ಬದುಕಿನ ಪ್ರತಿ ಸಂಬಂಧವೂ RENEW ಆಗ್ತಾ ಇರ್ಬೇಕು, ಇಲ್ಲದೇ ಹೋದರೆ EXPIRE ಆಗಿ ಬಿಡುತ್ತೆ.
ಎಷ್ಟು ನಿಜ ಅಲ್ವೇ ? ಬದುಕಿನಲ್ಲಿ ಪ್ರತಿ ದಿನವೂ ಹೊಸ ಹೊಸ ಸಂಬಂಧಗಳು ಸೃಷ್ಟಿ ಆಗ್ತಾನೇ ಇರುತ್ತವೆ,
ಹಾಗೆಯೇ ಎಷ್ಟೊಂದು ಸಂಬಂಧಗಳು ನರಳಿಕೆಯೇ ಇಲ್ಲದೇ ಸಾಯುತ್ತಿರುತ್ತವೆ.
ಮೊನ್ನೆ ತಾನೇ ಸೇರಿದ ಕಂಪೆನಿಯಲ್ಲಿ, ಪಕ್ಕದ CUBICALನವನ ಜೊತೆ WEEKEND ಫಿಲಂ ಪ್ಲಾನ್ ಮಾಡುವ ನಾವು,
ಮೊನ್ನೆ ಮೊನ್ನೆಯವರೆಗೆ ಒಂದೇ ಬೆಂಚಿನಲ್ಲಿ ಪಕ್ಕ ಪಕ್ಕ ಕೂರುತ್ತಿದ್ದ ಗೆಳೆಯನನ್ನು ಮರೆಯುತ್ತೇವೆ.
ಆಫೀಸಿಗೆ ಒಂದೇ ಬಸ್ಸಿನಲ್ಲಿ ಬರುವವರಿಗೆಲ್ಲಾ SMS ಕಳುಹಿಸೋ ನಾವು,
ಹಾಸ್ಟೆಲ್‌ನಲ್ಲಿ ರೂಮ್ ಮೇಟ್ ಆಗಿದ್ದವನ ಮೊಬೈಲ್ ನಂಬರ್ ಡಿಲೀಟ್ ಆಗಿದ್ದನ್ನ ಮರೀತೀವಿ.
ನಾವು ನೋಡದೇ ಇರುವ CLIENT ಗಳಿಗೆ ತಪ್ಪದೇ ಕ್ರಿಸ್ಮಸ್,ನ್ಯೂ ಇಯರ್ ಗೆ ಈ-ಮೇಲ್ ಕಲಿಸುವ ನಾವು,
ಪರೀಕ್ಷೆಯ ಸಮಯದಲ್ಲಿ ನೋಟ್ಸು ಓದಿಸಿದ ಮಿತ್ರನ ಪೋಸ್ಟಲ್ ಅಡ್ರೆಸ್ಸನ್ನೇ ಮರೀತೀವಿ.
ಪ್ರತೀ ಸಂಬಂಧವೂ ಅಷ್ಟೇ, ನೀರೆರೆಯದಿದ್ದರೆ ಅವು ಒಣಗಿದ ಬಳ್ಳಿಯೇ, ಹೂವು ಅರಳದು, ಕಂಪು ಹರಡದು.
ಗೆಳೆತನವೆಂಬುದೂ ಒಂದು ಬಳ್ಳಿಯೇ, ಅದು ಎಷ್ಟೇ ಹಬ್ಬಿದರೂ ಸಹಾ, ನೀರುಣಿಸದಿದ್ದರೆ ಬಾಡಿಹೋಗುತ್ತದೆ.
ಹಾಗಾದರೆ ನಮ್ಮ ಗೆಳೆತನದ ಬಳ್ಳಿಗೆ ನೀರೆರೆಯೋಣ, ಮತ್ತೆ RENEW ಮಾಡೋಣ, EXPIRY DATE ಹತ್ರ ಬರ್ತಾ ಇದೆ.
ಓರ್ವ ಮಿತ್ರ ಕಳಿಸಿದ್ದು....ಬರೆದದ್ದು ಯಾರು ಅಂತ ಗೊತ್ತಿಲ್ಲ.
--------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ