Tuesday, April 28, 2009

ಆಟೋ ಅಣಿಮುತ್ತುಗಳು - ೬೦ - ಸಿಕ್ಕಿದ್ಲು, ನಗ್ದಲು, ಮಕ್ಕಳು

ಫುಲ್ ಫಾಸ್ಟ್ ಸಂಸಾರ ಅನ್ಸುತ್ತೆ ಈ ಅಣ್ಣನದು.
ಜೊತೆಗೆ ಛೀ ಕಳ್ಳಿ ಅಂತ ಬೇರೆ.
ನನ್ನ ಮಿತ್ರ ಶ್ರೀಚರಣ ಕಳ್ಸಿದ್ದು ಈ ಫೋಟೋನಾ.
ಲಿರಿಕ್ಸ್ ಏನೋ ಚೆನ್ನಾಗಿದೆ (ಡುಂಡಿರಾಜ್ ಚುಟುಕು), ಆದ್ರೆ ಬರೆದ ಮಹಾನುಭಾವ ಯಾರಪ್ಪಾ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, April 23, 2009

ಲಂಡನ್ ಪಬ್ಬಿನ ಜಗಳ ಹಾಗು ಸಹಾಯಕ್ಕೆ ಬಂದ PAN ಕಾರ್ಡು

ಇದು ಸುಮಾರು ಎರಡೂವರೆ ವರ್ಷದ ಹಿಂದೆ ನಡೆದ ಘಟನೆ, ಅಂದ್ರೆ November 2006. ಆ ವರ್ಷ ಸೆಪ್ಟೆಂಬರಿನಲ್ಲಿ ನಾನು ಮೊದಲ ಬಾರಿ ವಿದೇಶಕ್ಕೆ ಕಾಲಿಟ್ಟಿದ್ದು. ನಾನು ಭಾರತದಿಂದ ಹೊರಗೆ ಕಾಲಿಟ್ಟ ಮೊದಲ ದೇಶ England. ಲಂಡನ್ನಿನಿಂದ ಸುಮಾರು ೬೦ ಮೈಲಿ ದೂರ ಇದ್ದ BASILDON ಅನ್ನೋ ಊರಲ್ಲಿ ನನ್ನ ಕೆಲಸ ಇದ್ದದ್ದು. ಲಂಡನ್ನಲ್ಲಿ ಇಳಿದದ್ದು Heathrow ವಿಮಾನ ನಿಲ್ದಾಣದಲ್ಲಿ. ಅದು ಬಿಡಿ, ಮೊದಲ ಬಾರಿ ವಿದೇಶಿ ನಗರದಲ್ಲಿ ಇಳಿದದ್ದು, ಸುಮಾರು 5-10 ನಿಮಿಷ ಬೇಕಾಯ್ತು, ಲಂಡನ್ನಲ್ಲಿ ಇದ್ದೀನಿ ಅಂತಾ ಕನ್ಫರ್ಮ್ ಆಗಲು.

ನನ್ನ ಲಂಡನ್ನಿನ ಅನುಭವ ಕಥನ ಬಿಡಿ, ಇನ್ನು ಇದರ ಬಗ್ಗೆ ಬರೀತಾ ಕೂತರೆ ಮಹಾಕಾವ್ಯ ಆಗುತ್ತೆ..

ನನ್ನ ಇಬ್ರು ಮೈಸೂರಿನ ಸ್ನೇಹಿತರು ಅಭಿ ಮತ್ತು ಸಿಮ್ಮಿ (ವಿನಯ್), ಆ ವೇಳೆಯಲ್ಲಿ ಲಂಡನ್ನಿನ Middlesex University ಯಲ್ಲಿ MS in International Finance ಓದುತ್ತಾ ಇದ್ರು. ಹೊರದೇಶದ ಆ ನಗರದಲ್ಲಿ ನನ್ನವರು ಎನ್ನುವ ಜೀವ ಇವೆರಡೇ. ಹಾಗಾಗಿ ಪ್ರತಿ ವೀಕೆಂಡು ನನ್ನೂರಿನಿಂದ ಲಂಡನ್ನಿಗೆ ಪ್ರಯಾಣ. ಇವರಿಬ್ಬರು ಇದ್ದದ್ದು ಇವರ ಹಾಸ್ಟೆಲ್ಲಿನಲ್ಲಿ. ನಾನೂ ಇವರ ಹಾಸ್ಟೆಲಿನಲ್ಲೇ ತಂಗುತ್ತಿದ್ದೆ. ಶನಿವಾರ ಬೆಳಿಗ್ಗೆ ಅಲ್ಲಿ ತಲುಪಿ, ಭಾನುವಾರ ಸಂಜೆ ವಾಪಸ್ ನನ್ನೂರಿಗೆ.

ಶನಿವಾರದಂದು ಮೂವರೂ ಲಂಡನ್ನಿನ ಗಲ್ಲಿ ಗಲ್ಲಿ ಸುತ್ತಿ, ಸಂಜೆ ಅವರ ಹಾಸ್ಟೆಲಿನ ರೂಮಿಗೆ ಬಂದು, ನಾನ್ಸೆನ್ಸ್ ಮಾತಾಡ್ತಾ ರಾತ್ರಿ ಕಳೀತಾ ಇದ್ವಿ. ಹೀಗೆ ಒಮ್ಮೆ ನವೆಂಬರ್ 2006 ನ ಒಂದು ಶನಿವಾರ. ಅಭಿ ಮತ್ತು ಸಿಮ್ಮಿಯ ಹಾಸ್ಟೆಲ್ ಇದ್ದದ್ದು North London ನಲ್ಲಿ. ಶನಿವಾರ ನಮ್ಮ ಬೀದಿ ಸುತ್ತಾಟ ಮುಗಿಸಿ, ಅಲ್ಲೇ North London ನ Hendon Central ಅನ್ನೋ ಜಾಗಕ್ಕೆ ಹೋದ್ವಿ. ಅಲ್ಲಿ THE BODHRANS ಅನ್ನೋ ಪಬ್ ಇದೆ, ಹಾಗು ಅಲ್ಲಿ ಅಭಿಯ ಕ್ಲಾಸ್ಮೇಟ್ ಒಬ್ಬಾಕೆ ಕೆಲಸ ಮಾಡ್ತಾ ಇದ್ಳು. ಹಾಗಾಗಿ ಆ ಪಬ್ಬಿಗೆ ಕರ್ಕೊಂಡು ಹೋದ. ಮಾಮೂಲಾಗಿ ನಾನು ಅಭಿ ಹಾಗು ಸಿಮ್ಮಿ ಮಾತಾಡ್ತಾ, ಅಭಿ ತನ್ನ Guinness ಇಳುಸ್ತಾ ಇದ್ದ, ನಾನು Kronenbourg ಇಳುಸ್ತಾ ಇದ್ದೆ. ಪಕ್ಕದಲ್ಲಿ ಒಬ್ಬ ಫುಲ್ ಚಿತ್ತಾಗಿದ್ದ. ನೋಡಕ್ಕೆ ಬ್ರಿಟಿಷ್ ಥರ ಇರಲಿಲ್ಲ, ಆದ್ರೆ ಸ್ವಲ್ಪ ಫ್ರೆಂಚ್ ಥರ ಇದ್ದ. ನಮ್ಮನ್ನು ನೋಡಿ, ಸಡನ್ನಾಗಿ ನಮ್ಮನ್ನು ಟಾರ್ಗೆಟ್ ಮಾಡುತ್ತಾ ತನ್ನನ್ನು ತಾನೇ

"I am a terrorist.." ಅನ್ನೋಕ್ಕೆ ಶುರು ಮಾಡಿದ.

ನಾನು ಅದರ ಬಗ್ಗೆ ಗಮನ ಕೊಡದೆ ಸುಮ್ನೆ ಅಭಿ, ಸಿಮ್ಮಿ ಜೊತೆ ಮಾತಾಡ್ತಾ ಕೂತೆ. ಪದೇ ಪದೇ ಹೀಗೆ ಅನ್ನುತ್ತಾ ಇದ್ದ. ಸ್ವಲ್ಪ ಹೊತ್ತಾದ ಮೇಲೆ...

"You know, you people look like terrorists and are terrorists" ಅಂದ.

ನಮ್ಮ ಅಭಿ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಮೆಂಟ್ಲು ಹಾಗು ಧೈರ್ಯ ಜಾಸ್ತಿ. ಸಡನ್ನಾಗಿ ಅವನ ಕಡೆ ತಿರುಗಿ
"You know mate, you too look like a F***in Algerian Terrorist" ಅಂದ. ಅವ್ನು ಮೋಸ್ಟ್ಲಿಫ್ರೆಂಚ್ ಅನ್ಸುತ್ತೆ.ಈ ಫ್ರೆಂಚರಿಗೆ Algerians ಕಂಡ್ರೆ ಆಗಲ್ಲ. ಸಿಕ್ಕಾಪಟ್ಟೆ ಉರಿ ಶುರು ಆಯ್ತು ಅನ್ಸುತ್ತೆ. ಮೊದಲೇ ಕುಡಿದು ಚಿತ್ತಾಗಿದ್ದ, ಏನೇನೋ ಬಡಬಡಾಯಿಸೋಕ್ಕೆ ಶುರು ಮಾಡಿದ. ನಾನು ನೋಡೋಷ್ಟು ನೋಡಿದೆ.

ಅವ್ನು ಕೂಗಾಡೋದು ಜಾಸ್ತಿ ಆಯ್ತು. ಅಲ್ಲಿಯ ಪಬ್ಬು, ಬಾರ್, ಡಿಸ್ಕೋ ಗಳಲ್ಲಿ ಮಸ್ತ್ ಹೈಟ್, ಮಸ್ತ್ ತೂಕ ಇರೋ ಜನರನ್ನ Public Safety ಅಂತಾ ಇಟ್ಟಿರ್ತಾರೆ, ಅಂದ್ರೆ Nothing but Bouncers. ಪಬ್ಬು ಬಾರಿನಲ್ಲಿ ಕಿರಿಕ್ ಆದ್ರೆ ತಡೆಯೋಕ್ಕೆ ಅಷ್ಟೇ. ಅಲ್ಲಿನ Public Safety Man ಹತ್ರ ಹೋದೆ. ಆ ಕ್ಷಣದಲ್ಲಿ ಅದೇನ್ ಐಡಿಯಾ ಹೊಳೀತೋ ಏನೋ, ಪರ್ಸನ್ನು ತೆಗೆದು,
ಅದ್ರಲ್ಲಿ ಇದ್ದ ನನ್ನ PAN ಕಾರ್ಡನ್ನು ಅವನಿಗೆ ತೋರಿಸಿ...

"Look Mate, that drunkard is passing some real nonsense rasist abuses and comments.
I work for the Income Tax Department, Government of India. If that person doesn't stop his nonsense, I will be forced to call the police, lodge a complaint on the grounds of racial abuse and also I need to call my embassy" ಅಂದೆ.

ನನ್ನ PAN ಕಾರ್ಡನ್ನು ನೋಡಿದ. ಯಾವಾಗ ನಾನು Racial Abuse ಅಂತಾ ಕಂಪ್ಲೇಂಟ್ ಕೊಡ್ತೀನಿ ಅಂದೆನೋ, ಅವಾಗ ಆ ಕೂಗಾಡುತ್ತಿದ್ದವನ ಹತ್ರ ಹೋಗಿ, ಬಾಯಿ ಮುಚ್ಚಿಕೊಂಡು ಇರು ಅಂತ ಹೇಳಿ, ಅವನನ್ನು ಹೊರಗೆ ಹಾಕಿದ.

ಯಾಕೆ ಅಂದ್ರೆ ಇಂಗ್ಲೆಂಡಿನಲ್ಲಿ Racial Abuse, Racism ಅನ್ನೋದು ಒಂದು ತೀವ್ರ ಅಪರಾಧ. ಹಾಗಾಗಿ ಈ ಥರ ಘಟನೆ ನಡೆದರೆ, ಕಂಪ್ಲೇಂಟ್ ಕೊಡ್ತೀನಿ ಅಂದಾಗ ಅಲ್ಲಿನ ಬಿಳಿ ಜನ ಸಖತ್ ಹೆದ್ರುತಾರೆ. ಜೊತೆಗೆ ಪಬ್ಬಿನಲ್ಲಿ ಈ ಥರ ಘಟನೆ ನಡೆದು, ಆ ಪಬ್ಬಿನಲ್ಲಿ ಕೆಲಸ ಮಾಡೋರು ಏನೂ ಮಾಡಲಿಲ್ಲ ಅಂತ ಕಂಪ್ಲೇಂಟು ಹಾಕಿದರೆ, ಆ ಪಬ್ಬಿನ ಲೈಸೆನ್ಸ್ ಕ್ಯಾನ್ಸೆಲ್ ಆಗೋ ಸಾಧ್ಯತೆ ಇದೆ.


ಮೊನ್ನೆ ನನ್ನ ಕೊಲೀಗ್ ಹತ್ರ ಈ ಘಟನೆ ಹೇಳಿದೆ..
ಅವ್ರು, "ಸಖತ್ತಾಗಿದೆ ಶಂಕರ್ ಇದು, ಆದ್ರೆ ಬ್ಲಾಗಿನಲ್ಲಿ ಇನ್ನೂ ಯಾಕೆ ಇದನ್ನು ಹಾಕಿಲ್ಲಾ ?" ಅಂತ ಕೆಳುದ್ರು..
ಹಾಗಾಗಿ ಇವತ್ತು ಹಾಕಿದೆ.
ಅಂತೂ ಇಂತೂ ನನ್ನ PAN ಕಾರ್ಡು ಲಂಡನ್ನಲ್ಲಿ ಹೀಗೆ ಸಖತ್ತಾಗಿ ಉಪಯೋಗಕ್ಕೆ ಬಂತು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, April 20, 2009

ಆಟೋ ಅಣಿಮುತ್ತುಗಳು - ೫೯ - ಹೊರಟ್ರೆ ನಿಂತ್ರೆ

ಲಕ್ಷ್ಮಕ್ಕ ಕಳ್ಸಿದ ಫೋಟೋ ಇದು.


ಫೋಟೋದಲ್ಲಿ ಸರಿಯಾಗಿ ಕಾಣದೆ ಇದ್ರೆ ಇಲ್ಲಿ ಓದಿ :
ಹೊರಟ್ರೆ ಜಾತ್ರೆ ನಿಂತ್ರೆ ಹಬ್ಬ
ಅಣ್ಣ ಫುಲ್ ಜಾತ್ರೆ ಹಾಗು ಹಬ್ಬಕ್ಕೆ ರೆಡಿ ಆಗಿದಾನೆ ಅನ್ಸುತ್ತೆ.
-----------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, April 17, 2009

ದಿನಾಂಕವೇ ಚೇಂಜ್ ಆಗಿದೆ !!

ಇದು ಇವತ್ತಿನ ಸಂಜೆವಾಣಿಯ ಆನ್-ಲೈನ್ ಆವೃತಿಯಲ್ಲಿ ಕಂಡುಬಂದಿದ್ದು.
ಇನ್ಯಾವ ಮಟ್ಟಿಗೆ ಈ ಪತ್ರಿಕೆಯವರು ಕೆಲಸ ಮಾಡ್ತಾರೋ ಏನೋ. ವೆಬ್-ಸೈಟಿನಲ್ಲಿ ತೋರುಸ್ತಾ ಇರೋದು -
April 18, 2009, ಪತ್ರಿಕೆಯ PDF ಅವತರಣೆಯಲ್ಲಿ ಕಾಣುಸ್ತಾ ಇರೋದು ಶುಕ್ರವಾರ 17-4-2009 ಅಂತಾ.
ಇಷ್ಟು ಬೇಜವಾಬ್ದಾರಿತನ, ನಿರ್ಲಕ್ಷ್ಯ ಇರಬಾರದು ಅಲ್ವೇ ? ಇದರ ಜೊತೆಗೆ ದೊಡ್ಡದಾಗಿ ಹೇಳಿಕೊಳ್ಳೋದು


"The First Indian Newspaper to Podcast" ಅಂತ. ಯಾವ ಗ್ರಹಚಾರವಪ್ಪಾ ಇದು ?
ಇನ್ಮೇಲೆ ಪತ್ರಿಕೋದ್ಯಮ ಹೇಗಿರಬಾರದು ಅಂತ ತೋರಿಸೋಕ್ಕೆ "ಸಂಜೆವಾಣಿ" ಯನ್ನು ಮಾದರಿಯಾಗಿ ಇಟ್ಕೊಬೇಕು.
ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಈ ವಿಚಾರವಾಗಿ ಲೆಟರ್ ಬರೀತೀನಿ.
ಪತ್ರಿಕೋದ್ಯಮ ಪದವಿ ಹಾಗು ಸ್ನಾತಕೊತ್ತರದ ಪಠ್ಯದಲ್ಲಿ ಇದನ್ನು ಅಳವಡಿಸಿ ಅಂತ. ಹೆಂಗೆ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, April 9, 2009

ದೇಶದ ಶಾಂತಿ ಹಾಗು ಭದ್ರತೆಗೆ ಇದಕ್ಕಿಂತಾ ಅಪಾಯ ಬೇಕೇ ?

ಇವತ್ತಿನ ಪೇಪರಿನಲ್ಲಿ ತಮಿಳುನಾಡಿನ ಎಂ.ಡಿ.ಎಂ.ಕೆ ನಾಯಕ ವೈಕೋ ಹೇಳಿರೋದನ್ನು ಓದಿದಾಗ ಮೈಮೇಲೆ ಚೇಳು ಹರಿದ ಹಾಗಾಯ್ತು. LTTE ಯನ್ನು ನಮ್ಮಲ್ಲಿ ಪ್ರತ್ಯೇಕತಾವಾದಿಗಳು ಹಾಗು Risk to the National Security ಅಂತಾ ಗುರುತಿಸಿದ್ದರೂ ಕೂಡಾ, ಈ ಥರದ ನಾಯಕರು, ಸೊ ಕಾಲ್ಡ್ ಭಾಷಾ ಹೋರಾಟಗಾರರು, ಇಂಥಾ ಸಂಘಟನೆಯನ್ನು ಬಹಿರಂಗವಾಗಿ ಬೆಂಬಲಿಸುವುದರ ಜೊತೆಗೆ ಆ ಗುಂಪಿನ ನಾಯಕ ವೆಲ್ಲುಪಿಳ್ಳೈ ಪ್ರಭಾಕರನ್ ಗೆ ಅಪಾಯವಾದಲ್ಲಿ, ತಮಿಳುನಾಡಿನಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದು, ನಮ್ಮ ಇಂದಿನ ಅದಃಪತನಕ್ಕೆ ಬಿದ್ದಿರುವ ಪ್ರಜಾಪ್ರಭುತ್ವ ಹಾಗು ಹೊಲಸು ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ.

ಇಂಥವರನ್ನು ಅನುಸರಿಸಿ, ನಮ್ಮ ಬೆಂಗಳೂರಿನಲ್ಲಿ ಕೂಡಾ "ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ" ಪ್ರತಿಭಟನೆ ಮಾಡ್ತಾರೆ. ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಅದನ್ನು ಖಂಡಿಸಿ ಪ್ರತಿಭಟನೆ ಮಾಡೋದು ತಪ್ಪಲ್ಲ, ಆದ್ರೆ ಇವರು ಮಾಡೋ ಪ್ರತಿಭಟನೆ Pro LTTE ಆಗಿರುತ್ತೆ.

ಈ ಯಪ್ಪ ವೈಕೋ ಏನ್ ಹೇಳಿದಾನೆ ನೋಡಿ. ಜೊತೆಗೆ ಕೇಂದ್ರ ಸರ್ಕಾರ ಹಾಗು ಭಾರತೀಯ ರಕ್ಷಣಾ ಇಲಾಖೆಯವರು ಸೋನಿಯಾ ಗಾಂಧೀ ಜೀವಕ್ಕೆ LTTE ಯಿಂದ ಅಪಾಯವಿದೆ, ಹಾಗಾಗಿ ಆಕೆಗೆ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಈ ವೈಕೋ ಓಪನ್ ಆಗಿ LTTE ಗೆ ಸಪೋರ್ಟು ಕೊಡ್ತಾ ಇದಾನಲ್ಲ. ಇಂಥವರನ್ನೇ ಅಲ್ವೇ "ಬಗಲ್ ಕಾ ದುಶ್ಮನ್" ಅನ್ನೋದು ?

ಇನ್ನೂ ಈ ದೇಶ ಏನ್ ಏನ್ ನೋಡಬೇಕೋ, ನೋಡುತ್ತೋ ಗೊತ್ತಿಲ್ಲ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, April 5, 2009

ಟಾಯ್ಲೆಟ್ಟಲ್ಲಿ ಗಾಲ್ಫ್ !!

ನಿನ್ನೆ ಶನಿವಾರ (4 ಏಪ್ರಿಲ್) ನಾನು ಹಾಗು ನನ್ನ ಸಹೋದ್ಯೋಗಿಗಳು ಬರ್ಲಿನ್ ನಗರ ಪ್ರವಾಸಕ್ಕೆ ಹೋಗಿದ್ವಿ. ನಾವಿರುವ ಹ್ಯಾಂಬರ್ಗಿನಿಂದ ಸುಮಾರೊ 300 ಕಿ.ಮೀ ದೂರದಲ್ಲಿ ಇದೆ ಬರ್ಲಿನ್. ಜರ್ಮನಿಯ ರಾಜಧಾನಿ, ಒಳ್ಳೊಳ್ಳೇ ಬಿಲ್ಡಿಂಗುಗಳು, ಸುಮಾರು ದೇಶಗಳ ರಾಯಭಾರಿ ಕಛೇರಿಗಳು, ಸಂಸತ್ ಭವನ, ಮೃಗಾಲಯ ಇತ್ಯಾದಿ ಇತ್ಯಾದಿ, ನೋಡಲು ಬಹಳಷ್ಟು ಇದೆ.
ಪ್ರವಾಸದ ಫೋಟೋಗಳನ್ನು ಆರ್ಕುಟ್ಟಲ್ಲಿ (orkut) ಹಾಕ್ತೀನಿ, ಆದ್ರೆ ಇಂಟೆರೆಸ್ಟಿಂಗ್ ಸಂಗತಿಗಳನ್ನು ಮಾತ್ರ ಫೋಟೋ ಸಮೇತ ಬ್ಲಾಗಿನಲ್ಲಿ ಹಾಕೋದು.

ಬರ್ಲಿನ್ ನಗರ ಪ್ರವಾಸದ ಟಿಕೆಟ್ ತಗೊಂಡು ಸುಮಾರು 10:30 ಗೆ ಮೊದಲ ಸ್ಟಾಪಿನಲ್ಲಿ ಇಳಿದೆವು. ಸ್ವಲ್ಪ ಅಕ್ಕ ಪಕ್ಕ ನೋಡಿ, ಚುರುಗುಡುತ್ತಿದ್ದ ಹೊಟ್ಟೆಗೆ ಸ್ವಲ್ಪ ಹಾಕಿಕೊಂಡು, ಫೋಟೋ ತೆಕ್ಕೊಂಡು ಇದ್ದಾಗ ಮತ್ತೆ ಕಾಡಿದ್ದು "ಜಲಬಾಧೆ".
ಪುಣ್ಯಕ್ಕೆ ಪಕ್ಕದಲ್ಲೇ WC (Water Closet, ಟಾಯ್ಲೆಟ್ಟಿಗೆ ಇನ್ನೊಂದು ಹೆಸರು) ಬೋರ್ಡು ಕಂಡಿತು. ಉಪಯೋಗಿಸಬೇಕಾದರೆ €0.50 (50 Euro Cents) ಕೊಡಬೇಕು. ಇಲ್ಲಿ ಕೂಡಾ ಟಾಯ್ಲೆಟ್ಟಿನ ಯಾವುದದ್ರೂ ಒಂದು ಫೋಟೋ ಸಿಗಬಹುದೇ ಎಂದು ಆಶಾಭಾವನೆಯಿಂದ ಹೋದೆ, ನನಗೆ ನಿರಾಸೆ ಆಗಲಿಲ್ಲ. ಬಹಳ ಖುಷಿಯಿಂದ ಜಲಬಾಧೆ ತೀರಿಸಿ ಫೋಟೋ ತೆಕ್ಕೊಂಡೆ.

ಇದಕ್ಕೆ ಮುಂಚೆ ಟಾಯ್ಲೆಟ್ಟಲ್ಲಿ ನೊಣ, ಹುಳುವಿನ ಚಿತ್ರ ಹಾಕಿರುವ ಬಗ್ಗೆ ಹೇಳಿದ್ದೆ ಹಾಗು ಅದರ ಫೋಟೋ ಹಾಕಿದ್ದೆ. ಇದೇ ರೀತಿ ಬರ್ಲಿನ್ನಿನ ಈ ಟಾಯ್ಲೆಟ್ಟಲ್ಲಿ ಗಾಲ್ಫ್ ಆಟದ ರಂಧ್ರ ಹಾಗು ಅದರಲ್ಲಿ ನಿಲ್ಲಿಸಿರುವ ಬಾವುಟದ ಚಿತ್ರ ಪ್ರಿಂಟ್ ಮಾಡಿದಾರೆ. ಇದೂ ಅದೇ, ಸರಿಯಾಗಿ ಈ ಜಾಗಕ್ಕೆ ಗುರಿ ಇಟ್ಟರೆ ಹೊರಗೆ ಹಾರೋದಿಲ್ಲ / ಸಿಡಿಯೋದಿಲ್ಲ. ನೀವೇ ನೋಡಿ.




ಈ ಸಲದ ಟಾಯ್ಲೆಟ್ ಫೋಟೋ ನಂಗೆ ಸ್ವಲ್ಪ ಸ್ಪೆಷಲ್. ಪ್ರತಿ ಬಾರಿ ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಟಾಯ್ಲೆಟ್ಟಿನ ಫೋಟೋ ಹಿಡೀತಿದ್ದೆ ಹಾಗು ಬೆಳಕು ಸರಿ ಇರದ ಕಾರಣ ಅಷ್ಟೊಂದು ಕ್ಲಾರಿಟಿ ಇರ್ತಾ ಇರಲಿಲ್ಲ. ಈ ಸಲ ನನ್ನ CANON EOS 1000D, ಡಿಜಿಟಲ್ SLR ಕ್ಯಾಮೆರಾದಲ್ಲಿ ತೆಗೆದಿರುವೆ. ಸ್ಪೆಷಲ್ ಅಲ್ವಾ?
----------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, April 3, 2009

ಆಟೋ ಅಣಿಮುತ್ತುಗಳು - ೫೮ - ಗೊವಿಂದಾ ಗೋವಿಂದಾ

ಲಕ್ಷ್ಮಕ್ಕ ಕಳಿಸಿದ ಫೋಟೋಗಳು ಇವು.
ಬಹಳಾ ದಿನಗಳ ಹಿಂದೆ ಕಳ್ಸಿದ್ದು, ಆದ್ರೆ ಸ್ವಲ್ಪ ಬ್ಯುಸಿ ಆಗಿದ್ದೆ, ಆದ್ರಿಂದ ಬ್ಲಾಗಿನಲ್ಲಿ ಯಾವ ಹೊಸಾ ಪೋಸ್ಟ್ ಮಾಡಿರ್ಲಿಲ್ಲಾ.
ಛಾಯಾಪುತ್ರ ಇದಾನೆ ಅಂತಾ ಈ ಅಣ್ಣ ಗೋವಿಂದಾ ಗೋವಿಂದ ಅಂತಾ ಇರೊದಾ??

----------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ