Wednesday, November 21, 2007

ಆಟೋ ಕಿರಿಕ್‌ ಇನ್ನಿಲ್ಲ! ಸುಖ ಪಯಣಕ್ಕಾಗಿ ಈಜಿ ಆಟೋ!


ಕಾರು ಕೊಳ್ಳಲಾಗದ, ಅದಿದ್ದರೂ ಟ್ರಾಫಿಕ್‌ನಲ್ಲಿ ಕಾರು ಓಡಿಸಲಾಗದ, ಬಸ್‌ ಕಿರಿಕಿರಿ ತಪ್ಪಿಸಿಕೊಳ್ಳಬೇಕೆಂದುಕೊಳ್ಳುವ ಮಂದಿಗೆ ಆಟೋ ಎಂಬುದು ಪುಷ್ಪಕವಿಮಾನ! ಆಟೋದ ನಂಟು, ಒಂದು ರೀತಿಯ ಫೆವಿಕಾಲ್‌ ನಂಟಿನಂತೆ! ಆಟೋ ಚಾಲಕರ ಕಿರಿಕಿರಿಗಳ ಮಧ್ಯೆಯೂ, ಆಟೋ ಎಲ್ಲರಿಗೂ ಇಷ್ಟವಾಗಿದೆ. ಅನಿವಾರ್ಯವಾಗಿದೆ.

ಆದರೆ ಈ ಆಟೋ ತರಲೆ ತಾಪತ್ರಯಗಳು ಒಂದೆರಡಲ್ಲ. ಒಂದೊಂದು ಸಲ ಆಟೋದವರು ನಮ್ಮ ಸಹನೆ ಪರೀಕ್ಷಿಸುತ್ತಾರೆ. ‘ಜಯನಗರಕ್ಕೆ ಬರ್ತಿಯಾ ಅಂದ್ರೆ’, ‘ಬಿಟಿಎಂವರೆಗೆ ಬರ್ತೀನಿ’ ಅನ್ತಾರೆ. ಡಬ್ಬಲ್‌ ಮೀಟರ್‌ ಕೇಳ್ತಾರೆ. ಇಷ್ಟು ಕೊಡೋದಾದ್ರೆ ಆಟೋ ಹತ್ತಿ ಅನ್ತಾರೆ. ಕೈ ಜೊತೆಗೆ ಶರೀರವನ್ನೇ ಅಡ್ಡ ಇಟ್ಟು ತಡೆದರೂ, ರೊಯ್ಯನೇ ಕಣ್‌ ಹೊಡೆದು, ಮಾಯವಾಗಿ ಬಿಡುತ್ತವೆ!

ಆದರೆ ಇಲ್ಲೊಂದು ಹಿತಕರ ವಿಚಾರ. ಆಟೋಗಾಗಿ ಇನ್ಮುಂದೆ ರಸ್ತೆಯಲ್ಲಿ 20-30ನಿಮಿಷ ಕಾಯೋ ಕಷ್ಟ ಬೇಕಾಗಿಲ್ಲ. ಆಟೋದವರು ನಿಮ್ಮ ಬೇಡಿಕೆಯನ್ನು ತಿರಸ್ಕರಿಸುವಂತಿಲ್ಲ! ಈಗ ರಾಜಧಾನಿ ನಗರದಲ್ಲಿ ‘ಈಜಿ ಆಟೋ ಸರ್ವೀಸ್‌’ ಆರಂಭವಾಗಿದೆ.

ಬೆಂಗಳೂರು ನಗರ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಜಂಟಿಯಾಗಿ ಈ ಸೇವೆ ಆರಂಭ ಮಾಡಿದೆ. ಈ ಸೇವೆ ನೀಡುವ ಕಾಲ್‌ ಸೆಂಟರ್‌, ಪ್ರಯಾಣಿಕರು ಮತ್ತು ಆಟೋ ಮಧ್ಯೆ ನಂಟು ಬೆಸೆಯುತ್ತದೆ. ಪ್ರಯಾಣಿಕರ ಮನೆ ಮುಂದಕ್ಕೆ ಆಟೋ ಬಂದು ನಿಲ್ಲಲಿದೆ!

ಈಜಿ ಆಟೋ ಸೇವೆ ಪಡೆಯುವುದಕ್ಕೆ ಅಥವಾ ಹೆಚ್ಚಿನ ವಿವರಗಳಿಗಾಗಿ ಕರೆ ಅಥವಾ ಎಸ್‌ಎಂಎಸ್‌ ಮಾಡಬೇಕಾದ ಸಂಖ್ಯೆ 9844112233. ಅಂತರ್ಜಾಲ : www.easyauto.in.

ಈಜಿ ಆಟೋ ಸೇವೆಯ ಕರೆ ಕೇಂದ್ರದಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಸೇವೆ ಲಭ್ಯ

ವಿ. ಸೂ : www.oneindia.in ವೆಬ್ ಸೈಟ್ ನಿಂದ ಎರವಲು ಪಡೆದಿದ್ದು.

--------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

No comments: