Friday, February 5, 2010

ಆಟೋ ಅಣಿಮುತ್ತುಗಳು - ೮೪ - ನಾ ಮಂಡ್ಯ ಕಣೇ

ನಮ್ಮ ಆಫೀಸಿನ ಮುಂದೆ ಇರೋ ಕ್ರೈಸ್ಟ್ ಕಾಲೇಜಿನ ಬಳಿ ಒಂದು ದಿನ ಕಂಡ ಆಟೋ ಇದು.
ಮಂಡ್ಯದ ಗಂಡು ಈ ಅಣ್ಣ. ತನ್ನ ಪ್ರಿಯತಮೆಗೆ ಹೀಗಂತಾ ಸಾರುತ್ತಾ ಇದಾನೆ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, January 27, 2010

ಎಚ್ಚರಿಕೆ !!! ಛೀ ಛೀ.... ಥೂ ಥೂ

ಈ ಚಿತ್ರವನ್ನು ಮಿತ್ರ ಗೌತಮ್ ಕಳೆದ ವರ್ಷ ಕಳಿಸಿದ್ದು. ಇಂದು ಸುಮ್ನೆ ಮಾಡೋಕ್ಕೆ ಕೆಲಸ ಇಲ್ದೆ ನನ್ನ ಹಳೇ ಈ-ಅಂಚೆಗಳನ್ನು ಕೆದಕುತ್ತಿದ್ದಾಗ ಸಿಕ್ಕಿತು.
ಗೌತಮ್ ಇರೋದು ಮತ್ತಿಕೆರೆಯಲ್ಲಿ. ಅಂದು ಸಂಜೆ ಅಂಗಡಿಗೆ ಹೋಗೋವಾಗ ಒಂದು ಮನೆಯ ಮುಂದೆ ಕಂಡಿದ್ದಂತೆ. ತಕ್ಷಣ ನನ್ನ ಜ್ಞಾಪಕ ಬಂದು, ಇದರ ಫೋಟೋ ತೆಗೆದು ಕಳಿಸಿದ. ಆದ್ರೆ ಇದನ್ನು ಬ್ಲಾಗಿನಲ್ಲಿ ಹಾಕೋಕ್ಕೆ ಇಷ್ಟು ದಿನ ತಗೊಂಡೆ, ಸೋಮಾರಿ ಶಂಕ್ರ ಅನ್ನೋ ಹೆಸರನ್ನ ಸಾರ್ಥಕ ಮಾಡಿಕೊಂಡೆ. ಈ ಚಿತ್ರದ ಜೊತೆ ಗೌತಮ್ ಹೀಗೆ ಬರೆದಿದ್ದ, ಓದಿ.
"ನೆನ್ನೆ ಸಂಜೆ ಅಂಗಡಿಗೆ ಹೋಗ್ತಿದ್ದಾಗ, ಒಂದ್ಮನೆ ಮುಂದೆ ಈ ಪೋಸ್ಟರ್ ನೋಡ್ದೆ. ಇಲ್ಲಿ ಬರ್ದಿರೋ ಕಂಗ್ಲಿಷ್ ಸೂಪರ್ ಆಗಿದೆ. ಆ ಮನೆಯವರನ್ನ ಕರೆದು ಮಾತಾಡಿಸೋಣ ಅನ್ಕೊಂಡೆ, ಆದ್ರೆ ಮನೇಲಿ ಯಾರೂ ಇರ್ಲಿಲ್ಲ. ಇವರ ಮನೆ DOG ನಾ ಮೋಸ್ಟ್ಲಿ ವಾಕಿಂಗಿಗೆ ಹೋಗಿದ್ರು ಅನ್ಸುತ್ತೆ"..... ಥ್ಯಾಂಕ್ಸ್ ಕಣೋ ಗೌತಮ್.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, January 13, 2010

ಆಟೋ ಅಣಿಮುತ್ತುಗಳು - ೮೩ - ನೀಚಡಿ ಕಿರುಬ

ಇತ್ತೀಚಿಗೆ ಸಿಕ್ಕಾಪಟ್ಟೆ ಸೋಮಾರಿ ಆಗ್ತಾ ಇದ್ದೀನಿ ಅನ್ನುಸ್ತಾ ಇದೆ. ಮುಂಚೆ ವಾರಕ್ಕೆ ಒಂದು ಅಣಿಮುತ್ತನ್ನು ಹಾಕ್ತಾ ಇದ್ದೋನು, ಈಗ ತಿಂಗಳಿಗೊಂದು ಅನ್ನೋ ಹಾಗಿದೆ. ಮೊಬೈಲ್ ಬದಲಾಯಿಸಿರೋದು ಒಂದು ಮುಖ್ಯ ಕಾರಣ. ಮುಂಚಿನ ಮೊಬೈಲಿನಲ್ಲಿ ಫೋಟೋ ತೆಗೆದು ಹಾಗೆ ಎಡಿಟ್ ಮಾಡಿ ಹಾಕ್ತಾ ಇದ್ದೆ. ಆದ್ರೆ ಈ ಹೊಸ ಮೊಬೈಲಿನಲ್ಲಿ ಹೀಗೆ ಮಾಡುವ ಅವಕಾಶವಿಲ್ಲ. ಹಾಗಾಗಿ, ಇದ್ರಲ್ಲಿ ತೆಗೆದು, ಆ ಮುಂಚಿನ ಮೊಬೈಲಿಗೆ ವರ್ಗಾಯಿಸಿ, ಅದ್ರಲ್ಲಿ ಎಡಿಟ್ ಮಾಡಿ, ಹಾಕೊಷ್ಟರಲ್ಲಿ ಸಾಕು ಸಾಕಾಗತ್ತೆ. ಜೊತೆಗೆ ಮನೆಯಲಿ ಈಗ ಇಂಟರ್ನೆಟ್ ಸಂಪರ್ಕ ಇಲ್ಲ. ತುಂಬಾ ಕಷ್ಟವಾಗಿದೆ. ಕ್ಷಮೆ irali.
ಇದು ಸೋಮಾರಿ ಕಟ್ಟೆಯ 200 ನೇ ಪೋಸ್ಟಿಂಗ್.


ಇದು ತುಂಬಾ ತುಂಬಾ ತಿಂಗಳ ಹಿಂದೆ ತೆಗೆದ ಫೋಟೋ.ಸುಮಾರು ಆರು ತಿಂಗಳಾದವು ಅನ್ಸುತ್ತೆ. ಎಲ್ಲಿ ಅನ್ನೋ ಜ್ಞಾಪಕ ಇಲ್ಲ.
ಆದ್ರೂ ಈ ಅಣ್ಣ ಏನ್ ಹೇಳ್ತಾ ಇದಾನೆ ಅನ್ನೋದು ಗೊತ್ತಿಲ್ಲ. ನಿಮಗೆ ಗೊತ್ತಿದ್ರೆ ಹೇಳಿ.
ನೀಚಡಿ ಕಿರುಬ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, December 15, 2009

ಆಟೋ ಅಣಿಮುತ್ತುಗಳು - ೮೨ - ಗರ್ಭದಿಂದಲೇ ಗರ್ಜಿಸು

ಇದು ಒಬ್ಬ ಸೋಮಾರಿ ಕಟ್ಟೆ ಮಿತ್ರರು ಕಳಿಸಿದ ಚಿತ್ರ. ಭಾಷಾಭಿಮಾನ ಚೆನ್ನಾಗಿದೆ ಅಣ್ಣನಿಗೆ.
ಅಂಬಿ ಟೀಮ್ ಅಂತೆ. ಎಲ್ಲಿದೆ ಗೊತ್ತಿಲ್ಲ ಇದು.


ತಾಯಿಯ ಗರ್ಭದಿಂದಲೇ ಗರ್ಜಿಸು ಕಂದ
ನಾನೊಬ್ಬ ಕನ್ನಡಿಗ ನೆಂದು - ಅಂಬಿ ಟೀಂ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, December 8, 2009

ಆಟೋ ಅಣಿಮುತ್ತುಗಳು - ೮೧ - ಉಚಿತ, ಖಚಿತ, ಶಾಶ್ವತ

ಹೀಗೆ ಮನೆಯಿಂದ ಆಫೀಸಿಗೆ ಹೋಗೋವಾಗ ಇನ್ಫೆಂಟ್ರಿ ರಸ್ತೆಯಲ್ಲಿ ಕಂಡ ಆಟೋ ಇದು.
ಆ ದೇವರಿಗೂ ನನ್ನ ಆಟೋ ಫೋಟೋ ತೆಗೆಯೋದು ಇಷ್ಟ ಅನ್ಸುತ್ತೆ. ನನ್ನ ಕಣ್ಣಿಗೆ ಈ ಥರ ಇಂಟರೆಸ್ಟಿಂಗ್ ಆಟೋ ಅಣಿಮುತ್ತು ಕಂಡಾಗಲೆಲ್ಲ ಹತ್ತಿರದಲ್ಲೇ ಸಿಗ್ನಲ್ ಬೀಳುತ್ತೆ, ಆಟೋ ನಿಲ್ಲುತ್ತೆ, ನನ್ನ ಮೊಬೈಲು ಕ್ಯಾಮೆರ ಕ್ಲಿಕ್ ಅನ್ನುತ್ತೆ.
ನನ್ನ ಈ ಕೆಲಸ ದೈವ ಪ್ರೇರೇಪಿತವಾಗಿದೆ ಅನ್ಸುತ್ತೆ. ಅಲ್ವೇ ?



ಹುಟ್ಟು ಉಚಿತ, ಸಾವು ಖಚಿತ, ಪ್ರೀತಿಯೊಂದೇ ಶಾಶ್ವತ

ಹುಟ್ಟು ಉಚಿತ ಅಲ್ಲಾ ಅನ್ಸುತ್ತೆ. ಹುಟ್ಟಿದಾಗ ಆಸ್ಪತ್ರೆಗೆ ದುಡ್ಡು, ಸತ್ತಾಗ ಕೂಡ ಆಸ್ಪತ್ರೆಗೆ, ಸ್ಮಶಾನದಲ್ಲಿ ದುಡ್ಡು, ತಿಥಿಗೆ ದುಡ್ಡು ಇತ್ಯಾದಿ. ಪ್ರೀತಿ ಕೂಡಾ ಸಖತ್ ಕಾಸ್ಟ್ಲಿಕಣ್ರೀ. ಸೋ, ಈ ಅಣ್ಣನ ಅಣಿಮುತ್ತನ್ನು ನಾನು ತಪ್ಪು ಅಂತೀನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, December 1, 2009

ಆಟೋ ಅಣಿಮುತ್ತುಗಳು - ೮೦ - ಭೂಮಿ ತಾಯಾಣೆ

ಫುಲ್ ಪ್ರೀತಿ ತೋಡ್ಕೊತಾ ಇದಾನೆ ಈ ಅಣ್ಣ.
ಭೂಮಿ ತಾಯಿ ಮೇಲೆ ಆಣೆ ಹಾಕ್ತಾ ಇದಾನೆ.
ಈ ಫೋಟೋ ಎಲ್ಲಿ ತೆಗೆದಿದ್ದು ಅಂತಾ ಭೂಮಿ ತಾಯಾಣೆ, ಜ್ಞಾಪಕ ಇಲ್ಲ.

ಭೂಮಿ ತಾಯಾಣೆ,
ನೀ ನಂಗೆ ಇಷ್ಟ ಕಣೇ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 26, 2009

ಆಟೋ ಅಣಿಮುತ್ತುಗಳು - ೭೯ - ನನ್ನ ದೇವರು

ಕೆಲವು ದಿನಗಳ ಹಿಂದೆ ಬ್ರಿಗೇಡ್ ಹಾಗು ರಿಚ್ಮಂಡ್ ರಸ್ತೆಯ ಜಂಕ್ಷನ್ ನಲ್ಲಿ ತೆಗೆದ ಫೋಟೋ.
ಈ ಅಣ್ಣನೇನೋ ಪ್ರಯಾಣಿಕರನ್ನು ದೇವ್ರು ಅಂತಾ ಹೇಳ್ತಾ ಇದಾನೆ. ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.

ಪ್ರಯಾಣಿಕರೇ ನನ್ನ ದೇವರು

ಇನ್ನೊಂದು ಸುದ್ಧಿ, 24 ನವೆಂಬರಿನ ಉದಯವಾಣಿಯ "ನಮ್ಮ ಬೆಂಗಳೂರು" ಪುರವಣಿಯಲ್ಲಿ ಸೋಮಾರಿ ಕಟ್ಟೆ ಬಗ್ಗೆ ಬರಹ ಬಂದಿದೆ. ನೋಡದವರಿಗಾಗಿ ಅದನ್ನು ಸ್ಕ್ಯಾನ್ ಮಾಡಿ ಹಾಕುತಿದ್ದೇನೆ.
ಸುಮ್ನೆ ಹಂಚಿಕೊಳ್ಳಬೇಕು ಎನ್ನಿಸಿತು, ಅದಕ್ಕೆ ಹಾಕ್ತಾ ಇದ್ದೀನಿ. ಪರಾಂಬರಿಸಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, November 9, 2009

ಆಟೋ ಅಣಿಮುತ್ತುಗಳು - ೭೮ - ಅಲಂಕಾರ, ಅಹಂಕಾರ

ಈ ಫೋಟೋ ತೆಗೆದದ್ದು ಸುಮಾರು ೪ ತಿಂಗಳ ಹಿಂದೆ, ಎಂ.ಜಿ. ರೋಡಿನಲ್ಲಿ.
ಹಾರೋ ಹಕ್ಕಿಗೆ ಅದೇನು ಅಲಂಕಾರವೋ ಗೊತ್ತಿಲ್ಲ.. ಆದ್ರೆ ಈ ಅಣ್ಣ ಪ್ರೀತಿಸಿದ ಹುಡುಗಿಗೆ ದುರಹಂಕಾರ ಅನ್ಸುತ್ತೆ.
ಈ ಅಣಿಮುತ್ತನ್ನು ಬರೆಸಿದ ಮೊದಲ ಆಟೋ ಇದು ಇರಬೇಕು. ಏಕೆಂದರೆ ಇದಾದ ಸುಮಾರು ಒಂದು ತಿಂಗಳ ನಂತರ ಸುಮಾರು ಆಟೋಗಳ, ಟಾಟಾ ಇಂಡಿಕಾ ಕ್ಯಾಬುಗಳ, ಟೆಂಪೋ ಟ್ರಾವೆಲರುಗಳ ಹಿಂದೆ ಇದೆ ಹಾಗು ಇದೆ ರೀತಿಯ ಸ್ಲೋಗನ್ನುಗಳು ಕಾಣಿಸತೊಡಗಿದವು. ಬರೀ ಸಾಹಿತ್ಯದಲ್ಲಿ ಕೃತಿಚೌರ್ಯ ನಡೀತಾ ಇತ್ತು, ಇಲ್ಲಿ ಕೂಡಾ ಶುರುವಾಗಿದೆ.

ದುರಹಂಕಾರ ಅನ್ನೋದನ್ನ ಬರೆದಿರುವ ಪರಿ.. ಛೆ..ಮುದ್ರಾ ರಾಕ್ಷಸನ ಹಾವಳಿಯೋ, ಅಥವಾ ಬರೆದಿರೋ ರಾಕ್ಷಸನ ಹಾವಳಿಯೋ ?

ಹಾರುವ ಹಕ್ಕಿಗೆ ಅಲಂಕಾರ
ಪ್ರೀತಿಸೋ ಹುಡುಗಿಗೆ ದುರಂಕಾರ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, November 5, 2009

ಆಟೋ ಅಣಿಮುತ್ತುಗಳು - ೭೭ - ಪ್ರೀತ್ಸೋದು ಇಷ್ಟ ಹೇಳೋದು ಕಷ್ಟ

ಇತ್ತೀಚೆಗೆ ನಾನು ತೆಗೆದ ಚಿತ್ರ ಇದು.
ಬಹುಶಃ ಬಸವನಗುಡಿ ಬಳಿ ಕಂಡದ್ದು ಅನ್ನಿಸುತ್ತೆ.
ಬಹಳ ಸಂಕೋಚ ಅನ್ಸುತ್ತೆ ಈ ಅಣ್ಣನಿಗೆ. ಅದಕ್ಕೆ ಚಂದ್ರಣ್ಣ ಹೀಗೆ ಹೇಳಿರೋದು.

ಪ್ರೀತ್ಸೋದು ಇಷ್ಟ ಕಣೇ
ಹೇಳೋದು ಕಷ್ಟ ಕಣೇ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, November 1, 2009

ಆಟೋ ಅಣಿಮುತ್ತುಗಳು - ೭೬ - ಗುದ್ದಬೇಡವೋ ಗುಲಾಮ

ಮಿತ್ರ ಗುರುದಾಸ ಭಟ್ರು ಕಳಿಸಿದ ಫೋಟೋ ಇದು.
ಮೂಡಲಪಾಳ್ಯ ರಸ್ತೆಯಲ್ಲಿ ನಮ್ಮ ಭಟ್ರು ಗಾಡಿ ಮೇಲೆ ಫುಲ್ ಸರ್ಕಸ್ ಮಾಡಿ ಐದನೇ ಯತ್ನದಲ್ಲಿ ಸಫಲರಾಗಿ ಈ ಚಿತ್ರ ತೆಗೆದಿದ್ದಾರೆ. ಇದನ್ನು ನನ್ನ ಮೊಬೈಲಿನಲ್ಲಿ ಸೇವ್ ಮಾಡಿದ್ದೆ. ಈಮೆಲಿಂದ ಡಿಲೀಟ್ ಮಾಡಿದ್ದೆ. ಹಾಗಾಗಿ ಭಟ್ರು ಕಳಿಸಿದ್ದು ಅನ್ನೋದು ನೆನಪಿನಿಂದ ಹೊರಟು ಹೋಗಿತ್ತು. ಆಟೋ ಹಿಂದೆ ಬರೆದಿರೋದನ್ನ ತೆಗೆಯೋದು ಸುಲಭ, ಆದ್ರೆ ಈ ಥರ ಕೆಳಾಗಡೆ ಬರೆದಿರೋದನ್ನು ಕ್ಲಿಕ್ಕಿಸುವುದು ಬಹಳ ಕಷ್ಟ. ತುಂಬಾ ಥ್ಯಾಂಕ್ಸ್ ಕಣ್ರೀ.

ಆದರೂ ಸರಿಯಾದ ಜಾಗದಲ್ಲಿ ಸರಿಯಾಗಿ ಬರೆದಿದ್ದಾನೆ ಈ ಅಣ್ಣ.
ಆದರೂ ಗುದ್ದೊಹಾಗೆ ಬರೋದು ಇವರೇ ಅಲ್ವೇ?



ಗುದ್ದಬೇಡವೋ ಗುಲಾಮ !!
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ