ಬೆಳಿಗ್ಗೆ ಆರ್.ಟಿ ನಗರದಲ್ಲಿ ಕಂಡಿದ್ದು.
ಎಲ್ರೂ ತಮ್ಮ ಹುಡುಗೀನಾ ಫಿಲಮ್ಮಿಗೆ, ಪಾರ್ಕಿಗೆ ಕರೆದರೆ, ಇವನು ಕಾಂಕ್ರೀಟ್ ಗ್ಯಾಂಗಿಗೆ ಕರೀತಾ ಇದಾನೆ.
ಎಂಥೆಂಥಾ ಪ್ರೇಮಿಗಳು ಇದಾರಪ್ಪ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Tuesday, September 30, 2008
Friday, September 26, 2008
ಆಟೋ ಅಣಿಮುತ್ತುಗಳು - ೪೦ - ತಂದೆ ತಾಯಿಯ ??
ಇವತ್ತು ಬೆಳಿಗ್ಗೆ ರೆಸಿಡೆನ್ಸಿ ರಸ್ತೆಯಲ್ಲಿ ಕಂಡಿದ್ದು.
ಸುಮಾರು ಆಟೋಗಳಲ್ಲಿ "ತಂದೆ ತಾಯಿಯ ಆಶೀರ್ವಾದ" ಅಂತಾ ಹಾಕಿರೋದನ್ನ ನೋಡಿದೀವಿ.
ಆದ್ರೆ ಇವನು ಬರೀ "ತಂದೆ ತಾಯಿಯ" ಅಂತಾ ಮಾತ್ರ ಹಾಕಿದಾನೆ.
ಮುಂದೆ ಏನಿರಬಹುದು ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಸುಮಾರು ಆಟೋಗಳಲ್ಲಿ "ತಂದೆ ತಾಯಿಯ ಆಶೀರ್ವಾದ" ಅಂತಾ ಹಾಕಿರೋದನ್ನ ನೋಡಿದೀವಿ.
ಆದ್ರೆ ಇವನು ಬರೀ "ತಂದೆ ತಾಯಿಯ" ಅಂತಾ ಮಾತ್ರ ಹಾಕಿದಾನೆ.
ಮುಂದೆ ಏನಿರಬಹುದು ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಆಟೋ ಅಣಿಮುತ್ತುಗಳು,
ತಂದೆ ತಾಯಿಯ
ನನ್ನ ನಾಸಿಕ್ ಪ್ರವಾಸ ಚಿತ್ರಗಳು
ಕಂಪನಿ ಕೆಲಸದ ಮೇಲೆ ಮುಂಬೈ, ನಾಸಿಕ್ ಗೆ ಹೋಗಿದ್ದೆ.
ಅಲ್ಲಿ ಕೆಲಸ ಮುಗಿಸಿ ನಾಸಿಕ್ ನಿಂದ ಮುಂಬೈ ಗೆ ವಾಪಸ್ ಬರೋವಾಗ ತೆಗೆದ ಚಿತ್ರಗಳು ಇವು.
ಈ ಫೋಟೋಗಳನ್ನು ತೆಗೆದಾಗ ಮಧ್ಯಾಹ್ನ 1:45 ಅಥವಾ 2:00 ಆಗಿತ್ತು. ನಂಬಲು ಸ್ವಲ್ಪ ಕಷ್ಟ ಅಲ್ವೇ ?
ಅಲ್ಲಿನ ವಾತಾವರಣ ಸಖತ್ತಾಗಿದೆ ಕಣ್ರೀ. ಟಿಪಿಕಲ್ ನಮ್ಮ ಮೈಸೂರಿನ ಹಾಗೆ. ರಾತ್ರಿ 9ಕ್ಕೆ ರಸ್ತೆಗಳೆಲ್ಲಾ ಬಿಕೋ ಅನ್ನೋಕ್ಕೆ ಶುರು ಆಗತ್ತೆ. ಸಖತ್ ತಂಪಾಗಿದೆ ಊರು. ಸುತ್ತಮುತ್ತಲೆಲ್ಲಾ ಹಸಿರು, ಜನರು ಫ್ರೆಂಡ್ಲಿ, ಊಟ ಚೆನ್ನಾಗಿತ್ತು. ಇದ್ದದ್ದು ಮಾತ್ರ ಕೆಲವೇ ಘಂಟೆಗಳು. ನಾಸಿಕ್ ಗೆ ಹೊರಟಿದ್ದು 15ರ ಸಂಜೆ ಸುಮಾರು 4 ಘಂಟೆಗೆ. ತಲುಪಿದ್ದು 9 ಕ್ಕೆ. ಮಾರನೆಯ ದಿನ ಅಲ್ಲಿನ ಕೆಲಸ ಮುಗಿಸಿಕೊಂಡು 12 ಕ್ಕೆಲ್ಲಾ ಪುನಃ ಮುಂಬೈಗೆ ವಾಪಸ್ ಹೊರಟಿದ್ದು. ದಾರಿಯಲ್ಲಿ ಕಂಡ ಕೆಲವನ್ನು ಹೀಗೆ ಕ್ಲಿಕ್ಕಿಸಿರುವೆ. ಉಪಯೋಗಿಸಿದ್ದು ನನ್ನ ಮೊಬೈಲ್ ಕ್ಯಾಮೆರಾವನ್ನು.
MotoROKR E6, Camera - 2 Mega Pixels

ನಾಸಿಕ್ ಪ್ರವಾಸ
Tuesday, September 23, 2008
ಅಮೇರಿಕಾದಲ್ಲಿ ಕನ್ನಡ ರಾರಾಜಿಸುತ್ತಿದೆ
ಅಮೇರಿಕಾದ, ನ್ಯೂಯಾರ್ಕ್ ನಗರದಲ್ಲಿ ಕನ್ನಡ ಹೀಗೆ ರಾರಾಜಿಸುತ್ತೆ ಅಂತ ಅನ್ಕೊಂಡಿರ್ಲಿಲ್ಲಾ.
ನನ್ನ ಸ್ನೇಹಿತ ಹೇಮಂತ ಕಳ್ಸಿದ್ದು. ಅವನಿಗೆ ಬೇರೆ ಯಾರೋ ಕಳ್ಸಿದ್ದಂತೆ. ಯಾರೇ ಬರ್ದಿದ್ರೂ, ಸೂಪರ್ ಆಗಿ ಬರ್ದಿದಾರೆ.
ಬರೆದವನಿಗೆ ವರ್ಷದ ಕನ್ನಡಿಗ ಪ್ರಶಸ್ತಿ ಕೊಡಬೇಕು. ಅಲ್ವೇ ?
ನೀವೇ ನೋಡಿ..
--------------------------------------------------------------------

ಅಮೇರಿಕಾದಲ್ಲಿ ಕನ್ನಡ,
ರಾರಾಜಿಸುತ್ತಿದೆ,
ಸಖತ್
Friday, September 19, 2008
ಮೆಣಸಿನಕಾಯಿ ಇಟ್ಟಂಗೆ -
ಈ ಫೋಟೋ ನಾನು ತೆಗೆದಿದ್ದು ಮುಂಬೈನಲ್ಲಿ. ಕಂಪೆನಿ ಕೆಲ್ಸದ ಮೇಲೆ ಒಂದು ವಾರದಿಂದ ಸುತ್ತಾಡ್ತಾ ಇದೀನಿ.
ಮುಂಬೈನಿಂದ ನಾಸಿಕ್ ಕಡೆ ಹೊರಟಿದ್ದಾಗ, ಪೊವೈ (ಐಐಟಿ ಬಾಂಬೆ) ಬಳಿ ಸಿಗ್ನಲ್ಲಲ್ಲಿ ನಿಂತಾಗ ಕಂಡದ್ದು.
ನನ್ನ ಪುಣ್ಯಕ್ಕೆ ನಾನು ಗಾಡಿಯಲ್ಲಿ ಡ್ರೈವರ್ ಪಕ್ಕ ಕೂತಿದ್ದು. ತಕ್ಷಣ ಸುಂಯ್ ಟಪಕ್ ಅಂತಾ ಫೋಟೋ ತೆಗೆದೆ.
ಅರ್ಥ ಆಗ್ಲಿಲ್ಲ ಅಂದ್ರೆ, ಅವನು ಏನು ಬರೆದಿದ್ದಾನೆ ಅನ್ನೋದನ್ನು ಕನ್ನಡದಲ್ಲಿ ಬರೀತಿದೀನಿ, ಓದಿ :
"ಮಿರ್ಚಿ ಖೇತೋಂಕೆ ಅಲಾವಾ ಕಹಾಂ ಲಗ್ತೀ ಹೈ !"
ಇದರ LITERAL TRANSLATION ಕನ್ನಡದಲ್ಲಿ ಕಷ್ಟ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಮಿರ್ಚಿ,
ಮುಂಬೈ,
ಮೆಣಸಿನಕಾಯಿ
Thursday, September 11, 2008
ಆಟೋ ಅಣಿಮುತ್ತುಗಳು - ೩೯ - ದೀನ ನಾನು ದಾನಿ ನೀನು
ಭಕ್ತ ಕನಕದಾಸ ಹಾಡಿದ ಹಾಗೆ -
ದೀನ ನಾನು ಸಮಸ್ತ ಲೋಕಕೆ ದಾನಿ ನೀನು ಅನ್ನೋ ಥರ ಇದೆ.
ಅದೇ ಇರಬಹುದು ಆಲ್ವಾ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ದೀನ ನಾನು ಸಮಸ್ತ ಲೋಕಕೆ ದಾನಿ ನೀನು ಅನ್ನೋ ಥರ ಇದೆ.
ಅದೇ ಇರಬಹುದು ಆಲ್ವಾ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಆಟೋ ಅಣಿಮುತ್ತುಗಳು,
ದಾನಿ ನೀನು,
ದೀನ ನಾನು
Tuesday, September 9, 2008
ಆಟೋ ಅಣಿಮುತ್ತುಗಳು - ೩೮ - ರಂಗನ ತಮ್ಮ
ರಂಗ SSLC ಮಾಡಿದಾನೆ, ಅವನ ತಮ್ಮ ದೀಪು ಸ್ವಲ್ಪ ಮುಂದಕ್ಕೆ ಹೋಗಿ PUC ಮಾಡಿದಾನೆ.
ಬೆಳಿಗ್ಗೆ ಡೈರಿ ಸರ್ಕಲ್ ನಿಂದ ಆಫೀಸಿಗೆ ಬರುವಾಗ ಕಂಡಿದ್ದು..
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೆಳಿಗ್ಗೆ ಡೈರಿ ಸರ್ಕಲ್ ನಿಂದ ಆಫೀಸಿಗೆ ಬರುವಾಗ ಕಂಡಿದ್ದು..
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
PUC,
SSLC,
ಆಟೋ ಅಣಿಮುತ್ತುಗಳು,
ದೀಪು,
ರಂಗನ ತಮ್ಮ
ಮಧ್ಯ ಬೆರಳಿನ ಪುರಾಣ - History of the Middle Finger
ಮಧ್ಯ ಬೆರಳಿನ ಪುರಾಣ
ಯಾವಾಗ್ಲಾದ್ರೂ, I mean ಒಂದ್ಸಲನಾದ್ರೂ, ನೀವು ಯಾರಮೇಲಾದ್ರೂ ಫುಲ್ಲ್ ಉರ್ಕೊಂಡು, ಖರಾಬ್ ಮೂಡಲ್ಲಿ ಇದ್ದಾಗ..
ಬಲಗೈನ ಮಧ್ಯದ ಬೆರಳನ್ನು ಎತ್ತಿ (ಮಿಕ್ಕೆಲ್ಲಾ ಬೆರಳನ್ನು ಮಡಿಚಿಕೊಂಡು) ಬಾಯಲ್ಲಿ "F**K You" ಅಂತಾ ಹೇಳಿ ತೋರಿಸಿದೀರಾ ತಾನೇ ? ಅಥವಾ ಈ ಥರಾ ಯಾರಾದ್ರೂ ಮಾಡೋದನ್ನು ನೋಡಿದೀರಾ ತಾನೆ ?
ಆ particular gesture ಯಾಕೆ ಬಂತು ಅನ್ನೋದು ಗೊತ್ತಾ ? ಓದಿ...
ದೇವ್ರಾಣೇಗ್ಲೂ ಇದರ ಬಗ್ಗೆ ಮುಂಚೆ ಗೊತ್ತಿರ್ಲಿಲ್ಲಾ. ಸ್ನೇಹಿತ ಶ್ರೀಕಾಂತ್ (ಶ್ವ್ರೀ) ಇದರ ಬಗ್ಗೆ ಹೇಳಿ, ಈ ಮೇಲ್ ಕಳಿಸುವ ತನಕ. ಗೊತ್ತಾದ ಮೇಲೆ ಎಲ್ಲರಿಗೂ ತಿಳಿಸಬೇಕೆಂಬ ಆಸೆ, ಚಪಲ. ಎಲ್ರಿಗೂ ಹೇಳ್ಕೊಂಡು ಬರೋಕ್ಕಂತೂ ಆಗಲ್ಲಾ, ಅದಕ್ಕೆ ಬ್ಲಾಗಿನಲ್ಲಿ ಹಾಕಿದರೆ ಸರಿ ಅನ್ನುಸ್ತು.
Isnt History more fun when you know something about it ?
ಮುಂಚಿಂದಲೂ ಕೂಡಾ ಫ್ರೆಂಚ್ ಹಾಗು ಇಂಗ್ಲಿಷರಿಗೆ ಹತ್ತಿದ್ದು ಹರೀತಿರ್ಲಿಲ್ಲಾ ಅನ್ನೋದು ಎಲ್ಲರಿಗೂ ಸುಮಾರಾಗಿ ತಿಳಿದಿರುವ ವಿಚಾರ. ಈ ಮಧ್ಯ ಬೆರಳನ್ನು ತೋರಿಸುವ ಪರಿಪಾಠದ ಜನನ ಇವರಿಂದಲೇ.
ಮಧ್ಯಪ್ರಾಚ್ಯ ಯೂರೋಪಿನ ಏಜಿನ್ಕೋರ್ಟ್ ಕಾಳಗಕ್ಕೂ ಮುನ್ನ (Battle of Agincourt A.D. 1415) ಫ್ರೆಂಚರು, ಬ್ರಿಟಿಷರನ್ನು ಸೋಲಿಸುವ ಉದ್ದೇಶದಿಂದ ಅವರ ಬಳಿ ಸೆರೆಹಿಡಿಯಲಾಗಿದ್ದ ಬ್ರಿಟಿಷ್ ಯುದ್ಧಖೈದಿಗಳ ಬಲಗೈ ಮಧ್ಯಬೆರಳನ್ನು ಕತ್ತರಿಸುವ ಪರಿಪಾಠ ಬೆಳೆಸಿಕೊಂಡರು. ಮಧ್ಯದ ಬೆರಳಿಲ್ಲದಿದ್ದರೆ ಬ್ರಿಟಿಷರು ತಮ್ಮ ಬಿಲ್ಲಿನ ಹುರಿಯನ್ನು ಸಮರ್ಥವಾಗಿ ಎಳೆಯಲು ಅಸಾಧ್ಯ. ಬ್ರಿಟನ್ನಿನ ಬಿಲ್ಲು ತುಂಬಾ ಖ್ಯಾತವಾದದ್ದು. ಅದನ್ನು ಇಂಗ್ಲಿಷಿನಲ್ಲಿ "ENGLISH LONGBOW" ಎನ್ನುತ್ತಾರೆ. ಈ ಬಿಲ್ಲನ್ನು ಇಂಗ್ಲೆಡಿನ್ನಲ್ಲೇ ಕಾಣಸಿಗುವ "YEW" ಎನ್ನುವ ಮರದಿಂದ ಮಾಡಲಾಗುತ್ತಿತ್ತು. ಹಾಗಾಗಿ ಬಿಲ್ಲಿನ ಹುರಿಯನ್ನು ಎಳೆದು ಬಾಣವನ್ನು ಬಿಡುವುದಕ್ಕೆ "PLUCKING THE YEW" ಅಥವಾ "PLUCK YEW" ಎನ್ನುತ್ತಿದ್ದರು. ಹೀಗೆ ಮಧ್ಯದ ಬೆರಳನ್ನು ಕತ್ತರಿಸಿ, ಬ್ರಿಟಿಷ್ ಬಿಲ್ಗಾರರನ್ನು ಕೈಲಾಗದವರಂತೆ ಮಾಡಿ ಯುದ್ಧವನ್ನು ಗೆಲ್ಲುವ ಇರಾದೆ ಇತ್ತು ಫ್ರೆಂಚರಿಗೆ.
ಅಶ್ಚರ್ಯವೆಂಬಂತೆ, ಫ್ರೆಂಚರು ಯುದ್ಧದಲ್ಲಿ ಮಾಡಿದ ಯಾವುದೋ ಒಂದು ಸಣ್ಣ ತಪ್ಪಿಗೆ ಬ್ರಿಟಿಷರು ಮೇಲುಗೈ ಸಾಧಿಸಿ ಜಯಗಳಿಸಿದರು. ಹೀಗೆ ಆದ್ಮೇಲೆ ಸುಮ್ನಿರೋದಕ್ಕೆ ಆಗುತ್ತಾ ? ಸೋತ ಫ್ರೆಂಚರನ್ನು ಅಣಕ ಮಾಡಿ ಉರಿಸಲು ಶುರು ಮಾಡಿದರು. ಹೇಗೆ ??
ತಮ್ಮ ಬಲಗೈನ ಮಧ್ಯ ಬೆರಳನ್ನು ತೋರಿಸಿ -
"ನೋಡ್ರಪ್ಪಾ, ನಾವು ಬಾಣ ಬಿಡಲು ಸಾಧ್ಯ (See, We can still PLUCK THE YEW)" ಎಂದು. PLUCK YEW ಅಂತಾ ಹೇಳೋದು ಕಷ್ಟವೆಂದು, ಅದನ್ನು ಅವರ ಅನುಗುಣವಾಗಿ F ಗೆ ತಿದ್ದಿಕೊಂಡರು. ಇದನ್ನು LABODENTALS FRICTAVE ಅನ್ನುತ್ತಾರೆ. ಅಂದರೆ PL (ಪ್ಲ) ಅನ್ನುವ ಜಾಗದಲ್ಲಿ F (ಫ) ಎನ್ನುತ್ತಾರೆ. ಹಾಗಾಗಿ PLUCK YEW ಅನ್ನೋದು F**K YEW ಆಯಿತು. ಹಾಗಾಗಿ ಈ ಪದವು ಮಧ್ಯ ಬೆರಳಿನ ಸೆಲ್ಯೂಟಿನ (Middle Finger Salute) ಸಂಕೇತವಾಯಿತು.
ಬ್ರಿಟಿಷರ ಪ್ರಕಾರ ಇವತ್ತಿಗೂ ಇದು ಫ್ರೆಂಚರಿಗೆ ಸೆಲ್ಯೂಟ್ ಮಾಡುವ ಸರಿಯಾದ ರೀತಿಯಂತೆ.
AND YEW THOUGHT YEW KNEW EVERY PLUCKING THING

ಫ್ರೆಂಚರು,
ಬಾಣ,
ಬಿಲ್ಲು,
ಬ್ರಿಟಿಷರು,
ಮಧ್ಯ ಬೆರಳಿನ ಪುರಾಣ,
ಮಧ್ಯಪ್ರಾಚ್ಯ ಯೂರೋಪ್
Monday, September 8, 2008
ಆಟೋ ಅಣಿಮುತ್ತುಗಳು - ೩೭ - ಜಯನಗರದ ಜಯಸಿದ್ದ
ಇವತ್ತು ಬೆಳಿಗ್ಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಗ್ರಾನೈಟ್ ಅಂಗಡಿ ಬಳಿ ಕಂಡಿದ್ದು.
ಜಯನಗರದ ಜಯಸಿದ್ದ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಜಯನಗರದ ಜಯಸಿದ್ದ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಆಟೋ ಅಣಿಮುತ್ತುಗಳು,
ಜಯನಗರದ ಜಯಸಿದ್ದ
Tuesday, September 2, 2008
ಗಣಪತಿ ಕೂರ್ಸಿದೀರಾ ??
ಕೈಲಿ ಅಕ್ಷತೆ ಬಟ್ಟಲು, ಜೇಬಲ್ಲಿ ಪೆನ್ಸಿಲ್ ಹಾಗು ನೋಟ್ ಬುಕ್ಕಿನಿಂದ ಹರಿದ ಖಾಲಿ ಹಾಳೆ, ಮೈಮೇಲೆ ಹೊಸಾ ಶರ್ಟು ಚಡ್ಡಿ, ಕಾಲಲ್ಲಿ ಹವಾಯ್ ಚಪ್ಲಿ...
ಪ್ರತಿ ಮನೆ ಬಾಗಿಲಿಗೆ ಐದಾರು ಐಕಳ ಗುಂಪು ಹೋಗಿ "ಗಣ್ಪತಿ ಕೂರ್ಸಿದೀರಾ ?" ಅಂತಾ ಕೂಗು ಹಾಕೋದು.
ಬನ್ರೋ ಅಂತಾ ಮನೆಯ ತಾಯಿ ಕರೆದಾಗ ಒಳಾಗೆ ಹೋಗಿ, ಮನೆಯ ಹಾಲಿನಲ್ಲಿ ಕೂರಿಸಿರುವ ಗಣಪನಿಗೆ ಅಕ್ಷತೆ ಹಾಕಿ,
"ಬೆನಕ ಬೆನಕ ಏಕದಂತ, ಪಚ್ಚೆಕಲ್ಲು ಪಾಣಿಪೀಠ, ಮುತ್ತಿನುಂಡೆ ಹೊನ್ನಗಂಟೆ, ಒಪ್ಪುವಂಥ ವಿಘ್ನೇಶ್ವರ, ನಿನಗೆ ೨೧ ನಮಸ್ಕಾರಗಳು" ಅನ್ನೋ ಶ್ಲೋಕ ಹಾಡಿ,
ಗಣಪನ ಮುಂದಿಟ್ಟಿರುವ ಪಂಚಪಾತ್ರೆಯಲ್ಲಿರುವ ಕುಂಕುಮ ಹಣೆಗೆ ಇಟ್ಟಿಕೊಂಡು, ಮನೆಯವರು ಬರುವ ಮಕ್ಕಳಿಗೋಸ್ಕರ ಮಾಡಿರುವ ಕಡ್ಲೇಕಾಳು ಗುಗ್ಗರಿ, ಕಡ್ಲೇಹಿಟ್ಟು ತಿಂದು ಬಾಯಿ ಒರೆಸಿ ಹೊರಗೆ ಬಂದು ದೀಪಾವಳಿಯಲ್ಲಿ ಹೊಡೆಯುವ ಕೇಪನ್ನು ನಟ್ಟೂ ಬೋಳ್ಟಿನ ಒಳಗೆ ಹಾಕಿ, ಟೈಟ್ ಮಾಡಿ, ಗಣಪತಿಯನ್ನು ವಿಸಿಟ್ ಮಾಡಿದ ಮನೆಯ ಮುಂದೆ ಠಪಾರ್ ಎಂದು ಸಿಡಿಸಿ, ಪೆನ್ಸಿಲ್ಲನ್ನು ಜೇಬಿಂದ ತೆಗೆದು ಪೇಪರ್ರಲ್ಲಿ ಒಂದು ಮನೆ ಅಂತಾ ಬರೆದು ಮುಂದಿನ ಮನೆಯ ಮುಂದೆ ಹೋಗಿ ಪುನಃ..
ಗಣ್ಪತಿ ಕೂರ್ಸಿದೀರಾ ????
ಆ ದಿನಗಳು. ಸುಮಾರು ವರ್ಷಗಳು 101 ಮನೆ ವಿಸಿಟ್ ಮಾಡದೆ ಇದ್ರೆ ಆ ಗಣಪನೇ ಬಂದು ಶಾಪ ಕೊಡ್ತಾನೆ ಅನ್ನೋ ಥರಾ ಬೀದಿ ಬೀದಿ ಸುತ್ತುತ್ತಾ ಇದ್ವಿ. ಯಾವ್ದೋ UNKNOWN ಕಾರಣದಿಂದ 101 ಆಗ್ಲಿಲ್ಲಾ ಅಂದ್ರೆ ಮಿನಿಮಮ್ 21 ಮನೆ ಮಾತ್ರ ಯಾವ್ದೇ ಕಾರಣಕ್ಕೂ ಗ್ಯಾರಂಟಿ. ಗಣಪತಿ ವಿಸಿಟ್ ಆದಮೇಲೆ, ಮನೆಗೆ ಬಂದು ಶ್ಯಮಂತೊಪಾಖ್ಯಾನ ಕಥೆ ಕೇಳೋ ತನಕ ಅಪ್ಪಿ ತಪ್ಪಿ ಕೂಡಾ ತಲೆ ಎತ್ತಿ ಆಕಾಶ ನೋಡ್ತಾ ಇರ್ಲಿಲ್ಲಾ. ವಿಸಿಟ್ ಮಾಡಿದ ಪ್ರತಿ ಮನೆ ಮುಂದೆ ನಟ್ಟು ಬೋಳ್ಟಿನಲ್ಲಿ ಹಾಕಿ ಹೊಡೆಯುವ ಕೇಪನ್ನು ಕೂಡಾ ಕಳೆದ ದೀಪಾವಳಿಯಿಂದ ಉಳಿಸಿ ಇಟ್ಟಿದ್ದು.... ಆದ್ರೆ ಇವತ್ತಿನ ದಿನಗಳಲ್ಲಿ.. ಬಿಡ್ರಿ, ಸುಮ್ನೆ ಹಳೇದನ್ನ ನೆನೆಸಿಕೊಂಡು ಖುಷಿ ಪಡ್ರಿ ಸಾಕು.
ನಾಳೆ ಕೂತು ಗಣಾಧೀಶನಿಗೆ ಪೂಜೆ ಮಾಡಬೇಕು. ಸಡನ್ನಾಗಿ ಇವಾಗ ರಾತ್ರಿ ಆ ಹಳೆಯ ವಿಚಾರ ಜ್ನಾಪಕಕ್ಕೆ ಬಂತು.
ಬಿಟ್ರೆ ಕೆಟ್ಟೆ ಅನ್ಕೊಂಡು ಥಟ್ ಅಂತಾ ಇದನ್ನ ಬರೆದೆ.
ನೀವೊ ಕೂಡಾ ಹೀಗೆ ಅಂದಿರ್ತೀರಾ ಅಲ್ವಾ??

ಕಡ್ಲೇಹಿಟ್ಟು,
ಕೇಪು,
ಗಣಪತಿ,
ಗಣ್ಪತಿ ಕೂರ್ಸಿದೀರಾ,
ಗುಗ್ಗರಿ
Subscribe to:
Posts (Atom)