Tuesday, September 2, 2008

ಗಣಪತಿ ಕೂರ್ಸಿದೀರಾ ??

ಕೈಲಿ ಅಕ್ಷತೆ ಬಟ್ಟಲು, ಜೇಬಲ್ಲಿ ಪೆನ್ಸಿಲ್ ಹಾಗು ನೋಟ್ ಬುಕ್ಕಿನಿಂದ ಹರಿದ ಖಾಲಿ ಹಾಳೆ, ಮೈಮೇಲೆ ಹೊಸಾ ಶರ್ಟು ಚಡ್ಡಿ, ಕಾಲಲ್ಲಿ ಹವಾಯ್ ಚಪ್ಲಿ...

ಪ್ರತಿ ಮನೆ ಬಾಗಿಲಿಗೆ ಐದಾರು ಐಕಳ ಗುಂಪು ಹೋಗಿ "ಗಣ್ಪತಿ ಕೂರ್ಸಿದೀರಾ ?" ಅಂತಾ ಕೂಗು ಹಾಕೋದು.
ಬನ್ರೋ ಅಂತಾ ಮನೆಯ ತಾಯಿ ಕರೆದಾಗ ಒಳಾಗೆ ಹೋಗಿ, ಮನೆಯ ಹಾಲಿನಲ್ಲಿ ಕೂರಿಸಿರುವ ಗಣಪನಿಗೆ ಅಕ್ಷತೆ ಹಾಕಿ,

"ಬೆನಕ ಬೆನಕ ಏಕದಂತ, ಪಚ್ಚೆಕಲ್ಲು ಪಾಣಿಪೀಠ, ಮುತ್ತಿನುಂಡೆ ಹೊನ್ನಗಂಟೆ, ಒಪ್ಪುವಂಥ ವಿಘ್ನೇಶ್ವರ, ನಿನಗೆ ೨೧ ನಮಸ್ಕಾರಗಳು" ಅನ್ನೋ ಶ್ಲೋಕ ಹಾಡಿ,

ಗಣಪನ ಮುಂದಿಟ್ಟಿರುವ ಪಂಚಪಾತ್ರೆಯಲ್ಲಿರುವ ಕುಂಕುಮ ಹಣೆಗೆ ಇಟ್ಟಿಕೊಂಡು, ಮನೆಯವರು ಬರುವ ಮಕ್ಕಳಿಗೋಸ್ಕರ ಮಾಡಿರುವ ಕಡ್ಲೇಕಾಳು ಗುಗ್ಗರಿ, ಕಡ್ಲೇಹಿಟ್ಟು ತಿಂದು ಬಾಯಿ ಒರೆಸಿ ಹೊರಗೆ ಬಂದು ದೀಪಾವಳಿಯಲ್ಲಿ ಹೊಡೆಯುವ ಕೇಪನ್ನು ನಟ್ಟೂ ಬೋಳ್ಟಿನ ಒಳಗೆ ಹಾಕಿ, ಟೈಟ್ ಮಾಡಿ, ಗಣಪತಿಯನ್ನು ವಿಸಿಟ್ ಮಾಡಿದ ಮನೆಯ ಮುಂದೆ ಠಪಾರ್ ಎಂದು ಸಿಡಿಸಿ, ಪೆನ್ಸಿಲ್ಲನ್ನು ಜೇಬಿಂದ ತೆಗೆದು ಪೇಪರ್ರಲ್ಲಿ ಒಂದು ಮನೆ ಅಂತಾ ಬರೆದು ಮುಂದಿನ ಮನೆಯ ಮುಂದೆ ಹೋಗಿ ಪುನಃ..

ಗಣ್ಪತಿ ಕೂರ್ಸಿದೀರಾ ????

ಆ ದಿನಗಳು. ಸುಮಾರು ವರ್ಷಗಳು 101 ಮನೆ ವಿಸಿಟ್ ಮಾಡದೆ ಇದ್ರೆ ಆ ಗಣಪನೇ ಬಂದು ಶಾಪ ಕೊಡ್ತಾನೆ ಅನ್ನೋ ಥರಾ ಬೀದಿ ಬೀದಿ ಸುತ್ತುತ್ತಾ ಇದ್ವಿ. ಯಾವ್ದೋ UNKNOWN ಕಾರಣದಿಂದ 101 ಆಗ್ಲಿಲ್ಲಾ ಅಂದ್ರೆ ಮಿನಿಮಮ್ 21 ಮನೆ ಮಾತ್ರ ಯಾವ್ದೇ ಕಾರಣಕ್ಕೂ ಗ್ಯಾರಂಟಿ. ಗಣಪತಿ ವಿಸಿಟ್ ಆದಮೇಲೆ, ಮನೆಗೆ ಬಂದು ಶ್ಯಮಂತೊಪಾಖ್ಯಾನ ಕಥೆ ಕೇಳೋ ತನಕ ಅಪ್ಪಿ ತಪ್ಪಿ ಕೂಡಾ ತಲೆ ಎತ್ತಿ ಆಕಾಶ ನೋಡ್ತಾ ಇರ್ಲಿಲ್ಲಾ. ವಿಸಿಟ್ ಮಾಡಿದ ಪ್ರತಿ ಮನೆ ಮುಂದೆ ನಟ್ಟು ಬೋಳ್ಟಿನಲ್ಲಿ ಹಾಕಿ ಹೊಡೆಯುವ ಕೇಪನ್ನು ಕೂಡಾ ಕಳೆದ ದೀಪಾವಳಿಯಿಂದ ಉಳಿಸಿ ಇಟ್ಟಿದ್ದು.... ಆದ್ರೆ ಇವತ್ತಿನ ದಿನಗಳಲ್ಲಿ.. ಬಿಡ್ರಿ, ಸುಮ್ನೆ ಹಳೇದನ್ನ ನೆನೆಸಿಕೊಂಡು ಖುಷಿ ಪಡ್ರಿ ಸಾಕು.

ನಾಳೆ ಕೂತು ಗಣಾಧೀಶನಿಗೆ ಪೂಜೆ ಮಾಡಬೇಕು. ಸಡನ್ನಾಗಿ ಇವಾಗ ರಾತ್ರಿ ಆ ಹಳೆಯ ವಿಚಾರ ಜ್ನಾಪಕಕ್ಕೆ ಬಂತು.
ಬಿಟ್ರೆ ಕೆಟ್ಟೆ ಅನ್ಕೊಂಡು ಥಟ್ ಅಂತಾ ಇದನ್ನ ಬರೆದೆ.

ನೀವೊ ಕೂಡಾ ಹೀಗೆ ಅಂದಿರ್ತೀರಾ ಅಲ್ವಾ??

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

11 comments:

krishna said...

paDIachchu kaN saar, namdoo ganapathi nODuva paddati heege ittu. nenes konDre sakat khushi aagutte. nenepisdakke thanks :)

Shamanth said...

ganapathi habba andrae saaku...aa-preparation...aa-excitement...eegalu kanmundae baruthae...belligae bega yaadu...manaegae mundae thorana kaati..poojae maadee, ganapathi devastanakkae hogtha eedvi...
Sanjae namma ganappanna viziting karyakramaa...
Aadrae raatri aaythu andrae saaku...chanda-mamana kaata ;-)...
romatic symbol aagiroo namma chanda-mama ganapathi habbada divasa villian-mama aagogthanae...
Eethara namma habbagalu nooraru sihi nenapugalanna kooduthae...
"Namma Vigna nivarakka Ganapannanigae 101 namaskaraaa.."

ವರುಣ ವಿ ನಾಯಕ್ said...

ಈ ಪ್ರತಿಯೊ೦ದು ವಾಕ್ಯ ನಿಜ, ನನಗೆ ಗಣಪತಿ ಹಬ್ಬ ಬ೦ದ್ರೆ ಬಹಳ ಖುಶಿ. ಗಣಪ ಮನೆಗೆ ಬರತಾನೆ. ಇಗಲು ನಾವು ಸಣ್ನವರು ಇದ್ದಾಗ ೧೦೧ ಮನೆಗೆ ಇಲ್ಲ ೨೧ ಮನೆಗೆ ಹೊಗಿ ನಮಸ್ಕಾರ ಮಾಡಿ ಬರುತ್ತಿದ್ದೆ,
ಇಗಲು ಏನೊ ಒ೦ದು ತರ excitement, ನಾಳೆ ಬೆಳಿಗ್ಗೆ ನಮ್ಮ ಮನೆಗೆ ಗಣಪ ಬರ್ತೀದಾನೆ ಅ೦ದ್ರೆ, ಬೆಳಿಗ್ಗೆ ಬೇಗ ಎದ್ದು, ಅಪ್ಪ ನಾನು ತಮ್ಮ ಹೊಗಿ ಕರೆದುಕೊ೦ಡು ಬರ್ತಿದೀವಿ. ಮನೆಗೆ ಬ೦ದಾಗ ಅಮ್ಮನಿ೦ದ ಮ೦ಗಳಾರತಿ.. ನ೦ತರ ಪೊಜೆ ಎಲ್ಲಾ.. ಗಣಪನಿಗೆ ನಮ್ಮ ಸಹಸ್ರ ನಮಸ್ಕರಗಳು.

bk said...

ne helirodu yella nija kano Shankri....Aadre namthra iiga yaaru vist maadode illa kano, beraalnike asstu hudguru mathra barthare aste..

101 ganapathy nodle beku antha madyanane hort bidtha idvi...iiga adanyella nenskondre thumba kushi aaguthe...
nenepisdakke thanks

ಅಹರ್ನಿಶಿ said...

ಶ೦ಕ್ರು,
ಬಹಳ ರಸವತ್ತಾಗಿ ಬರಿತೀರಿ.ನಾವು ಕೂಡ ಇಲ್ಲಿ(ಮ್ವಾ೦ಜ,ತಾ೦ಜಾನಿಯ)ಗಣೇಶನ್ನ ಕೂರ್ಸಿದ್ದೇವೆ.ನನ್ನ ಶ್ರೀ..ಮನೆ(www.aharnishisree.blogspot.com)ಗೆ ಬನ್ನಿ.ಹಬ್ಬ ಮುಗಿದ ಮೇಲೆ ಫೋಟೊ ಹಾಕ್ತೀನಿ.

ಶ್ರೀಧರ್.

Housie said...

maneli koorisida ganapathi bidu...

naavu nam roadalli kooristdvi... ondhodhu dina obbabra maneyinda tindi tandu kodtha idru... adanna hanchta idhvee... eega roadallu korisodilla...

VIVEK said...

naaa swalpa kalla....nam anna swalpa dadda....anna thamma, mundin mane sandeepa, pakadmane manu n madu, ellaru otge hogthidvi....aadre ond 50 mane daatadmele SOMARITHANA kaadthithu.....adakke nam anna aakade thirgiddaga....50thidanna 60th anta lekka thapasthidde....addakke yeno SAMBALA kadme eeega!!!!!

ಕಟ್ಟೆ ಶಂಕ್ರ said...

ವಿವೇಕ...
ಅವತ್ತು ಲೆಕ್ಕ ತಪ್ಪುತ್ತಿದ್ದ ನಿಮ್ಮಣ್ಣ M.Com ಮುಗಿಸಿದ.. ಲೆಕ್ಕ ತಪ್ಪಿಸುತ್ತಿದ್ದ ಕಳ್ಳ ರಾಸ್ಕಲ್ (ನೀನು) ಎಂಜಿನಿಯರ್. ಪ್ರಪಂಚ ಬಹಳ ವಿಚಿತ್ರ ಕಣೋ.. ವಿಚಿತ್ರ.

ಕಟ್ಟೆ ಶಂಕ್ರ

Shashikanth S said...

ನಾವು ಸಹ ಚಿಕ್ಕವರಿರುವಾಗ ಹೀಗೆ ಮಾಡ್ತ ಇದ್ವಿ....ಅದರಲ್ಲೂ ಬೀದಿ ಗಣಪನ ಕೂರಿಸೂಕ್ಕೆ ಒಂದು ತಿಂಗಳ ಮೊದಲೆ ಪ್ಲಾನ್ ಮಾಡ್ತ ಇದ್ವಿ..."ಎನ್ರಪ್ಪ ಎಸ್ಟು ಕಲೆಕ್ಶನ್ ಮಾಡಬೇಕು ಈ ಸಾರ್ತಿ, ಲೋ ಮಗ ಈ ಸಾರ್ತಿ ಡೆಕೊರೆಶನ್ ಸಕ್ಕಥಾಗಿರ್ ಬೇಕು...ಅನ್ನೊ ಕಾಲ..........??" ಆ ದಿನಗಳು.....

ಶಶಿಕಾಂತ್

Seema Hegde said...

ಶಂಕರ,
ಎಷ್ಟು ಚೆನ್ನಾಗಿ ಇರ್ತಿದ್ವು ಆ ದಿನಗಳು. ನಮ್ಮೂರಲ್ಲಿ ನೋಡಿದ್ದೇ ಅಲ್ಲದೆ ಶಿರಸಿ ಪೇಟೆಗೂ ಹೋಗಿ ಎಲ್ಲ ಗಣಪತಿಗಳನ್ನೂ ನೋಡಿಕೊಂಡು ಬರ್ತಿದ್ವಿ. ಎಲ್ಲಾ ಕಡೆ ಬೇರೆ ಬೇರೆನೇ ಅಲಂಕಾರ ಮಾಡಿ ಇಟ್ಟಿರ್ತ್ತಿದ್ರು.
ಈಗೆಲ್ಲಾ ಬರೀ ನೆಅಪು ಅಷ್ಟೇ. ಕಾಲಾಯ ತಸ್ಮೈ ನಮಃ :(

ವಿಕಾಸ್ ಹೆಗಡೆ/Vikas Hegde said...

ಶಂಕ್ರಣ್ಣ,

ನಂಬ್ತೀರೋ ಬಿಡ್ತೀರೊ.. ಸಣ್ಣವರಿರುವಾಗ ಹುಚ್ಚು ನಾಯಿ ತರ ಊರೆಲ್ಲಾ ತಿರುಗಿ ಪ್ರತಿವರ್ಷನೂ ಕನಿಷ್ಠ ಅಂದ್ರೆ ನೂರು ಗಣಪತಿ ನೋಡ್ತಿದ್ವಿ . ನಾವು ಎಲ್ಲಿಗೆ ಹೋಗ್ತೀವಿ ಅಂತ ಮನೆಲ್ಲಿ ಗೊತ್ತಾಗೊದಿರಲಿ, ನಮಗೇ ಗೊತ್ತಿರಲಿಲ್ಲ.!! ಮಾರನೇ ದಿನ ಯಾರು ಜಾಸ್ತಿ ನೋಡಿದ್ರು ಅಂತ ಶಾಲೆಲ್ಲಿ ದೊಡ್ಡಸ್ತಿಕೆ ತೋರಿಸ್ಕೋ ಬೇಕಲ್ಲ. ಆದ್ರೆ ಸುಳ್ಳು ಸುಳ್ಳು ಹೇಳೋಕೆ ಮನಸ್ಸ್ತಾಗ್ತಿರ್ಲಿಲ್ಲ. ನಿಜವಾಗಿಯೂ ನೋಡ ಬೇಕೆಂಬ ಮನಸ್ಸಿರ್ತಿತ್ತು. ಒಟ್ನಲ್ಲಿ ಎಲ್ಲಾ ಒಂದೊಂದು ವಯಸ್ಸು... ಈಗಿನ ಮಕ್ಕಳೂ ಹಾಗೇನಾ?? ಗೊತ್ತಿಲ್ಲ. ಆದ್ರೆ ಅವರಿಗೆ ಬಾಲಗಣಪತಿ ಡೀವಿಡಿ ಬಂದಿದೆ :)

ನಿಮ್ಮ ಬರಹ ಓದಿ ಎಲ್ಲಾ ಹಾಗೇ ನೆನಪಾಯಿತು.. ಥ್ಯಾಂಕ್ಯೂ.