Monday, August 6, 2007

ಸೂಪರ್ ಜೋಕು... ನಕ್ಕಿಬಿಡಿ

ಒಮ್ಮೆ ವಾಜಪೇಯಿ ಹಾಗು ಜಾರ್ಜ್ ಬುಷ್ ಬಾರಿನಲ್ಲಿ ಕೂತು ಮಾತಡ್ತಾ ಇದ್ರಂತೆ

ಅವಾಗ ಒಬ್ಬ ಬಾರಿನೊಳಗೆ ಬಂದು ಬಾರ್ ಟೆಂಡರ್ ಹತ್ರ " ಅವ್ರು ವಾಜಪೇಯಿ ಮತ್ತು ಜಾರ್ಜ್ ಬುಷ್ ಅಲ್ವಾ ?" ಅಂತ ಕೇಳುದ್ನಂತೆ.

ಅದಕ್ಕೆ ಬಾರ್ ಟೆಂಡರ್ "ಹೌದು ಕಣಯ್ಯಾ, ಅದು ಅವ್ರೇ" ಅಂದ.

ಆ ಮಾನವ ಅವ್ರಿಬ್ರ ಹತ್ರ ಹೋಗಿ "ಹೈ, ಇಲ್ಲಿ ಏನ್ ಮಾಡ್ತಾ ಇದೀರಾ ?" ಅಂತ ಕೇಳ್ದ.

ಬುಷ್ : "WORLD WAR 3ಕ್ಕೆ ಪ್ಲಾನ್ ಮಾಡ್ತಾ ಇದೀವಿ"

ಅವನು : "ನಿಜ್ವಾಗ್ಲೂ ?? ಅವಾಗ ಏನಾಗತ್ತೆ ?"

ವಾಜಪೇಯಿ : "WELL, ನಾವು 13 ಕೋಟಿ ಪಾಕಿಸ್ತಾನಿಯರನ್ನ ಹಂಗೆ ಒಬ್ಬ ಸೈಕಲ್ ರಿಪೇರಿ ಮಾಡೋನ್ನ ಫಿನಿಶ್ ಮಾಡ್ತೀವಿ"

ಅವನು (ಫುಲ್ಲ್ ಗಾಬ್ರಿ ಆಗಿ) : " ಏನು ? ಸೈಕಲ್ ರಿಪೇರಿ ಮಾಡೋನ್ನ ಸಾಯಿಸ್ತೀರಾ ?"

ವಾಜಪೇಯಿ ಬುಷ್ ಕಡೆ ತಿರುಗಿ : " ನಾನ್ ಅವಾಗ್ಲೇ ಹೇಳ್ದೆ ತಾನೆ ? 13 ಕೋಟಿ ಪಾಕಿಸ್ತಾನಿಗಳ ಬಗ್ಗೆ ಯಾರೂ ಕೇರ್ ಮಾಡಲ್ಲಾ ಅಂತಾ..."

---------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

ಸ್ನೇಹಿತೆ ಪವಿತ್ರಾ ಈ-ಮೇಲ್ ನಲ್ಲಿ ಕಳ್ಸಿದ್ದು.. ನಾನು ಕನ್ನಡೀಕರಣ ಮಾಡಿದ್ದು.

2 comments:

Yuks said...

ಸೂಪರ್ ಗುರು..

ನಿಮ್ಮ ಕನ್ನಡಿಕರಣದಿಂದ ಕನ್ನಡದಲ್ಲಿ ಜೊಕ್ನ ಓದೋ ಮಜಾನೇ ಬೆರೆ...

ಭಲೆ ಭಲೆ

ಶಂಕರ ಪ್ರಸಾದ said...

ಸಖತ್ ಎಂಜಾಯ್ ಮಾಡ್ತೀರ ಅನ್ಸುತ್ತೆ..
ಹೀಗೆ ಇರ್ಲಿ...


ಕಟ್ತೆ ಶಂಕ್ರ