Wednesday, August 1, 2007

ಮಾತು, ಸಮಯ, ಸಂದರ್ಭ....

"ಏನಮ್ಮಾ ಸಮಾಚಾರ, ತಿಂಡಿ, ಕಾಫಿ ಆಯ್ತಾ ??"...

ನನ್ನದೇ ಲೋಕದಲ್ಲಿ, ಜಲಬಾಧೆ ತೀರಿಸುತ್ತಾ, ಆನಂದ ಅನುಭವಿಸುತ್ತಾ ನಿಂತಿದೀನಿ...

ಯಾವುದಪ್ಪಾ ಈ VOICEಉ ಅಂತ ತಿರುಗಿ ನೋಡ್ತೀನಿ...ನನ್ನ Colleague..

ಅದೂ ಎಲ್ಲಿ ?? ಆಫೀಸಿನ ಟಾಯ್ಲೆಟ್ಟು... ತಿಂಡಿ, ಕಾಫಿ ಆಯ್ತಾ ಅನ್ನೋ ಪ್ರಶ್ನೆ ಕೇಳಕ್ಕೆ ಬೇರೆ ಜಾಗ ಸಿಗ್ಲಿಲ್ವಾ ಬಡ್ಡಿ ಮಗಂಗೆ ??

ಇನ್ನೂ ಖರಾಬ್ ಆಗಿ ನಡೆದ ಘಟನೆ ಅಂದ್ರೆ, ನಮ್ಮ ಕಂಪೆನಿಯ ಪಾರ್ಟಿಯಲ್ಲಿ, ಸಿಕ್ಕಾಪಟ್ಟೆ ತಿಂದು ಅದರ ಬಾಧೆ ತೀರಿಸೋಣ ಅಂತ
ಆ ಹೋಟೆಲ್ ನ ಟಾಯ್ಲೆಟ್ಟಿಗೆ ಹೋದೆ...ಕೆಲಸ ಸಾಂಗವಾಗಿ ಮುಗಿಸಿದೆ...
ಬಂದು ಸಿಂಕಿನಲ್ಲಿ ಕೈ ತೊಳೀತಾ ನಿಂತಿದೀನಿ...ನಮ್ಮ ಒಬ್ಬ ಮ್ಯಾನೇಜರ್ ಕೂಡಾ ಬಂದ್ರು...
ನನ್ನ ಮುಖ ನೋಡಿ ಏನು ಅನ್ನುಸ್ತೋ ಏನೋ..."ಊಟ ಆಯ್ತಾ ??" ಅಂತಾನಾ ಕೇಳೋದು ??


ನಾನ್ ಕೂಡಾ ಒಮ್ಮೆ ಈ ಥರಾ ಖರಾಬ್ ಡೈಲಾಗ್ ಹಾಕಿದ್ದೆ...
ನಾನು ಮುಂಚೆ ಬಾಡಿಗೆಗೆ ಇದ್ದ ಮನೆ 1st ಫ್ಲೋರ್ ನಲ್ಲಿ ಇತ್ತು. ಮನೆ ಮಾಲೀಕರು ಗ್ರೌಂಡ್ ಫ್ಲೋರ್ ನಲ್ಲಿ ಇದ್ದದ್ದು..
ಗೇಟ್ ತೆರೆದು ಎರಡು ಹೆಜ್ಜೆಯಲ್ಲಿ, ಓನರ್ ಮನೆಯ ಪಾಯಖಾನೆ..

ಒಂದು ದಿನ ಸಂಜೆ, ಕೆಲಸ ಮುಗಿಸಿ ಮನೆಗೆ ಬಂದು ಗೇಟ್ ತೆಗೆದು ಒಳಗೆ ಬಂದೆ, ಟಾಯ್ಲೆಟ್ ಇಂದ ಮನೆ ಓನರ್ ಹೊರಗೆ ಬಂದ್ರು.
ನಾನು ಏನೋ ದೊಡ್ಡದಾಗಿ ಕುಶಲವೇ, ಕ್ಷೇಮವೇ ಅಂತ ಕೇಳೋ ಹಾಗೆ

ನಾನು : "ನಂಸ್ಕಾರ ಸಾ...."
ಮ.ಮಾ : ಒಂದು ಕೈಲಿ ಚೊಂಬು, ಇನ್ನೊಂದು ಕೈಲಿ ಲುಂಗಿ BALANCE ಮಾಡ್ತಾ ಒಂದು ACCEPTANCE SMILE ಕೊಟ್ರು..
ನಾನು : (ಬೇರೆ ಏನೂ ಮಾತಾಡಕ್ಕೆ ಹೊಳಿಯದೆ) "ಊಟ ಆಯ್ತಾ ಸಾ....???"


ಮ.ಮಾ ಅವತ್ತು ಖರಾಬ್ ಆಗಿ ಗುರಾಯ್ಸಿ ಮಾತಾಡದೆ ಹೋಗಿದ್ದು.. ಮನೆ ಖಾಲಿ ಮಾಡಬೇಕಾದ್ರೆ ಮತ್ತೆ ADVANCE ಹಣ ವಾಪಸ್ ಇಸ್ಕೊಬೇಕಾದ್ರೆ ಮಾತ್ರ 4 ಮಾತು ಆಡಿದ್ದು...

ಏನೆಲ್ಲಾ ಅವಾಂತರ ಆಗತ್ತೆ.. ಶಿವ ಶಿವಾ...


ನಿಮ್ಮವನು,

ಕಟ್ಟೆ ಶಂಕ್ರ

No comments: