Monday, November 19, 2007

ಸಾವರಿಯ - ಏನೈತೆ ಶಿವಾ ಇದ್ರಲ್ಲಿ ?


ಸಾವರಿಯಾ - 2007 ಕೊನೆಯಲ್ಲಿ ಬಿದುಗದೆಯಾಗುವುದಕ್ಕೆ ಮುಂಚೆ, ತುಂಬಾ ನಿರೀಕ್ಷೆ ಹಾಗು ಭರವಸೆ ಮೂಡಿಸಿದ್ದ ಚಿತ್ರ.
ನಿರೀಕ್ಷೆ ಹಾಗು ಭರವಸೆಗೆ ಕಾರಣಗಳು ಸಾಕಷ್ಟು ಇದ್ವು.

ನಿರ್ಮಾಣ, ನಿರ್ದೇಶನ, ಚಿತ್ರಕಥೆ, ಸಂಕಲನ...ಇವುಗಳ ಹೊರೆ ಹೊತ್ತಿದ್ದು, ಭಾರತಿಯ ಚಿತ್ರರಂಗ ಕಂಡ ಒಬ್ಬ ಕಲಾತ್ಮಕ, ಅನುಭವಿ ಹಿಟ್ ಹಾಗು OSCAR NOMINATED ಡೈರೆಕ್ಟರ್ ಅನ್ನಿಸಿಕೊಂಡಿರುವ ಸಂಜಯ್ ಲೀಲಾ ಭನ್ಸಾಲಿ.

ಇದರ ಜೊತೆ, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊಸ ನಾಯಕ ನಟ ರಣಬೀರ್ ಕಪೂರ್ (ರಿಷಿ ಕಪೂರ್ ಹಾಗು ಮಾಜಿ ನಟಿ ನಿತು ಕಪೂರ್ ಪುತ್ರ), ಮತ್ತು ನಾಯಕಿ ಸೋನಂ ಕಪೂರ್ (ಅನಿಲ್ ಕಪೂರ್ ಪುತ್ರಿ). ಚಿತ್ರಕ್ಕೆ ಸಂಗೀತ ನಿರ್ದೇಶಕ ಕೂಡ ಹೊಸಬ, MONTY.
ಹಾಗಾಗಿ ಈ ಚಿತ್ರದಲ್ಲಿ ಹೊಸ ಮುಖಗಳ FRESHNESS ಇರುತ್ತೆ ಅನ್ಕೊಂಡು ಹೋದ್ರೆ ಮಾತ್ರ, ನಿಮಗೆ ಬಹಳ ನಿರಾಸೆ ಆಗೋದು ಗ್ಯಾರಂಟಿ.
ಭಾನ್ಸಾಲಿಯ ಚಿತ್ರ ಅನ್ಕೊಂಡು ಹೋದ್ರೆ, ಇನ್ನೂ ಹೆಚ್ಚಿನ ನಿರಾಸೆ. ಒಟ್ಟಿನಲ್ಲಿ, ಈ ಚಿತ್ರದಲ್ಲಿ ನಿರಾಸೆ ಅನ್ನೋದು, ಕಟ್ಟಿಟ್ಟ ಬುತ್ತಿ.

ಮೊದಲನೆಯದಾಗಿ, ಶುರು ಇಂದ ಕೊನೆಯವರೆಗೆ, ಚಿತ್ರ ನಡೆಯುವುದು ಸ್ಟುಡಿಯೋ ಸೆಟ್ನಲ್ಲಿ.
ಇಡೀ ಚಿತ್ರ ಏನೋ ಒಂಥರಾ ನೀಲಿ ಬಣ್ಣದ SHADE ನಲ್ಲಿ ಚಿತ್ರಿಸಿದ್ದಾರೆ. ಆ BLUISH SHADE ನಿಂದಾಗಿ ಏನೋ ಒಂಥರಾ ಮುಜುಗರ ಅಗತ್ತೆ ನೋಡೋದಕ್ಕೆ.
ಇತ್ತೀಚಿನ ಚಿತ್ರಗಳಲ್ಲಿ ಎಲ್ರೂ ಒಂದಕ್ಕಿಂತ ಒಂದು ಚೆನ್ನಾಗಿರೋ ಹೊರಾಂಗಣ ತಾಣಗಳಲ್ಲಿ ಶೂಟ್ ಮಾಡ್ತಾ ಇರಬೇಕಾದ್ರೆ, ಇನ್ನೂ ಈ ಥರ ಸ್ಟುಡಿಯೋ ನಲ್ಲೇ ಗೂಟ ಹೊಡ್ಕೊಂಡು ಇದ್ರೆ, ಏನ್ ಬಂತು ??

ಮತ್ತೆ, ಇನ್ನೂ ಆ ಸಣ್ಣ ಟೌನ್ ಥರ ಹಾಕಿರೋ ಸೆಟ್ ಎಷ್ಟು ಕೃತಕವಾಗಿದೆ ಎಂದರೆ, ಇಡೀ ಫಿಲಂ ಕೃತಕವಾಗಿ ಕಾಣಿಸಲು ಶುರುವಾಗುತ್ತದೆ.
ಚಿತ್ರಕಥೆ ತುಂಬ ಸಪ್ಪೆ... ಸಪ್ಪೆ ಗಂಜಿ ಕುಡಿದ ಭಾವನೆ ಬಂತು. ಸ್ವಲ್ಪ ಸಮಾಧಾನಕರ ವಿಷಯ ಅಂದರೆ, ಹಾಡುಗಳು, ಹೊಸಾ ಸಂಗೀತ ನಿರ್ದೇಶಕ ಸ್ವಲ್ಪ ಕಿವಿಗೆ ಇಂಪಾಗಿರೋ ಹಾಡುಗಳನ್ನು ಸಂಯೋಜಿಸಿದ್ದಾನೆ.
ಆದ್ರೂ, ಹಾಡುಗಳನ್ನು ಅಲ್ಲಿ ಇಲ್ಲಿ ಅಂತ ಸುಮಾಸುಮ್ನೆ ತುರ್ಕಿದಾರೆ. ಫಿಲಂ ಶುರುವಾದ 30-40 ನಿಮಿಷದ ಒಳಗೆ 4 ಹಾಡುಗಳು. ತಲೆ ಕೆಡುತ್ತೋ ಇಲ್ವೋ ??

ಇನ್ನೂ ಸಂಭಾಷಣೆಗಳು, ಆ ದೇವರಿಗೆ ಪ್ರೀತಿ. ಒಂದು ಸಣ್ಣ ವಿಷಯ ಹೇಳಕ್ಕೆ, ಸುಮ್ನೆ ೨ ಲೈನ್ ಡೈಲಾಗ್.
ಹೊಸ ನಾಯಕನಟ ರಣಬೀರ್ ಕಪೂರ್.... ನಟನೆ, ನೃತ್ಯ, FACIAL EXPRESSIONS, ಸಂಭಾಷಣೆ, ಎಲ್ಲದರಲ್ಲೂ ಟುಸ್ಸ್ ಪಟಾಕಿ. "ಜಬ್ ಸೆ ತೆರೆ ನೈನಾ..." ಹಾಡಿನಲ್ಲಿ ಥೇಟ್ ಕೋತಿಯ ಹಾಗೆ ಹೆಜ್ಜೆ ಹಾಕಿದ್ದಾನೆ. ಕೆಲವು ದೃಶ್ಯಗಳಲ್ಲಿ ಈತ, ರಾಜ್ ಕಪೂರ್, ಶಶಿ ಕಪೂರ್ ನ ನಕಲು ಮಾಡಲು ಹೋಗಿ ಅದು ತೀರ ಹಾಸ್ಯಾಸ್ಪದವಾಗಿ ಮೂಡಿ ಬಂದಿದೆ. ಇನ್ನೂ ಕೆಲವು ದೃಶ್ಯಗಳಲ್ಲಿ, ಹಂದಿಯ ಹಾಗೆ ಗುಟುರು ಹಾಕಿದ್ದಾನೆ.

ಚಿತ್ರವು ಸೋತಿರುವುದಕ್ಕೆ ಮತ್ತೊಂದು ಕಾರಣವೆಂದರೆ ಸಂಕಲನ (EDITING). ಕೆಲವೊಮ್ಮೆ, 2 ದೃಶ್ಯಗಳ ನಡುವೆ, ಯಾವುದೇ ಲಿಂಕ್ ಇಲ್ಲದೆ ಇರುವುದು ಕಂಡು ಬಂತು. ಮೊದಲೇ ತಲೆ ಕೆಟ್ಟಿರುವಾಗ, ಈ ಥರ ಆದ್ರೆ, ಇನ್ನೂ ತಲೆ ಕೆಡುವ ಚಾನ್ಸ್ ಇರಲ್ವೆ ?

ಚಿತ್ರದ ನಾಯಕಿ ಮುಸಲ್ಮಾನಳು. ಆಕೆ ಅಪರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗೆ ಬಂದು, ನಾಯಕನ ಜೊತೆ ಮಾತಾಡುತ್ತಾ, ಸುತ್ತಾಡುತ್ತ ಇರುವುದು ಕಂಡು ಬರುತ್ತದೆ. ಈ ವಿಷಯದಲ್ಲಿ ಸ್ವಲ್ಪ ಕೂಡಾ ರಿಯಾಲಿಟಿ ಅನ್ನೋ ಅಂಶ ಕಂಡು ಬರೋದಿಲ್ಲ..ಬೇರೆ ದೇಶದ ಸುದ್ಧಿ ಬೇಡ, ನಮ್ಮ ದೇಶದಲ್ಲೇ, ನಾವು ಕಂಡ ಹಾಗೆ, ಸಂಪ್ರದಾಯಸ್ಥ ಮುಸಲ್ಮಾನರ ಮನೆಯಲ್ಲಿ, ಹೆಣ್ಣುಮಕ್ಕಳನ್ನು ಬಹಳ ಜತನವಾಗಿ ನೋಡುತ್ತಾರೆ.

ಆದ್ರೆ, ಇಲ್ಲಿ ಆಕೆ ಬಹಳ ಸ್ವಚ್ಚಂದ. ಯಾವ ಕುಟುಂಬದಲ್ಲಿ ಈ ಥರ ಹೆಣ್ಣು ಮಕ್ಕಳನ್ನು ಅಪರಾತ್ರಿಯ ವೇಳೆ ಹೊರಗೆ ಹೋಗುವುದಕ್ಕೆ ಬಿಡುತ್ತಾರೆ (ಬೆಂಗಳೂರನ್ನು ಮಧ್ಯ ತರಬೇಡಿ)?

ಇಲ್ಲಿ ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್ ಅನ್ನೋ ಮಾತು ಬರೋದಿಲ್ಲ. ಚಿತ್ರದಲ್ಲಿ ತೋರಿಸಿರುವ ಹಾಗೆ ಒಂದು ಸಣ್ಣ ಟೌನ್ ನಲ್ಲಿ, ಹೀಗೆ ಆಗುತ್ತದೆ ಅಂದ್ರೆ, ನಂಬೋದಕ್ಕೆ ಸಾಧ್ಯಾನಾ ? ಸಿಕ್ಕಾಪಟ್ಟೆ ಕೃತಕವಾಗಿ ಮೂಡಿ ಬಂದಿದೆ.

ಇನ್ನೂ, ರಸ್ತೆ ಮಧ್ಯದಲ್ಲಿ ಹರಿಯುವ ಒಂದು ನದಿ, ಅದರ ಮೇಲೆ ಕಟ್ಟಿರುವ ಒಂದು ಸಣ್ಣ BRIDGE, ಎಲ್ಲಾ ಕೃತಿಮ ಕೃತಿಮ ಕೃತಿಮ.... ಎಲ್ಲಾ ದೃಶ್ಯಗಳಲ್ಲೂ ಈ ಕೃತಕ ಅನ್ನೋ ಫೀಲಿಂಗ್ ಮನಸ್ಸಿನಲ್ಲಿ ಸಖತ್ತಾಗಿ ಒಂದು ನೆಗೆಟಿವ್ ಛಾಪು ಮೂಡಿಸುತ್ತೆ.

ಇದರ ಬಗ್ಗೆ ಬರೀತಾ ಇದ್ರೆ, ಇನ್ನೂ ೪ ಪುಟ ತುಂಬುತ್ತೆ. ಸಿಂಪಲ್ ಆಗಿ ಹೇಳೋದಾದ್ರೆ, ಸಂಜಯ್ ಲೀಲಾ ಭಾನ್ಸಾಲಿಯಿಂದ ನಿರೀಕ್ಷಿಸಿರದಿದ್ದ ಚಿತ್ರ.
ಎಲ್ಲ DEPARTMENTಗಳಲ್ಲಿ ಸೋತಿದೆ. PROMOಗಳನ್ನು ನೋಡಿದ್ರೆ, ಚಿತ್ರದ ಒಟ್ಟಾರೆ ಬಜೆಟ್ ಗಿಂತ ಜಾಸ್ತಿ ಖರ್ಚು ಮಾಡಿದಾರೆ ಅನ್ಸುತ್ತೆ.

ಇದನ್ನ ನೋಡಿದ್ದಕ್ಕೆ ನಂಗೆ ಸಿಕ್ಕಿದ್ದು ಎರಡೇ. ತಲೆನೋವು, ದುಡ್ಡು ಖರ್ಚು. ನನ್ನ ಪ್ರಕಾರ ಹೇಳೋದಾದ್ರೆ, ಪ್ಲೀಸ್, ಈ ಚಿತ್ರ ನೋಡೋ ಪ್ಲಾನ್ ಇದ್ರೆ ದಯವಿಟ್ಟು ಡ್ರಾಪ್ ಮಾಡಿ. ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿರುವ ಸಂಜಯ್ ಲೀಲಾ ಭಾನ್ಸಾಲಿ.


ವಿ.ಸೂ : ಮೇಲೆ ಬರೆದಿರುವ ಸಾವರಿಯ ಚಿತ್ರದ ವಿಮರ್ಶೆ, ನನಗೆ ಅನ್ನಿಸಿರುವ ಹಾಗೆ ಬರೆದಿದ್ದು. ಇದು ಕೇವಲ ನನ್ನ ಅಭಿಪ್ರಾಯ ಅಷ್ಟೆ.

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

No comments: