Friday, July 25, 2008

ಕುಡಿದಾಗ ಕಾಮನ್ ಆಗಿ ಹೊಡಿಯೋ ಡೈಲಾಗುಗಳು

ಕುಡಿದಾಗ ಬಾಯಿಂದ ಡೈಲಾಗುಗಳು, ಬಾಟಲಿಯಿಂದ ಗುಂಡು ಸುರಿದಷ್ಟೇ ಸಲೀಸಾಗಿ ಬರುತ್ತಲ್ವೆ ??
ಅದೇ, ಕಾಮನ್ ಆಗಿ ಬರೋ ಡೈಲಾಗುಗಳು ಇಲ್ಲಿವೆ ನೋಡಿ..

೧. ನೀನು ನನ್ನ ತಮ್ಮ ಕಣ್ಲಾ..

೨. ಕುಡಿದಿದ್ದೀನಿ ಅನ್ಕೊಂಡಿದ್ಯಾ?

೩. ಗಾಡಿ ನಾನು ಓಡುಸ್ತೀನಿ ಮಗಾ

೪. ಬೇಜಾರ್ ಮಾಡ್ಕೋಬೇಡಾ ಮಗಾ

೫. ನಿನ್ನ ಕಂಡ್ರೆ ಸಖತ್ ಮರ್ಯಾದೆ ಇದೆ ಮಗಾ

೬. ಇವತ್ತು ಹೇಳ್ಬುಡು ಮಗಾ ಅವ್ಳಿಗೆ ಏನಾದ್ರೂ ಆಗ್ಲಿ ನೋಡ್ಕಂಡ್ರಾಯ್ತು

೭. ಯಾಕೋ ಏರ್ತಾನೇ ಇಲ್ಲಾ ಕಣ್ಲಾ ಇವತ್ತು

೮. ನಂಗೇನು ಕಿಕ್ ಹೊಡೀತಾ ಇದೆ ಅನ್ಕೊತಾ ಇದೀಯಾ?

೯. ಕುಡ್ದು ಮಾತಾಡ್ತಾ ಇದೀನಿ ಅಂತಾ ಅನ್ಕೋಬೇಡಾ ಮಗಾ

೧೦. ಸಾಕಾಗತ್ತಾ ಮಗಾ ಇಷ್ಟೇ ?

೧೧. ಚೋಟೂ.. ಇನ್ನೊಂದು ಛೋಟಾ ಪೆಗ್ ತಗೊಂಡ್ ಬಾ

೧೨. ಮಗ್ನೆ... ಕುಡಿಯೋದನ್ನ ನೀನು ನಂಗೆ ಹೇಳಿಕೊಡ್ತ್ಯಾ?

೧೩. ಏನೇ ಹೇಳ್ ಮಗಾ... ಬಾಳಾ ಬೇಜಾರಾಗೋ ಮಾತು ಹೇಳ್ಬುಟ್ಟೆ ನೀನು

೧೪. ಏನೇ ಹೇಳ್ ಮಗಾ...ನನ್ ತಮ್ಮ ಕಣ್ಲಾ ನೀನು

೧೫. ನಿಂಗೆ ಏನ್ ಬೇಕು ಮಗಾ ಹೇಳು..ಪ್ರಾಣಾ.. ಪ್ರಾಣಾ ಕೂಡಾ ಕೊಡ್ತೀನಿ

೧೬. ಇವತ್ತಿನ್ ತನ್ಕಾ ನಂಗೆ ಕಿಕ್ ಹತ್ತಿಲ್ಲಾ.. ಇವತ್ತೇನೋ ದೊಡ್ಡದಾಗಿ ಹೇಳ್ತ್ಯಾ ?? ಬೆಟ್ಸ್ ಕಟ್ಟು ನೋಡೇ ಬಿಡೋಣಾ ಇವತ್ತು

೧೭. ಸರಿ ಮಗಾ.. ಇವತ್ತು ನಿನ್ ಬಗ್ಗೆ ಅವ್ಳ ಹತ್ರ ಮಾತಾಡ್ತೀನಿ.. ಅವ್ಳ ಫೋನ್ ನಂಬರ್ ಕೊಡು

೧೮. (ಹುಡುಗಿ ಬಗ್ಗೆ) ಲೋ ಲೋ ಲೋ.. ನಿಮ್ಮ್ ಅತ್ತಿಗೆ ಥರಾ ಕಣ್ಲಾ ಅವ್ಳು... ಭಾಭಿ ನಿಂಗೆ, ಸರಿಯಾಗಿ ಇರು ಮಗ್ನೆ

೧೯. ಅರ್ಥ ಮಾಡ್ಕೋ ಮಗಾ.. ನಿಂಗೆ ಸರಿ ಇಲ್ಲಾ ಕಣ್ಲಾ ಅವ್ಳು (ಲವ್ ಬಗ್ಗೆ ಉಪದೇಶ)

೨೦. ನೀನು.. ನೀನು ಕೇಳ್ಕೊತಾ ಇದೀಯಾ ಅಂತ ಅವ್ಳನ್ನ ಬಿಡ್ತಾ ಇದೀನಿ ಮಗಾ..ಇವತ್ತಿಂದ ನಿನ್ನವ್ಳು ಕಣ್ಲಾ.. ನಡೀ, ಇದೇ ಮಾತಿಗೆ ಇನ್ನೊಂದು ಪೆಗ್ ಹಾಕವಾ

೨೧. ಯಾಕ್ಲಾ ?? ನಂಗೇನ್ ಜಾಸ್ತಿ ಆಗಿದೇ ಅನ್ಕೊತಾ ಇದೀಯಾ ?? ಮಗ್ನೆ, ಇನ್ನೊಂದು ಫುಲ್ಲ್ ಬಾಟಲ್ ಖಾಲಿ ಮಾಡ್ತೀನಮ್ಮಾ

೨೨. ನಾನ್ ಎಣ್ಣೆ ಹಾಕ್ದಷ್ಟು ನೀನ್ ನೀರ್ ಕುಡ್ದಿಲ್ಲಾ.. ನಂಗೇ ಆವಾಜಾ

ಇದು.. ಸೆಕೆಂಡ್ ಬೆಸ್ಟ್ ಡೈಲಾಗು

೨೩. ಯಾಕೋ ಮಗಾ.. ಇವತ್ತು ಸಿಕ್ಕಾಪಟ್ಟೆ ಜ್ನಾಪ್ಕ ಬರ್ತಾ ಇದಾಳೆ ಕಣ್ಲಾ

ಅಲ್ಟಿಮೇಟ್ ಡೈಲಾಗ್ ಅಂದ್ರೆ ಇದು...

೨೪. ಬಡ್ಡಿಮಗಂದು.. ಇವತ್ತಿಗೆ ಲಾಸ್ಟು, ಇನ್ಮೇಲೆ ಕುಡಿಯಲ್ಲಪ್ಪಾ

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

6 comments:

Anonymous said...

ಚೆನ್ನಾಗಂದ್ರಿ... ಚೆನ್ನಾಗಂದ್ರಿ... ಹಿಹ್ಹಿಹ್ಹಿ....

chandana said...

"ನಾನ್ ಎಣ್ಣೆ ಹಾಕ್ದಷ್ಟು ನೀನ್ ನೀರ್ ಕುಡ್ದಿಲ್ಲಾ.. ನಂಗೇ ಆವಾಜಾ " ಇದಂತು ಸೂಪರ್ ಶಂಕ್ರ.

Susheel Sandeep said...

ಐಮ್ ಸ್ಟೆಡೀ, ಆಲ್ ಅಂಡರ್ ಕಂಟ್ರೋಲ್, ಡೋಂಟ್ ವರಿ ಮಾಡ್ಕೋಬ್ಯಾಡಾ, ನಾನೇ ನಿನ್ ಡ್ರಾಪ್ ಮಾಡ್ತೀನಿ ಇವತ್ತು!!

ಸೂಪರ್ ಸಿವಾ!

ವಿಕಾಸ್ ಹೆಗಡೆ/Vikas Hegde said...

ಹ್ಹ ಹ್ಹ ಹ್ಹ. ಒಳ್ಳೇ ಕಲೆಕ್ಷನ್ನು.

ಕೆಲವೊಂದು ವಾಕ್ಯಗಳಂತೂ ಮತ್ತೆ ಮತ್ತೆ ನೆನಪಿಗೆ ಬಂದೂ ಬಂದೂ ನಗು ಬರ್ತಿದೆ.

ಕುಡ್ದು ಮಾತಾಡ್ತಾ ಇದೀನಿ ಅಂತಾ ಅನ್ಕೋಬೇಡಾ ಮಗಾ :)

Santhosh said...

ಏನ್ಲಾ, ಎಣ್ಣಿ ಹೊಡ್ಕೊಂಡು TIGHT ಆಗಿ ಬರ್ದಿದ್ದೀಯ?
ಪಾಯಿಂಟ್ ನುಂ ೧ & ಪಾಯಿಂಟ್ ನುಂ ೧೪ ಒಂದೆಯ್ ಇದ್ದೆಯಲ್ಲ?

Navilugari said...

shankrannna..samasta kudukaru ond sala kannu munde bandu hodaru....idu naan barnalli kelsa maadovaaga keliskota idda yella dailaaakugalu...onde ondu miss maadilla neenu..hahahhahahahaha


thaanku thaanku matte yella nenap maadikottiddakkke...

somu