ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟ ಆಗೋ ಆಭಾಸಗಳನ್ನು, ಅಪಭ್ರಂಶಗಳನ್ನು ತೋರಿಸೋಕ್ಕೆ ಇನ್ನೊಂದು ಹೊಸಾ ಬ್ಲಾಗನ್ನು ಶುರು ಮಾಡಬೇಕು ಅನ್ಸುತ್ತೆ.
ಈ ಚಿತ್ರಗಳು ಇವತ್ತಿನ (ಫೆಬ್ರವರಿ 10, 2009) ರಂದು ಪ್ರಕಟವಾಗಿರುವ ಸುದ್ಧಿಗಳಲ್ಲಿ ನಾನು ಕಂಡಿದ್ದು.
ಈ ಪದದ ಅರ್ಥ ಗೊತ್ತಾ ನಿಮಗೆ ?
ಪಾಸ್ಟಾಗಿ ಓದಿ, ನಮಗೆ ಸೈರಾನೆ (ಸೈರಣೆ) ಇರಲ್ಲ.
ಇವ್ರ ಮುಂಡಾ ಮೋಚ್ತು. ಅದೇನು ಕನ್ನಡ ಮಾತಾಡ್ತಾರೋ, ಅದೇನು ಕನ್ನಡ ಬರೀತಾರೋ.
ಯಪ್ಪಾ, ಹಾಡು ಹಗಲಲ್ಲೇ ಕನ್ನಡದ ಕಗ್ಗೊಲೆ. ಹೇಗಿದ್ದ ಕನ್ನಡ ಪತ್ರಿಕೋದ್ಯಮ ಹೇಗಾಯ್ತು?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Tuesday, February 10, 2009
Subscribe to:
Post Comments (Atom)
8 comments:
ಕನ್ನಡ ನರಳ್ತಾ ಇದೆ ಇಂಥವರ ಕೈನಲ್ಲಿ ಸಿಕ್ಕಿ.
ನಾನು ಪ್ರತಿದಿನ ಇಂಥದನ್ನು ಈ ಪತ್ರಿಕೆಯಲ್ಲಿ ಬರುವುದು ನೋಡಿ...ಓದೋದು ಬಿಟ್ಟಿದ್ದೀನಿ...
yes do it guru , navu noodtivi
magaa .... do comment on them but we will make an attempt to let these papers know of them ! yeenantaaya :)
ಪತ್ರಿಕೆಗಳಲ್ಲಿ ಈಥರಹದ ತಪ್ಪುಗಳು ಇರಬಾರದು...
ಶಂಕ್ರಣ್ಣ.ಹೂಂ..ಶುರುಹಚ್ಚಿ. ನಾವೋ ಓದ್ತೀವಿ. ಸಂಜೆ ವಾಣಿ ಮಾತ್ರವಲ್ಲ ಯಾವ ಪತ್ರಿಕೆ ಆದ್ರೂ ಸೈ....!
-ಚಿತ್ರಾ
ಕ್ಷಮಿಸಿ. ಅದು ಅಭಾಸ ಅಲ್ಲ. ಆಭಾಸ ಆಗ್ಬೇಕು. ಭಾಸ ಅನ್ನೋದಕ್ಕೆ ೧. ಹೊಳಪು, ಕಾಂತಿ ೨.(ಮನಸ್ಸಿಗೆ) ತೋರುವುದು, ಸ್ಫುರಣೆ ೩.ಹಾಲಕ್ಕಿ ೪.ಹುಂಜ ೫.ಹದ್ದು ಎಂಬೆಲ್ಲ ಅರ್ಥಗಳುಂಟು. ಆಭಾಸ ಎಂದರೆ ೧.ಕಾಂತಿ, ಪ್ರಕಾಶ ೨.ತಪ್ಪಾಗಿ ತಿಳಿಯುವ ವಿಷಯ ೩.ಎಡವಟ್ಟು ಎಂಬ ಅರ್ಥಗಳುಂಟು.
ಮೃತ್ಯು ಅವರೆ,
ತಪ್ಪನ್ನು ತಿದ್ದಿದ್ದಕ್ಕೆ ಧನ್ಯವಾದಗಳು.
ನಿಮ್ಮಂಥ ಪ್ರೂಫ್ ರೀದರುಗಳು ಮುಖ್ಯ.
ಇನ್ನು ಮುಂದೆ ಈ ರೀತ್ಯಾದ ಆಭಾಸಗಳು ಆಗುವುದಿಲ್ಲ ಎಂದು ಭರವಸೆ ಕೊಡ್ತೀನಿ.
ಕಟ್ಟೆ ಶಂಕ್ರ
Post a Comment