಿ, ಕೊರಿಯಾ (ಇದೆ ರೀತಿ ಜನರನ್ನು) ಚಿಂಗಿ ಎಂದು ಕರೆಯುವುದು, ಪಾಕಿಸ್ತಾನಿಯರನ್ನು ಪಾಕಿ ಎಂದು ಕರೆಯುವುದು ಕೂಡಾ ಕಾನೂನು ರೀತ್ಯಾ ತಪ್ಪು. ನಿನಗೆ ನೆನಪಿದ್ದರೆ, ಬ್ರಿಟನ್ ರಾಜ ಮನೆತನದ, ಪ್ರಿನ್ಸ್ ಚಾರ್ಲ್ಸ್ ಹಾಗು ಡಯಾನ ರ ಕೊನೆಯ ಮಗ ಪ್ರಿನ್ಸ್ ಹ್ಯಾರಿ ತನ್ನ ಮಿಲಿಟರಿ ಮಿತ್ರರನ್ನು ವಿಡಿಯೋ ತೆಗೆಯುವಾಗ ಅಲ್ಲಿ ಪಾಕಿಸ್ತಾನಿ ಮೂಲದವನೊಬ್ಬ ಕೂಡಾ ಇದ್ದ. ಅವನನ್ನು, ಹ್ಯಾರಿ "Look at my PAKI friend" ಅಂದಿದ್ದಕ್ಕೆ, ಜನಾಂಗೀಯ ನಿಂದನೆ ಕೇಸ್ ಹಾಕಲಾಗಿ, ಹ್ಯಾರಿ ಆತನಲ್ಲಿ ಕ್ಷಮೆಯಾಚಿಸಿದ ಮೇಲೆ ಕೇಸನ್ನು ಕೈಬಿಡಲಾಯಿತು. ಅಲ್ಲಿ ಕಾನೂನು ಎಲ್ಲರಿಗೂ ಒಂದೇ ಕಣಪ್ಪಾ. ಒಬ್ಬ ಭಾರತೀಯ, ಪಕಿಸ್ತಾನಿಯನ್ನು "ಪಾಕಿ" ಎಂದು ಕರೆದಲ್ಲಿ, ಆತನ ಮೇಲೂ ಕೇಸ್ ಹಾಕಬಹುದು..
ಇನ್ನು ನನ್ನ PAN ಕಾರ್ಡ್ ವಿಚಾರ, ನ್ಯಾಯವಾಗಿ ಇನ್ನು ತಪ್ಪಾದಲ್ಲಿ, ನಾನು ತಪ್ಪು ಮಾಡಿರುವೆ. ನಾನು ಮುಂಚೆಯೇ ಹೇಳಿದ ಹಾಗೆ ಅದು Spontaneous ಆಗಿತ್ತು. ಯೋಚಿಸಿ ಮಾಡಿದ್ದಲ್ಲ. ಕ್ಷಮೆ ಇರಲಿ.

ಕಟ್ಟೆ ಶಂಕ್ರ

Abhi said...

@Shankra and Vikas: One last point from my side too....May be we all can differentiate that Caste A is an upper caste and Cast B is a lower one... and we all know that this is only due to the 'chauvinism' or 'prejudices' of our ancestors... If we all look at ourselves... we say that there should not be any dignity of labour and all.. but we are the only country to have a million castes based on the work we do which doesnt make any sense...

And when we talk about racism its really a difficult task to divide the people from an origin. Saying that country A is more of an 'upper class' than country B is bit of an tough job to do isnt it? and obviously Im not considering the economics here :)... but Racism humours about the culture of your origin... it affects the sentiments of a very large group irrespective of all the economical and political issues taged to those people's respective countries. Hence, there is a strict law against racism. In the west as there are a lot of immigrants setteled and they are termed as minority as they are smaller in number when compared to the 'natives' and so they are justifiably protected by imposing strict rules.

Anyway.. I strongly reckon that things will surely start to changein the right direction in India too and I hope it starts as soon as this election.. :)

Anonymous said...

YENO IDELLA KELTA IDDRE,ANATH NAG
COW INSPECTOR FILM NENAPU AAGTA IDE.NAMMA SHANKARA PRASAD INCOME TAX OFFICER AADRU (INDIA DALLI AGAKAGALILLA, UK PUB NALLI AADRU.NANJUMALIGE CIRCLE NALLI HINGE JANA KUDIDA MELE YENENO AAGTARE!!!)

...........RAYZ

Pramod said...

lol. Nice story

ರವಿಕಾಂತ ಗೋರೆ said...

ಚೆನ್ನಾಗಿತ್ತು ... ಸಂದರ್ಭಕ್ಕೆ ಸರಿಯಾಗಿ ಬುದ್ಧಿ ಉಪಯೋಗಿಸಿ ಬಚಾವಾದ್ರಿ... ನನ್ ಪ್ರಕಾರ ಹೇಳೋದಾದ್ರೆ ನೀವು ಮಾಡಿದ್ದು ಸರಿ... ಗೊತ್ತಿಲ್ಲದ ಊರು...ಗೊತ್ತಿಲ್ಲದ ಜನ... ಹೊಡೆತ ಬಡಿತ ಕ್ಕಿಂತ ಈ ರೀತಿ ಉಪಾಯದಿಂದ ಬಚಾವಾಗೊದೆ ಲೇಸು... ತೆನಾಲಿರಾಮ, ಬೀರಬಲ್ ಥರ... :-)

Mohan said...

It is OK Shanker, some time it happens, dont take serious some one start to argue , we not perfect we commit mistake one or other time, i don't think u did any wrong thing cheers

ಧರಿತ್ರಿ said...

ಒಂದು ಪಾನ್ ಕಾರ್ಡು ಇಷ್ಟು ದೊಡ್ಡ ಚರ್ಚೆಗೆ ನಾಂದಿಯಾಯ್ತಲ್ಲಾ ಶಂಕ್ರಣ್ಣ,...ನಿಮ್ ಪಾನ್ ಕಾರ್ಡುಗೂ ಪ್ರಚಾರ ಸಿಕ್ತು. ಗುಡ್.
-ಧರಿತ್ರಿ

sunaath said...

ಶಂಕರ,
ಧರ್ಮರಾಜನೂ ಸಹ ದ್ರೋಣಾಚಾರ್ಯರನ್ನು ಸೋಲಿಸುವ ಸಲುವಾಗಿ ಸುಳ್ಳು ಹೇಳಿದ್ದ. ಪರದೇಶದಲ್ಲಿ ಒಬ್ಬ ನೀಚ ಮನುಷ್ಯನು(?)ನಿಮ್ಮನ್ನು harass ಮಾಡುತ್ತಿರುವಾಗ, self defence ಉದ್ದೇಶದಿಂದ ಧರ್ಮರಾಜನಂತೆ ನಡೆದುಕೊಂಡಿದ್ದೀರಿ. I support you!

Anonymous said...

shankar sir,

horadeshada kasta horaginavarige gotu... neevu madiddarallenu tappila... namagu ee reetiya anubhavagalu agive aa samayadinda paragalu enadaru madabekagutte

olleya anubhava..

vandanegalu
NRI

Dr. B.R. Satynarayana said...

ಹಳೇ ಜಗಳ ಹೊಸ ಮಜಾ ಅನ್ನುವಂತಿದೆ ನಿಮ್ಮ ಲೇಖನ. ಜಗಳದ ಸಮಯದಲ್ಲಿ ಟೆನ್ಸ್ ಆದರೂ ನಂತರದ ದಿನಗಳಲ್ಲಿ ಅದರ ನೆನಪು ಖುಷಿ ಕೊಡುತ್ತಿರುತ್ತದೆ, ಅಲ್ವಾ? ನಾನಂತೂ ಓದಿ ಖುಷಿಪಟ್ಟೆ.

Juttu said...

Saku guru bogale bidodu,,,