Showing posts with label ದುಡಿಯದೆ ಬಡವನಾದರೆ. Show all posts
Showing posts with label ದುಡಿಯದೆ ಬಡವನಾದರೆ. Show all posts

Saturday, July 11, 2009

ಆಟೋ ಅಣಿಮುತ್ತುಗಳು - ೬೮ - ಬಡವನಾಗಿ ಹುಟ್ಟಿದ್ದು

ಇತ್ತೀಚಿಗೆ ಸಖತ್ತಾಗಿ ಆಟೋ ಅಣಿಮುತ್ತುಗಳು ಸಿಗ್ತಾ ಇದೆ. ನನ್ನ ಬ್ಲಾಗಿನ ಓದುಗ ಮಿತ್ರರು ತಾವು ತೆಗೆದ ಅಣಿಮುತ್ತಿನ ಫೋಟೋಗಳನ್ನೆಲ್ಲಾ ಕಳಿಸುತ್ತಾ ಇದಾರೆ. ಹಾಗಾಗಿ ಯಾವುದನ್ನು ಮೊದಲು ಹಾಕಲಿ ಬಿಡಲಿ ಎಂದು ತಲೆಬಿಸಿ ಆಗ್ತಾ ಇದೆ.

ಈ ಅಣಿಮುತ್ತು ನಮ್ಮ ಅಫೀಸಿನ ಮುಂದೆ ಕಂಡಿದ್ದು. ಹೊರಗೆ ಸುಮ್ನೆ ಒಂದು ವಾಕಿಗೆ ಬಂದ್ವಿ, ಅಲ್ಲಿ ಈ ಆಟೋ ಕಂಡಿತು. ಇನ್ನೇನು ಹೊರಡಲಿದ್ದ ಈ ಆಟೋವನ್ನು ಓಡಿ ಹೋಗಿ ತಡೆದು, ಜೇಬಿನಿಂದ ಮೊಬೈಲ್ ತೆಗೆದು ಫೋಟೋ ಕ್ಲಿಕ್ಕಿಸಿದ್ದನ್ನು ಅಕ್ಕ ಪಕ್ಕದಲ್ಲಿದ್ದ ಜನರು ವಿಚಿತ್ರವಾಗಿ ನೋಡ್ತಾ ಇದ್ರು (ನಂಗೆ ಇದು ಅಭ್ಯಾಸ ಆಗಿ ಹೋಗಿದೆ).

ಈ ಆಟೋವಿನ ಮಾಲಿಕ ನಾಗರಾಜ್ ಎಂದು. ದುಡಿಮೆಯೇ ದೇವರು ಎನ್ನುವ ತತ್ವವನ್ನು ಎಷ್ಟು ಚೆನ್ನಾಗಿ ಹೇಳಿದಾರೆ ನೋಡಿ.
ನಿಜಕ್ಕೂ ಈ ಅಣಿಮುತ್ತನ್ನು ನೋಡಿ (ಓದಿ), ಸ್ವಲ್ಪ ಹೊತ್ತು ಯೋಚನೆ ಮಾಡುವ ಹಾಗಾಯ್ತು. ನೀವೇ ನೋಡಿ


ಬಡವನಾಗಿ ಹುಟ್ಟಿದ್ದು ಅದು ನಿನ್ನ ತಪ್ಪಲ್ಲ !!
ದುಡಿಯದೆ ಬಡವನಾದರೆ ಅದು ನಿನ್ನ ತಪ್ಪು...

ಜೊತೆಗೆ ತನ್ನ ಹೆಸರಾದ "ನಾಗರಾಜ" ಅನ್ನೋದನ್ನ ಹೇಗೆ ಹೇಳಿದಾರೆ ನೊಡಿ.
ಅಪ್ಪನ ಕೊರಳಿಗೆ ಮಗನ ಹೊಟ್ಟೆಗೆ
ಜನಗಳ ಪೂಜೆಗೆ ಬೇಕಾದವನು ಈ ನಿಮ್ಮ
ನಾಗರಾಜ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ