ಇದು ಇವತ್ತಿನ ಸಂಜೆವಾಣಿಯ ಆನ್-ಲೈನ್ ಆವೃತಿಯಲ್ಲಿ ಕಂಡುಬಂದಿದ್ದು.
ಇನ್ಯಾವ ಮಟ್ಟಿಗೆ ಈ ಪತ್ರಿಕೆಯವರು ಕೆಲಸ ಮಾಡ್ತಾರೋ ಏನೋ. ವೆಬ್-ಸೈಟಿನಲ್ಲಿ ತೋರುಸ್ತಾ ಇರೋದು -
April 18, 2009, ಪತ್ರಿಕೆಯ PDF ಅವತರಣೆಯಲ್ಲಿ ಕಾಣುಸ್ತಾ ಇರೋದು ಶುಕ್ರವಾರ 17-4-2009 ಅಂತಾ.
ಇಷ್ಟು ಬೇಜವಾಬ್ದಾರಿತನ, ನಿರ್ಲಕ್ಷ್ಯ ಇರಬಾರದು ಅಲ್ವೇ ? ಇದರ ಜೊತೆಗೆ ದೊಡ್ಡದಾಗಿ ಹೇಳಿಕೊಳ್ಳೋದು
"The First Indian Newspaper to Podcast" ಅಂತ. ಯಾವ ಗ್ರಹಚಾರವಪ್ಪಾ ಇದು ?
ಇನ್ಮೇಲೆ ಪತ್ರಿಕೋದ್ಯಮ ಹೇಗಿರಬಾರದು ಅಂತ ತೋರಿಸೋಕ್ಕೆ "ಸಂಜೆವಾಣಿ" ಯನ್ನು ಮಾದರಿಯಾಗಿ ಇಟ್ಕೊಬೇಕು.
ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಈ ವಿಚಾರವಾಗಿ ಲೆಟರ್ ಬರೀತೀನಿ.
ಪತ್ರಿಕೋದ್ಯಮ ಪದವಿ ಹಾಗು ಸ್ನಾತಕೊತ್ತರದ ಪಠ್ಯದಲ್ಲಿ ಇದನ್ನು ಅಳವಡಿಸಿ ಅಂತ. ಹೆಂಗೆ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Friday, April 17, 2009
Subscribe to:
Post Comments (Atom)
12 comments:
Naale en aagathe antha ivathe helo adbhutha paper idu... betting nalli involve aagirourganthu ee paper ondu varadanane ansathe :) ...
ಶಂಕ್ರಣ್ಣ...
ಮಜಾ ಇದೆ ಶಂಕ್ರಣ್ಣ...ಮುಂದಿನ ವರುಷ ನಿಮಗೆ 'ಬೆಸ್ಟ್ ಪ್ರೂಫ್ ರೀಡರ್' ಅಂಥ ಪ್ರಶಸ್ತಿ ಕೊಡಬಹುದು!! ಕೇವಲ ಟಾಯ್ಲೆಟ್ ನಲ್ಲಿ ಮಾತ್ರವಲ್ಲ ಪ್ರೂಫ್ ರೀಡಿಂಗ್ ನಲ್ಲೂ ನಿಮ್ದು ಎತ್ತಿದ ಕೈ ಮಾರಾಯ.
-ಧರಿತ್ರಿ
ಸಂಜೆವಾಣಿ ಓದಿದ ನಂತರ ನಮ್ಮಲ್ಲಿ ಮೂಡುವ ಪ್ರಶ್ನೆ,
ಹೀಗೂ ಉಂಟೆ ?.................. :D
ಚಚ್ಕೋಬೇಕು ಗುರು .
ತಾರೀಖು ನೆಟ್ಟಗೆ ನೋಡಕ್ಕೆ ಆಗ್ದೇ ಇದ್ದೋರು ಅದೇನ್ ಜವಾಬ್ದಾರಿ ಇಟ್ಕೊಳಕ್ಕೆ ಸಾಧ್ಯ ಅನ್ನಿಸ್ತಾ ಇದೆ! :(
ಪತ್ರಿಕೋದ್ಯಮದಲ್ಲಿ ಎಲ್ಲಾ ಅಳವಡಿಸಿರ್ತಾರೆ ಸಾರ್, ಆದ್ರೆ ಅದನ್ನು ಪತ್ರಿಕೋದ್ಯಮಿಗಳು, ಪತ್ರಕರ್ತರು ಅಳವಡಿಸಿಕೊಳ್ಳಲ್ಲ. ಮೇಲಾಗಿ ಪತ್ರಿಕೆ ಮಾಡುವಲ್ಲಿ ಪತ್ರಿಕೋದ್ಯಮ ಓದಿರುವವರು ಮಾತ್ರ ಇರಲ್ಲ. :)
karmakaandada paramaavadhi idu shankranna...paper navre ee thara mistake maadidre gati enu ?
ಇಂತಹ ಅಲಕ್ಷ್ಯ ತೋರುವಲ್ಲಿ ರಾಜ್ಯದ ಮಹಾನ್ ಪತ್ರಿಕೆಗಳೂ ಕಮ್ಮಿಯಿಲ್ಲ. ತಾ.೧೪.೪.೦೯ ರ ವಿಜಯಕರ್ನಾಟಕ ನೋಡಿ. '......ವಾಟಾಳ್ ನಾಗರಾಜ್ ಸೈಕಲ್ ರಿಕ್ಷಾದಲ್ಲಿ ಸಂಚರಿಸಿ.....'ಎಂಬ ಶೀರ್ಷಿಕೆಯ ಮೇಲೆ ಇರುವ ಫೋಟೋದಲ್ಲಿ ವಾಟಾಳ್ ನಾಗರಾಜ್ ಕುದುರೆಯನ್ನು ಕಟ್ಟಿದ ಜಟಕಾದಲ್ಲಿ ಕುಳಿತಿರುವುದು ಸ್ಪಷ್ಟವಾಗಿ ಕಾಣುತ್ತದೆ! ಪತ್ರಿಕೋದ್ಯಮದಲ್ಲೂ 'ಚಲ್ತಾ ಹೈ'ಮೆಂಟಾಲಿಟಿ!
ಶಂಕರ್ ಸರ್,\
ವಂಡರ್ಫುಲ್ , ತುಂಬಾ ಸೊಗಸಾಗಿ ಪ್ರೂಫ್ ರೀಡ್ ಮಾಡ್ತೀರಾ,
Good Catch ....
xray ಕಣ್ಣುಗಳು ಮಾರಾಯ್ರೆ ನಿಮ್ಮದು! ಈ ರೀತಿ ಸೂಕ್ಷ್ಮವಾಗಿ ನೋಡಿಯೇ ತಪ್ಪುಗಳನ್ನು ತಿದ್ದಬೇಕು.ಚೆನ್ನಾಗಿದೆ.
ಶಂಕ್ರಣ್ಣ...
ನಿಮ್ಮ ಕಣ್ಣು ತುಂಬಾ ಶಾರ್ಪ್ ಇದೆ....
@ ಅಭಿಜಿತ್, ಈ ಥರ ಆದ್ರೆ ಮುಗೀತು ಕಥೆ. ಬೆಟ್ಟಿಂಗ್ ಆಡೋರಿಗೆ ನಾಳೆಯ ಪೇಪರ್ ಸಿಕ್ರೆ ಹೆಂಗೆ ಅನ್ನೋದು ಒಂದು ಸೀರಿಯಲ್ ನಲ್ಲಿ ನೋಡಿದ್ದೆ. ಅದು ಕಾಮೆಡಿ ಸೀರಿಯಲ್ ಹಾಗು ಇಂಗ್ಲಿಷ್, "I Dream of Genie" :-)
@ ಧರಿತ್ರಿ,
ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದಕ್ಕೆ ಥ್ಯಾಂಕ್ಸ್, ನಿಮ್ಮೆಲರ ಜೊತೆ ಹಂಚಿಕೊಳ್ತೀನಿ ಅದನ್ನ.
@ ಸಿವಪ್ರಕಾಸಣ್ಣ,
ಹೀಗೇ ಇರೋದು :)
@ ವಿಕಾಸ,
ನೀನು ಹೇಳಿದ್ದು ಅರ್ಥ ಆಯ್ತು ಮಾರಾಯಾ.. ನಾನು ಪತ್ರಿಕೋದ್ಯಮದ ಬಗ್ಗೆ ಮಾತಾಡ್ತಾ ಇಲ್ಲ. ಅದ್ರೆ ಈ ಪತ್ರಿಕೆಯವರು ಮಾಡುವ ತಪ್ಪುಗಳನ್ನು, ಮಾದರಿಯಾಗಿ ತೋರಿಸಬೇಕು ಅಂತ ಹೇಳಿದ್ದು. ನಾನು ಈ ತಪ್ಪು ತೋರಿಸಿರುವುದು ಸಂಜೆವಾಣಿಯ ONLINE EDITION ದು. ಅಂದಮೇಲೆ ಇದ್ರಲ್ಲಿ ಕೆಲ್ಸ ಮಾಡೋರು ಓದು ಬರಹ ಬರುವವರು. ಇಂಥವರೇ....
@ ಲಕ್ಶ್ಮಕ್ಕ,
ನಾನು ಸಂಜೆವಾಣಿ ಬಗ್ಗೆ ಹಾಕಿದಾಗಲೆಲ್ಲಾ ನಿನ್ನ Expression ಒಂದೇನೇ.. "ಕರ್ಮಕಾಂಡ ಶಂಕ್ರಣ್ಣ".
@ ಜೆಮ್-ಜಯ ಸಾರ್,
ಯಾಕೆ ನಮ್ಮ ಕರ್ನಾಟಕದಲ್ಲೇ ಈ ಥರ ಅಂತೀನಿ. ಚಲ್ತಾ ಹೈ, ಅಡ್ಜಸ್ಟ್ ಮಾಡ್ಕೊಳಿ ಅನ್ನೋದು ಜಾಸ್ತಿ ? ಆದ್ರೆ ನೈತಿಕವಾದ ಒಂದು ಜವಾಬ್ದಾರಿ ತಗೋಬೇಕು ಅಲ್ವೇ ಮಾಧ್ಯಮದವರು. ಎಲ್ರೂ TRP ಹಾಗು ಕಾಸಿನ ಹಿಂದೆ ಹಪಾಹಪಿತನ ಬೆಳೆಸ್ಕೊಂಡಿದಾರೆ.
@ ಸಾಗರದಾಚೆಯ ಹೆಗ್ಡೆ ಸಾರ್,
ಧನ್ಯವಾದಗಳು. ಕೆಲ್ಸ ಮಾಡಲು ಶುರು ಮಾಡಿದ ಟೈಮು, ಕೆಲವು ತಿಂಗಳು ಡಿಜೈನ್ ಡಿಪಾರ್ಟ್ಮೆಂಟಿನ ಜೊತೆಗೆ ಕ್ವಾಲಿಟಿಯಲ್ಲೂ ಕೆಲ್ಸ ಮಾಡಿದೀನಿ.. ಅದಕ್ಕೆ ಬಡ್ಡಿಮಗಂದು ತಪ್ಪು ಕಣ್ಣಿಗೆ ಚೆನ್ನಾಗಿ ಕಾಣ್ಸುತ್ತೆ :)
@ ಯಳವತ್ತಿ ಸಾರ್,
ಪತ್ರಿಕೋದ್ಯಮದ ಅಭಾಸಗಳನ್ನು ತೋರಿಸೋದಕ್ಕೆ "ಪತ್ರಿಕಾಭಾಸ" ಅಂತಾ ಬ್ಲಾಗ್ ಶುರು ಮಾಡಿದೆ. ಅದರೆ ಸರಿ ಹೋಗಲ್ಲಿಲ್ಲ. ಬೆಸ್ಟ್ ಅಂದ್ರೆ ನಮ್ಮ ಸೋಮಾರಿ ಕಟ್ಟೆಯಲ್ಲೇ ಇದೆಲ್ಲ ಇದ್ರೆ ಸರಿ ಅನ್ನುಸ್ತು. ನೀವೇನಂತೀರ ?
@ ಗುರುಗಳೇ,
ಧನ್ಯವಾದಗಳು
@ ಮಲ್ಲಿ ಅಣ್ಣ,
ಥ್ಯಾಂಕ್ಸ್. ತಪ್ಪು ಕಂಡು ಹಿಡಿದ್ರೆ ಏನ್ ಸುಖ ? ಅದನ್ನ ತಿದ್ದಿ ಸರಿ ಮಾಡಿಸುವ ಕೆಲ್ಸ ಮಾಡದೆ ಇದ್ರೆ ಏನೂ ಉಪಯೋಗ ಇಲ್ಲ. ಎಷ್ಟೇ ತಪ್ಪುಗಳನ್ನು ಕಂಡು ಹಿಡಿದು ಹಾಕಿದ್ರೂ ಈ ಜನ ತಿದ್ದಿಕೊಳ್ಳಲ್ಲ :(
@ ಸಿಮೆಂಟ್ ಪ್ರಕಾಸಪ್ಪ (ಬೇಕೂ ಅಂತಾನೇ ಪ್ರಕಾಸಪ್ಪ ಅಂದಿರೋದು),
ಶಾರ್ಪು...ಥ್ಯಾಂಕ್ಸು..
ಕಟ್ಟೆ ಶಂಕ್ರ
yes sanjevani not only change the date they change faith of journalism haha
Post a Comment