ಹೀಗೆ ಸುಮ್ನೆ ಮನೆಯಿಂದಾ ಆಫೀಸಿಗೆ ಹೋಗೋವಾಗ, ಸುಮ್ನೆ ಬೈಕ್ ಓಡುಸ್ತಾ ಹೋದ್ರೆ ತಲೆ ಕೆಟ್ಟೋಗುತ್ತೆ ಅಂತಾ ದಾರಿಯಲ್ಲಿ ಹೋಗೋ ಆಟೋಗಳನ್ನ ನೋಡಕ್ಕೆ ಶುರು ಮಾಡಿದೆ. ಅದರ ಹಿಂದೆ ಬರೆದಿರುವ ಚಿತ್ರ ವಿಚಿತ್ರ ಅಣಿಮುತ್ತುಗಳನ್ನ ನೋಡಿ ಫ್ಯಾಸಿನೇಟ್ ಆಗಿ, ಅದರ ಫೋಟೋ ತೆಗೆಯಲು ಶುರು ಮಾಡಿದೆ. ಸುಮ್ನೆ ಫೋಟೋ ತೆಗೆದರೆ ಏನೂ ಉಪಯೋಗ ಇಲ್ಲಾ, ಇದನ್ನ ಬ್ಲಾಗಿನಲ್ಲಿ ಹಾಕಿದರೆ, ನಮ್ಮ ಸ್ನೇಹಿತರೂ ಕೂಡ ಇಷ್ಟ ಪಡ್ತಾರೆ ಅನ್ನುಸ್ತು.. ಹಾಗೆ ಮಾಡ್ದೆ, ನಾನು ಅನ್ಕೊಂಡಕ್ಕಿಂತಾ ಜಾಸ್ತಿ ಇಷ್ಟ ಪಟ್ರು.
ನೋಡ್ತಾ ನೋಡ್ತಾ ಒಂದು, ಎರಡು,ಮೂರು ಅಂತಾ ಶುರು ಆಗಿದ್ದು, ಇವತ್ತು ಹಾಕಿದ
ಪೋಟೋ (ಬಂತು ಬಂತು?) ಸೇರಿಸಿ ಬರೋಬ್ಬರಿ ಐವತ್ತು ಮುಟ್ಟಿದೆ. ಆಟೋ ಅಣಿಮುತ್ತುಗಳು ಸರಿಯಾಗಿ ಅರ್ಧ ಶತಕ ಬಾರಿಸಿದೆ.
ನಾನು ಭರತದಿಂದ ಜರ್ಮನಿಗೆ ಬಂದು ಎರಡುವರೆ ತಿಂಗಳಾಯಿತು. ನಾನು ಬಂದಾಗ ಸುಮಾರು 42 ಫೋತೋಗಳನ್ನು ಹಾಕಿದ್ದೆ. ಇನ್ನು ಮಿಕ್ಕಿದವು ನಿಮ್ಮಂಥಾ ಮಿತ್ರರು, ಅಭಿಮಾನಿ ದೇವ್ರುಗಳು, ಶಂಕ್ರನಿಂದ ಆಟೋ ಫೋಟೋ ತೆಗೆಯೋ ಗೀಳು ಹತ್ತಿಸಿಕೊಂಡಿರುವವರು ಕಳಿಸಿದ್ದು. ನಿಮ್ಮೆಲ್ಲರಿಗೂ ಬಹಳ ಬಹಳ ಫೀಲಿಂಗು ಇರೋ ಥ್ಯಾಂಕ್ಸು. ನಾನು ಜರ್ಮನಿಯಲ್ಲಿ ಇನ್ನೂ ಎಷ್ಟು ದಿನ ಇರ್ತೀನಿ ಅಂತಾ ಗೊತ್ತಿಲ್ಲಾ, ಅದಕ್ಕೆ ಹೀಗೇ ಕಳುಸ್ತಾ ಇರಿ, ಆದಷ್ಟು ಬೇಗ ಶತಕ ಬಾರಿಸೋಣ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ