Showing posts with label ತಿರುವಳ್ಳುವರ್ ಪ್ರತಿಮೆ. Show all posts
Showing posts with label ತಿರುವಳ್ಳುವರ್ ಪ್ರತಿಮೆ. Show all posts

Friday, December 5, 2008

ಕರುಣಾನಿಧಿಯ ಮತ್ತೊಂದು ಕಿರಿಕ್ಕು

ಕಿರಿಕ್ಕು ಕರುಣಾನಿಧಿ, ಮತ್ತೊಂದು ಕ್ಯಾತೆ ತೆಗೆಯಲು ಸಜ್ಜಾಗಿದ್ದಾರೆ. ಬೆಂಗಳೂರಲ್ಲಿ ಕಳೆದ 20 ವರ್ಷಗಳಿಂದ ಬಟ್ಟೆಯಲ್ಲಿ ಮುಚ್ಚಲ್ಪಟ್ಟಿರುವ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿದ್ದಾರೆ.

ಬೆಂಗಳೂರಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ, ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಬೇಕು ಅನ್ನೋ ಈ ಕೆಲಸ ಸುತರಾಂ ಆಗೋದಿಲ್ಲ ಅಂತಾ ನಮ್ಮ ಸರ್ಕಾರ ಹೇಳಬೇಕು, ಜೊತೆಗೆ ನಮ್ಮ ಜನರೂ ಕೂಡಾ ಇದರ ಬಗ್ಗೆ ತೀವ್ರವಾಗಿ ಪ್ರತಿಭಟಿಸಬೇಕು.

ತಮಿಳುನಾಡಿನಲ್ಲೂ ನಮ್ಮ ಕನ್ನಡಿಗರು ಸುಮಾರು ಮಂದಿ ಇದಾರೆ. ಆದ್ರೆ ಅವರಿಗೆ ಏನಾದರೂ ಸವಲತ್ತು, ಸೌಕರ್ಯ ಕೊಡ್ತಾರಾ ಈ ಕೊಂಗರು ?

ಇದೇ ವಿಷಯ ಇವತ್ತಿನ (4 Dec 2008) ನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.


ಕೊನೆಯದಾಗಿ :
ಈ ಪ್ರತಿಮೆ ವಿಚಾರದಲ್ಲಿ ಇಷ್ಟೆಲ್ಲಾ ಕ್ಯಾತೆ ಯೇಗೆಯೋ ಕರುಣಾನಿಧಿ, ತನ್ನ ರಾಜ್ಯದ ರಾಜಧಾನಿಯಾದ ಚೆನ್ನೈನಲ್ಲಿ ನಡೆದ ಅಂಬೇಡ್ಕರ್ ಲಾ ಕಾಲೇಜಿನ ಗಲಾಟೆಯನ್ನು ಈ ಲೆವಲ್ಲಿಗೆ ಹೋಗಲು ಬಿಟ್ಟಿದಾರಲ್ಲ ?? ನೋಡಿ, ಯಾವ ಪರಿ ಹೊಡೆದಿದ್ದಾರೆ ? ಅದೂ ಪೊಲೀಸರ ಮುಂದೆ.

http://www.youtube.com/watch?v=Y03ieYlFp-8

-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ