Friday, December 14, 2007

ಒಂದು ಸಣ್ಣ PJ.. ದಯವಿಟ್ಟು ನಕ್ಕುಬಿಡಿ, ಪ್ಲೀಸ್

ಎಚ್ಚರಿಕೆ : ಇದು ಒಂದು PJ. ಸೀರಿಯಸ್ ಆಗಿ ತಗೋಬೇಡಿ.


ಒಬ್ಬ ದೊಡ್ಡ ಮನುಷ್ಯ ಈಶ್ವರನನ್ನು ಧ್ಯಾನ ಮಾಡ್ತಾ ದೊಡ್ಡ ತಪಸ್ಸು ಮಾಡ್ದ.
ಎಳೀತು ಎಳೀತು... ಸಖತ್ ಟೈಂ ಎಳೀತು.. ಎಷ್ಟೋ ವರ್ಷ ಮಾಡ್ದ...

ಕೊನೇಗೂ ಈಶ್ವರ ಪ್ರತ್ಯಕ್ಷ ಆದ..

ಈಶ್ವರ : "ಏಳು ಮಗೂ... ಏನ್ ವರ ಬೇಕು ಕೇಳು"

ಮನುಷ್ಯ : "ತಂದೇ... ಕಾಪಾಡು.. ನನಗೆ ಒಂದು ಗಿಟಾರ್ ಕೊಡು ಸಾಕು"

ಈಶ್ವರ : "ಏನು ??? ಗಿಟಾರಾ.. ಯಾಕಪ್ಪಾ ಮಗು, ಇಷ್ಟೊಂದು ವರ್ಷ ಕಷ್ಟ ಪಟ್ಟು ತಪಸ್ಸು ಮಾಡಿ, ಬರೀ ಗಿಟಾರ್ ಬೇಕು ಅಂತಿದ್ಯಲ್ಲಾ, ಬೇರೆ ಏನಾದ್ರೂ ಕೇಳು.."

ಮನುಷ್ಯ : "ತಂದೆ, ನಂಗೆ ಬೇರೆ ಏನೂ ಬೇಡ.. ಬರೀ ಒಂದು ಗಿಟಾರ್ ಕೊಡು ಸಾಕು"

ಈಶ್ವರ : "ಏನಪ್ಪಾ ಇದು ವಿಚಿತ್ರ ? ನಿಂಗೆ ಆಯುಸ್ಸು, ಆರೋಗ್ಯ, ಐಶ್ವರ್ಯ (ದುಡ್ಡು, ಐಶ್ವರ್ಯ ರೈ ಅಲ್ಲಾ), ಪ್ರಸಿದ್ಧಿ ಏನು ಬೇಕಾದ್ರು ಕೊಡ್ತೀನಿ. ಪೆದ್ದು ಪೆದ್ದಾಗಿ ಗಿಟಾರ್ ಬೇಕು, ಗಿಟಾರ್ ಬೇಕು ಅಂತ ಹಠ ಮಾಡ್ಬೇಡ ಮಗೂ, ನಾನ್ ಹೇಳೋದನ್ನ ಕೇಳು"

ಮನುಷ್ಯ : "ಇಲ್ಲಾ ಭಗವಂತ, ನಂಗೆ ಬೇರೆ ಏನೂ ಬೇಡ, ಕೊಡೋದಾದ್ರೆ ಗಿಟಾರ್ ಕೊಡು, ಇಲ್ಲಾಂದ್ರೆ ಏನು ಬೇಡ.." (ಹಠ ಮಾಡಿದ)

ಈಶ್ವರ ತಲೆ ಪರಪರ ಕೆರ್ಕೊಂಡು, ತಲೆ ಚಚ್ಕೊಂಡು ಹೇಳುದ್ರೂ, ಬೇರೆ ಏನೂ ಬೇಡ ಅಂತ ಈ ಭೂಪ.

ಕೊನೇಗೂ ಈಶ್ವರ ಯೋಚನೆ ಮಾಡಿ ಮಾಡಿ ಹೇಳಲೋ ಬೇಡ್ವೋ ಹೇಳಲೋ ಬೇಡ್ವೋ ಅಂತ ತಲೆ ಕೆಡುಸ್ಕೊಂಡು ಹಿಂಗಂದ :

.
.
.
.
.
.
.
.
.
.
.
.
.
.
.


ಈಶ್ವರ : "ಮಗನೇ, ನಿಂಗೆ ಕೊಡಕ್ಕೆ ಗಿಟಾರ್ ನನ್ಹತ್ರ ಇದ್ದಿದ್ರೆ, ನಾನ್ಯಾಕೆ ಢಮರುಗ ಬಾರುಸ್ತಾ ಇರ್ತಿದ್ದೆ ??"


ವಿ.ಸೂ : ಮೊದ್ಲೇ ಹೇಳಿದೀನಿ ಇದು PJ ಅಂತ, ಬೈದು ಬೈದು ಕಮೆಂಟು ಬರೀಬೇಡಿ..

-------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

4 comments:

Seema said...

ಶಂಕರ,
ನಗು ಬರ್ತಾ ಇದೆ,ಇನ್ನು ಬಯ್ಯೋದೆಲ್ಲಿ?
ಚೆನ್ನಾಗಿದೆ :D

ನಾವಡ said...

ಸ್ವಾಮಿ,
ನಿಮ್ಮ ಕಟ್ಟೆ ಚೆನ್ನಾಗಿದೆ. ಜೋಕೂ ಸಹ. ಜೋಕೆಂದ್ ಮೇಲೆ ಚೆನ್ನಾಗಿದೆ, ನಕ್ಕಿದೆ ಎಂದು ಹೇಳಬಾರ್ದು ಅಂತ ನಮ್ಮ ಗುರು ಹೇಳಿದ್ದಾರೆ !
ಈ ಕಟ್ಟೆ ಗುರುತು ಗೊತ್ತೇ ಇರ್ಲಿಲ್ಲ. ಇವತ್ತು ಸೀಮಾರ ಬ್ಲಾಗ್ ರೋಲ್ ನಿಂದ ಬಂದೆ. ಇನ್ನು ಕಾಯಂ ಸದಸ್ಯ. ನೀವು ಸದಸ್ಯತ್ವ ದಯಪಾಲಿಸದೇ ಇದ್ರೂ...
ನಾವಡ

ಶಂಕರ ಪ್ರಸಾದ said...

ಪ್ರಿಯ ನಾವಡರವರೆ,
ನಿಮ್ಮ ಅಭಿಮಾನವೇ ನಮಗೆ ಅಕ್ಕಿ ಬೇಳೆ....
ಧನ್ಯವಾದಗಳು ಸಾರ್... ನಿಮ್ಮಂಥ ಸದಸ್ಯರು ಅಲ್ಲಲ್ಲಾ, ಸ್ನೇಹಿತರು ನಮಗೆ ಖಾಯಮ್ ಆಗಿ ಬೇಕು.
ಬನ್ನಿ ನಮ್ಮ "ಸೋಮಾರಿ ಕಟ್ಟೆಗೆ", ಅರಾಮಾಗಿ ಮಾತಾಡುವ.
ಎನಂತಿರಾ ?
-----------------------------------

ನಿಮ್ಮವನು,
ಕಟ್ಟೆ ಶಂಕ್ರ

laconia said...

sooper aagi ide.