Thursday, July 31, 2008

ಹ್ಯಾಪಿ ಬರ್ತ್ ಡೇ... ಸೋಮಾರಿ ಕಟ್ಟೆಗೆ

ಇವತ್ತಿಗೆ ಸರಿಯಾಗಿ ೧ ವರ್ಷದ ಹಿಂದೆ (ಜುಲೈ ೩೧, ೨೦೦೭) ...ಆಫೀಸಲ್ಲಿ ಏನೂ ಕೆಲಸ ಇರ್ಲಿಲ್ಲ..ಹಂಗೆ ಎಷ್ಟು ಹೊತ್ತು ಅಂತಾ ಸುಮ್ನೆ ಇಂಟರ್ನೆಟ್ ಬ್ರೌಸ್ ಮಾಡೋದು ? ಅವಾಗ ಆಫೀಸಲ್ಲಿ ಆರ್ಕುಟ್ ಕೂಡಾ ಬ್ಲಾಕ್ ಆಗಿತ್ತು.
ಸುಮ್ಕೆ ಹಂಗೆ ಟ್ರೈ ಮಾಡುವಾ ಅಂತಾ ಬ್ಲಾಗ್ ಶುರು ಮಾಡಿದೆ.
ಹೆಸರು ಇದಬೇಕಾದ್ರೆ ತಲೆ ಪರ ಪರ ಅಂತಾ ಕೆರ್ಕೊಂಡೆ.
ಮೈಸೂರಲ್ಲಿ ಇದ್ದಾಗ ಸಂಜೆ ಆಗ್ತಿದ್ದ ಹಾಗೆ ಕಟ್ಟೆಗೆ ಓದ್ತಾ ಇದ್ವಿ.
ಅದಕ್ಕೆ ನಮ್ಮಪ್ಪ ಉಗಿಯೋರು "ಅದೇನು ಅಂತಾ ಆ ಸೋಮಾರಿ ಕಟ್ಟೆನಲ್ಲಿ ಕೂರ್ತೀರೋ ಮುಂಡೇವಾ" ಅಂತಾ..
ಅದಕ್ಕೆ ನನ್ನ ಬ್ಲಾಗಿಗೆ "ಸೋಮಾರಿ ಕಟ್ಟೆ" ಅನ್ನೋದಕ್ಕಿಂತಾ ಒಳ್ಳೆ ಹೆಸರು ಬೇರೆ ತೋಚಲಿಲ್ಲ.
ಅದು ಬಿಡಿ, ಕಳೆದ ೧ ವರ್ಷದಲ್ಲಿ ಸಖತ್ ಚೇಂಜ್ ಆಗಿದೆ ನನ್ನ ಬ್ಲಾಗು. ಬರಹಗಳು, ಆಟೋ ಅಣಿಮುತ್ತುಗಳು, ತಮಾಶೆಯಾಗಿ ಕಾಣೋ ಪ್ರಪಂಚ... etc etc ಹಾಕ್ತಾ ಬಂದಿದೀನಿ. ಅದಕ್ಕೆ ನಿಮ್ಮಿಂದ ಪ್ರತಿಕ್ರಿಯೆಗಳು ಬಂದಿವೆ, ಉಗಿತಗಳು ಸಿಕ್ಕಿವೆ.
ಎಲ್ಲಕ್ಕಿಂತಾ ಹೆಚ್ಚಾಗಿ ಕನ್ನಡ ಬ್ಲಾಗರುಗಳ ಬೆಚ್ಚನೆಯ ಸ್ನೇಹ ಸಿಕ್ಕಿದೆ. ಇನ್ನೇನು ಬೇಡಾ. ಹೀಗೆ ಮುಂದುವರಿಸಿಕೊಂಡು ಹೋಗೋ ಹಾಗೆ ಪ್ರೋತ್ಸಾಹ ಕೊಡ್ತಾ ಇರೀ.. ಅಷ್ಟೆ ಸಾಕು..
ಹಂಗೆ ಇಲ್ಲಿ ಸ್ವಲ್ಪ ಮಿಠಾಯಿ ಇಟ್ಟಿದೀನಿ, ದಯವಿಟ್ಟು ಸ್ವೀಕರಿಸಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

10 comments:

Housie said...

ಮಿಠಾಯಿಗಳಿಗೆ ಧನ್ಯವಾದಗಳು....

ಶುಭವಾಗಲಿ....

ಸುಶ್ರುತ ದೊಡ್ಡೇರಿ said...

ಕಂಗ್ರಾಟ್ಸೋ ಶಂಕ್ರಣ್ಣಾ.. ಹುಟ್ಟಿದ್ ಹಬ್ಬದ್ ಶುಭಾಶಯಾ.. ನಂಗೇ ಈ ಚಿತ್ರದ್ ಸ್ವೀಟ್ಸೆಲ್ಲಾ ಆಗಲ್ಲಾ.. ಪಾರ್ಟಿ ಬೇಕೂ ಪಾರ್ಟೀ..

Anonymous said...

Somaari kattege, many many haapy returns of the day. Somaari katte nooraru varsha chennagirli...
-Krishnaprasad H G

ವಿಕಾಸ್ ಹೆಗಡೆ/Vikas Hegde said...

ವರ್ಷ ಪೂರೈಸಿದ್ದಕ್ಕೆ ಕಟ್ಟೆ ಶಂಕ್ರಣ್ಣನಿಗೆ ಅಭಿನಂದನೆಗಳು.

ತಮಾಷೆಯ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಪೋಸ್ಟುಗಳು, ಕೆಲವೊಮ್ಮೆ ಗಂಭೀರ ವಿಚಾರಗಳು, ಆಟೋ ಇನ್ನಿತರ ಚಿತ್ರಗಳು.. ಹೀಗೆ ಕನ್ನಡ ಬ್ಲಾಗ್ ಲೋಕದಲ್ಲಿ ವಿಭಿನ್ನವಾಗಿ ಮೂಡಿಬಂದಿದ್ದು "ಸೋಮಾರಿಕಟ್ಟೆ". . ಮುಂದೆಯೂ ಹೀಗೆ ಇನ್ನೂ ಚೆನ್ನಾಗಿ ಬರುತ್ತಿರಲಿ ಎಂದು ಆಸೆ, ಹಾರೈಕೆ.

typical ಕಟ್ಟೆ ತರ ಆಗ್ಲಿ ಬ್ಲಾಗು :)

wish u happy blogging.

Susheel Sandeep said...

ಹಾರ್ದಿಕ ಶುಭಾಶಯಗಳು ...ಸೋಮಾರಿ ಕಟ್ಟೆಗೆ ಸೋಮಾರಿತನ ಕಾಡದೆ ಎಡಬಿಡದೆ ನಿತ್ಯ ಪೋಸ್ಟುಗಳು ಹೀಗೇ ಬರ್ತಾ ಇರ್ಲಿ ಅಂತ ಹಾರೈಸ್ತೀನಿ

Anonymous said...

ondne varshada huttu habakke hatrika shubhashaygalu .. heege varshanugatle nammellarannu ranjisuttirali anta aashisuttene

gowthama

ಜಿತೇಂದ್ರ said...

ಸೋಮಾರಿ ಕಟ್ಟೆಗೆ ವರ್ಷ ತುಂಬಿದ್ದಕ್ಕೆ ಅಭಿನಂದನೆ. ಮಿಠಾಯಿ ಸಿಹಿ ತುಸು ಹೆಚ್ಚಾಗಿಯೇ ಇದೆ!
-ಜಿತೇಂದ್ರ

Abhijith said...

Brilliant work maga... Hinge katteli maathu kathe nadithane irli .. All the Best!!! :)

Praveen said...

chindi maga, sakattagide.. Ningagi ondu Ani muttu,
Sikre Auto
Tegitane Photo
Avne Shankranna...

Keep it up guru.
Praveen

ಕುಕೂಊ.. said...

ನೂರಾರು ಸುಗ್ಗಿಗಳು(ವರ್ಷ) ಈಗೇ ತಾಣವಾಗಿರಲಿ ನಮ್ಮಂತ ಸೋಮಾರಿಗಳಿಗೆ ಈ ಕಟ್ಟೆ. ಸುಂದರ ಆಟೋ ಅಣಿಗಳನ್ನು ಕಳಿಸುತ್ತ ಗಂಭೀರ ವಿಚಾರವನ್ನು ಮಾಡುವತ್ತ ನಮ್ಮ ಯೋಚನೆಗಳನ್ನು ಹರಿಸುವಂತೆ ಮಾಡಲಿ. ನಮ್ಮೆಲ್ಲರ ಶುಭಹಾರೈಕೆಯೊಂದಿಗೆ.
ಸಿಹಿತಿಂಡಿಗಳು ತುಂಬಾ ಸವಿ ಸವಿಯಾಗಿವೆ.

ನನ್ನಿ
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ