Friday, April 17, 2009

ದಿನಾಂಕವೇ ಚೇಂಜ್ ಆಗಿದೆ !!

ಇದು ಇವತ್ತಿನ ಸಂಜೆವಾಣಿಯ ಆನ್-ಲೈನ್ ಆವೃತಿಯಲ್ಲಿ ಕಂಡುಬಂದಿದ್ದು.
ಇನ್ಯಾವ ಮಟ್ಟಿಗೆ ಈ ಪತ್ರಿಕೆಯವರು ಕೆಲಸ ಮಾಡ್ತಾರೋ ಏನೋ. ವೆಬ್-ಸೈಟಿನಲ್ಲಿ ತೋರುಸ್ತಾ ಇರೋದು -
April 18, 2009, ಪತ್ರಿಕೆಯ PDF ಅವತರಣೆಯಲ್ಲಿ ಕಾಣುಸ್ತಾ ಇರೋದು ಶುಕ್ರವಾರ 17-4-2009 ಅಂತಾ.
ಇಷ್ಟು ಬೇಜವಾಬ್ದಾರಿತನ, ನಿರ್ಲಕ್ಷ್ಯ ಇರಬಾರದು ಅಲ್ವೇ ? ಇದರ ಜೊತೆಗೆ ದೊಡ್ಡದಾಗಿ ಹೇಳಿಕೊಳ್ಳೋದು


"The First Indian Newspaper to Podcast" ಅಂತ. ಯಾವ ಗ್ರಹಚಾರವಪ್ಪಾ ಇದು ?
ಇನ್ಮೇಲೆ ಪತ್ರಿಕೋದ್ಯಮ ಹೇಗಿರಬಾರದು ಅಂತ ತೋರಿಸೋಕ್ಕೆ "ಸಂಜೆವಾಣಿ" ಯನ್ನು ಮಾದರಿಯಾಗಿ ಇಟ್ಕೊಬೇಕು.
ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಈ ವಿಚಾರವಾಗಿ ಲೆಟರ್ ಬರೀತೀನಿ.
ಪತ್ರಿಕೋದ್ಯಮ ಪದವಿ ಹಾಗು ಸ್ನಾತಕೊತ್ತರದ ಪಠ್ಯದಲ್ಲಿ ಇದನ್ನು ಅಳವಡಿಸಿ ಅಂತ. ಹೆಂಗೆ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

14 comments:

abhijith said...

Naale en aagathe antha ivathe helo adbhutha paper idu... betting nalli involve aagirourganthu ee paper ondu varadanane ansathe :) ...

ಧರಿತ್ರಿ said...

ಶಂಕ್ರಣ್ಣ...
ಮಜಾ ಇದೆ ಶಂಕ್ರಣ್ಣ...ಮುಂದಿನ ವರುಷ ನಿಮಗೆ 'ಬೆಸ್ಟ್ ಪ್ರೂಫ್ ರೀಡರ್' ಅಂಥ ಪ್ರಶಸ್ತಿ ಕೊಡಬಹುದು!! ಕೇವಲ ಟಾಯ್ಲೆಟ್ ನಲ್ಲಿ ಮಾತ್ರವಲ್ಲ ಪ್ರೂಫ್ ರೀಡಿಂಗ್ ನಲ್ಲೂ ನಿಮ್ದು ಎತ್ತಿದ ಕೈ ಮಾರಾಯ.
-ಧರಿತ್ರಿ

ಶಿವಪ್ರಕಾಶ್ said...

ಸಂಜೆವಾಣಿ ಓದಿದ ನಂತರ ನಮ್ಮಲ್ಲಿ ಮೂಡುವ ಪ್ರಶ್ನೆ,
ಹೀಗೂ ಉಂಟೆ ?.................. :D

ವಿಕಾಸ್ ಹೆಗಡೆ said...

ಚಚ್ಕೋಬೇಕು ಗುರು .

ತಾರೀಖು ನೆಟ್ಟಗೆ ನೋಡಕ್ಕೆ ಆಗ್ದೇ ಇದ್ದೋರು ಅದೇನ್ ಜವಾಬ್ದಾರಿ ಇಟ್ಕೊಳಕ್ಕೆ ಸಾಧ್ಯ ಅನ್ನಿಸ್ತಾ ಇದೆ! :(

ಪತ್ರಿಕೋದ್ಯಮದಲ್ಲಿ ಎಲ್ಲಾ ಅಳವಡಿಸಿರ್ತಾರೆ ಸಾರ್, ಆದ್ರೆ ಅದನ್ನು ಪತ್ರಿಕೋದ್ಯಮಿಗಳು, ಪತ್ರಕರ್ತರು ಅಳವಡಿಸಿಕೊಳ್ಳಲ್ಲ. ಮೇಲಾಗಿ ಪತ್ರಿಕೆ ಮಾಡುವಲ್ಲಿ ಪತ್ರಿಕೋದ್ಯಮ ಓದಿರುವವರು ಮಾತ್ರ ಇರಲ್ಲ. :)

Lakshmi S said...

karmakaandada paramaavadhi idu shankranna...paper navre ee thara mistake maadidre gati enu ?

gemjaya said...

ಇಂತಹ ಅಲಕ್ಷ್ಯ ತೋರುವಲ್ಲಿ ರಾಜ್ಯದ ಮಹಾನ್ ಪತ್ರಿಕೆಗಳೂ ಕಮ್ಮಿಯಿಲ್ಲ. ತಾ.೧೪.೪.೦೯ ರ ವಿಜಯಕರ್ನಾಟಕ ನೋಡಿ. '......ವಾಟಾಳ್ ನಾಗರಾಜ್ ಸೈಕಲ್ ರಿಕ್ಷಾದಲ್ಲಿ ಸಂಚರಿಸಿ.....'ಎಂಬ ಶೀರ್ಷಿಕೆಯ ಮೇಲೆ ಇರುವ ಫೋಟೋದಲ್ಲಿ ವಾಟಾಳ್ ನಾಗರಾಜ್ ಕುದುರೆಯನ್ನು ಕಟ್ಟಿದ ಜಟಕಾದಲ್ಲಿ ಕುಳಿತಿರುವುದು ಸ್ಪಷ್ಟವಾಗಿ ಕಾಣುತ್ತದೆ! ಪತ್ರಿಕೋದ್ಯಮದಲ್ಲೂ 'ಚಲ್ತಾ ಹೈ'ಮೆಂಟಾಲಿಟಿ!

ಸಾಗರದಾಚೆಯ ಇಂಚರ said...

ಶಂಕರ್ ಸರ್,\
ವಂಡರ್ಫುಲ್ , ತುಂಬಾ ಸೊಗಸಾಗಿ ಪ್ರೂಫ್ ರೀಡ್ ಮಾಡ್ತೀರಾ,

ಶಿವಶಂಕರ ವಿಷ್ಣು ಯಳವತ್ತಿ said...

ಇನ್ನು ತಡ ಯಾಕೆ...??

ಸಂಜೆವಾಣಿ ಕುರಿತು ಹೊಸ ಬ್ಲಾಗನ್ನು ಶುರು ಮಾಡಿಬಿಡಿ...

ಕನ್ನಡಕ್ಕೆ ಅನ್ಯಾಯ ಮಾಡೋ ಪೇಪರ್ ಬಗ್ಗೆ ಕನ್ನಡದಲ್ಲಿ ಬರೀರಿ..
(ಮುಂಡೇವಕ್ಕೆ ಸರಿಯಾಗಿ ಪ್ರಿಂಟ್ ಮಾಡೋಕ್ಕಂತೂ ಬರಲ್ಲಾ.. ಓದಕ್ಕೆ ಬಂದ್ರೂ ಬರಬಹುದು..)

ಇಂತಿ ನಿಮ್ಮ ಪ್ರೀತಿಯ,

http://shivagadag.blogspot.com

Guru's world said...

Good Catch ....

ಮಲ್ಲಿಕಾರ್ಜುನ.ಡಿ.ಜಿ. said...

xray ಕಣ್ಣುಗಳು ಮಾರಾಯ್ರೆ ನಿಮ್ಮದು! ಈ ರೀತಿ ಸೂಕ್ಷ್ಮವಾಗಿ ನೋಡಿಯೇ ತಪ್ಪುಗಳನ್ನು ತಿದ್ದಬೇಕು.ಚೆನ್ನಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ಶಂಕ್ರಣ್ಣ...

ನಿಮ್ಮ ಕಣ್ಣು ತುಂಬಾ ಶಾರ್ಪ್ ಇದೆ....

ಶಂಕರ ಪ್ರಸಾದ said...

@ ಅಭಿಜಿತ್, ಈ ಥರ ಆದ್ರೆ ಮುಗೀತು ಕಥೆ. ಬೆಟ್ಟಿಂಗ್ ಆಡೋರಿಗೆ ನಾಳೆಯ ಪೇಪರ್ ಸಿಕ್ರೆ ಹೆಂಗೆ ಅನ್ನೋದು ಒಂದು ಸೀರಿಯಲ್ ನಲ್ಲಿ ನೋಡಿದ್ದೆ. ಅದು ಕಾಮೆಡಿ ಸೀರಿಯಲ್ ಹಾಗು ಇಂಗ್ಲಿಷ್, "I Dream of Genie" :-)

@ ಧರಿತ್ರಿ,
ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದಕ್ಕೆ ಥ್ಯಾಂಕ್ಸ್, ನಿಮ್ಮೆಲರ ಜೊತೆ ಹಂಚಿಕೊಳ್ತೀನಿ ಅದನ್ನ.

@ ಸಿವಪ್ರಕಾಸಣ್ಣ,
ಹೀಗೇ ಇರೋದು :)

@ ವಿಕಾಸ,
ನೀನು ಹೇಳಿದ್ದು ಅರ್ಥ ಆಯ್ತು ಮಾರಾಯಾ.. ನಾನು ಪತ್ರಿಕೋದ್ಯಮದ ಬಗ್ಗೆ ಮಾತಾಡ್ತಾ ಇಲ್ಲ. ಅದ್ರೆ ಈ ಪತ್ರಿಕೆಯವರು ಮಾಡುವ ತಪ್ಪುಗಳನ್ನು, ಮಾದರಿಯಾಗಿ ತೋರಿಸಬೇಕು ಅಂತ ಹೇಳಿದ್ದು. ನಾನು ಈ ತಪ್ಪು ತೋರಿಸಿರುವುದು ಸಂಜೆವಾಣಿಯ ONLINE EDITION ದು. ಅಂದಮೇಲೆ ಇದ್ರಲ್ಲಿ ಕೆಲ್ಸ ಮಾಡೋರು ಓದು ಬರಹ ಬರುವವರು. ಇಂಥವರೇ....

@ ಲಕ್ಶ್ಮಕ್ಕ,
ನಾನು ಸಂಜೆವಾಣಿ ಬಗ್ಗೆ ಹಾಕಿದಾಗಲೆಲ್ಲಾ ನಿನ್ನ Expression ಒಂದೇನೇ.. "ಕರ್ಮಕಾಂಡ ಶಂಕ್ರಣ್ಣ".

@ ಜೆಮ್-ಜಯ ಸಾರ್,
ಯಾಕೆ ನಮ್ಮ ಕರ್ನಾಟಕದಲ್ಲೇ ಈ ಥರ ಅಂತೀನಿ. ಚಲ್ತಾ ಹೈ, ಅಡ್ಜಸ್ಟ್ ಮಾಡ್ಕೊಳಿ ಅನ್ನೋದು ಜಾಸ್ತಿ ? ಆದ್ರೆ ನೈತಿಕವಾದ ಒಂದು ಜವಾಬ್ದಾರಿ ತಗೋಬೇಕು ಅಲ್ವೇ ಮಾಧ್ಯಮದವರು. ಎಲ್ರೂ TRP ಹಾಗು ಕಾಸಿನ ಹಿಂದೆ ಹಪಾಹಪಿತನ ಬೆಳೆಸ್ಕೊಂಡಿದಾರೆ.

@ ಸಾಗರದಾಚೆಯ ಹೆಗ್ಡೆ ಸಾರ್,
ಧನ್ಯವಾದಗಳು. ಕೆಲ್ಸ ಮಾಡಲು ಶುರು ಮಾಡಿದ ಟೈಮು, ಕೆಲವು ತಿಂಗಳು ಡಿಜೈನ್ ಡಿಪಾರ್ಟ್ಮೆಂಟಿನ ಜೊತೆಗೆ ಕ್ವಾಲಿಟಿಯಲ್ಲೂ ಕೆಲ್ಸ ಮಾಡಿದೀನಿ.. ಅದಕ್ಕೆ ಬಡ್ಡಿಮಗಂದು ತಪ್ಪು ಕಣ್ಣಿಗೆ ಚೆನ್ನಾಗಿ ಕಾಣ್ಸುತ್ತೆ :)

@ ಯಳವತ್ತಿ ಸಾರ್,
ಪತ್ರಿಕೋದ್ಯಮದ ಅಭಾಸಗಳನ್ನು ತೋರಿಸೋದಕ್ಕೆ "ಪತ್ರಿಕಾಭಾಸ" ಅಂತಾ ಬ್ಲಾಗ್ ಶುರು ಮಾಡಿದೆ. ಅದರೆ ಸರಿ ಹೋಗಲ್ಲಿಲ್ಲ. ಬೆಸ್ಟ್ ಅಂದ್ರೆ ನಮ್ಮ ಸೋಮಾರಿ ಕಟ್ಟೆಯಲ್ಲೇ ಇದೆಲ್ಲ ಇದ್ರೆ ಸರಿ ಅನ್ನುಸ್ತು. ನೀವೇನಂತೀರ ?

@ ಗುರುಗಳೇ,
ಧನ್ಯವಾದಗಳು

@ ಮಲ್ಲಿ ಅಣ್ಣ,
ಥ್ಯಾಂಕ್ಸ್. ತಪ್ಪು ಕಂಡು ಹಿಡಿದ್ರೆ ಏನ್ ಸುಖ ? ಅದನ್ನ ತಿದ್ದಿ ಸರಿ ಮಾಡಿಸುವ ಕೆಲ್ಸ ಮಾಡದೆ ಇದ್ರೆ ಏನೂ ಉಪಯೋಗ ಇಲ್ಲ. ಎಷ್ಟೇ ತಪ್ಪುಗಳನ್ನು ಕಂಡು ಹಿಡಿದು ಹಾಕಿದ್ರೂ ಈ ಜನ ತಿದ್ದಿಕೊಳ್ಳಲ್ಲ :(

@ ಸಿಮೆಂಟ್ ಪ್ರಕಾಸಪ್ಪ (ಬೇಕೂ ಅಂತಾನೇ ಪ್ರಕಾಸಪ್ಪ ಅಂದಿರೋದು),
ಶಾರ್ಪು...ಥ್ಯಾಂಕ್ಸು..

ಕಟ್ಟೆ ಶಂಕ್ರ

Mohan said...

yes sanjevani not only change the date they change faith of journalism haha

ಶಿವಶಂಕರ ವಿಷ್ಣು ಯಳವತ್ತಿ said...

ಪತ್ರಿಕಾಭಾಸಕ್ಕೆ ಬೇರೇ ಮಾಡಿದ್ರೆ ಚನ್ನಾಗಿರ್ತಿತ್ತು ಅನ್ಸುತ್ತೆ..

ಅವರು ಏನೇನು ತಪ್ಪುಗಳನ್ನು ಮಾಡ್ತಾರೆ ಅಂತಾ ತಿಳಿಸೋದಕ್ಕೆ ಒಂದು ಹೊಸ ಬ್ಲಾಗ್ ಇರಲಿ ಬಿಡಿ..

ಮುಂದೊಂದು ನಾಳೆ "ಪತ್ರಿಕಾಭಾಸ ಬ್ಲಾಗ್" ಪತ್ರಿಕೋದ್ಯಮದ ಕೋರ್ಸಿನಲ್ಲಿ ಪತ್ರಿಕೆಗಳಲ್ಲಿ ಬರುವ ತಪ್ಪುಗಳ ಬಗ್ಗೆ ಆಭಾಸಗಳ ಬಗ್ಗೆ ಪತ್ರಿಕಾ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಉದಾಹರಣೆ ಆದರೂ ಆಗಬಹುದು...

ಯಾರಿಗೆ ಗೊತ್ತು ಇದರ ಬಗ್ಗೇನೇ ಒಂದು ಅಧ್ಯಾಯವನ್ನು ಸೇರಿಸಿದರೆ ಆಶ್ಚರ್ಯವೇನೂ ಆಗದು,,

ಶುರು ಮಾಡಿದ್ರೆ ಚನ್ನಾಗಿರ್ತಿತ್ತೇನೋ....


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
www.shivagadag.blogspot.com