Friday, December 14, 2007

ಒಂದು ಸಣ್ಣ PJ.. ದಯವಿಟ್ಟು ನಕ್ಕುಬಿಡಿ, ಪ್ಲೀಸ್

ಎಚ್ಚರಿಕೆ : ಇದು ಒಂದು PJ. ಸೀರಿಯಸ್ ಆಗಿ ತಗೋಬೇಡಿ.

ಒಬ್ಬ ದೊಡ್ಡ ಮನುಷ್ಯ ಈಶ್ವರನನ್ನು ಧ್ಯಾನ ಮಾಡ್ತಾ ದೊಡ್ಡ ತಪಸ್ಸು ಮಾಡ್ದ.
ಎಳೀತು ಎಳೀತು... ಸಖತ್ ಟೈಂ ಎಳೀತು.. ಎಷ್ಟೋ ವರ್ಷ ಮಾಡ್ದ...

ಕೊನೇಗೂ ಈಶ್ವರ ಪ್ರತ್ಯಕ್ಷ ಆದ..

ಈಶ್ವರ : "ಏಳು ಮಗೂ... ಏನ್ ವರ ಬೇಕು ಕೇಳು"

ಮನುಷ್ಯ : "ತಂದೇ... ಕಾಪಾಡು.. ನನಗೆ ಒಂದು ಗಿಟಾರ್ ಕೊಡು ಸಾಕು"

ಈಶ್ವರ : "ಏನು ??? ಗಿಟಾರಾ.. ಯಾಕಪ್ಪಾ ಮಗು, ಇಷ್ಟೊಂದು ವರ್ಷ ಕಷ್ಟ ಪಟ್ಟು ತಪಸ್ಸು ಮಾಡಿ, ಬರೀ ಗಿಟಾರ್ ಬೇಕು ಅಂತಿದ್ಯಲ್ಲಾ, ಬೇರೆ ಏನಾದ್ರೂ ಕೇಳು.."

ಮನುಷ್ಯ : "ತಂದೆ, ನಂಗೆ ಬೇರೆ ಏನೂ ಬೇಡ.. ಬರೀ ಒಂದು ಗಿಟಾರ್ ಕೊಡು ಸಾಕು"

ಈಶ್ವರ : "ಏನಪ್ಪಾ ಇದು ವಿಚಿತ್ರ ? ನಿಂಗೆ ಆಯುಸ್ಸು, ಆರೋಗ್ಯ, ಐಶ್ವರ್ಯ (ದುಡ್ಡು, ಐಶ್ವರ್ಯ ರೈ ಅಲ್ಲಾ), ಪ್ರಸಿದ್ಧಿ ಏನು ಬೇಕಾದ್ರು ಕೊಡ್ತೀನಿ. ಪೆದ್ದು ಪೆದ್ದಾಗಿ ಗಿಟಾರ್ ಬೇಕು, ಗಿಟಾರ್ ಬೇಕು ಅಂತ ಹಠ ಮಾಡ್ಬೇಡ ಮಗೂ, ನಾನ್ ಹೇಳೋದನ್ನ ಕೇಳು"

ಮನುಷ್ಯ : "ಇಲ್ಲಾ ಭಗವಂತ, ನಂಗೆ ಬೇರೆ ಏನೂ ಬೇಡ, ಕೊಡೋದಾದ್ರೆ ಗಿಟಾರ್ ಕೊಡು, ಇಲ್ಲಾಂದ್ರೆ ಏನು ಬೇಡ.." (ಹಠ ಮಾಡಿದ)

ಈಶ್ವರ ತಲೆ ಪರಪರ ಕೆರ್ಕೊಂಡು, ತಲೆ ಚಚ್ಕೊಂಡು ಹೇಳುದ್ರೂ, ಬೇರೆ ಏನೂ ಬೇಡ ಅಂತ ಈ ಭೂಪ.

ಕೊನೇಗೂ ಈಶ್ವರ ಯೋಚನೆ ಮಾಡಿ ಮಾಡಿ ಹೇಳಲೋ ಬೇಡ್ವೋ ಹೇಳಲೋ ಬೇಡ್ವೋ ಅಂತ ತಲೆ ಕೆಡುಸ್ಕೊಂಡು ಹಿಂಗಂದ :

.
.
.
.
.
.
.
.
.
.
.
.
.
.
.

ಈಶ್ವರ : "ಮಗನೇ, ನಿಂಗೆ ಕೊಡಕ್ಕೆ ಗಿಟಾರ್ ನನ್ಹತ್ರ ಇದ್ದಿದ್ರೆ, ನಾನ್ಯಾಕೆ ಢಮರುಗ ಬಾರುಸ್ತಾ ಇರ್ತಿದ್ದೆ ??"

ವಿ.ಸೂ : ಮೊದ್ಲೇ ಹೇಳಿದೀನಿ ಇದು PJ ಅಂತ, ಬೈದು ಬೈದು ಕಮೆಂಟು ಬರೀಬೇಡಿ..

-------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Thursday, December 6, 2007

ಇನ್ನೂ ಹಲವು ಕನ್ನಡ ಟೀ-ಶರ್ಟುಗಳು

ಇದಕ್ಕೆ ಮುಂಚೆ ಕನ್ನಡ ಟೀ-ಶರ್ಟುಗಳು ಲಭ್ಯವಿರುವ ಬಗ್ಗೆ ಬರೆದಿದ್ದೆ.

ಇನ್ನೂ ಹಲವು ಟೀ-ಶರ್ಟುಗಳು ಸಿಗುತ್ತಿವೆ.

ಬೇಕಾದಲ್ಲಿ ಕೆಳಕಂಡ ಸಂಖ್ಯೆಗೆ ಫೋನ್ ಮಾಡಿ, ನಿಮಗೆ ಬೇಕಾದ ಟೀ-ಷರ್ಟನ್ನು ಖರೀದಿಸಬಹುದು.

ಭರತ್ 98458 95554

ಬೆಲೆ - ರೂ 350

Bharath on: 98453 95554. Price Rs.350

ಸ್ಯಾಂಪಲ್ ನೋಡಿ...

-------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Wednesday, November 21, 2007

ಆ ದಿನಗಳು...ನೋಡಲು ಮರೆಯಬೇಡಿ

ಮೊನ್ನೆ, ಸುಮ್ನೆ ಬೇಜಾರು ಅಂತ ಪಿ.ವಿ.ಆರ್ ಕಡೆ ಹೋಗಿದ್ದೆ. ಅಲ್ಲಿ ಹೋದ ಮೇಲೆ "ಆ ದಿನಗಳು" ಬಗ್ಗೆ ನಮ್ಮಪ್ಪ ಹೇಳಿದ್ದು ಜ್ನಾಪಕಕ್ಕೆ ಬಂತು.
"ರೌಡಿಯಿಜಂ ಬಗ್ಗೆ ಇರೋ ಫಿಲಮ್ಮು, ಆದ್ರೂ ಕೂಡಾ VIOLENCEಗೆ IMPORTANCE ಕೊಟ್ಟಿಲ್ಲ" ಅಂತ ಹೇಳಿದ್ರು.

ಇದಕ್ಕೆ ಮುಂಚೆ, ಈ ಫಿಲಂನ ತುಣುಕುಗಳು ಟೀವಿ ಚಾನೆಲಲ್ಲಿ ಬರುವಾಗ, ಇದ್ಯಾವುದಪ್ಪಾ ಹೊಸಾ ಫಿಲಮ್ಮು.. ಹೆಸ್ರು ವಿಚಿತ್ರವಾಗಿ ಇದೆ, ಮೋಸ್ಟ್ಲಿ ಯಾವ್ದೋ ಲೋ ಬಜೆಟ್, ಅಮ್ಮನ್, ಅಕ್ಕನ್ ಡೈಲಾಗ್ ಇರೋ ಮಾಮೂಲ್ ರೌಡಿಜಂ ಕಥೆ ಅನ್ಕೊಂಡು ಸುಮ್ನಾಗಿದ್ದೆ.

ಅಪ್ಪ ಸುಮ್ಸುಮ್ನೆ ಹೇಳಲ್ಲ...ಹೆಂಗೂ ಪಿ.ವಿ.ಆರ್ ಗೆ ಬಂದಿದೀನಿ.. ಈ ಫಿಲಂನ ನೋಡೇ ಬಿಡೋಣಾ ಅನ್ಕೊಂಡು, ಟಿಕೆಟ್ ಹರಿಸಿದೆ.
(ಅಲ್ಲೂ ಕೂಡಾ ತಿ* ಉರಿಯೋ ಸೀನು... "ಆ ದಿನಗಳು, ಒಂದ್ ಟಿಕೆಟ್ ಕೊಡಿ" ಅಂದ್ರೂ ಕೂಡಾ..."HERE YOU ARE SIR..AA DINAGALU, 1:10 SHOW, AUDI-5, SEAT L-16. HAVE A NICE TIME SIR" ಅಂತಾ ಇಂಗ್ಲಿಷಲ್ಲಿ ಡೈಲಾಗ್ ಹಾಕಿ, ಟಿಕೆಟ್ ಕೊಟ್ಟ ಭೂಪ).

ಸರಿ, ಹಾಳಾಗಿ ಹೋಗ್ಲಿ, ಈಗ ಜಗಳ ಕಾದ್ರೆ, ಆರಾಮ್ ಮೂಡ್ನಲ್ಲಿ ಫಿಲಂ ನೋಡಕ್ಕೆ ಆಗಲ್ಲ ಅನ್ಕೊಂಡು, ಹೋದೆ.

ಚಿತ್ರದ ಹೈಲೈಟ್ ಅಂದ್ರೆ, ಹೊಸತನದ ಫ್ರೆಶ್ ನೆಸ್.. ಇದು ಚಿತ್ರದ ಎಲ್ಲಾ ವಿಭಾಗಗಳಲ್ಲೂ ಕಾಣುತ್ತದೆ.
ಇದೊಂದು ಹೊಸ ಚಿಗುರು, ಹಳೆ ಬೇರು ಕಾಂಬಿನೇಶನ್. ಬಹಳ ಸೊಗಸಾಗಿ ಬಂದಿದೆ.

ಚಿತ್ರದ ನಿರ್ದೇಶಕ ಚೈತನ್ಯ ತಮ್ಮ ಮೊದಲ ಚಿತ್ರದಲ್ಲೇ ಅಪಾರ ಭರವಸೆ ಮೂಡಿಸಿದ್ದಾರೆ. ಇನ್ನು ಮಿಕ್ಕಿದ ಪಾತ್ರವರ್ಗ, ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನವ ನಾಯಕ ನಟ ಚೇತನ್, ನಟಿ ಅರ್ಚನ ತಮ್ಮ ಬೆಸ್ಟ್ ಅಭಿನಯ ನೀಡಿದ್ದಾರೆ. ಯುವ ಪ್ರೇಮಿಗಳಾಗಿ ನಿಜಕ್ಕೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.

ಇನ್ನು ಮಿಕ್ಕಿದ ಪಾತ್ರವರ್ಗವಂತೂ ಬಹಳ ಜತನದಿಂದ ಹುಡುಕಿ, ಪಾತ್ರ ವಹಿಸಿ ಕೊಟ್ಟ ಹಾಗಿದೆ.
ಕೊತ್ವಾಲನ ರೂಪದಲ್ಲಿ ಶರತ್ ಲೋಹಿತಾಶ್ವ ಮಿಂಚಿದ್ದಾರೆ. ಅವರ ಗಾತ್ರ, ಗತ್ತು, ಧ್ವನಿ, ಬಾಡಿ ಲ್ಯಾಂಗ್ವೇಜ್ ಎಲ್ಲಾ ಸೂಪರ್.
ನಿಜಕ್ಕೂ ಶರತ್ ಲೋಹಿತಾಶ್ವ STEALS THE SHOW.
ಕೆಲವೊಂದು ದೃಶ್ಯದಲ್ಲಂತೂ, ಥೇಟ್ ಕೊತ್ವಾಲನೇ ಬಂದು ನಿಂತಿದ್ದಾನೇನೋ ಎಂದು ಭಾಸವಾಗುತ್ತೆ (ನಾನೇನು ಕೊತ್ವಾಲನನ್ನು ನೋಡಿಲ್ಲಾ, ಆದ್ರೆ, ಹಾಯ್ ಬೆಂಗಳೂರು ಪೇಪರ್ ನಲ್ಲಿ ಕೆಲವೊಂದು ಬಾರಿ ನೋಡಿದ್ದೀನಿ).

ಇನ್ನು, ಜಯರಾಜ್ ಪಾತ್ರವನ್ನು ಅಶೀಶ್ ವಿದ್ಯಾರ್ಥಿ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಕನ್ನಡ ಮಾತಾಡಲು ಬರುವುದಿಲ್ಲಾವೆಂಬ ನ್ಯೂನತೆ ಬಿಟ್ಟರೆ, ಆ ಪಾತ್ರದಲ್ಲಿ ಜೀವ ತುಂಬಿದ್ದಾರೆ ಆಶೀಶ್.

ಇನ್ನು ಮಿಕ್ಕಿದ ಪಾತ್ರವರ್ಗದಲ್ಲಿ ಇರೋ ಗಿರೀಶ್ ಕಾರ್ನಾಡ್, ಅತುಲ್ ಕುಲಕರ್ಣಿ, ಇವರುಗಳ ಬಗ್ಗೆ ಏನೂ ಹೇಳುವ ಅವಶ್ಯಕತೆ ಇಲ್ಲ..
ಆಯಿಲ್ ಕುಮಾರ್ ಪಾತ್ರಧಾರಿ (ಅವರ ಹೆಸರು ನಂಗೆ ಗೊತ್ತಿಲ್ಲ, ಆದರೆ ಕಿರುತೆರೆಯ ಪರಿಚಿತ ಮುಖ), ಕೊತ್ವಾಲನ ಬಲಗೈ ಭಂಟ ಶೆಟ್ಟಿ.... ಇವರುಗಳೂ ಕೂಡಾ ಒಳ್ಳೆ ಅಭಿನಯ ನೀಡಿದ್ದಾರೆ. ಜೊತೆಗೆ ನಾಯಕನ ತಾಯಿಯಾಗಿ ವಿನಯಾ ಪ್ರಸಾದ್, ಚಿಕ್ಕ ಪಾತ್ರವಾದರೂ ಅದಕ್ಕೆ ಜೇವ ತುಂಬಿದ್ದಾರೆ ಹಾಗು ನೆನಪಿನಲ್ಲಿ ಉಳಿಯುತ್ತಾರೆ.

ಒಟ್ಟಿನಲ್ಲಿ ತಮ್ಮ ಮೊದಲನೇ ಚಿತ್ರದಲ್ಲಿ ನಿರ್ದೇಶಕ ಚೈತನ್ಯ, ನಾಯಕ ನಟ ಚೇತನ್, ನಾಯಕಿ ಅರ್ಚನ ಇವರೆಲ್ಲರೂ ಸಿಕ್ಸರ್ ಬಾರಿಸಿದ್ದಾರೆ.

ಇನ್ನು, 1985ನೇ ಇಸವಿಯ ಬೆಂಗಳೂರನ್ನು ಇವತ್ತಿನ ಬೆಂಗಳೂರಲ್ಲಿ ತೋರಿಸುವುದು ಬಹಳ ಕಷ್ಟ.. ಅದನ್ನು ಚಿತ್ರದ ಕಲಾ ನಿರ್ದೇಶಕ ಅಚ್ಹುಕಟ್ಟಾಗಿ ಮಾಡಿದ್ದಾರೆ. ಇನ್ನು, ಇಳಯರಾಜಾ ಅವರ ಸಂಗೀತದ ಬಗ್ಗೆ ಯಾರೂ ಏನೂ ಹೇಳುವುದು ಬೇಡ. ಚಿತ್ರದಲ್ಲಿ ಇರುವುದು ಎರಡೇ ಹಾಡು, ಆದ್ರೂ ಮನಸ್ಸಿನಲ್ಲಿ ಉಳಿಯುತ್ತದೆ. "ಸಿಹಿ ಗಾಳಿ ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲಿ...", "ಆ ದಿನಗಳು..." ಬಹಳ ಇಂಪಾಗಿ ಬಂದಿವೆ. "ಸಿಹಿ ಗಾಳಿ.." ಹಾಡನ್ನು ಸ್ವತಃ ಇಳಯರಾಜಾ ರವರು ಹಾಡಿದ್ದಾರೆ ಹಾಗು ಬಹಳ ಸೊಗಸಾಗಿ ಇದೆ..

ಇನ್ನು ಜಾಸ್ತಿ ಹೇಳೋದು ಬೇಡಾ, ನೀವೇ ಒಮ್ಮೆ ನೋಡಿ.."ಆ ದಿನಗಳು"

ಗ್ಯಾರಂಟಿ ಇಷ್ಟ ಆಗುತ್ತೆ.

----------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

ಆಟೋ ಕಿರಿಕ್‌ ಇನ್ನಿಲ್ಲ! ಸುಖ ಪಯಣಕ್ಕಾಗಿ ಈಜಿ ಆಟೋ!

ಕಾರು ಕೊಳ್ಳಲಾಗದ, ಅದಿದ್ದರೂ ಟ್ರಾಫಿಕ್‌ನಲ್ಲಿ ಕಾರು ಓಡಿಸಲಾಗದ, ಬಸ್‌ ಕಿರಿಕಿರಿ ತಪ್ಪಿಸಿಕೊಳ್ಳಬೇಕೆಂದುಕೊಳ್ಳುವ ಮಂದಿಗೆ ಆಟೋ ಎಂಬುದು ಪುಷ್ಪಕವಿಮಾನ! ಆಟೋದ ನಂಟು, ಒಂದು ರೀತಿಯ ಫೆವಿಕಾಲ್‌ ನಂಟಿನಂತೆ! ಆಟೋ ಚಾಲಕರ ಕಿರಿಕಿರಿಗಳ ಮಧ್ಯೆಯೂ, ಆಟೋ ಎಲ್ಲರಿಗೂ ಇಷ್ಟವಾಗಿದೆ. ಅನಿವಾರ್ಯವಾಗಿದೆ.

ಆದರೆ ಈ ಆಟೋ ತರಲೆ ತಾಪತ್ರಯಗಳು ಒಂದೆರಡಲ್ಲ. ಒಂದೊಂದು ಸಲ ಆಟೋದವರು ನಮ್ಮ ಸಹನೆ ಪರೀಕ್ಷಿಸುತ್ತಾರೆ. ‘ಜಯನಗರಕ್ಕೆ ಬರ್ತಿಯಾ ಅಂದ್ರೆ’, ‘ಬಿಟಿಎಂವರೆಗೆ ಬರ್ತೀನಿ’ ಅನ್ತಾರೆ. ಡಬ್ಬಲ್‌ ಮೀಟರ್‌ ಕೇಳ್ತಾರೆ. ಇಷ್ಟು ಕೊಡೋದಾದ್ರೆ ಆಟೋ ಹತ್ತಿ ಅನ್ತಾರೆ. ಕೈ ಜೊತೆಗೆ ಶರೀರವನ್ನೇ ಅಡ್ಡ ಇಟ್ಟು ತಡೆದರೂ, ರೊಯ್ಯನೇ ಕಣ್‌ ಹೊಡೆದು, ಮಾಯವಾಗಿ ಬಿಡುತ್ತವೆ!

ಆದರೆ ಇಲ್ಲೊಂದು ಹಿತಕರ ವಿಚಾರ. ಆಟೋಗಾಗಿ ಇನ್ಮುಂದೆ ರಸ್ತೆಯಲ್ಲಿ 20-30ನಿಮಿಷ ಕಾಯೋ ಕಷ್ಟ ಬೇಕಾಗಿಲ್ಲ. ಆಟೋದವರು ನಿಮ್ಮ ಬೇಡಿಕೆಯನ್ನು ತಿರಸ್ಕರಿಸುವಂತಿಲ್ಲ! ಈಗ ರಾಜಧಾನಿ ನಗರದಲ್ಲಿ ‘ಈಜಿ ಆಟೋ ಸರ್ವೀಸ್‌’ ಆರಂಭವಾಗಿದೆ.

ಬೆಂಗಳೂರು ನಗರ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಜಂಟಿಯಾಗಿ ಈ ಸೇವೆ ಆರಂಭ ಮಾಡಿದೆ. ಈ ಸೇವೆ ನೀಡುವ ಕಾಲ್‌ ಸೆಂಟರ್‌, ಪ್ರಯಾಣಿಕರು ಮತ್ತು ಆಟೋ ಮಧ್ಯೆ ನಂಟು ಬೆಸೆಯುತ್ತದೆ. ಪ್ರಯಾಣಿಕರ ಮನೆ ಮುಂದಕ್ಕೆ ಆಟೋ ಬಂದು ನಿಲ್ಲಲಿದೆ!

ಈಜಿ ಆಟೋ ಸೇವೆ ಪಡೆಯುವುದಕ್ಕೆ ಅಥವಾ ಹೆಚ್ಚಿನ ವಿವರಗಳಿಗಾಗಿ ಕರೆ ಅಥವಾ ಎಸ್‌ಎಂಎಸ್‌ ಮಾಡಬೇಕಾದ ಸಂಖ್ಯೆ 9844112233. ಅಂತರ್ಜಾಲ : www.easyauto.in.

ಈಜಿ ಆಟೋ ಸೇವೆಯ ಕರೆ ಕೇಂದ್ರದಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಸೇವೆ ಲಭ್ಯ

ವಿ. ಸೂ : www.oneindia.in ವೆಬ್ ಸೈಟ್ ನಿಂದ ಎರವಲು ಪಡೆದಿದ್ದು.

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Monday, November 19, 2007

ಸಾವರಿಯ - ಏನೈತೆ ಶಿವಾ ಇದ್ರಲ್ಲಿ ?

ಸಾವರಿಯಾ - 2007 ಕೊನೆಯಲ್ಲಿ ಬಿದುಗದೆಯಾಗುವುದಕ್ಕೆ ಮುಂಚೆ, ತುಂಬಾ ನಿರೀಕ್ಷೆ ಹಾಗು ಭರವಸೆ ಮೂಡಿಸಿದ್ದ ಚಿತ್ರ.
ನಿರೀಕ್ಷೆ ಹಾಗು ಭರವಸೆಗೆ ಕಾರಣಗಳು ಸಾಕಷ್ಟು ಇದ್ವು.

ನಿರ್ಮಾಣ, ನಿರ್ದೇಶನ, ಚಿತ್ರಕಥೆ, ಸಂಕಲನ...ಇವುಗಳ ಹೊರೆ ಹೊತ್ತಿದ್ದು, ಭಾರತಿಯ ಚಿತ್ರರಂಗ ಕಂಡ ಒಬ್ಬ ಕಲಾತ್ಮಕ, ಅನುಭವಿ ಹಿಟ್ ಹಾಗು OSCAR NOMINATED ಡೈರೆಕ್ಟರ್ ಅನ್ನಿಸಿಕೊಂಡಿರುವ ಸಂಜಯ್ ಲೀಲಾ ಭನ್ಸಾಲಿ.

ಇದರ ಜೊತೆ, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊಸ ನಾಯಕ ನಟ ರಣಬೀರ್ ಕಪೂರ್ (ರಿಷಿ ಕಪೂರ್ ಹಾಗು ಮಾಜಿ ನಟಿ ನಿತು ಕಪೂರ್ ಪುತ್ರ), ಮತ್ತು ನಾಯಕಿ ಸೋನಂ ಕಪೂರ್ (ಅನಿಲ್ ಕಪೂರ್ ಪುತ್ರಿ). ಚಿತ್ರಕ್ಕೆ ಸಂಗೀತ ನಿರ್ದೇಶಕ ಕೂಡ ಹೊಸಬ, MONTY.
ಹಾಗಾಗಿ ಈ ಚಿತ್ರದಲ್ಲಿ ಹೊಸ ಮುಖಗಳ FRESHNESS ಇರುತ್ತೆ ಅನ್ಕೊಂಡು ಹೋದ್ರೆ ಮಾತ್ರ, ನಿಮಗೆ ಬಹಳ ನಿರಾಸೆ ಆಗೋದು ಗ್ಯಾರಂಟಿ.
ಭಾನ್ಸಾಲಿಯ ಚಿತ್ರ ಅನ್ಕೊಂಡು ಹೋದ್ರೆ, ಇನ್ನೂ ಹೆಚ್ಚಿನ ನಿರಾಸೆ. ಒಟ್ಟಿನಲ್ಲಿ, ಈ ಚಿತ್ರದಲ್ಲಿ ನಿರಾಸೆ ಅನ್ನೋದು, ಕಟ್ಟಿಟ್ಟ ಬುತ್ತಿ.

ಮೊದಲನೆಯದಾಗಿ, ಶುರು ಇಂದ ಕೊನೆಯವರೆಗೆ, ಚಿತ್ರ ನಡೆಯುವುದು ಸ್ಟುಡಿಯೋ ಸೆಟ್ನಲ್ಲಿ.
ಇಡೀ ಚಿತ್ರ ಏನೋ ಒಂಥರಾ ನೀಲಿ ಬಣ್ಣದ SHADE ನಲ್ಲಿ ಚಿತ್ರಿಸಿದ್ದಾರೆ. ಆ BLUISH SHADE ನಿಂದಾಗಿ ಏನೋ ಒಂಥರಾ ಮುಜುಗರ ಅಗತ್ತೆ ನೋಡೋದಕ್ಕೆ.
ಇತ್ತೀಚಿನ ಚಿತ್ರಗಳಲ್ಲಿ ಎಲ್ರೂ ಒಂದಕ್ಕಿಂತ ಒಂದು ಚೆನ್ನಾಗಿರೋ ಹೊರಾಂಗಣ ತಾಣಗಳಲ್ಲಿ ಶೂಟ್ ಮಾಡ್ತಾ ಇರಬೇಕಾದ್ರೆ, ಇನ್ನೂ ಈ ಥರ ಸ್ಟುಡಿಯೋ ನಲ್ಲೇ ಗೂಟ ಹೊಡ್ಕೊಂಡು ಇದ್ರೆ, ಏನ್ ಬಂತು ??

ಮತ್ತೆ, ಇನ್ನೂ ಆ ಸಣ್ಣ ಟೌನ್ ಥರ ಹಾಕಿರೋ ಸೆಟ್ ಎಷ್ಟು ಕೃತಕವಾಗಿದೆ ಎಂದರೆ, ಇಡೀ ಫಿಲಂ ಕೃತಕವಾಗಿ ಕಾಣಿಸಲು ಶುರುವಾಗುತ್ತದೆ.
ಚಿತ್ರಕಥೆ ತುಂಬ ಸಪ್ಪೆ... ಸಪ್ಪೆ ಗಂಜಿ ಕುಡಿದ ಭಾವನೆ ಬಂತು. ಸ್ವಲ್ಪ ಸಮಾಧಾನಕರ ವಿಷಯ ಅಂದರೆ, ಹಾಡುಗಳು, ಹೊಸಾ ಸಂಗೀತ ನಿರ್ದೇಶಕ ಸ್ವಲ್ಪ ಕಿವಿಗೆ ಇಂಪಾಗಿರೋ ಹಾಡುಗಳನ್ನು ಸಂಯೋಜಿಸಿದ್ದಾನೆ.
ಆದ್ರೂ, ಹಾಡುಗಳನ್ನು ಅಲ್ಲಿ ಇಲ್ಲಿ ಅಂತ ಸುಮಾಸುಮ್ನೆ ತುರ್ಕಿದಾರೆ. ಫಿಲಂ ಶುರುವಾದ 30-40 ನಿಮಿಷದ ಒಳಗೆ 4 ಹಾಡುಗಳು. ತಲೆ ಕೆಡುತ್ತೋ ಇಲ್ವೋ ??

ಇನ್ನೂ ಸಂಭಾಷಣೆಗಳು, ಆ ದೇವರಿಗೆ ಪ್ರೀತಿ. ಒಂದು ಸಣ್ಣ ವಿಷಯ ಹೇಳಕ್ಕೆ, ಸುಮ್ನೆ ೨ ಲೈನ್ ಡೈಲಾಗ್.
ಹೊಸ ನಾಯಕನಟ ರಣಬೀರ್ ಕಪೂರ್.... ನಟನೆ, ನೃತ್ಯ, FACIAL EXPRESSIONS, ಸಂಭಾಷಣೆ, ಎಲ್ಲದರಲ್ಲೂ ಟುಸ್ಸ್ ಪಟಾಕಿ. "ಜಬ್ ಸೆ ತೆರೆ ನೈನಾ..." ಹಾಡಿನಲ್ಲಿ ಥೇಟ್ ಕೋತಿಯ ಹಾಗೆ ಹೆಜ್ಜೆ ಹಾಕಿದ್ದಾನೆ. ಕೆಲವು ದೃಶ್ಯಗಳಲ್ಲಿ ಈತ, ರಾಜ್ ಕಪೂರ್, ಶಶಿ ಕಪೂರ್ ನ ನಕಲು ಮಾಡಲು ಹೋಗಿ ಅದು ತೀರ ಹಾಸ್ಯಾಸ್ಪದವಾಗಿ ಮೂಡಿ ಬಂದಿದೆ. ಇನ್ನೂ ಕೆಲವು ದೃಶ್ಯಗಳಲ್ಲಿ, ಹಂದಿಯ ಹಾಗೆ ಗುಟುರು ಹಾಕಿದ್ದಾನೆ.

ಚಿತ್ರವು ಸೋತಿರುವುದಕ್ಕೆ ಮತ್ತೊಂದು ಕಾರಣವೆಂದರೆ ಸಂಕಲನ (EDITING). ಕೆಲವೊಮ್ಮೆ, 2 ದೃಶ್ಯಗಳ ನಡುವೆ, ಯಾವುದೇ ಲಿಂಕ್ ಇಲ್ಲದೆ ಇರುವುದು ಕಂಡು ಬಂತು. ಮೊದಲೇ ತಲೆ ಕೆಟ್ಟಿರುವಾಗ, ಈ ಥರ ಆದ್ರೆ, ಇನ್ನೂ ತಲೆ ಕೆಡುವ ಚಾನ್ಸ್ ಇರಲ್ವೆ ?

ಚಿತ್ರದ ನಾಯಕಿ ಮುಸಲ್ಮಾನಳು. ಆಕೆ ಅಪರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗೆ ಬಂದು, ನಾಯಕನ ಜೊತೆ ಮಾತಾಡುತ್ತಾ, ಸುತ್ತಾಡುತ್ತ ಇರುವುದು ಕಂಡು ಬರುತ್ತದೆ. ಈ ವಿಷಯದಲ್ಲಿ ಸ್ವಲ್ಪ ಕೂಡಾ ರಿಯಾಲಿಟಿ ಅನ್ನೋ ಅಂಶ ಕಂಡು ಬರೋದಿಲ್ಲ..ಬೇರೆ ದೇಶದ ಸುದ್ಧಿ ಬೇಡ, ನಮ್ಮ ದೇಶದಲ್ಲೇ, ನಾವು ಕಂಡ ಹಾಗೆ, ಸಂಪ್ರದಾಯಸ್ಥ ಮುಸಲ್ಮಾನರ ಮನೆಯಲ್ಲಿ, ಹೆಣ್ಣುಮಕ್ಕಳನ್ನು ಬಹಳ ಜತನವಾಗಿ ನೋಡುತ್ತಾರೆ.

ಆದ್ರೆ, ಇಲ್ಲಿ ಆಕೆ ಬಹಳ ಸ್ವಚ್ಚಂದ. ಯಾವ ಕುಟುಂಬದಲ್ಲಿ ಈ ಥರ ಹೆಣ್ಣು ಮಕ್ಕಳನ್ನು ಅಪರಾತ್ರಿಯ ವೇಳೆ ಹೊರಗೆ ಹೋಗುವುದಕ್ಕೆ ಬಿಡುತ್ತಾರೆ (ಬೆಂಗಳೂರನ್ನು ಮಧ್ಯ ತರಬೇಡಿ)?

ಇಲ್ಲಿ ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್ ಅನ್ನೋ ಮಾತು ಬರೋದಿಲ್ಲ. ಚಿತ್ರದಲ್ಲಿ ತೋರಿಸಿರುವ ಹಾಗೆ ಒಂದು ಸಣ್ಣ ಟೌನ್ ನಲ್ಲಿ, ಹೀಗೆ ಆಗುತ್ತದೆ ಅಂದ್ರೆ, ನಂಬೋದಕ್ಕೆ ಸಾಧ್ಯಾನಾ ? ಸಿಕ್ಕಾಪಟ್ಟೆ ಕೃತಕವಾಗಿ ಮೂಡಿ ಬಂದಿದೆ.

ಇನ್ನೂ, ರಸ್ತೆ ಮಧ್ಯದಲ್ಲಿ ಹರಿಯುವ ಒಂದು ನದಿ, ಅದರ ಮೇಲೆ ಕಟ್ಟಿರುವ ಒಂದು ಸಣ್ಣ BRIDGE, ಎಲ್ಲಾ ಕೃತಿಮ ಕೃತಿಮ ಕೃತಿಮ.... ಎಲ್ಲಾ ದೃಶ್ಯಗಳಲ್ಲೂ ಈ ಕೃತಕ ಅನ್ನೋ ಫೀಲಿಂಗ್ ಮನಸ್ಸಿನಲ್ಲಿ ಸಖತ್ತಾಗಿ ಒಂದು ನೆಗೆಟಿವ್ ಛಾಪು ಮೂಡಿಸುತ್ತೆ.

ಇದರ ಬಗ್ಗೆ ಬರೀತಾ ಇದ್ರೆ, ಇನ್ನೂ ೪ ಪುಟ ತುಂಬುತ್ತೆ. ಸಿಂಪಲ್ ಆಗಿ ಹೇಳೋದಾದ್ರೆ, ಸಂಜಯ್ ಲೀಲಾ ಭಾನ್ಸಾಲಿಯಿಂದ ನಿರೀಕ್ಷಿಸಿರದಿದ್ದ ಚಿತ್ರ.
ಎಲ್ಲ DEPARTMENTಗಳಲ್ಲಿ ಸೋತಿದೆ. PROMOಗಳನ್ನು ನೋಡಿದ್ರೆ, ಚಿತ್ರದ ಒಟ್ಟಾರೆ ಬಜೆಟ್ ಗಿಂತ ಜಾಸ್ತಿ ಖರ್ಚು ಮಾಡಿದಾರೆ ಅನ್ಸುತ್ತೆ.

ಇದನ್ನ ನೋಡಿದ್ದಕ್ಕೆ ನಂಗೆ ಸಿಕ್ಕಿದ್ದು ಎರಡೇ. ತಲೆನೋವು, ದುಡ್ಡು ಖರ್ಚು. ನನ್ನ ಪ್ರಕಾರ ಹೇಳೋದಾದ್ರೆ, ಪ್ಲೀಸ್, ಈ ಚಿತ್ರ ನೋಡೋ ಪ್ಲಾನ್ ಇದ್ರೆ ದಯವಿಟ್ಟು ಡ್ರಾಪ್ ಮಾಡಿ. ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿರುವ ಸಂಜಯ್ ಲೀಲಾ ಭಾನ್ಸಾಲಿ.

ವಿ.ಸೂ : ಮೇಲೆ ಬರೆದಿರುವ ಸಾವರಿಯ ಚಿತ್ರದ ವಿಮರ್ಶೆ, ನನಗೆ ಅನ್ನಿಸಿರುವ ಹಾಗೆ ಬರೆದಿದ್ದು. ಇದು ಕೇವಲ ನನ್ನ ಅಭಿಪ್ರಾಯ ಅಷ್ಟೆ.

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Thursday, November 15, 2007

ಪ್ರತಿಭೆ V/S ಎಸ್ಎಂಎಸ್

"ವಾಹ್ ಬೇಟಾ ವಾಹ್.. ತುಮ್ನೆ ಆಜ್ ಬಹುತ್ ಅಛ್ಚಾ ಗಾಯಾ ಹೈ. ದುಖ್ ಈಸ್ ಬಾತ್ ಕಾ ಹೈ ಕಿ ಮೈ ಸಿರ್ಫ್ 10 ಅಂಕ್ ದೆಸಕ್ತಾ ಹೂಂ...
ಅಗರ್ (ಮಧ್ಯೆ ಒಂದು PAUSE).... ಅಗರ್ ಮೇರೆ ಬಸ್ ಮೈ ಹೋತಾ ತೋ 15 ದೇದೇತಾ..ಜಾವೋ ಬೇಟಾ XYZ ಕಾ ಆಶಿರ್ವಾದ್ ಲೇಲೋ..."

ಯಾವುದೇ ಚಾನೆಲ್ ಹಾಕಿದ್ರೂ ಕೂಡಾ ಈ ಥರಾ ಡೈಲಾಗ್ ಇರೋ ಸಾಕಷ್ಟು ಸಂಗೀತ ಸ್ಪರ್ಧೆಗಳು ಕಾಣಸಿಗುತ್ತವೆ.
ಇಲ್ಲಿ ಪ್ರತಿಭೆಗೆ ಯಾವುದೇ ಅವಕಾಶ ಇರೋದಿಲ್ಲ..
ಜನರು ತಮ್ಮ ಮೊಬೈಲ್ನಿಂದ ಕಳಿಸೋ SMS ಗಳ ಸಂಖ್ಯೆಯಿಂದ ವಿಜೇತರನ್ನು ಆರಿಸಲಾಗುತ್ತದೆ.

ಈ ಥರ SMSನಿಂದ ಗಾಯನದಂಥಾ ಒಂದು ಸ್ಪರ್ಧೆಯ ವಿಜೇತರನ್ನು ಆರಿಸುವ ಈ ಪ್ರೋಗ್ರಾಂನ ಕಾನ್ಸೆಪ್ಟ್ ಯಾವ ಭೂಪನದ್ದು ಅಂಥ ಕೇಳ್ಬೇಕು ತಾನೆ ?

ಅದೇ ನೋಡಿ.. "INDIAN IDOL" ನಂಥಾ ಭರ್ಜರಿ ಬಹುಮಾನಗಳನ್ನು ಕೊಡುವ ಪ್ರೋಗ್ರಾಂನ ವಿಜೇತರ ಇಂದಿನ ಪಾಡು ಏನೆಂದು ?? ಮೊದಲನೆ ವಿಜೇತ ಅಭಿಜಿತ್ ಸಾವಂತ್, ಎರಡನೆಯ ವಿಜೇತರಾದ ಸಂದೀಪ್ ಆಚಾರ್ಯ, ಹಾಗು ಮೊನ್ನೆ ಮೊನ್ನೆ ಮೂರನೆಯ INDIAN IDOL ಪ್ರಶಾಂತ್ ತಮಾಂಗ್...

ಚಾನೆಲ್ ನವರು ಹೇಳುವ ರೀತಿ, ಪಬ್ಲಿಸಿಟಿ ನೋಡಿದ್ರೆ, ಈ ವಿಜೆತರೆಲ್ಲ ಇವತ್ತಿನ ದಿನ ಚಲನಚಿತ್ರ ರಂಗದಲ್ಲಿ ಒಳ್ಳೆ ಹಿನ್ನಲೆ ಗಾಯಕರಾಗಬೇಕಿತ್ತು. ಇಲ್ಲಿನ ರಿಯಾಲಿಟಿ ನೋಡಿ..
ಅಭಿಜಿತ್ ಸಾವಂತ್, ಇವತ್ತಿಗೂ ಒಂದು ಒಳ್ಳೆಯ ಅವಕಾಶವಿಲ್ಲದೆ, ತನ್ನ ಮ್ಯೂಸಿಕ್ ಆಲ್ಬಂ ತಾನೆ ಹೊರತಂದು ಆಲ್ಮೋಸ್ಟ್ ಬರ್ಬಾದ್ ಆಗೋ ಥರ ಇದಾನೆ. ಇನ್ನು ಸಂದೀಪ್ ಆಚಾರ್ಯ, ಈತನನ್ನು "INDIAN IDOL" ಶೋನಲ್ಲಿ ನೋಡಿದ ಜ್ಞಾಪಕವೇ ಯಾರಿಗೂ ಇದ್ದಂತಿಲ್ಲ.
ಇನ್ನು ಕರೆದು ಅವಕಾಶ ಕೊಟ್ಟು, ಅವನ ಧ್ವನಿಯನ್ನು ದೇಶಕ್ಕೆ ಕೇಳಿಸುವ ಕೈಂಕರ್ಯ ಯಾರು ಮಾಡುತ್ತಾರೋ, ಆ ದೇವರಿಗೆ ಗೊತ್ತು.
ಇನ್ನು ಪ್ರಶಾಂತ್ ತಮಾಂಗ್, ಅವನ ಭವಿಷ್ಯವೆಲ್ಲಿ ಇದೆಯೋ...ಕಾಲವೇ ತಿಳಿಸಬೇಕು.

ಇವರಲ್ಲಿ ಯಾರೂ ಒಳ್ಳೆಯ ಗಾಯಕರಲ್ಲ ಅಂತ ನಾನು ಹೇಳ್ತಾ ಇಲ್ಲ..ಆದ್ರೆ, ಗಾಯನ ಸ್ಪರ್ಧೆ ಅನ್ನೋದು ಅನುಭವಿ ಹಾಗು ಸಂಗೀತದ ಬಗ್ಗೆ ಒಳ್ಳೆ ಜ್ಞಾನ, ಅನುಭವ, ಇರುವ ತಿರ್ಪುಗಾರರಿಂದ ನಿರ್ಧರಿಸಲ್ಪಡಬೇಕೇ ಹೊರತು ಜನ ಮರಳೋ, ಜಾತ್ರೆ ಮರುಳೋ ಅನ್ನುವ ಹಾಗೆ ಬರುವ SMS ಮುಖೇನ ಅಲ್ಲಾ.

ಸುಮ್ನೆ ನಾಯಿ ಮರಿ ಹಾಕುವ ರೀತಿ ಜನರು ಕಳಿಸುವ SMS ಮುಖಾಂತರ ಗೆದ್ದ ವಿಜೇತರ ಪಾಡು ಇಂದು ಏನಾಗಿದೆ ??
ಇದರಲ್ಲಿ ಮೊಬೈಲ್ ಫೋನ್ ಆಪರೇಟರ್ ಹಾಗು ಚಾನೆಲ್ ನವರಿಗೆ ಲಾಭವೇ ಹೊರತು, ಅದರಲ್ಲಿ ಗೆದ್ದ ವಿಜೇತರಿಗೆ ಆಗಲೀ, ಆ ಸ್ಪರ್ಧಿಗಳ ಮೇಲೆ ಅನುಕಂಪ ಇಟ್ಟು ಪ್ರವಾಹೊಪಾದಿಯಲ್ಲಿ SMS ಕಳಿಸುವ ನಮಗೆ ಯಾವುದೇ ಉಪಯೋಗವಿಲ್ಲ..

Atleast, ವಿಜೇತರಿಗೆ ಸಾಕಷ್ಟು ಬಹುಮಾನಗಳು ಬರುತ್ತವೆ... SMS ಕಳಿಸೋ ನಮಗೆ ????
ಏನು ಇಲ್ಲ.. SMS ಮುಖಾಂತರ ಗೆದ್ದ ಸ್ಪರ್ಧಿಗಳು, ಈ ಗೆಲುವನ್ನೇ ತೀರಾ ದೊಡ್ಡದೆಂದು ಭಾವಿಸಿ, ತಮ್ಮ ಭವಿಷ್ಯವನ್ನೇ ತಿರುಗಿಸುತ್ತಾ ಇದಾರೆ...
ಹಾಗದಲ್ಲಿ, ಮುಂದಿನ ಸಾರಿ SMS ಕಳಿಸುವ ಮುನ್ನ, ಯೋಚನೆ ಮಾಡಿ. ಅದೂ ಆಗಲ್ಲ ಅಂದ್ರೆ ಸುಮ್ನೆ 3ರೂ ಚೌರ ವೆಂದಾದರೂ ಸುಮ್ಮನಿರಿ...

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Tuesday, October 30, 2007

ಇನ್ನೂ ಕೆಲವು ಕನ್ನಡ ಟಿ-ಶರ್ಟುಗಳು

ಸ್ನೇಹಿತರೇ,
ಹೆಚ್ಚಿನ ಕನ್ನಡ ಟಿ-ಶರ್ಟುಗಳು.
ಬೆಂಗಳೂರಿನಲ್ಲಿ ಕನ್ನಡ ಬರಹಗಳು ಇರುವ ಟಿ-ಶರ್ಟುಗಳ ಒಂದು ಹೊಸ ಟ್ರೆಂಡ್ ಶುರು ಆಗಿದೆ.
ಬನ್ನಿ, ನಾವು ಕೂಡಾ ಅದ್ರಲ್ಲಿ ಸೇರಿಕೊಳ್ಳೋಣ.
ಲಭ್ಯವಿರುವ ಟಿ-ಶರ್ಟ್ ಸೈಜುಗಳು : M, L, XL
ಬೆಲೆ : ರೂ.250/-
ಆಸಕ್ತಿ ಇರುವವರು ಸಂಪರ್ಕಿಸಬೇಕಾದ ಈ-ಮೇಲ್ ವಿಳಾಸ :

varashe@gmail.com

--------------------------------------------

--------------------------------------------

--------------------------------------------

--------------------------------------------

--------------------------------------------

--------------------------------------------

--------------------------------------------

--------------------------------------------

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Thursday, October 25, 2007

EXPIRY ಮತ್ತು RENEWALಗಳ ಮಧ್ಯೆ ಸ್ನೇಹ ಮತ್ತು ಪ್ರೀತಿ

ಬದುಕಿನ ಪ್ರತಿ ಸಂಬಂಧವೂ RENEW ಆಗ್ತಾ ಇರ್ಬೇಕು, ಇಲ್ಲದೇ ಹೋದರೆ EXPIRE ಆಗಿ ಬಿಡುತ್ತೆ.

ಎಷ್ಟು ನಿಜ ಅಲ್ವೇ ? ಬದುಕಿನಲ್ಲಿ ಪ್ರತಿ ದಿನವೂ ಹೊಸ ಹೊಸ ಸಂಬಂಧಗಳು ಸೃಷ್ಟಿ ಆಗ್ತಾನೇ ಇರುತ್ತವೆ,
ಹಾಗೆಯೇ ಎಷ್ಟೊಂದು ಸಂಬಂಧಗಳು ನರಳಿಕೆಯೇ ಇಲ್ಲದೇ ಸಾಯುತ್ತಿರುತ್ತವೆ.

ಮೊನ್ನೆ ತಾನೇ ಸೇರಿದ ಕಂಪೆನಿಯಲ್ಲಿ, ಪಕ್ಕದ CUBICALನವನ ಜೊತೆ WEEKEND ಫಿಲಂ ಪ್ಲಾನ್ ಮಾಡುವ ನಾವು,
ಮೊನ್ನೆ ಮೊನ್ನೆಯವರೆಗೆ ಒಂದೇ ಬೆಂಚಿನಲ್ಲಿ ಪಕ್ಕ ಪಕ್ಕ ಕೂರುತ್ತಿದ್ದ ಗೆಳೆಯನನ್ನು ಮರೆಯುತ್ತೇವೆ.

ಆಫೀಸಿಗೆ ಒಂದೇ ಬಸ್ಸಿನಲ್ಲಿ ಬರುವವರಿಗೆಲ್ಲಾ SMS ಕಳುಹಿಸೋ ನಾವು,
ಹಾಸ್ಟೆಲ್‌ನಲ್ಲಿ ರೂಮ್ ಮೇಟ್ ಆಗಿದ್ದವನ ಮೊಬೈಲ್ ನಂಬರ್ ಡಿಲೀಟ್ ಆಗಿದ್ದನ್ನ ಮರೀತೀವಿ.

ನಾವು ನೋಡದೇ ಇರುವ CLIENT ಗಳಿಗೆ ತಪ್ಪದೇ ಕ್ರಿಸ್ಮಸ್,ನ್ಯೂ ಇಯರ್ ಗೆ ಈ-ಮೇಲ್ ಕಲಿಸುವ ನಾವು,
ಪರೀಕ್ಷೆಯ ಸಮಯದಲ್ಲಿ ನೋಟ್ಸು ಓದಿಸಿದ ಮಿತ್ರನ ಪೋಸ್ಟಲ್ ಅಡ್ರೆಸ್ಸನ್ನೇ ಮರೀತೀವಿ.

ಪ್ರತೀ ಸಂಬಂಧವೂ ಅಷ್ಟೇ, ನೀರೆರೆಯದಿದ್ದರೆ ಅವು ಒಣಗಿದ ಬಳ್ಳಿಯೇ, ಹೂವು ಅರಳದು, ಕಂಪು ಹರಡದು.
ಗೆಳೆತನವೆಂಬುದೂ ಒಂದು ಬಳ್ಳಿಯೇ, ಅದು ಎಷ್ಟೇ ಹಬ್ಬಿದರೂ ಸಹಾ, ನೀರುಣಿಸದಿದ್ದರೆ ಬಾಡಿಹೋಗುತ್ತದೆ.
ಹಾಗಾದರೆ ನಮ್ಮ ಗೆಳೆತನದ ಬಳ್ಳಿಗೆ ನೀರೆರೆಯೋಣ, ಮತ್ತೆ RENEW ಮಾಡೋಣ, EXPIRY DATE ಹತ್ರ ಬರ್ತಾ ಇದೆ.

ಓರ್ವ ಮಿತ್ರ ಕಳಿಸಿದ್ದು....ಬರೆದದ್ದು ಯಾರು ಅಂತ ಗೊತ್ತಿಲ್ಲ.

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

ಕನ್ನಡಿಗರ ಮನದಲ್ಲಿ ಆತ್ಮ ವಿಶ್ವಾಸ ತುಂಬುವ ಟೀ ಶರ್ಟ್!

ಕನ್ನಡಿಗರ ಮನದಲ್ಲಿ ಆತ್ಮ ವಿಶ್ವಾಸ ತುಂಬುವ ಟೀ ಶರ್ಟ್!

ಟೀ ಶರ್ಟ್ ಇಂದು ಫ್ಯಾಷನ್ ಆಗಿ ಉಳಿದಿಲ್ಲ. ಎಲ್ಲರೂ ತೊಡುವ ಉಡುಗೆಯಾಗಿ ಅದು ಪರಿವರ್ತನೆಯಾಗಿದೆ. ಟೀ ಶರ್ಟ್ ಮೇಲೆ ಏನೇನೋ ಬರಹಗಳು.ಚಿತ್ರ ವಿಚಿತ್ರ ಘೋಷಣೆಗಳು. ಏನೇನೋ ಚಿತ್ರಗಳು.

ಈಗ ಕನ್ನಡಿಗರೆಲ್ಲರೂ ಮೆಚ್ಚುವ ಟೀ ಶರ್ಟ್ ಬಂದಿವೆ. ಅಪ್ಪಟ ಕನ್ನಡದಲ್ಲಿ ಕವಿವಾಣಿಯನ್ನು ಹೊತ್ತ ಈ ಟೀ ಶರ್ಟ್ ಧರಿಸುವುದು ನಿಜಕ್ಕೂ ಒಂದು ಹೆಮ್ಮೆ ಎಂಬ ಭಾವ ಮೂಡುತ್ತದೆ. ಜಿ.ಪಿ.ರಾಜರತ್ನಂ ಮತ್ತು ಡಿ.ವಿ.ಗುಂಡಪ್ಪ ಅವರ ಕವನದ ಸಾಲುಗಳನ್ನು ಟೀ ಶರ್ಟ್ ಮೇಲೆ ಬೆಂಗಳೂರಿನ ಸಮಾಜ ಸೇವಕರ ಸಮಿತಿ ಮುದ್ರಿಸಿ ಮಾರಾಟಕ್ಕಿಟ್ಟಿದೆ. ಬಾಯ್ ಫ್ರೆಂಡುಗಳಿಗೆ ಒಳ್ಳೆಯ ಉಡುಗೊರೆಯಾಗುತ್ತದೆ. ಕಂಪನಿಗಳು, ಸಂಸ್ಥೆಗಳು, ಶಾಲಾ ಕಾಲೇಜುಗಳು ಸಗಟಿನಲ್ಲಿ ಕೊಂಡರೆ ಬೆಂಗಳೂರಿನಲ್ಲಿ ಕನ್ನಡ ಬಳಕೆಗೆ ಹೊಸ ಅರ್ಥ ಬರುತ್ತದೆ.

ಸದ್ಯಕ್ಕೆ ನೀಲಿ ಮತ್ತು ಕಪ್ಪು ಬಣ್ಣದ ಟೀ ಶರ್ಟ್ ಗಳು ಮಾತ್ರ ಲಭ್ಯವಿದ್ದು, ಒಂದರ ಬೆಲೆ ಕೇವಲ 200 ರೂಪಾಯಿ. ನಾವು ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಕನ್ನಡ ಪ್ರೇಮಿಗಳು ಟೀ ಶರ್ಟ್ ಧರಿಸಿ, ಹೆಮ್ಮೆಯಿಂದ ಸುತ್ತಾಡಲಿ ಎಂಬುದು ನಮ್ಮ ಆಶಯ ಎನ್ನುತ್ತಿದೆ ಸಮಾಜ ಸೇವಕರ ಸಮಿತಿ.

The Profit from the sales of these T-Shirts are used for the free education for children of agriculturists and daily wage workers.
the development program is conducted at LINGANAYAKANAHALLI and KURUVATTI, small villages near Ranebennur.

ಈ ಟಿ-ಶರ್ಟ್ ನಲ್ಲಿ ಬರುವ ಲಾಭವನ್ನು ರಾಣೇಬೆನ್ನೂರಿನ ಬಳಿ ಇರುವ ಲಿಂಗನಾಯಕನಹಳ್ಳಿ ಮತ್ತು ಕುರುವಟ್ಟಿ ಎಂಬ ಗ್ರಾಮಗಳಲ್ಲಿನ ರೈತಾಪಿ ಜನಗಳ
ಹಾಗು ದಿನಗೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಪಯೋಗವಾಗುತ್ತದೆ.
ಇವರ ಕಾರ್ಯಕ್ರಮಗಳನ್ನು ನೋಡಬೇಕಾದಲ್ಲಿ :

HTTP://WWW.SSSGLOBAL.ORG

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Wednesday, October 17, 2007

ಕಾಫಿಯ ಕಿಕ್ಕು...(CAFFEINE KICK)

ಮಿತ್ರ ಅವಿನಾಶ್ ಕಳ್ಸಿದ್ದು

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Thursday, October 11, 2007

ಗ್ರಾಹಕರಿಗೆ ಸೂಚನೆ

ಮಲ್ಲೇಶ್ವರಮ್ ನ ಸಂಪಿಗೆ ರಸ್ತೆ ಯಲ್ಲಿ ಹಾಕಿರುವ ಬೋರ್ಡು

ಮಿತ್ರ ಅವಿನಾಶ್ ಪದಕಿ ಕಳ್ಸಿದ್ದು

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Thursday, October 4, 2007

ಹುಲಿಗಳು ಸಾರ್ ಹುಲಿಗಳು

ನಾವು ಬಂಡೀಪುರ ಮತ್ತು ಗೋಪಲಸ್ವಾಮಿ ಬೆಟ್ಟಕ್ಕೆ ಪ್ರವಾಸ ಹೋಗಿದ್ವಿ....
ಅದರ ಕೆಲವು ಫೋಟೋಗಳು ಇಲ್ಲಿವೆ...
ಹೆಂಗಿವೆ ಎಂದು ತಿಳಿಸಿ

----------------------------------------------------------------------------------

ಟೈಗರ್ ರಾಂಚ್ ನ ಟೈಗರ್ ಗಳು