Sunday, April 5, 2009

ಟಾಯ್ಲೆಟ್ಟಲ್ಲಿ ಗಾಲ್ಫ್ !!

ನಿನ್ನೆ ಶನಿವಾರ (4 ಏಪ್ರಿಲ್) ನಾನು ಹಾಗು ನನ್ನ ಸಹೋದ್ಯೋಗಿಗಳು ಬರ್ಲಿನ್ ನಗರ ಪ್ರವಾಸಕ್ಕೆ ಹೋಗಿದ್ವಿ. ನಾವಿರುವ ಹ್ಯಾಂಬರ್ಗಿನಿಂದ ಸುಮಾರೊ 300 ಕಿ.ಮೀ ದೂರದಲ್ಲಿ ಇದೆ ಬರ್ಲಿನ್. ಜರ್ಮನಿಯ ರಾಜಧಾನಿ, ಒಳ್ಳೊಳ್ಳೇ ಬಿಲ್ಡಿಂಗುಗಳು, ಸುಮಾರು ದೇಶಗಳ ರಾಯಭಾರಿ ಕಛೇರಿಗಳು, ಸಂಸತ್ ಭವನ, ಮೃಗಾಲಯ ಇತ್ಯಾದಿ ಇತ್ಯಾದಿ, ನೋಡಲು ಬಹಳಷ್ಟು ಇದೆ.
ಪ್ರವಾಸದ ಫೋಟೋಗಳನ್ನು ಆರ್ಕುಟ್ಟಲ್ಲಿ (orkut) ಹಾಕ್ತೀನಿ, ಆದ್ರೆ ಇಂಟೆರೆಸ್ಟಿಂಗ್ ಸಂಗತಿಗಳನ್ನು ಮಾತ್ರ ಫೋಟೋ ಸಮೇತ ಬ್ಲಾಗಿನಲ್ಲಿ ಹಾಕೋದು.

ಬರ್ಲಿನ್ ನಗರ ಪ್ರವಾಸದ ಟಿಕೆಟ್ ತಗೊಂಡು ಸುಮಾರು 10:30 ಗೆ ಮೊದಲ ಸ್ಟಾಪಿನಲ್ಲಿ ಇಳಿದೆವು. ಸ್ವಲ್ಪ ಅಕ್ಕ ಪಕ್ಕ ನೋಡಿ, ಚುರುಗುಡುತ್ತಿದ್ದ ಹೊಟ್ಟೆಗೆ ಸ್ವಲ್ಪ ಹಾಕಿಕೊಂಡು, ಫೋಟೋ ತೆಕ್ಕೊಂಡು ಇದ್ದಾಗ ಮತ್ತೆ ಕಾಡಿದ್ದು "ಜಲಬಾಧೆ".
ಪುಣ್ಯಕ್ಕೆ ಪಕ್ಕದಲ್ಲೇ WC (Water Closet, ಟಾಯ್ಲೆಟ್ಟಿಗೆ ಇನ್ನೊಂದು ಹೆಸರು) ಬೋರ್ಡು ಕಂಡಿತು. ಉಪಯೋಗಿಸಬೇಕಾದರೆ €0.50 (50 Euro Cents) ಕೊಡಬೇಕು. ಇಲ್ಲಿ ಕೂಡಾ ಟಾಯ್ಲೆಟ್ಟಿನ ಯಾವುದದ್ರೂ ಒಂದು ಫೋಟೋ ಸಿಗಬಹುದೇ ಎಂದು ಆಶಾಭಾವನೆಯಿಂದ ಹೋದೆ, ನನಗೆ ನಿರಾಸೆ ಆಗಲಿಲ್ಲ. ಬಹಳ ಖುಷಿಯಿಂದ ಜಲಬಾಧೆ ತೀರಿಸಿ ಫೋಟೋ ತೆಕ್ಕೊಂಡೆ.

ಇದಕ್ಕೆ ಮುಂಚೆ ಟಾಯ್ಲೆಟ್ಟಲ್ಲಿ ನೊಣ, ಹುಳುವಿನ ಚಿತ್ರ ಹಾಕಿರುವ ಬಗ್ಗೆ ಹೇಳಿದ್ದೆ ಹಾಗು ಅದರ ಫೋಟೋ ಹಾಕಿದ್ದೆ. ಇದೇ ರೀತಿ ಬರ್ಲಿನ್ನಿನ ಈ ಟಾಯ್ಲೆಟ್ಟಲ್ಲಿ ಗಾಲ್ಫ್ ಆಟದ ರಂಧ್ರ ಹಾಗು ಅದರಲ್ಲಿ ನಿಲ್ಲಿಸಿರುವ ಬಾವುಟದ ಚಿತ್ರ ಪ್ರಿಂಟ್ ಮಾಡಿದಾರೆ. ಇದೂ ಅದೇ, ಸರಿಯಾಗಿ ಈ ಜಾಗಕ್ಕೆ ಗುರಿ ಇಟ್ಟರೆ ಹೊರಗೆ ಹಾರೋದಿಲ್ಲ / ಸಿಡಿಯೋದಿಲ್ಲ. ನೀವೇ ನೋಡಿ.
ಈ ಸಲದ ಟಾಯ್ಲೆಟ್ ಫೋಟೋ ನಂಗೆ ಸ್ವಲ್ಪ ಸ್ಪೆಷಲ್. ಪ್ರತಿ ಬಾರಿ ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಟಾಯ್ಲೆಟ್ಟಿನ ಫೋಟೋ ಹಿಡೀತಿದ್ದೆ ಹಾಗು ಬೆಳಕು ಸರಿ ಇರದ ಕಾರಣ ಅಷ್ಟೊಂದು ಕ್ಲಾರಿಟಿ ಇರ್ತಾ ಇರಲಿಲ್ಲ. ಈ ಸಲ ನನ್ನ CANON EOS 1000D, ಡಿಜಿಟಲ್ SLR ಕ್ಯಾಮೆರಾದಲ್ಲಿ ತೆಗೆದಿರುವೆ. ಸ್ಪೆಷಲ್ ಅಲ್ವಾ?
----------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

14 comments:

Harsha said...

enappa.. toilet bagge.. Ph.D madtaa iro hagide ... heheh

ಹೇಮಂತ Hemanth said...

ಗುರಿ ಹೇಗಿತ್ತು ತಮ್ಮದು? :)

ಶಂಕರ ಪ್ರಸಾದ said...

@ ಹರ್ಷ, ಪಿ.ಹೆಚ್.ಡಿ ಬಗ್ಗೆ ಸಧ್ಯಕ್ಕೆ ಯೋಚನೆ ಮಾಡಿಲ್ಲಾ
@ ಹೇಮಂತ, ಬಹಳ ದಿನವಾದ ಮೇಲೆ ಹೊಸಾ ಟಾಯ್ಲೆಟ್ಟಿನ ಫೋಟೋ ಸಿಗ್ತಲ್ಲ ಅನ್ನೋ ಖುಷಿಯಲ್ಲಿ ಗುರಿ ಬಗ್ಗೆ ಗಮನ ಕೊಡಲಿಲ್ಲ ನಾನು..???!!?!?!?!

ಕಟ್ಟೆ ಶಂಕ್ರ

shivu said...

ಶಂಕರ್ ಸರ್,

ಮತ್ತೆ ಗುರಿ ಇಡುವ ಕಡೆ ನಿಮ್ಮ ಅಲೋಚನೆ...good...ಜೊತೆಗೆ ಈ ಕೆಳಗಿನ ಪದ "ಇದೂ ಅದೇ, ಸರಿಯಾಗಿ ಈ ಜಾಗಕ್ಕೆ ಗುರಿ ಇಟ್ಟರೆ ಹೊರಗೆ ಹಾರೋದಿಲ್ಲ .. ಸಿಡಿಯೋದಿಲ್ಲ." ತುಂಬಾ ಮುಖ್ಯ ಅದು ನಿಮ್ಮ ಥೀಸೀಸ್‌ನಲ್ಲಿ ದೊಡ್ಡ ಪಾತ್ರವಹಿಸುತ್ತೆ....ಆಗೂ ಫೋಟೋಗಳಿಗೂ ಪೇಟೇಂಟ್ ಮಾಡಿಸಿ..
CANON EOS 1000D, ಡಿಜಿಟಲ್ SLR ಕ್ಯಾಮೆರಾ ತುಂಬಾ ಚೆನ್ನಾಗಿದೆ...ಚಿತ್ರದ ಕ್ವಾಲಿಟಿ ಚೆನ್ನಾಗಿರುತ್ತೆ. ಸಾಧ್ಯವಾದರೆ ಅದಕ್ಕೊಂದು ಚೆಂದದ ಉತ್ತಮ ಲೆನ್ಸ್ ಕೊಂಡುಕೊಳ್ಳಿ ಉತ್ತಮ ಛಾಯಾಗ್ರಾಹಕನಾಗಲು...ಅಭಿನಂದನೆಗಳು..

ಸಾಗರದಾಚೆಯ ಇಂಚರ said...

ಹಲೋ,
ನಿಮ್ಮ ಸಂಶೋಧನೆಗೆ ಜಯವಾಗಲಿ

Prabhuraj Moogi said...

ಟಾಯ್ಲೆಟ್ಟಿನ ಬಗ್ಗೆಯೇ ಒಂದು ಬ್ಲಾಗು ಶುರು ಮಾಡುವಷ್ಟು ಸರಕಿದೆ ನಿಮ್ಮ ಹತ್ರ.

ಶಂಕರ ಪ್ರಸಾದ said...
This comment has been removed by the author.
ಶಂಕರ ಪ್ರಸಾದ said...

@ ಶಿವು ಸಾರ್, ನನ್ನ ಹತ್ರ ಸಧ್ಯಕ್ಕೆ ಇರೋದು Basic 18-55mm lens. ಇದ್ರಲ್ಲೇ ಆಡಬಾರದ ಆಟ ಆಡ್ತಾ ಇದೀನಿ. ದೂರದ ಹಾಗು macro ಗೆ ಒಳ್ಳೇ lens suggest ಮಾಡಿ.
@ ಹೆಗ್ಡೆ ಸಾರ್, ಧನ್ಯವಾದಗಳು. ನಿಮ್ಮ ಅಭಿಮಾನವೇ ನಮಗೆ ಅಕ್ಕಿ ಬೇಳೆ :)
@ ಪ್ರಭು, ನಾನು ಪಿ.ಹೆಚ್.ಡಿ ಮಾಡಲಕ್ಕಾಗಿಯೋ ಅಥವಾ ಟಾಯ್ಲೆಟ್ಟೀನ ಬಗ್ಗೆ ಬ್ಲಾಗು ಶುರು ಮಾಡೋದಕ್ಕೋ ಇದನ್ನು ಹಾಕ್ತಾ ಇಲ್ಲ. ಸಿಂಪಲ್ಲಾಗಿ ಕಂಡ್ರೂ ಕೊಡಾ ಇದರ ಹಿಂದೆ ಎಷ್ಟು ತಲೆ ಅಡಗಿದೆ ಅನ್ನೋದನ್ನ ತೋರಿಸೋದಕ್ಕೆ ಹಾಕ್ತಾ ಇದೀನಿ. ನಮ್ಮ ಕನ್ನಡ ಬ್ಲಾಗರುಗಳ ಬಳಗದಲ್ಲಿ ನಾನು ಇದಕ್ಕೇ ಫೇಮಸ್ ಅನ್ಸುತ್ತೆ...ಅಲ್ವೇ ?

ಕಟ್ಟೆ ಶಂಕ್ರ

Dr. B.R. Satynarayana said...

ನಮ್ಮ ಭಾರತೀಯ ಹಿರಿಯರು ಮನುಷ್ಯನಿಗೆ ಗುರಿ ಿರಬೇಕು ಎಂದು ಆಗಾಗ ಭಾಷಣ ಬಿಗಿಯುತ್ತಲೇ ಇರುತ್ತಾರೆ. ಅದನ್ನು ಜರ್ಮನ್ನರು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ನಿಮ್ಮ ಬ್ಲಾಗಿನಲ್ಲಿರುವ ಟಾಯ್ಲೆಟ್ಟುಗಳ ಫೋಟೋ ನೋಡಿದ ಮೇಲೆ ನಿಜವಾಗಿದೆ!

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ....
ಸಕತ್ ಆಗಿ ಇದೆ ರೀ ಇದು...

ಧರಿತ್ರಿ said...

ಹಲೋ ಶಂಕ್ರಣ್ಣ...ಸಕತ್ತಾಗಿದೆ ಟಾಯ್ಟೆಟ್ ಸ್ಟೋರಿ..(:)ನೀವು ಮರಳಿ ಭಾರತಕ್ಕೆ ಬಂದಾಗ ಹೇಳಿ..ಟಾಯ್ಟೆಟ್ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸೋಣ.
-ಧರಿತ್ರಿ

sunaath said...

ಮೂತ್ರಕುಂಡಗಳ ಸೌಂದರ್ಯ ಹಾಗೂ ಸೌಕರ್ಯಗಳ ಬಗೆಗೆ ಎಷ್ಟೆಲ್ಲಾ ಸಂಶೋಧನೆಗಳು ಆಗ್ತಾ ಇವೆ ಎನ್ನೋದನ್ನ ನೋಡ್ತಾ ಇದ್ದಂಗೆ ಮೂತ್ರಪಿಂಡಗಳು ಕಾರ್ಯೋತ್ಸುಕತೆಯಿಂದ ಚಡಪಡಿಸಹತ್ತಿವೆ.

Raghavendra said...

http://chaitrapatha.blogspot.com/2009/04/blog-post.html

ಮಲ್ಲಿಕಾರ್ಜುನ.ಡಿ.ಜಿ. said...

ಡಿಜಿಟಲ್ SLR ಪುನೀತವಾಯ್ತು!!!