ಪ್ರವಾಸದ ಫೋಟೋಗಳನ್ನು ಆರ್ಕುಟ್ಟಲ್ಲಿ (orkut) ಹಾಕ್ತೀನಿ, ಆದ್ರೆ ಇಂಟೆರೆಸ್ಟಿಂಗ್ ಸಂಗತಿಗಳನ್ನು ಮಾತ್ರ ಫೋಟೋ ಸಮೇತ ಬ್ಲಾಗಿನಲ್ಲಿ ಹಾಕೋದು.
ಬರ್ಲಿನ್ ನಗರ ಪ್ರವಾಸದ ಟಿಕೆಟ್ ತಗೊಂಡು ಸುಮಾರು 10:30 ಗೆ ಮೊದಲ ಸ್ಟಾಪಿನಲ್ಲಿ ಇಳಿದೆವು. ಸ್ವಲ್ಪ ಅಕ್ಕ ಪಕ್ಕ ನೋಡಿ, ಚುರುಗುಡುತ್ತಿದ್ದ ಹೊಟ್ಟೆಗೆ ಸ್ವಲ್ಪ ಹಾಕಿಕೊಂಡು, ಫೋಟೋ ತೆಕ್ಕೊಂಡು ಇದ್ದಾಗ ಮತ್ತೆ ಕಾಡಿದ್ದು "ಜಲಬಾಧೆ".
ಪುಣ್ಯಕ್ಕೆ ಪಕ್ಕದಲ್ಲೇ WC (Water Closet, ಟಾಯ್ಲೆಟ್ಟಿಗೆ ಇನ್ನೊಂದು ಹೆಸರು) ಬೋರ್ಡು ಕಂಡಿತು. ಉಪಯೋಗಿಸಬೇಕಾದರೆ €0.50 (50 Euro Cents) ಕೊಡಬೇಕು. ಇಲ್ಲಿ ಕೂಡಾ ಟಾಯ್ಲೆಟ್ಟಿನ ಯಾವುದದ್ರೂ ಒಂದು ಫೋಟೋ ಸಿಗಬಹುದೇ ಎಂದು ಆಶಾಭಾವನೆಯಿಂದ ಹೋದೆ, ನನಗೆ ನಿರಾಸೆ ಆಗಲಿಲ್ಲ. ಬಹಳ ಖುಷಿಯಿಂದ ಜಲಬಾಧೆ ತೀರಿಸಿ ಫೋಟೋ ತೆಕ್ಕೊಂಡೆ.
ಇದಕ್ಕೆ ಮುಂಚೆ ಟಾಯ್ಲೆಟ್ಟಲ್ಲಿ ನೊಣ, ಹುಳುವಿನ ಚಿತ್ರ ಹಾಕಿರುವ ಬಗ್ಗೆ ಹೇಳಿದ್ದೆ ಹಾಗು ಅದರ ಫೋಟೋ ಹಾಕಿದ್ದೆ. ಇದೇ ರೀತಿ ಬರ್ಲಿನ್ನಿನ ಈ ಟಾಯ್ಲೆಟ್ಟಲ್ಲಿ ಗಾಲ್ಫ್ ಆಟದ ರಂಧ್ರ ಹಾಗು ಅದರಲ್ಲಿ ನಿಲ್ಲಿಸಿರುವ ಬಾವುಟದ ಚಿತ್ರ ಪ್ರಿಂಟ್ ಮಾಡಿದಾರೆ. ಇದೂ ಅದೇ, ಸರಿಯಾಗಿ ಈ ಜಾಗಕ್ಕೆ ಗುರಿ ಇಟ್ಟರೆ ಹೊರಗೆ ಹಾರೋದಿಲ್ಲ / ಸಿಡಿಯೋದಿಲ್ಲ. ನೀವೇ ನೋಡಿ.


ಈ ಸಲದ ಟಾಯ್ಲೆಟ್ ಫೋಟೋ ನಂಗೆ ಸ್ವಲ್ಪ ಸ್ಪೆಷಲ್. ಪ್ರತಿ ಬಾರಿ ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಟಾಯ್ಲೆಟ್ಟಿನ ಫೋಟೋ ಹಿಡೀತಿದ್ದೆ ಹಾಗು ಬೆಳಕು ಸರಿ ಇರದ ಕಾರಣ ಅಷ್ಟೊಂದು ಕ್ಲಾರಿಟಿ ಇರ್ತಾ ಇರಲಿಲ್ಲ. ಈ ಸಲ ನನ್ನ CANON EOS 1000D, ಡಿಜಿಟಲ್ SLR ಕ್ಯಾಮೆರಾದಲ್ಲಿ ತೆಗೆದಿರುವೆ. ಸ್ಪೆಷಲ್ ಅಲ್ವಾ?
----------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ