ಅಲ್ಲಿ ಕೆಲಸ ಮುಗಿಸಿ ನಾಸಿಕ್ ನಿಂದ ಮುಂಬೈ ಗೆ ವಾಪಸ್ ಬರೋವಾಗ ತೆಗೆದ ಚಿತ್ರಗಳು ಇವು.
ಈ ಫೋಟೋಗಳನ್ನು ತೆಗೆದಾಗ ಮಧ್ಯಾಹ್ನ 1:45 ಅಥವಾ 2:00 ಆಗಿತ್ತು. ನಂಬಲು ಸ್ವಲ್ಪ ಕಷ್ಟ ಅಲ್ವೇ ?
ಅಲ್ಲಿನ ವಾತಾವರಣ ಸಖತ್ತಾಗಿದೆ ಕಣ್ರೀ. ಟಿಪಿಕಲ್ ನಮ್ಮ ಮೈಸೂರಿನ ಹಾಗೆ. ರಾತ್ರಿ 9ಕ್ಕೆ ರಸ್ತೆಗಳೆಲ್ಲಾ ಬಿಕೋ ಅನ್ನೋಕ್ಕೆ ಶುರು ಆಗತ್ತೆ. ಸಖತ್ ತಂಪಾಗಿದೆ ಊರು. ಸುತ್ತಮುತ್ತಲೆಲ್ಲಾ ಹಸಿರು, ಜನರು ಫ್ರೆಂಡ್ಲಿ, ಊಟ ಚೆನ್ನಾಗಿತ್ತು. ಇದ್ದದ್ದು ಮಾತ್ರ ಕೆಲವೇ ಘಂಟೆಗಳು. ನಾಸಿಕ್ ಗೆ ಹೊರಟಿದ್ದು 15ರ ಸಂಜೆ ಸುಮಾರು 4 ಘಂಟೆಗೆ. ತಲುಪಿದ್ದು 9 ಕ್ಕೆ. ಮಾರನೆಯ ದಿನ ಅಲ್ಲಿನ ಕೆಲಸ ಮುಗಿಸಿಕೊಂಡು 12 ಕ್ಕೆಲ್ಲಾ ಪುನಃ ಮುಂಬೈಗೆ ವಾಪಸ್ ಹೊರಟಿದ್ದು. ದಾರಿಯಲ್ಲಿ ಕಂಡ ಕೆಲವನ್ನು ಹೀಗೆ ಕ್ಲಿಕ್ಕಿಸಿರುವೆ. ಉಪಯೋಗಿಸಿದ್ದು ನನ್ನ ಮೊಬೈಲ್ ಕ್ಯಾಮೆರಾವನ್ನು.
MotoROKR E6, Camera - 2 Mega Pixels










------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ