Friday, December 5, 2008

ಕರುಣಾನಿಧಿಯ ಮತ್ತೊಂದು ಕಿರಿಕ್ಕು

ಕಿರಿಕ್ಕು ಕರುಣಾನಿಧಿ, ಮತ್ತೊಂದು ಕ್ಯಾತೆ ತೆಗೆಯಲು ಸಜ್ಜಾಗಿದ್ದಾರೆ. ಬೆಂಗಳೂರಲ್ಲಿ ಕಳೆದ 20 ವರ್ಷಗಳಿಂದ ಬಟ್ಟೆಯಲ್ಲಿ ಮುಚ್ಚಲ್ಪಟ್ಟಿರುವ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿದ್ದಾರೆ.

ಬೆಂಗಳೂರಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ, ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಬೇಕು ಅನ್ನೋ ಈ ಕೆಲಸ ಸುತರಾಂ ಆಗೋದಿಲ್ಲ ಅಂತಾ ನಮ್ಮ ಸರ್ಕಾರ ಹೇಳಬೇಕು, ಜೊತೆಗೆ ನಮ್ಮ ಜನರೂ ಕೂಡಾ ಇದರ ಬಗ್ಗೆ ತೀವ್ರವಾಗಿ ಪ್ರತಿಭಟಿಸಬೇಕು.

ತಮಿಳುನಾಡಿನಲ್ಲೂ ನಮ್ಮ ಕನ್ನಡಿಗರು ಸುಮಾರು ಮಂದಿ ಇದಾರೆ. ಆದ್ರೆ ಅವರಿಗೆ ಏನಾದರೂ ಸವಲತ್ತು, ಸೌಕರ್ಯ ಕೊಡ್ತಾರಾ ಈ ಕೊಂಗರು ?

ಇದೇ ವಿಷಯ ಇವತ್ತಿನ (4 Dec 2008) ನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.


ಕೊನೆಯದಾಗಿ :
ಈ ಪ್ರತಿಮೆ ವಿಚಾರದಲ್ಲಿ ಇಷ್ಟೆಲ್ಲಾ ಕ್ಯಾತೆ ಯೇಗೆಯೋ ಕರುಣಾನಿಧಿ, ತನ್ನ ರಾಜ್ಯದ ರಾಜಧಾನಿಯಾದ ಚೆನ್ನೈನಲ್ಲಿ ನಡೆದ ಅಂಬೇಡ್ಕರ್ ಲಾ ಕಾಲೇಜಿನ ಗಲಾಟೆಯನ್ನು ಈ ಲೆವಲ್ಲಿಗೆ ಹೋಗಲು ಬಿಟ್ಟಿದಾರಲ್ಲ ?? ನೋಡಿ, ಯಾವ ಪರಿ ಹೊಡೆದಿದ್ದಾರೆ ? ಅದೂ ಪೊಲೀಸರ ಮುಂದೆ.

http://www.youtube.com/watch?v=Y03ieYlFp-8

-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

5 comments:

Lakshmi S said...

ಕರ್ಮಕಾಂಡ !

Santhosh Chidambar said...

ತಲೆ ಮಾಸಿದ ನನ್ ಮಕ್ಳು ಇನೇನ್ ಮಾಡ್ತರೂ !

ಸಿಮೆಂಟು ಮರಳಿನ ಮಧ್ಯೆ said...

ರಾಜಕಾರಣಿಗಳಿಗೆ ವೋಟ್ ಬಿಟ್ಟು ಮತ್ತೆ ಏನೂ ಕಾಣಿಸುವದಿಲ್ಲವೇ? ಬೆಂಗಳೂರಲ್ಲಿ ವಿಗ್ರಹ ಸ್ಥಾಪಿಸಿದರೆ ತಮಿಳುನಾಡಿನಲ್ಲಿ ವೋಟ್ ಪಡೆಯಬಹುದಲ್ಲ!!

ಇದು "ತಿರುವಳ್ಳುವರ್" ಗೆ ಅವಮಾನ.. ತಮಿಳರಿಂದ..

ನಿಜ ಹೇಳಬೇಕೆಂದರೆ ಈ ಪ್ರತಿಮೆಗಳನ್ನು ಸ್ಥಾಪಿಸುವದನ್ನು ನಿಲ್ಲಿಸಬೇಕು...
ಅದರಿಂದ ಹಾನಿಯೇ ಜಾಸ್ತಿ...

ತೇಜಸ್ವಿನಿ ಹೆಗಡೆ- said...

ಅಬ್ಬಾ! ಒಂದು ನಿಮಿಷವೂ ನನಗೆ ಆ ವೀಡಿಯೋ ನೋಡಲಾಗಲಿಲ್ಲ. ಎಂತಹ ಹಿಂಸೆ!!! ಈ ರೀತಿ ಹೊಡೆಯಲು ಅದು ಹೇಗೆ ಸಾಧ್ಯವೋ! ಅಲ್ಲಿ ಹೊಡೆಯುತ್ತಿದ್ದವರೆಲ್ಲರಲ್ಲೂ ಭಯೋತ್ಪಾದಕರ ಛಾಯೆ ಕಂಡು ಬಂತು..:(

"ಮಾನವ" ಪದದ ಅರ್ಥವನ್ನೇ ಕಳೆದುಕೊಳ್ಳುತ್ತಿದೇವೇನೋ ಅನಿಸುತ್ತಿದೆ!

ಕಟ್ಟೆ ಶಂಕ್ರ said...

@ ಲಕ್ಷ್ಮಕ್ಕ, ಬಿಡಿ ಪರವಾಗಿಲ್ಲಾ..ತಲೆ ಚಚ್ಚಿಕೊಳ್ಳಬೇಡಿ.

@ ಸಂತೂ, ತಮಿಳುನಾಡು ಹಿಂಗೆನೆ..

@ ಸಿಮೆಂಟ್ ಬ್ರದರ್, ಪ್ರತಿಮೆ ಹಾಕಕ್ಕೆ ಕೇಂದ್ರ ಸರ್ಕಾರ ಅನುಮತಿ ಏನಾದರೂ ಅಪ್ಪಿ ತಪ್ಪಿ ಕೊಟ್ರೆ, ಅದನ್ನ ಅನಾವರಣ ಮಾಡಕ್ಕೆ ಎಲ್ಲೂ ಸಿಮೆಂಟು ಸಿಗದೇ ಇರೋ ಥರ ನೋಡ್ಕೊಳಿ.

@ ತೇಜಕ್ಕ,
ಹೊಡೆದವರಿಗಿಂತಾ ನಂಗೆ ಉರಿ ಕಿತ್ಕೊಂಡಿದ್ದು, ಸುಮ್ನೆ ತಲೆ ಕೆರ್ಕೊತಾ ನಿಂತಿದ್ದ ಸೋ ಕಾಲ್ಡ್ ಪೋಲೀಸರನ್ನು ಕಂಡಾಗ. ೧೦೦ ರೂ. ಪಿಕ್ ಪಾಕೆಟ್ ಮಾಡಿದ ಕಳನ್ನನ್ನು ಹಿಡ್ಕೊಂಡು ತಾರಾ ಮಾರಾ ಹೊಡೆದು ತಮ್ಮ ಪುರುಷ ತೋರಿಸೋ ಪೊಲೀಸರು ಹೀಗೆ ನಿಂತಿದ್ದನ್ನು ಕಂಡಾಗ, ಈ ಪೂರಾ ಘಟನೆ POLITICALLY MOTIVATED ಅಂತಾ ಎಂಥವರಿಗದ್ರೂ ಅರ್ಥ ಆಗದೆ ಇರತ್ತಾ ?

ಏನಂತೀರಾ ?
------------------------
ಕಟ್ಟೆ ಶಂಕ್ರ