Wednesday, June 3, 2009

ಮರಳಿ ತಾಯ್ನಾಡಿಗೆ

ನಮಸ್ಕಾರ ಮಿತ್ರರೆ,

ಮೇ 30 ರಂದು ಹ್ಯಾಂಬರ್ಗ್ ನಿಂದ ಹೊರಟು ಮಾರನೆಯ ದಿನ ಬೆಂಗಳೂರು ತಲುಪಿದೆ.
ಏರ್ಪೋರ್ಟಿಗೆ ನನ್ನಾಕೆ ಬಂದಿದ್ದಳು. ಏಳೂವರೆ ತಿಂಗಳು ಕುಟುಂಬದ ಎಲ್ಲರಿಂದ ದೂರವಿದ್ದೆ. ಇಷ್ಟು ದಿನ ಯೂರೋಪಿನಲ್ಲಿ ಇದ್ದು, ಅಲ್ಲಿನ ಜನರ ಅಭ್ಯಾಸಗಳು, ರೀತಿಯನ್ನು ನೋಡಿ ಅಡ್ಜಸ್ಟ್ ಆಗಿದೆ ನನಗೆ, ಇಲ್ಲಿ ಏರ್ಪೋರ್ಟಿನಿಂದ ಹೊರಗೆ ಬಂದ ನನ್ನನ್ನು ಕರೆದೊಯ್ಯಲು ನನ್ನಾಕೆ ಬಂದಿದ್ದಳು. ಕಂಡ ಕೂಡಲೇ ಬಂದು, ಯೂರೋಪಿನಲ್ಲಿ ಎಲ್ಲರೂ ಮಾಡೋ ಹಾಗಿ ತಬ್ಬಿ ಹಾಗೆ ಮುತ್ತಿಡಲು ಹೋಗಿದ್ದೆ. ಸಡನ್ನಾಗಿ ನಾನು ಎಲ್ಲಿದೀನಿ ಅಂತ ಜ್ಞಾನೋದಯ ಆಯ್ತು. ಆದ್ರೆ ನಾನು ಈಗ ಬಂದಿರೋದು ಭಾರತಕ್ಕೆ, ಇಲ್ಲಿ ಅದೆಲ್ಲ ಸರಿ ಇಲ್ಲ ಅಂದುಕೊಂಡು ಬರೀ ಒಮ್ಮೆ ಅಪ್ಪಿಕೊಂಡೆ ಅಷ್ಟೇ.

ಸಧ್ಯಕ್ಕೆ ಒಂದು ವಾರ ಆಫೀಸಿಗೆ ರಜೆ ಹಾಕಿರುವೆ. ಮೈಸೂರಲ್ಲಿ ಕಾಲ ಕಳೀತಾ ಇದ್ದೀನಿ. ಹಾಗಾಗಿ ಬ್ಲಾಗು ಅಪ್ಡೇಟ್ ಆಗಿಲ್ಲ..ಇನ್ನು ಕೆಲವು ದಿನಗಳಲ್ಲಿ ಮತ್ತೆ ಶುರು ಮಾಡ್ತೀನಿ. ಪುನಃ ಆಟೋ ಫೋಟೋಗಳು ಬರಲು ಶುರು ಆಗುತ್ತವೆ.
ಅಲ್ಲಿ ತನಕ...

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

13 comments:

Unknown said...

Sadhya toilet photo inda mukthi sigthu anisuthue.....:)

ಶಿವಪ್ರಕಾಶ್ said...

ಹ್ಹಾ ಹ್ಹಾ ...
Happy Holidays.

sunaath said...

Welcome back Home!

ಮಲ್ಲಿಕಾರ್ಜುನ.ಡಿ.ಜಿ. said...

ಶಂಕ್ರಣ್ಣ ಸ್ವಾಗತ. ಎಲ್ಲಿ ಹೋದರೂ ಹೊಸತನ್ನು ಹುಡುಕುವಿರಿ. ಇಲ್ಲೂ ನಮಗೆಲ್ಲಾ ಹೊಸ ಹೊಸ ಸಂಗತಿಗಳನ್ನು ಕೊಡುವಿರೆಂಬ ನಿರೀಕ್ಷೆಯಲ್ಲಿರುವೆ.

Ittigecement said...

ಸುಸ್ವಾಗತ....
ಟ್ರಾಫಿಕ್ ಸಿಟಿಗೆ...

ವಿ.ರಾ.ಹೆ. said...

velkam byaaku ಕಣ್ರೀ.

೩೦ ವರ್ಷದ ಭಾರತದ ಅಭ್ಯಾಸಕ್ಕಿಂತ ಏಳೂವರೆ ತಿಂಗಳ ಯೂರೋಪ್ ಅಭ್ಯಾಸನೇ ಮೇಲುಗೈ ಪಡ್ಕೊಂಡಿದ್ದು ಆಶ್ಚರ್ಯ :).

ಯೂರೋಪಿನ ಅಭ್ಯಾಸ ಅಂತ ಇಂಡಿಯಾದಲ್ಲೂ ಟಾಯ್ಲೆಟ್ ಫೋಟೋ ತೆಗಿಯಕ್ಕೆ ಹೋಗೀರ ಮತ್ತೆ! ಬ್ಲಾಗ್ ಮುಚ್ಬೇಕಾಗತ್ತೆ. :)

Dr U B Pavanaja said...

ಭಾರತದ ಹಳ್ಳಿಗಳಲ್ಲಿ ಟಾಯ್ಲೆಟ್ ಎಲ್ಲ ಕಡೆ ಇರುವುದಿಲ್ಲ. ಬಯಲು ಟಾಯ್ಲೆಟ್‌ನ ಫೋಟೋ ತೆಗೆಯಲು ಹೋಗಬೇಡಿ ಮತ್ತೆ. ಕೈಕಾಲು ಮುರಿಸಿಕೊಂಡ ನಿಮ್ಮ ಫೋಟೋ ನಮಗೆ ನೋಡಲು ಸಿಗುವುದು ಬೇಡ :)

-ಪವನಜ

shivu.k said...

welcome to india..

ಏಳುವರೇ ತಿಂಗಳಿನ ಪರಿಣಾಮ ಪಬ್ಲಿಕ್ಕಿನಲ್ಲಿ ಅಪ್ಪಿಕೊಳ್ಳುವ ಮಟ್ಟಿಗೆ ಮುಂದುವರಿದಿದ್ದೀರಲ್ಲ...

ಇನ್ನಷ್ಟು ಆಟೋಗಳ ಚಿತ್ರಗಳಿಗಾಗಿ ಕಾಯುತ್ತಿದ್ದೇನೆ...

ಸಾಗರದಾಚೆಯ ಇಂಚರ said...

antu tolilet photokke swalpa rest anni,

enjoy madi vacation na

Indz said...

Kannada blog nodi bahala ksishi aaeyithu...horage iruvaga inthaha barevanige muda needuthe :)...naana jeeva marali bengaloorige barodakke thuditha ide...

harish said...

Namasakar sir

Nana Name Harish.
i seen this your bolg very very interesting thoughts And i also read

Hukunda said...

abba sadhya .... toilet nallina photogalinda viraama ....

mallige idli tindyaa ? :)

auto animuttigalige kaaytaa ideevi :)
payaswini mattu maneyavarige HELLO

sigoona magaa.
bhargava..

naveengowda said...

ತುಂಬಾ ದಾನ್ಯವಾದ ಗುರು ಆ ನನ್ ಮಗನ್ ಈ ಮೈಲ್ ವಿಳಾಸ ಕೊಟ್ಟಿದಕ್ಕೆ. ಅವನನ್ನ ಚನ್ನಾಗಿ ವಿಚಾರಿಸಿಕೊಂಡಿದ್ದೇನೆ.