Thursday, February 5, 2009

ರಾಜೀವ್ ಗಾಂಧಿಗೆ ಸ್ವಾಗತ

ಈ ಚಿತ್ರದ ಲಿಂಕನ್ನು ಒಬ್ಬ ಅನಾಮಧೇಯ ಮಿತ್ರ ಕೊಟ್ಟಿದ್ದು.
ಈ ಚಿತ್ರದಲ್ಲಿ ಹೇಳೋ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ದಿ. ರಾಜೀವ್ ಗಾಂಧಿ ಆಗಮಿಸುತ್ತ ಇದಾರಂತೆ,
ಇವರನ್ನು ಎಂ.ಬಿ.ಉಮ್ಮರ್ ಸ್ವಾಗತಿಸುತ್ತಾ ಇದಾರೆ.
ಇದು ದೆರ್ಲಕಟ್ಟೆಯಲ್ಲಿ ಫೆಬ್ರವರಿ 4 ರಂದು ನಡೆದ ಕಾಂಗ್ರೆಸ್ಸ್ ಸಭೆಯಲ್ಲಿ ಕಂಡಿದ್ದು.
ಈ ಚಿತ್ರವನ್ನು
http://www.daijiworld.com/chan/view_img1.asp?cid=2453
ವೆಬ್ ಸೈಟಿಂದ ಪಡೆದಿರುವೆ.
ಈ ಕಾಂಗ್ರೆಸ್ ಜನಕ್ಕೆ ಬರೀ ನೈತಿಕತೆ ಇಲ್ಲ ಅನ್ಕೊಂಡಿದ್ದೆ, ಬುದ್ಧಿ ಕೂಡ ಇಲ್ಲ ಅಂತ ಇವತ್ತು ಗೊತ್ತಾಯ್ತ.
ಇಂಥವರು ಜನಪ್ರತಿನಿಧಿಗಳು, ಜನರನ್ನು ಆಳುವ ದೊರೆಗಳು.
ನೆನೆಸ್ಕೊಂಡ್ರೆ ಈ ದೇಶ ಹೆಂಗೆ ಅಂತ ಭಯ ಆಗುತ್ತೆ.


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

11 comments:

ವಿ.ರಾ.ಹೆ. said...

ಇಂಥವರೇ ಸ್ವಾಮಿ ನಮ್ ದೇಶನ್ನ ಆಳುತ್ತಾ ಇರೋರು. ಅದಕ್ಕೇ ಹಿಂಗೆ ಈ ದೇಶ !

Unknown said...

Ha Ha Ha. patte madidavarannu mecchale beku

shivu.k said...

ಸರ್,

ಇಂಥ ನೈತಿಕತೆ ಇಲ್ಲದವರನ್ನು ಕಂಡರೆ ಅಸಹ್ಯ ಅನ್ನಿಸುತ್ತೆ...

PARAANJAPE K.N. said...

ಇದು ಎ೦ಥಾ ಲೋಕವಯ್ಯಾ, ಇ೦ತಹ ಜನಪ್ರತಿನಿಧಿಗಳನ್ನು
ಹೊ೦ದಿರುವ ನಮ್ಮ ದೇಶ ಎತ್ತ ಸಾಗುವುದೋ ....?????

Ittigecement said...

ಶಂಕರ್...

ಬೇಜಾರಾದಾಗ..
ನಿಮ್ಮ ಬ್ಲಾಗಿಗೆ ಬಂದು ನಕ್ಕೊಂಡು ಹೋಗ್ತಿನಿ...

"ಏನು ಹುಚ್ಚರು ಸಾರ್..ಇವರು..?

ಹ್ಹಾ..ಹ್ಹ...!

Anonymous said...

ಸತ್ತವರ ಫೋಟೋ ಇಟ್ಟು ಓಟು ಕೇಳೋ ಯೀ ಪಕ್ಷ ..ಇನ್ನು ಜಾಸ್ತಿ ದಿನ ಇರಲ್ಲ

ಅಂತರ್ವಾಣಿ said...

he he he...
buddi illade maaDiro kelsa..

vikramhegde said...

ಹ್ಹಾ ಹ್ಹಾ ಹ್ಹಾ. ಸಿಕ್ಕಾಪಟ್ಟೆ ನಗು ಬಂತು ಈ ಫೋಟೋ ನೋಡಿ. ನಿಮ್ಮ ಅನುಮತಿ ಇದ್ರೆ ನನ್ನ ಬ್ಲಾಗಿನಲ್ಲಿ ನಿಮ್ಮ ಈ ಪೋಸ್ಸ್ಟ್‌ಗೆ ಲಿಂಕ್ ಹಾಕ್ತೀನಿ.

Anonymous said...

ha ha!

-maaysa

Harisha - ಹರೀಶ said...

ಇವರು ನಿದ್ದೆ ಮಾಡ್ಲಿಕ್ಕೆ ಶುರು ಮಾಡಿದಾಗ ರಾಜೀವ್ ಗಾಂಧಿ ಇದ್ರೂ.. ಪಾಪ, ಈಗ ಎದ್ದಿದ್ದಾರೆ.. ಇನ್ನೂ ಸುದ್ದಿ ತಿಳಿದಿಲ್ಲ.. ಬಿಟ್ಬಿಡಿ

ಚಿತ್ರಾ ಸಂತೋಷ್ said...

ಶಂಕ್ರಣ್ಣ..ಅವರಿಗೆ ಬುದ್ಧಿ ಇಲ್ಲಂತ ಗುರುತಿಸಿದ ನಿಮ್ 'ಸೂಪರ್ ಮಂಡೆ'ಗೆ ನನ್ನದೂ ಸಲಾಂ..ಶಂಕ್ರಣ್ಣಾ..ನಿಮ್ ಬ್ಲಾಗ್ ಓದಿದ್ರೆ ನಗು ಉಚಿತ! ಥ್ಯಾಂಕ್ಯೂ ಶಂಕ್ರಣ್ಣ................

-ಚಿತ್ರಾ