Wednesday, February 17, 2010

ಹೀಗೆ ಆದ್ರೆ ಹೇಗೆ ?

ಇವತ್ತು ಬೆಳಿಗ್ಗೆ ಮಿತ್ರ ಅವಿನಾಶ್ ಪದಕಿ ಕಳಿಸಿದ "NewYork Times" ನಲ್ಲಿ ಬಂದಿರುವ ಒಂದು ಸುದ್ಧಿಯ ಕೊಂಡಿಯನ್ನು ಓದುತ್ತಾ ಇದ್ದೆ.
ನೀವೂ ಇದನ್ನು ಇಲ್ಲಿ ಓದಿ.
http://www.nytimes.com/2010/02/16/business/global/16port.html?ref=global-home

ಏನೆಂದರೆ, ಚೈನಾ ದೇಶದವರು ಎಶಿಯಾ ಖಂಡದಲ್ಲಿ ಸುಮಾರು ಕಡೆ ಬಂದರು ಮಾಡುವ ಗುತ್ತಿಗೆ ಪಡೆದಿದ್ದಾರೆ.
ಸಧ್ಯಕ್ಕೆ ಶ್ರೀಲಂಕಾ ದಲ್ಲಿ "ಹಂಬನತೋಟಾ" ಎನ್ನುವ ಕಡೆ ಬಂದರನ್ನು ಕಟ್ಟುತ್ತಿದ್ದಾರೆ. ಈ ಪ್ರಾಜೆಕ್ಟಿನಲ್ಲಿ ಚೀನಿ ಕಂಪೆನಿಯೊಂದು ಮಿಲಿಯಾಂತರ ಡಾಲರುಗಳನ್ನು ಹೂಡಿದೆ.
ಈ ಜಾಗದ ಮೂಲಕ, ಸುಮಾರು ವರ್ಷಗಳಿಂದ ಬೇರೆ ದೇಶದ ವ್ಯಾಪಾರಿ ಹಡಗುಗಳು ಸಾಗುತ್ತಿದ್ದವು. ಪಶ್ಚಿಮದ ಕಡೆಯಿಂದ ಪೂರ್ವಕ್ಕೆ, ಹಾಗು ಪೂರ್ವದಿಂದ ಪಶ್ಚಿಮಕ್ಕೆ ಸಾಗುತ್ತಿದ್ದ ತೈಲ, ಯಂತ್ರಗಳು, ಬಟ್ಟೆ ಬರೆ, ಹಾಗು ಅನ್ಯ ಪದಾರ್ಥಗಳು ಈ ಮೂಲಕವೇ ಹಾಡು ಹೋಗುತ್ತಿತ್ತು.
ಈ ಕಾರಣಕ್ಕೆ ಶ್ರೀಲಂಕಾದ ಸರ್ಕಾರ ಇಲ್ಲಿ ಒಂದು ಬಂದರನ್ನು ಮಾಡಿದರೆ, ರಾಷ್ಟ್ರಕ್ಕೆ ಒಳ್ಳೇ ಆದಾಯ ಬರುವುದು ಎಂಬ ಉದ್ದೇಶದಿಂದ ಬಂದರನ್ನು ನಿರ್ಮಿಸುವ ನಿರ್ಣಯ ತಾಳಿತು.

ಶ್ರೀಲಂಕಾದ ರಾಷ್ಟ್ರಪತಿ ಮಹೇಂದ್ರ ರಾಜಪಕ್ಸೆ, ಈ ಬಂದರಿನ ನಿರ್ಮಾಣದ ಕೆಲಸವನ್ನು ಮೊದಲು ಭಾರತಕ್ಕೆ ಕೊಟ್ಟಿದ್ದರು. ಆದರೆ ನಮ್ಮ ಅಧಿಕಾರಿಗಳು ಇದನ್ನು ತಿರಸ್ಕರಿಸಿದರು.
ಒಂದು ಸಂದರ್ಶನದಲ್ಲಿ, ಅಮೆರಿಕಾಕೆ ಶ್ರೀಲಂಕಾದ ರಾಯಭಾರಿಯಾಗಿರುವ ಜಲಿಯ ವಿಕ್ರಮಸೂರಿಯಾ ಅವರು ಹೇಳಿದ್ದೇನೆಂದರೆ "ನಾವು ಶ್ರೀಲಂಕಾದಲ್ಲಿ ಬಂಡವಾಳ ಹಾಕಲು ಹೂಡಿಕೆದಾರರನ್ನು ಹುಡುಕುತ್ತಾ ಅಮೇರಿಕಾ ಹಾಗು ಇತರೆ ದೇಶಗಳನ್ನು ಸಂಪರ್ಕಿಸಿದೆವು. ಆದರೆ ಚೈನಾ ದೇಶ ನಮ್ಮ ಮುಂದೆ ಇತ್ತ ಪ್ರಸ್ತಾವನೆ ಎಲ್ಲಕ್ಕಿಂತ ಉತ್ತಮ ಹಾಗು ಲಾಭದಾಯಕವಾಗಿತ್ತು. ನಮಗೆ ಇಲ್ಲಿ ಯಾರೂ Favorite ಗಳು ಇಲ್ಲ".

ದೇಶದ ಪ್ರಗತಿಗಾಗಿ, ಆಂತರಿಕ ಯುದ್ಧ ಮುಗಿದ ಕೂಡಲೇ, 2009 ರಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಶ್ರೀಲಂಕಾ ಸುಮಾರು 2.6 ಬಿಲಿಯನ್ ಡಾಲರುಗಳ ಸಾಲ ಪಡೆದಿದೆ. ಈ ಹಂಬನತೋಟಾ ಬಂದರಿನ ನಿರ್ಮಾಣ ಕೂಡಾ ಇದರ ಒಂದು ಹಂತ.
ಹೀಗೆ, ಟೆಂಡರ್ ಕರೆಯುವ ಮುನ್ನ ಶ್ರೀಳನ್ಕಾದವರು ನಮ್ಮ ದೇಶಕ್ಕೆ ಕೊಟ್ಟ ಪ್ರಸ್ತಾವನೆಯನ್ನು ತಿರಸ್ಕರಿಸಿ, ಈಗ ಚೈನಾ ಹಂಬನತೋಟಾ ದಲ್ಲಿ ಮಾಡುತ್ತಿರುವ ಕೆಲಸ ನೋಡಿ ಭಾರತ ಚಿಂತೆಗೀಡಾಗಿದೆ.
ಈ ಕೆಲಸದ ಹಿನ್ನಲೆಯಲ್ಲೇ, ಪಾಕಿಸ್ತಾನ, ಬರ್ಮಾ ದೇಶಕ್ಕೆ ಹೊಂದಿರುವ ಸಮುದ್ರ ತೀರದ ನಗರಗಳಲ್ಲಿ, ಚೈನಾ ದೇಶವು ಬಂದರಿನ ನಿರ್ಮಾಣದ ಕೆಲಸವನ್ನು ಪಡೆದಿರುವ ಸುದ್ಧಿ, ನಮ್ಮ ದೇಶವನ್ನು ಇನ್ನೂ ಚಿಂತೆಗೆ ತಳ್ಳಿದೆ.
ಭಾರತ ಹಾಗು ಚೈನಾದ ನಡುವೆ ಈಗ ಇರುವ ಗಡಿ ಸಮಸ್ಯೆಯ ಹಿನ್ನಲೆಯಲ್ಲಿ, ಹೀಗೆ ಅಕ್ಕ ಪಕ್ಕ ಇರುವ ದೇಶಗಳ ನಗರಗಳಲ್ಲಿ ಬಂದರಿನ ನಿರ್ಮಾಣ ಮಾಡೋ ಗುತ್ತಿಗೆ ಚೈನಾಗೆ ಸಿಕ್ಕಿದರೆ, ಅದರ ಆರ್ಥಿಕ ಸ್ಥಿತಿ, ವ್ಯಾವಹಾರಿಕ ಉನ್ನತಿಯಂತೂ ಕಟ್ಟಿಟ್ಟ ಬುತ್ತಿ.

ಇನ್ನು, ಪ್ರಪಂಚದಾದ್ಯಂತ ಚೈನಾದಲ್ಲಿ ತಯಾರಾದ ಪದಾರ್ಥಗಳ (ಕು)ಖ್ಯಾತಿ ಎಲ್ಲರಿಗೂ ತಿಳಿದಿದೆ.ಅಮೇರಿಕಾ ಹಾಗು ಐರೋಪ್ಯ ದೇಶಗಳಲ್ಲಿ, ಚೈನಾದಿಂದ ಬರುವ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಆದರೂ ನಮ್ಮಲ್ಲಿ ಇವುಗಳಿಗೆ ಮಣೆ ಹಾಕುತ್ತಾ ಇದ್ದಾರೆ.
ಚೈನಾದಲ್ಲಿ ತಯಾರಾದ ಮೊಬೈಲ್ ಫೋನುಗಳು ಯಾವುದೇ ರೀತಿಯ Traceability ಹೊಂದಿರುವುದಿಲ್ಲ. ಇವುಗಳು ದೇಶದ ಭದ್ರತೆಗೆ ಬಹಳ ಅಪಾಯಕಾರಿ. ಇವುಗಳು ಮಾರುಕಟ್ಟೆಗೆ ಬಂದ ಸುಮಾರು ೨ ವರ್ಷಗಳ ಬಳಿಕ ಇವುಗಳಿಗೆ IMEI ನಂಬರುಗಳನ್ನು ಕೊಡುವ ಪ್ರಕ್ರಿಯೆ ಶುರುವಾಯಿತು.

ಜೊತೆಗೆ ನಮ್ಮಲ್ಲಿ ಬಹುತೇಕ ವ್ಯಾಪಾರಿಗಳಲ್ಲಿ ಆಗಿರುವ ನೈತಿಕ ಅದಃಪತನ. ಗ್ರಾಹಕನಿಗೆ ಹೇಗಾದರೂ ಮಾಡಿ ಮಾರಬೇಕು ಇನ್ನುವ ಮನೋಭಾವ. ಆ ಪದಾರ್ಥದ ದುಷ್ಪರಿಣಾಮ, ದೇಶದ ಆರ್ಥಿಕತೆಗೆ ಕೊಡುತ್ತಿರುವ ಹೊಡೆತ...ಇವೆಲ್ಲ ನಗಣ್ಯ. ಹೇಗಾದರೂ ಸರಿ, ಮಾರಬೇಕು, ಕಾಸು ಮಾಡಬೇಕು.

ಕಳೆದ ವಾರ ನಾನು ನೋಡಿದ ಈ ರೀತಿಯ ಒಂದು ಘಟನೆ.. ಚೈನಾ ವಸ್ತುವಲ್ಲ ಏನಲ್ಲ. ಜಯನಗರದ ಅಶೋಕ ಪಿಲ್ಲರ್ ಕಡೆಯಿಂದ ಟೀಚರ್ಸ್ ಕಾಲೆಗಿಗೆ ಹೋಗುವ ದಾರಿಯಲ್ಲಿ, ಒಂದು ತಿಂಡಿ ಗಾಡಿ ಇದೆ.
ಸುಮಾರು ಜನ ಅಲ್ಲಿ ಒಳ್ಳೇ "ಕೋಡುಬಳೆ" ಸಿಗುತ್ತದೆ ಎಂದು. ಅವತ್ತು ಅಲ್ಲಿಗೆ ಹೋಗಿ, ಎರಡು ಕೋಡುಬಳೆ ಕೊಡಿ ಎಂದು ಕೇಳಿದೆ. ಒಂದು ಪ್ಲೇಟ್ ತಗೋಳಿ, ನಾಲ್ಕು ಬರುತ್ತೆ, ಹತ್ತು ರುಪಾಯಿ ಎಂದರು.
ಅದನ್ನು ಕೊಂಡು ತಿನ್ನಲು ಶುರು ಮಾಡಿದೆ. ಮೈದಾಹಿಟ್ಟಿಗೆ ಮೊಸರು ಹಾಕಿ ಗಟ್ಟಿಯಾಗಿ ಕಲಸಿ, ಕೋಡುಬಳೆ ಮಾಡಿ ಮಾರುತ್ತಾ ಇದಾರೆ. ರುಚಿಯಂತೂ ಥೇಟ್ ನಮ್ಮ "ಮಂಗಳೂರು ಬಜ್ಜಿ / ಗೋಲಿ ಬಜೆ".
"ಇದೇನ್ರೀ, ಮೈದಾ ಹಿಟ್ಟಿನ ಕೋಡುಬಳೆ ಮಾಡ್ತಾ ಇದ್ದೀರಾ.. ಅದೇನ್ ರುಚಿ ಇದೆ ಅಂತ ಹತ್ತು ರುಪಾಯಿ ಇಸ್ಕೊತೀರ ನೀವು. ಒಳ್ಳೇ ಮಂಗಳೂರು ಬಜ್ಜಿ ತಿಂದ ಹಾಗೆ ಇದೆ" ಎಂದು ರೇಗಿದೆ. ಅದಕ್ಕೆ ಆ ಭೂಪ,
ಒಂದೈದು ಕ್ಷಣ ನನ್ನ ಮುಖ ನೋಡಿ, ತಡವರಿಸಿಕೊಂಡು "ಇಲ್ಲಾ ಸಾರ್.. ಇದು ಪೆಸಲ್, ಮೊಸರು ಕೋಡುಬಳೆ" annOdaa ?
ಒಂದೂವರೆ ಇಂಚು ವ್ಯಾಸದ (Diameter) ನಾಲ್ಕು ಮೈದಾಹಿಟ್ಟಿನ ಕೋಡುಬಳೆಗೆ ಹತ್ತು ರುಪಾಯಿ ಪೀಕಿಸುತ್ತಾರಲ್ಲಾ, ನಿಜಕ್ಕೂ ಇವರಿಗೆ ಏನೆನ್ನಬೇಕು ?
"ವ್ಯಾಪಾರಂ ದ್ರವ್ಯ ಚಿಂತನಂ" ಎನ್ನುವುದು ಇವಾಗ "ವ್ಯಾಪಾರಂ ದ್ರೋಹ ಚಿಂತನಂ" ಎಂದಾಗಿದೆ.

ನೀವೇ ಯೋಚಿಸಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

2 comments:

ವಿ.ರಾ.ಹೆ. said...

ಅಯ್ಯೋ, ಚೈನಾ ಕತೆ ಬಿಡಿ. ಅಮೆರಿಕಾದ ಹೈಲೆವೆಲ್ ಕುತಂತ್ರಗಳ ಬಗ್ಗೆ ಅವಲೋಕಿಸಿದರೆ ಆತಂಕ ಆಗತ್ತೆ. ಆಮೇಲೆ ಕೋಡ್ಬಳೆ ವಿಷ್ಯಕ್ಕೆ ಬಂದ್ರೆ , ನಮ್ ಸಾಂಪ್ರದಾಯಿಕ ತಿನಿಸುಗಳನ್ನ ಅಪಭ್ರಂಶ ಮಾಡಿ ಇಂಗ್ಲೀಷಲ್ಲಿ ಹೆಸ್ರಿಟ್ಟು ದುಡ್ಡು ಮಾಡೋ ಕಲೆ ಬೆಂಗಳೂರು ಸುಮಾರು ಜನರಿಗೆ ಸಿದ್ಧಿಸಿದೆ. ಹಳ್ಳಿಮನೆ ಹೋಟೆಲ್ ನಿಂದ ಹಿಡಿದು ಎಲ್ಲಾ ಕಡೆನೂ ಅದೇ ಕತೆ. ಜನ ಬರಗೆಟ್ಟಿರುತ್ತಾರೆ ಇಲ್ಲಿ ಅಂತ ಅವರಿಗೆ ಗೊತ್ತು. ಒಂದು ಸಲ ಹೆಸರು ಬಂದ ಮೇಲೆ ಆಯ್ತು. ಅವರಾಡಿದ್ದೇ ಆಟ. ಇದು ಇಂಟರ್ ನ್ಯಾಷನಲ್ ಲೆವೆಲ್ಲಲ್ಲೂ ಹಂಗೇ! ಎಲ್ಲಾವೂ ಅಷ್ಟೆ.

sunaath said...

ಶಂಕರ,
ನೀವು ಹೇಳೋದು ನಿಜ.
ನಮ್ಮವರೇ ನಮ್ಮ ದೇಶವನ್ನು ಪರದೇಶಗಳಿಗೆ ಬಿಕರಿ ಮಾಡುತ್ತಿದ್ದಾರೆ.