Saturday, February 7, 2009

ಸೋಮಾರಿ ಕಟ್ಟೆ ಅಂದ್ಮೇಲೆ ಸ್ವಲ್ಪ ಪೋಲಿತನ ಇರ್ಲೇಬೇಕು ಅಲ್ವಾ ??

ವಯಸ್ಸಾದ ಗಂಡ, ಹೆಂಡತಿಯ ಬಳಿ ಬಂದು.."ಚಿನ್ನಾ, 30 ವರ್ಷದ ಹಿಂದೆ, ತೋಟದ ಬೇಲಿಗೆ ಒರಗಿ ನಾವು ಪ್ರೀತಿ ಮಾಡಿದ್ದು (Love Making) ನೆನಪಿದ್ಯಾ?"
ಹೆಂಡತಿ : "ಹ್ಯಾಗೆ ಮರೆಯಕ್ಕೆ ಆಗತ್ತೆ ಡಿಯರ್"
ಗಂಡ : " ಹಾಗದ್ರೆ, ಪುನಃ ಹಾಗೆ ಮಾಡಿ ಹಳೆಯದನ್ನ ಮತ್ತೊಮ್ಮೆ ಜ್ನಾಪಿಸಿಕೊಳ್ಳೋಣಾ ?"
ಹೆಂಡತಿ : "ಅಯ್ಯೋ ದೇವ್ರೆ, ಈ ವಯಸ್ಸಲ್ಲಿ ನಿಂಗೆ ಏನು ಇಂಥಾ ಆಸೆ ... ಆದ್ರೂ ಕೇಳಿದ್ರೆ ಒಂಥರಾ ಥ್ರಿಲ್ಲ್ ಆಗತ್ತೆ... ಟ್ರೈ ಮಾಡೋಣಾ.."
ಕಳ್ಳ ಬಡ್ಡಿಮಗ ಪಕ್ಕದ ಮನೆಯವನು ಇದನ್ನು ಕೇಳಿಸಿಕೊಳ್ತಾ ಇದ್ದ.. ಈ ಮುದಿ ಜೋಡಿ ಅದ್ಯಾವ್ ಥರ ಪ್ರೀತಿ ಮಾಡ್ತಾರೋ ಅನ್ನೋ ಕುತೂಹಲದಿಂದಫಾಲೋ ಮಾಡ್ಕೊಂಡು ತೋಟದ ಬೇಲಿ ಹತ್ರ ಅವಿತು ಕೂತ.
ಮುದಿ ದಂಪತಿಗಳು ನಿಧಾನವಾಗಿ ನಡ್ಕೊಂಡು, ತೋಟದ ಬೇಲಿ ಹತ್ರ ಬಂದು, ತಯಾರಾದ್ರು.
ಹೆಂಡತಿ ಬೇಲಿಗೆ ಒರಗಿ ನಿಂತಳು, ಗಂಡ ಅವಳನ್ನು ತಬ್ಬಿ ಹಿಡಿದು ಪ್ರೀತಿ ಮಾಡೋಕ್ಕೆ (Love Making) ಶುರು ಮಾಡಿದ...ಇದ್ದಕ್ಕಿದ್ದ ಹಾಗೆ ಇಬ್ರಿಗೂ ಅದೇನು ಆಯ್ತೋ, ಯುವ ಜೋಡಿಯನ್ನೂ ನಾಚಿಸೋ ಹಾಗೆ ಸಿಕ್ಕಪಟ್ಟೆ ರೋಚಕವಾಗಿ, ಉದ್ರೇಕದಿಂದ, ಪ್ರೀತಿ ಮಾಡತೊಡಗಿದರು..ಹೀಗೆ ಸುಮಾರು ಹೊತ್ತು ಕೂಗಾಡಿ, ಕಿರುಚಾಡಿ ಕೊನೆಯಲ್ಲಿ ಸುಸ್ತಾಗಿ ಕುಸಿದು ಬಿದ್ದರು..ಹಂಗೂ ಹಿಂಗೂ ಕಷ್ಟ ಪಟ್ಟು ಮೇಲೆ ಎದ್ದು, ಬಟ್ಟೆ ಬರೆ ಸರಿ ಮಾಡ್ಕೊಂಡು ಹೊರಡಲು ರೆಡಿ ಆದ್ರು...
ಕೊನೆಗೆ ಆ ಪಕ್ಕದ ಮನೆಯವನಿಗೆ ಆಶ್ಚರ್ಯ ತಡೆಯಲಾಗ್ಲಿಲ್ಲ...
ಓಡಿ ಬಂದು, "ಅಂಕಲ್, ಈ ವಯಸ್ಸಲ್ಲೂ ನೀವು ದಂಪತಿಗಳು ಇಷ್ಟು ಚೆನ್ನಾಗಿ ಪ್ರೀತಿ ಮಾಡ್ತೀರಲ್ಲಾ..ಹೆಂಗೆ ?
ಇದರ ರಹಸ್ಯ ಏನು ? ನಾನ್ ಕೂಡಾ ನಿಮ್ಮ ಹಾಗೆ ಆಗ್ಬೇಕು ಅಂದ್ರೆ ಏನು ಮಾಡೋದು " ಅಂತ ಕೇಳಿದ.
ಸುಸ್ತಿನಿಂದ ಇನ್ನೂ ಚೇತರಿಸಿಕೊಳ್ತಾ ಇದ್ದ ಗಂಡ ಕಷ್ಟಪಟ್ಟು ಅವನ ಕಪಾಳಕ್ಕೆ ಜೋರಾಗಿ ಬಿಗಿದು ಹೇಳಿದ,

"ಮಂಕ್ ಮುಂಡೆ ಮಗ್ನೆ, 30 ವರ್ಷದ ಹಿಂದೆ ಈ ಬೇಲಿಗೆ ಕರೆಂಟ್ ಹಾಯಿಸಿರಲಿಲ್ಲ"
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

8 comments:

ಮೂರ್ತಿ ಹೊಸಬಾಳೆ. said...

ಹ ಹ ಹ good one

ಮೂರ್ತಿ ಹೊಸಬಾಳೆ. said...

hahaha good one

Ittigecement said...

ಶಂಕ್ರಣ್ಣಾ...

ಹೊಟ್ಟೆ ಹುಣ್ಣಾಗುವಷ್ಟು ನಗಿಸಿ ಬಿಟ್ಟೆ..

ಹ್ಹೋ..ಹ್ಹೋ..ಹ್ಹಾ..ಹ್ಹೀ ..ಹ್ಹೀ..ಹೇ..ಹ್ಹೇ!

ಮನಸ್ವಿ said...

ಹಹ್ಹ ಹ್ಹ ತುಂಬಾ ಚನ್ನಾಗಿದೆ..

shivu.k said...

ಸರ್,

ಓದಿ ಸಿಕ್ಕಾ ಪಟ್ಟೆ ನಗುಬಂತು...ಕೊನೆಯ ಪಂಚ್ ಸೂಪರ್...ಇನ್ನೂ ನಗುತ್ತಿದ್ದೇನೆ...

Sushrutha Dodderi said...

ಸೂಪರ್! :D

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ . ಗುಡ್ ಜೋಕ್

ಚಿತ್ರಾ said...

ಹ ಹ ಹಾ...
ಒಬ್ಬಳೆ ಜೋರಾಗಿ ನಕ್ಕಿದ್ದನ್ನ ನೋಡಿ , ನಮ್ಮವರು ಗಾಬರಿಯಾಗಿ ಓಡಿ ಬಂದ್ರು . ಓದ್ಬಿಟ್ಟು ಇನ್ನೂ ಜೋರಾಗಿ ನಗೋಕೆ ಶುರು ಮಾಡಿದ್ರು !! ಹಿ ಹಿ ಹಿ..

ಇಷ್ಟು ಪೋಲಿತನ ನಡೆಯತ್ತೆ ಬಿಡಿ !!