ಆ ದೇವರಿಗೂ ನನ್ನ ಆಟೋ ಫೋಟೋ ತೆಗೆಯೋದು ಇಷ್ಟ ಅನ್ಸುತ್ತೆ. ನನ್ನ ಕಣ್ಣಿಗೆ ಈ ಥರ ಇಂಟರೆಸ್ಟಿಂಗ್ ಆಟೋ ಅಣಿಮುತ್ತು ಕಂಡಾಗಲೆಲ್ಲ ಹತ್ತಿರದಲ್ಲೇ ಸಿಗ್ನಲ್ ಬೀಳುತ್ತೆ, ಆಟೋ ನಿಲ್ಲುತ್ತೆ, ನನ್ನ ಮೊಬೈಲು ಕ್ಯಾಮೆರ ಕ್ಲಿಕ್ ಅನ್ನುತ್ತೆ.
ನನ್ನ ಈ ಕೆಲಸ ದೈವ ಪ್ರೇರೇಪಿತವಾಗಿದೆ ಅನ್ಸುತ್ತೆ. ಅಲ್ವೇ ?

ಹುಟ್ಟು ಉಚಿತ, ಸಾವು ಖಚಿತ, ಪ್ರೀತಿಯೊಂದೇ ಶಾಶ್ವತ
ಹುಟ್ಟು ಉಚಿತ ಅಲ್ಲಾ ಅನ್ಸುತ್ತೆ. ಹುಟ್ಟಿದಾಗ ಆಸ್ಪತ್ರೆಗೆ ದುಡ್ಡು, ಸತ್ತಾಗ ಕೂಡ ಆಸ್ಪತ್ರೆಗೆ, ಸ್ಮಶಾನದಲ್ಲಿ ದುಡ್ಡು, ತಿಥಿಗೆ ದುಡ್ಡು ಇತ್ಯಾದಿ. ಪ್ರೀತಿ ಕೂಡಾ ಸಖತ್ ಕಾಸ್ಟ್ಲಿಕಣ್ರೀ. ಸೋ, ಈ ಅಣ್ಣನ ಅಣಿಮುತ್ತನ್ನು ನಾನು ತಪ್ಪು ಅಂತೀನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
9 comments:
ಹೌದು... ನೀವು ಹೇಳಿದ್ದು ನಿಜ... ಇದರಲ್ಲಿ ಇರೋದು ಒಂದೇ ನಿಜ.. ಅದು "ಸಾವು ಖಚಿತ" .. :-)
LOLOLOLOL
ಶಂಕ್ರಣ್ಣ,
ಅವನು ಹುಟ್ಟಿರದು ಆಸ್ಪತ್ರೆಲ್ಲಿ ಅಲ್ಲ............
ಹೌದು... ಈಗ ಹುಟ್ಟೋದಕ್ಕೂ, ಸಾಯೋದಕ್ಕು, ಪ್ರೀತಿಗೂ ದುಡ್ಡು ಬೇಕು.... :)
khandita tappu.prapanchaane shaashvata alla...innu preeti shaashvatha na shankranna ? ella bhrame.....
hahaha
ಒಂದು ಆಟೋ ನಿಮ್ಮ ಕಣ್ಣಿಗೆ ಬೀಳೋದಂದ್ರೇನು, ಅದೇ ಸಮಯದಲ್ಲಿ ಸಿಗ್ನಲ್ ಬೀಳೋದಂದ್ರೇನು, ನೀವು ಫೋಟೋ ತೆಗೆಯೋದಂದ್ರೇನು ಇದರ ಹಿಂದೆ ದೈವೀ ಕೈವಾಡವಿದೆ. ಈ ಆಟೋದ ಮೇಲೆ ಬರೆದ ಶಕುನವನ್ನು ನೀವು ನಂಬೋದು ಒಳ್ಳೇದು, ಶಂಕರ್! ಪ್ರೀತಿಯೇ ಶಾಶ್ವತ ಅನ್ನೋ ಮಾತನ್ನ ಪಾಲಿಸಿ!
ಶಂಕ್ರಣ್ಣ
ಒಳ್ಳೆ ಹವ್ಯಾಸ ರೀ ನಿಮ್ಮದು... ತುಂಬ ಚೆನ್ನಾಗಿ collect ಮಾಡ್ತಾ ಇದ್ದೀರಾ ಆಟೋ ಅನಿಮುತ್ತುಗಳನ್ನ....
ಏನ್ ಉಚಿತನೋ, ಏನ್ ಶಾಶ್ವತನೋ ...ಒಟ್ನಲ್ಲಿ,, ಸಾವು ಅನ್ನೋದು ಮಾತ್ರ ಖಚಿತ....:-)
ಗುರು
ಅದೇನೋ ನಿಮಗೇ ಸಿಗ್ನಲ್ ಸಿಗೋದು ಸಾಕು.....
ನಾನು ನಿಮಗೆ ಕಳುಹಿಸಿದ್ದೆಲ್ಲವೂ ಡೊಂಬರಾಟ ಮಾಡಿ ತೆಗೆದಂತವುಗಳೇ......
ಆದರೂ ಇದರಲ್ಲೇನೋ ಮಜವಿರುತ್ತೆ.......
Post a Comment