Showing posts with label ಹ್ಯಾಪಿ ಬರ್ತ್ ಡೇ. Show all posts
Showing posts with label ಹ್ಯಾಪಿ ಬರ್ತ್ ಡೇ. Show all posts

Thursday, July 31, 2008

ಹ್ಯಾಪಿ ಬರ್ತ್ ಡೇ... ಸೋಮಾರಿ ಕಟ್ಟೆಗೆ

ಇವತ್ತಿಗೆ ಸರಿಯಾಗಿ ೧ ವರ್ಷದ ಹಿಂದೆ (ಜುಲೈ ೩೧, ೨೦೦೭) ...ಆಫೀಸಲ್ಲಿ ಏನೂ ಕೆಲಸ ಇರ್ಲಿಲ್ಲ..ಹಂಗೆ ಎಷ್ಟು ಹೊತ್ತು ಅಂತಾ ಸುಮ್ನೆ ಇಂಟರ್ನೆಟ್ ಬ್ರೌಸ್ ಮಾಡೋದು ? ಅವಾಗ ಆಫೀಸಲ್ಲಿ ಆರ್ಕುಟ್ ಕೂಡಾ ಬ್ಲಾಕ್ ಆಗಿತ್ತು.
ಸುಮ್ಕೆ ಹಂಗೆ ಟ್ರೈ ಮಾಡುವಾ ಅಂತಾ ಬ್ಲಾಗ್ ಶುರು ಮಾಡಿದೆ.
ಹೆಸರು ಇದಬೇಕಾದ್ರೆ ತಲೆ ಪರ ಪರ ಅಂತಾ ಕೆರ್ಕೊಂಡೆ.
ಮೈಸೂರಲ್ಲಿ ಇದ್ದಾಗ ಸಂಜೆ ಆಗ್ತಿದ್ದ ಹಾಗೆ ಕಟ್ಟೆಗೆ ಓದ್ತಾ ಇದ್ವಿ.
ಅದಕ್ಕೆ ನಮ್ಮಪ್ಪ ಉಗಿಯೋರು "ಅದೇನು ಅಂತಾ ಆ ಸೋಮಾರಿ ಕಟ್ಟೆನಲ್ಲಿ ಕೂರ್ತೀರೋ ಮುಂಡೇವಾ" ಅಂತಾ..
ಅದಕ್ಕೆ ನನ್ನ ಬ್ಲಾಗಿಗೆ "ಸೋಮಾರಿ ಕಟ್ಟೆ" ಅನ್ನೋದಕ್ಕಿಂತಾ ಒಳ್ಳೆ ಹೆಸರು ಬೇರೆ ತೋಚಲಿಲ್ಲ.
ಅದು ಬಿಡಿ, ಕಳೆದ ೧ ವರ್ಷದಲ್ಲಿ ಸಖತ್ ಚೇಂಜ್ ಆಗಿದೆ ನನ್ನ ಬ್ಲಾಗು. ಬರಹಗಳು, ಆಟೋ ಅಣಿಮುತ್ತುಗಳು, ತಮಾಶೆಯಾಗಿ ಕಾಣೋ ಪ್ರಪಂಚ... etc etc ಹಾಕ್ತಾ ಬಂದಿದೀನಿ. ಅದಕ್ಕೆ ನಿಮ್ಮಿಂದ ಪ್ರತಿಕ್ರಿಯೆಗಳು ಬಂದಿವೆ, ಉಗಿತಗಳು ಸಿಕ್ಕಿವೆ.
ಎಲ್ಲಕ್ಕಿಂತಾ ಹೆಚ್ಚಾಗಿ ಕನ್ನಡ ಬ್ಲಾಗರುಗಳ ಬೆಚ್ಚನೆಯ ಸ್ನೇಹ ಸಿಕ್ಕಿದೆ. ಇನ್ನೇನು ಬೇಡಾ. ಹೀಗೆ ಮುಂದುವರಿಸಿಕೊಂಡು ಹೋಗೋ ಹಾಗೆ ಪ್ರೋತ್ಸಾಹ ಕೊಡ್ತಾ ಇರೀ.. ಅಷ್ಟೆ ಸಾಕು..
ಹಂಗೆ ಇಲ್ಲಿ ಸ್ವಲ್ಪ ಮಿಠಾಯಿ ಇಟ್ಟಿದೀನಿ, ದಯವಿಟ್ಟು ಸ್ವೀಕರಿಸಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ