Tuesday, April 28, 2009

ಆಟೋ ಅಣಿಮುತ್ತುಗಳು - ೬೦ - ಸಿಕ್ಕಿದ್ಲು, ನಗ್ದಲು, ಮಕ್ಕಳು

ಫುಲ್ ಫಾಸ್ಟ್ ಸಂಸಾರ ಅನ್ಸುತ್ತೆ ಈ ಅಣ್ಣನದು.
ಜೊತೆಗೆ ಛೀ ಕಳ್ಳಿ ಅಂತ ಬೇರೆ.
ನನ್ನ ಮಿತ್ರ ಶ್ರೀಚರಣ ಕಳ್ಸಿದ್ದು ಈ ಫೋಟೋನಾ.
ಲಿರಿಕ್ಸ್ ಏನೋ ಚೆನ್ನಾಗಿದೆ (ಡುಂಡಿರಾಜ್ ಚುಟುಕು), ಆದ್ರೆ ಬರೆದ ಮಹಾನುಭಾವ ಯಾರಪ್ಪಾ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

8 comments:

Santhosh Kumar said...

ಓದಿದ ಮೇಲೆ ನಾನು ಬೇಜಾನ್ ನಗ್ದೆ!!!
ಆಹಾ ಏನ್ ಕನ್ನಡ ರೀ, ಕನ್ನಡ ಉದ್ಧಾರ!

ಮನಸು said...

ನಿಮ್ಮ ಬ್ಲಾಗ್ ಬಲು ವೈಶಿಷ್ಟ್ಯತೆಯಿಂದ ಕೂಡಿದೆ..!! ಒಳ್ಳೆಯ ತುಣುಕುಗಳನ್ನು ಉಣಬಡಿಸುತ್ತೀರಿ..!! ಆಟೋ ಪ್ರಪಂಚ ಅವರದೇ ಶೈಲಿ ಅವರದೇ ಭಾಷೆ ಹಾಗೆ ಈ ನುಡಿಮುತ್ತುಗಳು ಬರೆದವನದು ಆಟೋದವರ ಮೆಚ್ಚಿಸಿರಬೇಕು ಅಲ್ಲವೇ..? ಹ ಹ ಹಹ..
ಹೀಗೆ ಸರಿ ತಪ್ಪಿನ ನಗೆಹನಿಗಳೊಂದಿಗೆ ವಿಮರ್ಶೆ ಸಾಗಲಿ...
ಧನ್ಯವಾದಗಳು

ಶಿವಪ್ರಕಾಶ್ said...

ಇವನು ದೊಡ್ಡ ವೇದಂತಿಯೇ ಇರಬೇಕು...
ಹ್ಹಾ ಹ್ಹಾ ಹ್ಹಾ.

Guruprasad said...

ಶಂಕರ್ (ಆಟೋ ಶಂಕರು :-) )
ಈ ಅಟೋ ನವರೇ ಇಷ್ಟು , ಸಿಕ್ಕಾಪಟ್ಟೆ ಫಾಸ್ಟು...... ಏನು ಯೋಚನೆ ಮಾಡದೇ ಸಿಕ್ಕಾಪಟ್ಟೆ ಫಾಸ್ಟ್ ಅಗಿನೆ ಇದನ್ನು ಬರೆಸಿರಬೇಕು......
ತುಂಬ ಚೆನ್ನಾಗಿ ಇದೆ ನಿಮ್ಮ ಬ್ಲಾಗು.....
ಗುರು

sunaath said...

ಆಟೋನ್ನ fast ಆಗಿ ಓಡಿಸಿದ್ದಕ್ಕೇ, accident ಆಗಿರ್ಬೇಕು!

Unknown said...

ha ha ha

ನಿನ್ನೆ ಸಿಕ್ಕಳು
ಇವತ್ತು ನಕ್ಕಳು
ನಾಳೆ ಎರಡು ಮಕ್ಕಳು
ಆಗಬೇಕಿತ್ತೇನೋ ಅಲ್ವಾ?

ಅರ್ಥ ಮಾಡಿಕೊಳ್ಳಲು ಒದ್ದಾಡಿ ಹೋದೆ.
ಒಳ್ಳೆ ಸಂಗ್ರಹ

ಧರಿತ್ರಿ said...

ಶಂಕ್ರಣ್ಣ..
ಮನಸ್ಸಿಗೆ ಬೋರ್ ಅನಿಸಿದಾಗಲೆಲ್ಲಾ ನಿಮ್ಮ ಬ್ಲಾಗ್ ನೋಡೋದು..ಬ್ಲಾಗ್ ತೆರೆದ್ರೆ ಸಾಕು ಸಣ್ಣ ನಗು ಮೂಗುತಿಯಡಿಯಲ್ಲಿ ತೇಲಿಬಿಡುತ್ತೆ. ಅಷ್ಟು ಹಾಸ್ಯಮಯವಾಗಿ ವಿಷ್ಯ ನಿರೂಪಣೆ ಮಾಡ್ತೀರಿ. ಗುಡ್ ಅಣ್ಣಯ್ಯ
-ಧರಿತ್ರಿ

ಮೂರ್ತಿ ಹೊಸಬಾಳೆ. said...

ಮೂರು ದಿನಗಳಲ್ಲಿ ಇಷ್ಟೆಲ್ಲಾ ಮುಗಿಬೇಕು ಅಂದ್ರೆ ಅದನ್ನ ಬರೆಯೋಕೆ ಎಷ್ಟು ಸೆಕೆಂಡ್ ಸಿಕ್ಕಿರಬಹುದು ಪಾಪ ಗಡಿಬಿಡಿಯಲ್ಲಿ ಬರೆದಿದ್ದು ಅನ್ನೋದು ಸ್ಪಷ್ಟ.
ಅಥವಾ ಬರೆದ ಪುಣಾತ್ಮ ”ಒಂದು ಪಾನ್ ಪರಾಕ್,ಎಲ್ಡು ಇಸ್ಮಾಲ್ ಸಿಕ್ರೇಟ್” ಜಾತಿಗೆ ಸೇರಿದವನಿರಬೇಕು.