ಹುಲಿರಾಯ, ಕಾಡಿನ ಅತ್ಯಂತ ಸುಂದರ ಹಾಗು ಗಂಭೀರ ಪ್ರಾಣಿಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾನೆ.
ಈ ಬಾರಿಯ ಹುಲಿ ಗಣತಿಯಲ್ಲಿ ಬಂದ ಅಂದಾಜು ಅಂಕಿಯ ಪ್ರಕಾರ, ಭಾರತದಲ್ಲಿ ಕೇವಲ 1411 ಹುಲಿಗಳು ಉಳಿದಿವೆಯಂತೆ.
ತನ್ನ ಸುಂದರ ಚರ್ಮ, ಉಗುರುಗಳೇ ಹುಲಿರಾಯನಿಗೆ ಮುಳುವಾಗಿದೆ. ದುರಾಸೆಯ ಜನಗಳು ಈತನನ್ನು ಕೊಂದು ಇವುಗಳನ್ನು ದೋಚುತ್ತಾರೆ.
ತನ್ನ ಸುಂದರ ಚರ್ಮ, ಉಗುರುಗಳೇ ಹುಲಿರಾಯನಿಗೆ ಮುಳುವಾಗಿದೆ. ದುರಾಸೆಯ ಜನಗಳು ಈತನನ್ನು ಕೊಂದು ಇವುಗಳನ್ನು ದೋಚುತ್ತಾರೆ.
ಇಂದಿನ "ವಿಜಯ ಕರ್ನಾಟಕ"ದ 11ನೇ ಪುಟದಲ್ಲಿ ಸಣ್ಣದೊಂದು ಸುದ್ಧಿ ಪ್ರಕಟವಾಗಿದೆ. ಗುಂಡ್ಲುಪೇಟೆಯ ಬರಗಿ ಗ್ರಾಮದಲ್ಲಿ ಎಂಟು ವರ್ಷದ ಗಂಡು ಹುಲಿಯ ಶವ ಪತ್ತೆಯಾಗಿದೆ. ಈ ಗ್ರಾಮ ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿದೆ.
ಈ ಹುಲಿಯನ್ನು ನಾಲ್ಕು ದಿನಗಳ ಹಿಂದೆ ಕೊಂದು, ಅದರ ಬಲಗಾಲನ್ನು ಕತ್ತರಿಸಲಾಗಿದೆ. ಕಾಲುಗಳಿಂದ 15 ಉಗುರುಗಳನ್ನು ಕಿತ್ತಿದ್ದಾರೆ, 3 ಉಗುರುಗಳು ಉಳಿದುಕೊಂಡಿವೆ. ಗ್ರಾಮಸ್ತರು ಹುಲಿಯ ಕಳೇಬರವನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದಾರೆ.
ನಿಜಕ್ಕೂ ನಮ್ಮಲ್ಲಿ ಸಂರಕ್ಷಣೆ ಅನ್ನುವುದು ಸರಿಯಾಗಿ ನಡೆಯುತ್ತಿದೆಯೇ ? ಹುಲಿರಾಯ.. ನಿನಗೆ ನಿಜಕ್ಕೂ ಉಳಿಗಾಲವಿದೆಯಾ ?
ನಿಜಕ್ಕೂ ನಮ್ಮಲ್ಲಿ ಸಂರಕ್ಷಣೆ ಅನ್ನುವುದು ಸರಿಯಾಗಿ ನಡೆಯುತ್ತಿದೆಯೇ ? ಹುಲಿರಾಯ.. ನಿನಗೆ ನಿಜಕ್ಕೂ ಉಳಿಗಾಲವಿದೆಯಾ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ನಿಮ್ಮವನು,
ಕಟ್ಟೆ ಶಂಕ್ರ
2 comments:
'ಶಂಕರ ಪ್ರಸಾದ ' ಅವ್ರೆ.., ಬಣ್ಣ
ನೀವು ಹೇಳುತ್ತಿರುವುದು ಪದೇ ಪದೇ ಕೇಳಿಬರುತ್ತಿರುವ ವಿಷಯವಾದರೂ ತಲೆಕೆಡಿಸಿಕೊಳ್ಳುವವರು ಕಡಿಮೆಯೇ....!
Blog is Updated:http://manasinamane.blogspot.com
ಅಳಿಸಿ ಹೋಗುತ್ತಿರುವ ಪ್ರಭೇಧ ದ ರಕ್ಷಣೆ ನಮ್ಮೆಲ್ಲರ ಹೊಣೆ
ಇತ್ತೀಚಿಗೆ ಹುಲಿ ಕಾಣ ಸಿಗುವುದು ತುಂಬಾ ವಿರಳವಾಗಿದೆ
Post a Comment